ಬಂಗಾರಮ್ಮನಿಗೆ ತಿಳಿಯುತ್ತಾ ಮಗ ಕಂಠಿಯ ಲವ್ ಸ್ಟೋರಿ?

By ಪೂರ್ವ

ಪುಟ್ಟಕ್ಕ ಬಳಿ ಒಬ್ಬಾತ ಬಂದು ನಿಮ್ಮ ಮೆಸ್ ತುಂಬಾ ಫೇಮಸ್ ಆ ಕಾರಣ ನನಗೆ 500 ಜನರಿಗೆ ಆಗುವಷ್ಟು ಊಟವನ್ನು ರೆಡಿ ಮಾಡಿ ಕೊಡಬಹುದಾ? ಆಶ್ರಮ ಒಂದರಲ್ಲಿ ಅನ್ನದಾನ ಮಾಡುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ ಆ ಕಾರಣಕ್ಕೆ ನಮಗೆ ನೀವು 5೦೦ ಜನರಿಗೆ ಆಗುವಷ್ಟು ಊಟ ರೆಡಿ ಮಾಡಿದರೆ ಬಹಳ ಒಳ್ಳೆಯದು ನಾನು ನಿಮಗೆ ಅಡ್ವಾನ್ಸ್ ಕೊಡುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪುಟ್ಟಕ್ಕ ಎಲ್ಲ ಮೊತ್ತವನ್ನು ಒಟ್ಟಿಗೆ ಕೊಡುವಂತೆ ಹೇಳುತ್ತಾಳೆ.

ಇನ್ನೂ ಪುಟ್ಟಕ್ಕನ ಮನೆಯಲ್ಲಿ ಬಹಳ ಸಂಭ್ರಮದಿಂದ ಅನ್ನದಾನ ಕಾರ್ಯಕ್ರಮಕ್ಕೆ ತಯಾರಿ ಆಗುತ್ತಿತ್ತು, ಕಂಠಿ ಹಾಗೂ ಆತನ ಗೆಳೆಯರು ಕೂಡ ಅಡುಗೆಗೆ ಸಹಾಯ ಮಾಡಿದರು ಇದನ್ನು ನೋಡಿದ ಸ್ನೇಹಾ ಖುಷಿಪಡುತ್ತಾಳೆ. ಇನ್ನು ಕಂಠಿ ಗೆಳೆಯ ಇರುತ್ತಾನೆ ನಮಗೆ ಒಂದು ಬಾರಿ ಅಡುಗೆ ಮಾಡುವಾಗ ಸುಸ್ತಾಗಿ ಹೋಗುತ್ತದೆ. ಇನ್ನು ಕೆಲವು ಹೆಂಗಸರು ಮೂರು ಹೊತ್ತು ಅಡುಗೆ ಮಾಡುತ್ತಾರೆಂದು ಹೇಳುತ್ತಾನೆ. ಇದನ್ನು ಕೇಳಿ ಎಲ್ಲರೂ ಸಣ್ಣದಾಗಿ ನಗುತ್ತಾರೆ.

ರಾಜಿಗೆ ವಿಚಾರ ತಿಳಿಸಿದ ಮಂಜಮ್ಮ

ಇದನ್ನೆಲ್ಲ ನೋಡುತ್ತಿದ್ದ ಮಂಜಮ್ಮ ಮನೆಯ ಹಿತ್ತಲಿಗೆ ಹೋಗುತ್ತಾಳೆ. ಇತ್ತ ಅಡುಗೆ ಎಲ್ಲಾ ಮುಗಿದ ಮೇಲೆ ಪುಟ್ಟಕ್ಕ ಊಟ ಆರ್ಡರ್ ಮಾಡಿದವನಿಗೆ ಕರೆ ಮಾಡುತ್ತಾರೆ ಆದರೆ ಆ ನಂಬರ್ ಸ್ವಿಚ್ ಆಪ್ ಬಂದ ಕಾರಣ ಪುಟ್ಟಕ್ಕ ಬಹಳ ಭಯಗೊಳ್ಳುತ್ತ ಇರುತ್ತಾಳೆ. ಏನು ಮಾಡುವುದು ಊಟ ಎಲ್ಲಾ ವೇಸ್ಟ್ ಆದರೆ ಎಂದು ಬೇಸರ ಪಟ್ಟುಕೊಳ್ಳುತ್ತಾರೆ. ಈ ವೇಳೆ ಕಂಠಿ ಹಾಗೂ ಆತನ ಗೆಳೆಯರು ಕರೆ ಮಾಡಿದಾತನನ್ನು ಹುಡುಕುವ ಯತ್ನ ಮಾಡುತ್ತಾರೆ.

