ಮಕ್ಕಳಿಗೆ ಸಿಕ್ಕಿದೆ ಪುಟ್ಟಕ್ಕನ ಹಳೆಯ ಪ್ರಮಾಣ ಪತ್ರ! ಏನಿದರ ಹಿಂದಿನ ರಹಸ್ಯ?

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರವಾಹಿ ದಿನೇ ದಿನೇ ಕುತೋಹಲ ಕೆರಳಿಸುತ್ತದೆ. ಇದೀಗ ಸುಮಾಳನ್ನು ಸಮಾಧಾನಿಸುವುದೆ ಪುಟ್ಟಕ್ಕನ ಕುಟುಂಬಕ್ಕೆ ದೊಡ್ಡ ವಿಚಾರವಾಗಿದೆ. ಪುಟ್ಟಕ್ಕ ಮಲಗುವ ಜಾಗದ ಬಳಿ ಸುಮಾ ಆಗಮಿಸಿದ್ದಾಳೆ. ಇತ್ತ ಸುಮಾಳನ್ನು ನೋಡಿದ ಸ್ನೇಹಾ ಹೇಳುತ್ತಾಳೆ. ಇನ್ನೂ ಮ್ಯಾಚ್ ಬಗ್ಗೆ ತಲೆಕೆಡಿಸಿಕೊಳ್ಳ ಬೇಡ ಈ ಮ್ಯಾಚ್ ಸೋತರೆ ಇನ್ನೊಂದು ಮ್ಯಾಚ್ ಗೆಲ್ಲಬಹುದು ಅದರ ಬಗ್ಗೆ ಯೋಚಿಸಿ ಬೇಸರವಾಗಿ ಇರಬೇಡ ಮಲಗಿಕೊಳ್ಳೋಣ ಬಾ ಎನ್ನುತ್ತಾಳೆ.

ಆ ವೇಳೆ ಸುಮಾಳನ್ನು ಪುಟ್ಟಕ್ಕ ಕರೆದು, ಯಾಕವ್ವಿ ಇಷ್ಟೊಂದು ಬೇಸರ ಮಾಡಿಕೊಂಡಿದ್ದೀಯ ಏನಾಯ್ತು ಕಂದ ಎಂದಾಗ ಸುಮಾ ದುಃಖ ತಡೆಯಲಾಗದೆ ಅಮ್ಮನ ಮಡಿಲಿನಲ್ಲಿ ಮಲಗುತ್ತಾಳೆ. ಸುಮಾಳ ತಲೆ ನೇವರಿಸುತ್ತಾ ಪುಟ್ಟಕ್ಕ ಹೇಳುತ್ತಾಳೆ ನೋಡು ಮಗಳೆ ಮೊದಲನೆಯವಳಿಗೆ ಓದಲು ಅವಕಾಶ ಇರಲಿಲ್ಲ. ಎರಡನೇ ಅವಳಿಗೆ ಓದು ಮಾತ್ರ ಜೀವನ ಅಂದುಕೊಂಡಿದ್ದಾಳೆ. ಮೂರನೆಯವಳಿಗೆ ಓದು ಅಂದರೆ ಪ್ರಾಣ ಆಟ ಅಂದ್ರುನೂ ಪ್ರಾಣ. ಅದೇ ನನಗೆ ಖುಷಿ ಎನ್ನುತ್ತಾಳೆ ಪುಟ್ಟಕ್ಕ.

ಸೋಲು ಕೂಡ ಗೆಲುವಿನ ಒಂದು ಭಾಗ ಸುಮಾ. ಸೋತಾಗ ಹೆದರಿಕೊಳ್ಳಬಾರದು, ನೊಂದುಕೊಳ್ಳಬಾರದು, ನಾವು ಸರಿಯಾಗಿ ಆಡದ್ದಕ್ಕೆ ಬೇಸರ ಆಗಿಲ್ಲ ಅಮ್ಮ ನಾವು ಆದಷ್ಟು ಟ್ರೈ ಮಾಡಿದೆವು ಎಂದು ಅಳುತ್ತಾ ಹೇಳುತ್ತಾಳೆ ಸುಮಾ ಅದಕ್ಕೆ ಪುಟ್ಟಕ್ಕ ನೀವು ಮೊದಲು ಬೆನ್ನು ಒತ್ತಿದ್ದರೋ ಅಥವಾ ಅವರು ಮೊದಲು ಬೆನ್ನೋತ್ತಿದ್ದರೋ? ಎಂದು ಕೇಳುತ್ತಾಳೆ ಪುಟ್ಟಕ್ಕ.

