For Quick Alerts
  ALLOW NOTIFICATIONS  
  For Daily Alerts

  ಪುಟ್ಟಕ್ಕನ ಮನೆಗೆ ಬಂದ ಮುರಳಿ ಮೇಷ್ಟ್ರು! ಮುಂದೇನು?

  By ಪೂರ್ವ
  |

  ದೇವರ ದರ್ಶನಕ್ಕೆ ಹೋದ ಪುಟ್ಟಕ್ಕ ಇದೀಗ ವಾಪಸ್ ಮರಳಿದ್ದಾಳೆ. ಪುಟ್ಟಕ್ಕನ ಬಳಿ ಸ್ನೇಹಾ ಮಾತನಾಡುತ್ತಾಳೆ. ಅಮ್ಮ ನೀನು ಎಲ್ಲಾ ವಿಚಾರವನ್ನು ಬಂಗಾರಮ್ಮನ ಬಳಿ ಹೇಳಿದ್ದೀಯ. ಆಕೆ ನಿನ್ನೆ ಬಂದಿದ್ದಳು ನನ್ನ ಮನೆಯಲ್ಲಿ ನಾನು ಬೇರೆಯವಳ ಹಾಗೆ ಇರೋ ಪ್ರಮೇಯ ಬಂದೊದಗಿತು. ನಿನ್ನ ಮತ್ತು ಬಂಗಾರಮ್ಮನ ಗೆಳೆತನಕ್ಕೆ ನಾನು ಯಾವತ್ತೂ ಅಡ್ಡಿಯಾಗುವುದು ಇಲ್ಲ. ಆದರೆ ಇದೀಗ ಮನೆಗೆ ಅವಾಗವಾಗ ವಕ್ಕರಿಸಿಕೊಳ್ಳುತ್ತಿದ್ದಾಳೆ ಎಂದು ಹೇಳುತ್ತಾಳೆ.

  ಇದನ್ನು ಕೇಳಿದ ಪುಟ್ಟಕ್ಕ ಸರಿ ಸ್ನೇಹಾ ಮುಂದಿನ ಬಾರಿ ಬಂಗಾರಮ್ಮ ಬಂದಾಗ ನೀನೇ ನನ್ನ ಮಗಳು ಅನ್ನೋ ವಿಚಾರ ಒಪ್ಪಿಕೊಂಡು ಬಿಡುತ್ತೇನೆ ಎಂದು ಹೇಳುತ್ತಾಳೆ. ಅಲ್ಲಿಗೆ ಬಂದ ಸಹನಾಳನ್ನು ನೋಡಿದ ಪುಟ್ಟಕ್ಕ ಖುಷಿ ಪಡುತ್ತಾರೆ. ಮಕ್ಕಳ ಬಳಿ ಪುಟ್ಟಕ್ಕ, 'ನಾಳೆ ಸಹನಾ ಗಂಡಿನ ಕಡೆಯವರು ಬರುತ್ತಿದ್ದಾರೆ' ಎಂದು ಹೇಳಿದಾಗ ಸಹನಾ ಶಾಕ್ ಆಗುತ್ತಾಳೆ. ಅಚಾನಕ್ಕಾಗಿ ವಿಷಯ ತಿಳಿದ ಸಹನಾ ಹಾಗೂ ಸುಮಾ ಇಬ್ಬರಿಗೂ ಆಶ್ಚರ್ಯವಾಗುತ್ತದೆ.