ಪುಟ್ಟಕ್ಕನನ್ನೂ ಸೋಲಿಸುವ ಸಂಚು ಮಾಡಿದ ರಾಜಿ

ಪುಟ್ಟಕ್ಕನನ್ನೂ ಸೋಲಿಸುವ ಸಂಚು ಮಾಡಿದ ರಾಜಿ

ಮಂಜಮ್ಮ, ರಾಜೇಶ್ವರಿಗೆ ಕರೆ ಮಾಡಿ ಪುಟ್ಟಕ್ಕನ ಮನೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಅದನ್ನೆಲ್ಲ ಪಿನ್ ಟು ಪಿನ್ ಮಾಹಿತಿ ನೀಡುತ್ತಾಳೆ. ಇದನ್ನೆಲ್ಲ ಕೇಳಿದ ರಾಜೇಶ್ವರಿಗೆ ಬಹಳ ಖುಷಿಯಾಗುತ್ತದೆ. ಮಂಜಮ್ಮ ಮುಂದಿನ ಬಾರಿ ನೀನು ಸಿಗುವಾಗ ಬೋನಸ್ ಕೊಡುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಮಂಜಮ್ಮ ಕರೆ ಕಟ್ ಮಾಡಿ ಮೆಸ್ ಒಳಗೆ ಹೋಗುತ್ತಲೇ, ಇದನ್ನೆಲ್ಲ ಕೇಳಿಸಿಕೊಂಡ ಗೋಪಾಲ ಏನಾದರು ಮಾಡಿ ಪುಟ್ಟಕ್ಕಗೆ ನ್ಯಾಯ ಒದಗಿಸಬೇಕು ಎಂದು ಕೊಂಡು ರಾಜಿ ಬಳಿಗೆ ಬರುತ್ತಾನೆ.

ಚುನಾವಣೆಗೆ ನಿಲ್ಲುವ ಉತ್ಸಾಹದಲ್ಲಿ ರಾಜಿ

ಚುನಾವಣೆಗೆ ನಿಲ್ಲುವ ಉತ್ಸಾಹದಲ್ಲಿ ರಾಜಿ

ಬಂದು 5 ಲಕ್ಷ ಇಬ್ಬರಿಗೆ ಕೊಡಬೇಕು ಎಂದು ಹೇಳುತ್ತಾನೆ. ಬೀರುವಿನಲ್ಲಿ ಇದೆ ನೀವು ತೆಗೆದುಕೊಳ್ಳಿ ಎಂದು ಹೇಳುತ್ತಾಳೆ ರಾಜಿ. ಬಳಿಕ ಬೀರು ಬಳಿಗೆ ಗೋಪಾಲ ಹೋಗುತ್ತೇನೆ. ಅಷ್ಟ್ರರಲ್ಲಿ ಕಾಳಿ ಬರುತ್ತಾನೆ. ಅಕ್ಕನ ಜೊತೆ ಬಹಳ ಖುಷಿಯಲ್ಲಿ ಇರುತ್ತಾನೆ. ಆಗ ರಾಜಿಗೆ ಒಂದು ಕರೆ ಬರುತ್ತದೆ. ಎಲೆಕ್ಷನ್ ವಿಚಾರವಾಗಿ ನಿಮ್ಮನ್ನು ವೀರ ಭದ್ರಯ್ಯ ಅವರು ಗ್ರಾಮ ಪಂಚಾಯತ್ ಎಲೆಕ್ಷನ್ ನಲ್ಲಿ ಮೆಂಬರ್ ಹಾಗೂ ಚುನಾವಣೆ ನಡೆಯಲಿದೆ ಅದಕ್ಕಾಗಿ ನಿಮ್ಮನ್ನೂ ನಿಲ್ಲಿಸಬೇಕು ಎಂದು ಇದ್ದೇವೆ. ಅನ್ನದಾನ ನಡೆಯುತ್ತಿದೆ ಬನ್ನಿ ನೀವು ಬರುವಾಗ ಹಣ ಹಿಡಿದುಕೊಂಡು ಬನ್ನಿ ಎಂದು ಹೇಳುತ್ತಾನೆ.