ಪುಟ್ಟಕ್ಕನಿಗೆ ಗೊತ್ತಿದೆ ಆಟದ ಪಟ್ಟು

ಪುಟ್ಟಕ್ಕನಿಗೆ ಗೊತ್ತಿದೆ ಆಟದ ಪಟ್ಟು

ಅದಕ್ಕೆ ಸುಮಾ ಅಂದ್ರೆ ಅಟ್ಯಾಕ್ ಮಾಡೋದರ ಬಗ್ಗೆ ಕೆಳುತ್ತಿದ್ದಿಯಾ? ನಾವೇ ಅವ್ವ ಆದರೆ ನಾವು ಸುಸ್ತಾಗಿದ್ದೆವು ಇನ್ನೂ ಹೆಂಗೆ ಆಡೋದು ನಾವು ಎಂದಾಗ ಪುಟ್ಟಕ್ಕ ಹೇಳುತ್ತಾಳೆ ನೀವು ಎಲ್ಲಾರೂ ಸುಸ್ತಾಗಿದ್ರಿ ಎಲ್ಲರೂ ಒಟ್ಟಾಗಿ ಆಟ ಆಡಲು ಹೋದಿರಿ ಹಾಗೆ ನಿಮಗೆ ಸುಸ್ತಾಗಿತ್ತು ನೀವು 6 ಜನ ಇದ್ರಿ 9 ನಿಮಿಷ ತಾನೇ ಆ ಆಟದ್ದು ನೀವು ಆಗ ಮೂರು ಜನರಿಂದ ನಾಲ್ಕು ಜನರಿಗೆ ಮಾತ್ರ ಕೊಕ್ ಕೊಡಬೇಕಿತ್ತು ಉಳಿದವರನ್ನು ಮುಂದಿನ ಪಂದ್ಯದಲ್ಲಿ ಆಡಿಸಬೇಕಿತ್ತು. ಆಗ ಗೆಲುವಿಗೆ ಅವಕಾಶ ಇತ್ತೇನು ಎಂದಾಗ ಸುಮಾಳಿಗೆ ಕುತೂಹಲ ಹೆಚ್ಚಾಗುತ್ತದೆ.

ಸುಮಾಳಿಗೆ ಅಮ್ಮನ ಮಾತು ಕೇಳಿ ಆಶ್ಚರ್ಯ

ಸುಮಾಳಿಗೆ ಅಮ್ಮನ ಮಾತು ಕೇಳಿ ಆಶ್ಚರ್ಯ

ಈ ಬಗ್ಗೆ ಅವ್ವನಿಗೆ ಹೇಗೆ ಗೊತ್ತಾಯ್ತು ಎಂದು ಸುಮಾ ಆಶ್ಚರ್ಯಗೊಳ್ಳುತ್ತಾಳೆ. ಅವ್ವ ನಿನಗೆ ಇದರ ಬಗ್ಗೆ ಹೇಗೆ ಗೊತ್ತಾಯ್ತು ಎಂದಾಗ ನೀನು ಮಾತನಾಡುವುದನ್ನು ನಾನು ಕೆಳಿಸುಕೊಳ್ಳುತ್ತಿದ್ದೆ ಹಾಗೆ ನನಗೆ ಗೊತ್ತಾಗಿದ್ದು ಎಂದು ಹೇಳುತ್ತಾಳೆ. ಬಳಿಕ ಸುಮಾ ಮಲಗಲು ಹೋಗುತ್ತಾಳೆ. ಇನ್ನೂ ಪುಟ್ಟಕ್ಕ ಈ ಬಗ್ಗೆ ಯೋಚಿಸುತ್ತಾ ಇರುತ್ತಾಳೆ.