  ಸಹನಾ ನೋಡಲು ಗಂಡಿನ ಕಡೆಯವರು ಬರುತ್ತಿರುವುದರಿಂದ ಎಲ್ಲಾ ಏರ್ಪಾಡು ಆಗಬೇಕಾಗಿದೆ ಎಂದಾಗ ಸುಮಾ ಹಾಗೂ ಸಹನಾಗೆ ದಿಕ್ಕೇ ತೋಚದಂತಾಗುತ್ತದೆ. ಸಒಂದು ಕಡೆ ಮೇಷ್ಟ್ರು ಕಾಣಿಸುತ್ತಿಲ್ಲ. ಮತ್ತೊಂದು ಕಡೆ ಮದುವೆ ಎಂದು ಅಮ್ಮ ಹೇಳುತ್ತಿದ್ದಾರೆ ಎನು ಮಾಡಬೇಕೆಂದು ತಿಳಿಯದೇ ಸಹನಾ ನಿಂತಿದ್ದರೆ ಸುಮಾ ಮಾತ್ರ ಅಮ್ಮ ನ ಮೇಲೆ ಮುನಿಸಿಕೊಂಡು ಯಾರನ್ನು ಕೇಳು ಈ ಮದುವೆಯನ್ನ ಫಿಕ್ಸ್ ಮಾಡಿದ್ದೀರಿ. ಅಕ್ಕನ ಬಳಿ ಒಂದು ಮಾತು ಕೇಳಿದ್ರಾ ಯಾಕೆ ನೀನು ಹೀಗೆ ಮಾಡುತ್ತಿದ್ದೀಯಾ ಎಂದು ವಾಗ್ದಾಳಿ ನಡೆಸುತ್ತಾಳೆ.

  ಮುರಳಿ ಮುಖದಲ್ಲಿ ಮೂಡಿದ ಆತಂಕ

  ಮುರಳಿ ಮುಖದಲ್ಲಿ ಮೂಡಿದ ಆತಂಕ

  ಆ ವೇಳೆ ಸಹನಾಗೆ ಸರ್ಪ್ರೈಸ್ ಕೊಡಲು ಹೀಗೆ ಮಾಡಿದೆ ಎಂದೆಲ್ಲ ಹೇಳಿದಾಗಲೂ ಸುಮಾ ಸಮಾಧಾನ ಗೊಳ್ಳದೆ ಬೇಸರ ಪಟ್ಟುಕೊಳ್ಳುತ್ತಾರೆ. ಸಹನಾ ಬರುತ್ತಿರುವ ದುಃಖ ತಡೆದುಕೊಳ್ಳುತ್ತ ಅಮ್ಮನ ಖುಷಿ ಗಾಗಿ ಹೂ ಎಂದು ಹೇಳುತ್ತಾಳೆ. ಇನ್ನು ಕಂಠಿಗೆ ಮುರಳಿ ಮೇಷ್ಟ್ರು ಸಿಗುತ್ತಾರೆ. ಮುರಳಿ ಮೇಷ್ಟ್ರ ಬಳಿ ಕಂಠಿ ಹೇಳುತ್ತಾನೆ ಮೇಷ್ಟ್ರೇ ನಿಮ್ಮ ಪ್ರೀತಿಗೆ ನಾನು ಸಹಾಯ ಮಾಡುತ್ತೇನೆ ನಿಮ್ಮ ಮನದಲ್ಲಿ ಇರುವುದನ್ನು ನೇರವಾಗಿ ಪುಟ್ಟಕ್ಕನ ಮನೆಯಲ್ಲಿ ಹೇಳಿಬಿಡು ಮುಂದಿದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡುತ್ತಾನೆ.

  ಸಮಾಧಾನ ಮಾಡಿದ ಕಂಠಿ

  ಸಮಾಧಾನ ಮಾಡಿದ ಕಂಠಿ

  ಇದನ್ನು ಕೇಳಿದ ಮೇಷ್ಟ್ರು ಪುಟ್ಟಕ್ಕನ ಮನೆ ಬಳಿಗೆ ಬರುತ್ತಾರೆ. ಮನೆಗೆ ಒಳಗೆ ಬಂದ ಮೇಷ್ಟ್ರನ್ನು ನೋಡಿದ ಸಹನಾಗೆ ಖುಷಿ ಆಗುತ್ತದೆ. ಆದರೆ ಮೇಷ್ಟ್ರಿಗೆ ಒಂದು ಮಾತನಾಡಲು ಅವಕಾಶ ಕೊಡದೇ ಸಹನಾಗೆ ನಾಳೆ ಗಂಡಿನ ಕಡೆಯವರು ಬರುತ್ತಿದ್ದಾರೆ ಇದಕ್ಕೆ ಅಕ್ಕ ಕೂಡ ಒಪ್ಪಿಗೆ ಕೊಟ್ಟಿದ್ದಾಳೆ ಎಂದೆಲ್ಲ ಹೇಳುತ್ತಾರೆ. ಇದನ್ನು ಕೇಳಿದ ಮೇಷ್ಟ್ರಿಗೆ ಬರಸಿಡಿಲು ಬಂದು ಏರಗಿದ ಹಾಗೆ ಆಗುತ್ತದೆ.