ರಾಜಿ ಬಳಿ ಅನುಮಾನ ವ್ಯಕ್ತ ಪಡಿಸಿದ ಕಾಳಿ

ರಾಜಿ ಬಳಿ ಅನುಮಾನ ವ್ಯಕ್ತ ಪಡಿಸಿದ ಕಾಳಿ

ಇದನ್ನು ಕೇಳಿ ಖುಷಿ ಆದ ರಾಜಿ ಕುಣಿದಾಡುತ್ತಾಳೆ. ಆಗ ಅಲ್ಲಿಗೆ ಗೋಪಾಲ ಹಣ ಸಮೇತ ತೆಗೆದುಕೊಂಡು ಬರುತ್ತಾನೆ. ಇದನ್ನು ನೋಡಿ ರಾಜಿ ಬಾರಯ್ಯ ನಾವು ಎಲೆಕ್ಷನ್ ಬಗ್ಗೆ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲಿಗೂ ಕೂಡ ಹಣ ಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಗೋಪಾಲ ಏನು ಮಾಡಬೇಕು ಎಂದು ತಿಳಿಯದೇ ಅಲ್ಲಿಂದ ಹೋಗುತ್ತಾನೆ. ಇನ್ನು ಬಂಗಾರಮ್ಮ ಮಗನ ಮದುವೆ ಹೇಗಾದರೂ ಮಾಡಬೇಕು ಎಂದು ಊರಿನಲ್ಲೇ ಇರುವ ಒಬ್ಬನನ್ನು ಕರೆಯಿಸಿ ಮಾತುಕತೆ ನಡೆಸುತ್ತಾರೆ. ಬಳಿಕ ಕುಡಿಯಲು ಬಾಯಾರಿಕೆಯನ್ನು ನೀಡಿ ಹೇಳುತ್ತಾಳೆ ನನ್ನ ಮಗನಿಗೆ ಹುಡುಗಿಯನ್ನು ಹುಡುಕಿ ಕೊಡಬೇಕು ಎಂದೆಲ್ಲ ಹೇಳುತ್ತಾರೆ.

ಕಂಠಿ ಜಾತಕ ಹುಡುಕಲು ಹೋರಾಟ ಬಂಗಾರಮ್ಮ

ಕಂಠಿ ಜಾತಕ ಹುಡುಕಲು ಹೋರಾಟ ಬಂಗಾರಮ್ಮ

ಬಳಿಕ ಕಂಠಿ ಜಾತಕ ತರಲು ಆತನ ರೂಮ್ ಕಡೆ ತೆರಳುತ್ತಾರೆ. ಈ ವೇಳೆ ಹಾಲ್‌ಗೆ ಬಂದ ವಸುವನ್ನು ನೋಡಿ ನೀವು ಬಂಗಾರಮ್ಮ ಅವರ ಮಗಳು ಅಲ್ವಾ ಎಂದು ಹೇಳಿ ನಿಮ್ಮ ಅಣ್ಣನಿಗೆ ಹೆಣ್ಣು ಹುಡುಕಾಲು ಬಂದಿದ್ದೇನೆ. ನಿಮ್ಮ ಅಮ್ಮ ಜಾತಕ ತರಲು ಹೋದರು ಎಂದು ಹೇಳುತ್ತಾರೆ ಬ್ರೋಕರ್ ಇದನ್ನು ಕೇಳಿ ವಸು ತುಸು ಗಾಬರಿಯಿಂದ ಹೋಗುತ್ತಾಳೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 14th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X