ಕಪಾಟಿನಲ್ಲಿ ಸಿಕ್ಕಿದೆ ಪ್ರಮಾಣ ಪತ್ರ

ಕಪಾಟಿನಲ್ಲಿ ಸಿಕ್ಕಿದೆ ಪ್ರಮಾಣ ಪತ್ರ

ಮಾರನೇಯ ದಿನ ಸುಮಾ ಹಾಗೂ ಸಹನಾ ಕಪಾಟು ಕ್ಲೀನ್ ಮಾಡುತ್ತಿರುತ್ತಾರೆ. ಅದರಲ್ಲಿ ಸಹನಾ ಗೆ ಒಂದು ಸರ್ಟಿಫಿಕೇಟ್ ಸಿಗುತ್ತದೆ ಅದನ್ನು ನೋಡಿದ ಸಹನಾ ಸುಮಾಳಿಗೆ ಹೇಳುತ್ತಾಳೆ ಯಾವುದೋ ಒಂದು ಸರ್ಟಿಫಿಕೆಟ್ ಸಿಕ್ಕಿತು ಯಾರದ್ದು ಎಂದು ಕೇಳುತ್ತಾಳೆ ಅದಕ್ಕೆ ಸುಮಾ ಅದನ್ನು ನೋಡಿ ತುಂಬಾ ಹಳೆ ಕಾಲದ್ದು ಒಂದೋ ನಂದಿರಬೇಕು ಇಲ್ಲ ಅಕ್ಕಂದು ಇರಬೇಕು. ಇದು ಇಬ್ಬರದ್ದೂ ಅಲ್ಲ ಎಂದು ಹೇಳುವಾಗ ಅಲ್ಲಿಗೆ ಸ್ನೇಹಾ ಬರುತ್ತಾಳೆ. ಏನೇ ಅದು ಎಂದು ಕೇಳುತ್ತಾಳೆ ಸ್ನೇಹಾ ಅದಕ್ಕೆ ಸುಮಾ ಯಾವುದೋ ಸರ್ಟಿಫಿಕೇಟ್ ಹಾಗೂ ಪದಕ ಸಿಕ್ಕಿದೆ ಯಾರದ್ದು ಗೊತ್ತಿಲ್ಲ ಎಂದು ಹೇಳುತ್ತಾಳೆ.

ಪ್ರಮಾಣ ಪತ್ರ ಕಸಿದುಕೊಳ್ಳುವ ಪುಟ್ಟಕ್ಕ

ಪ್ರಮಾಣ ಪತ್ರ ಕಸಿದುಕೊಳ್ಳುವ ಪುಟ್ಟಕ್ಕ

ಅದಕ್ಕೆ ಸ್ನೇಹಾ ಅದನ್ನು ತೆಗೆದುಕೊಂಡು ನೋಡುತ್ತಾಳೆ. ಪ್ರಶಸ್ತಿ ಪತ್ರ.. ಹೇಯ್ ಇದು ಸ್ಪೋರ್ಟ್ಸ್ ಅಲ್ಲಿ ಗೆದ್ದಿರುವುದಕ್ಕೆ ಕೊಟ್ಟಿರುವುದು. ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ನೀಡಿರುವುದು ಎಂದು ಹೇಳಿದಾಗ ಸುಮಾ ಹೇಳುತ್ತಾಳೆ ಯಾವ ವರ್ಷದ್ದು ನೋಡಕ್ಕ ಅಂದಾಗ ಗೊತ್ತಾಗುತ್ತಿಲ್ಲ ಸುಮಾ ಎಂದು ಹೇಳುತ್ತಾಳೆ. ಇತ್ತ ಪುಟ್ಟಕ್ಕ ಬಂದು ಆ ಸರ್ಟಿಫಿಕೆಟ್ ತೆಗೆದುಕೊಳ್ಳುತ್ತಾಳೆ. ಇದನ್ನು ಕಂಡ ಮಕ್ಕಳಿಗೆ ಶಾಕ್ ಆಗುತ್ತದೆ ಏನವ್ವ ಯಾಕೆ ತಗೊಂಡೆ ಅಂದಾಗ ಇದು ಶಾಂತ ಮನೆ ಖಾಲಿ ಮಾಡಿದ್ದಳು ಅಲ್ವಾ ಅವರದ್ದೇ ಯಾರಿದ್ದೋ ಇರಬೇಕು ಇರಲಿ ಬಿಡಿ ಎಂದು ಹೇಳುತ್ತಾಳೆ. ಆದರೆ ಆ ಪ್ರಮಾಣ ಪತ್ರ, ಪುಟ್ಟಕ್ಕನದ್ದೇನಾ ಎಂಬ ಅನುಮಾನ ವೀಕ್ಷಕರದ್ದು.

More from Filmibeat

English summary
Kannada serial puttakkana makkalu written updated on 13th July. Here is more detail about the episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X