  ನಂಜವ್ವನ ಕಳ್ಳಾಟ ಚಂದ್ರು ಗೆ ತಿಳಿಯುತ್ತಾ?

  ನಂಜವ್ವನ ಕಳ್ಳಾಟ ಚಂದ್ರು ಗೆ ತಿಳಿಯುತ್ತಾ?

  ಇನ್ನು ಚಂದ್ರು ಕಡೆಯಿಂದ ವಸುಗೆ ಡೈವರ್ಸ್ ನೋಟಿಸ್ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ನಂಜವ್ವ ತನ್ನ ಪ್ಲಾನ್ ಪ್ರಕಾರ ಎಲ್ಲವನ್ನೂ ಮಾಡುತ್ತಾ ಬಂದಿದ್ದಾಳೆ ಆದರೆ ಇದಕ್ಕೆಲ್ಲ ಸೊಪ್ಪು ಹಾಕುತ್ತಿರುವ ಚಂದ್ರು ಮನದಲ್ಲಿ ಒಂದೇ ಇರುವುದು ಕಂಠಿ ಹಾಗೂ ಸ್ನೇಹಾ ಇಬ್ಬರನ್ನೂ ಬೇರೆ ಮಾಡಬೇಕು ಇಲ್ಲವಾದರೆ ಇನ್ನೂ ಸಂಕಷ್ಟ ಹೆಚ್ಚಾಗುತ್ತದೆ ಎಂದು ಅಂದುಕೊಳ್ಳುತ್ತಾನೆ. ಬಳಿಕ ಮನದಲ್ಲಿ ಯೋಚನೆ ಮಾಡುತ್ತಾನೆ ವಸು ನನಗಿಂತ ಆಕೆಯ ಅಣ್ಣ ಹಾಗೂ ಅಮ್ಮ ಹೆಚ್ಚು ಎಂದುಕೊಳ್ಳುತ್ತಾ ಇರುತ್ತಾನೆ. ಆ ವೇಳೆ ಕಂಠಿ ಮದುವೆ ವಿಚಾರವನ್ನು ನಂಜವ್ವ ಪ್ರಸ್ತಾಪ ಮಾಡುತ್ತಾರೆ.

  ಕಂಠಿಗೆ ನಿಶ್ಚಿತಾರ್ಥ ಎಂದು ತಿಳಿದ ಚಂದ್ರುಗೆ ಶಾಕ್

  ಕಂಠಿಗೆ ನಿಶ್ಚಿತಾರ್ಥ ಎಂದು ತಿಳಿದ ಚಂದ್ರುಗೆ ಶಾಕ್

  ಕಂಠಿಗೆ ಮದುವೆಯಂತೆ ನಾಳೆ ನಿಶ್ಚಿತಾರ್ಥ ಇದೆ ಅಂತೆ ಅವರ ಮನೆಯಲ್ಲಿ ಹುಭ ಕಾರ್ಯ ನಡೆಯುತ್ತಿದೆ ನಮ್ಮ ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯಬೇಕು ಎಂದು ಹೇಳಿದಾಗ ಕಂಠಿ ಗೆ ಶಾಕ್ ಆಗುತ್ತದೆ ಎನು ಕಂಠಿ ಗೆ ನಿಶ್ಚಿತಾರ್ಥನಾ ಎಂದು ಶಾಕ್ ನಿಂದಾ ಕೇಳುತ್ತಾನೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

  English summary
  Kannada serial Puttakkana Makkalu written updated on 13th October episode. Know more.
  Friday, October 14, 2022, 22:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X