For Quick Alerts
  ALLOW NOTIFICATIONS  
  For Daily Alerts

  ಅಮ್ಮನಿಗಾಗಿ ಮುರಳಿ ಮೇಷ್ಟ್ರನ್ನು ತ್ಯಾಗ ಮಾಡ್ತಾಳ ಸಹನಾ?

  By ಪೂರ್ವ
  |

  ಮುರಳಿ ಮೇಷ್ಟ್ರ ಬಗ್ಗೆ ನಿಜ ಹೇಳಲಾಗದೆ ಸಹನಾ ನೋವುಣ್ಣುತ್ತಿದ್ದಾಳೆ. ಆದರೆ ಇದ್ಯಾವುದೂ ಪುಟ್ಟಕ್ಕ ಹಾಗೂ ಸ್ನೇಹಾಗೆ ಅರ್ಥ ಆಗುತ್ತಿಲ್ಲ. ಬದಲಾಗಿ ಉತ್ತಮ ಹುಡುಗ ಬೇಕು ಸಹನಾಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ಮಗಳು ನನಗಾಗಿ, ಈ ಮೆಸ್‌ಗಾಗಿ ಹಗಲು ಇರುಳು ಎನ್ನದೆ ದುಡಿದಿದ್ದಾಳೆ ಇನ್ನಾದರೂ ಆರಾಮವಾಗಿ ಇರಲಿ ಎಂಬುವುದು ಪುಟ್ಟಕ್ಕನ ಆಸೆ ಕೂಡ ಅದಕ್ಕಾಗಿ ದಿನ ಬೆಳಗಾದರೆ ಹತ್ತಾರು ದೇವರನ್ನು ನೆನಪಿಸಿಕೊಳ್ಳುತ್ತಾ ಇದ್ದಾಳೆ ಪುಟ್ಟಕ್ಕ. ಸ್ನೇಹಾಗೆ ಅಕ್ಕನ ಮೇಲೆ ಬಲವಾದ ನಂಬಿಕೆ ಆಕೆ ಯಾರನ್ನು ಕಣ್ಣೆತ್ತಿ ನೊಡಿದವಳು ಅಲ್ಲ. ಆಕೆ ಬೆನ್ನ ಹಿಂದೆ ಬರುತ್ತಿದ್ದ ಪಡ್ಡೆ ಹೈಕಳರನ್ನು ಸ್ನೇಹಾ ಓಡಿಸಿ ಬಿಟ್ಟಿದ್ದಾಳೆ. ಇನ್ನು ಮುರಳಿ ಮೇಷ್ಟ್ರನ್ನೂ ಬಿಡುತ್ತಾಳ.

  ನಾಳೆ ಗಂಡಿನ ಕಡೆಯವರು ಬೇರೆ ಬರುತ್ತಿದ್ದಾರೆ ಆದರೆ ಇದೀಗ ಮುರಳಿ ಮೇಷ್ಟ್ರು ಬಂದು ಪುಟ್ಟಕ್ಕನ ಬಳಿ ಮಾತನಾಡಬೇಕು ಅಂದರೆ ಸ್ನೇಹಾ ಇದಕ್ಕೆಲ್ಲ ಒಪ್ಪುತ್ತಾಳೆಯೇ ಇದೀಗ ಮನೆ ಒಳಗೆ ಹೋಗಿದ್ದ ಮುರಳಿ ಮೇಷ್ಟ್ರು ಹಿಂದುರುಗಿ ಬಂದಾಗ ಕಂಠಿ, ಏನಾಯಿತು ಎಂದೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನ ಕೇಳುತ್ತಾನೆ ಆದರೆ ಬೇಸರದಲ್ಲಿದ್ದ ಮೇಷ್ಟ್ರು ಮಾತ್ರ ಇನ್ನೂ ಮೇಲೆ ಸಹನಾ ಒಂದು ರೀತಿಯಲ್ಲಿ ಮರೀಚಿಕೆ ಆದ ಹಾಗೆಯೇ, ನಾಳೆ ಗಂಡಿನ ಕಡೆಯವರು ನೋಡಲು ಬರುತ್ತಿದ್ದಾರೆ ಇದೀಗ ಹೇಳಿದರೆ ಮನೆಯಲ್ಲಿ ಮೂಡಿದ ಸಂತಸ ಹಾಳಾಗಿ ಹೋಗುವುದು ಖಚಿತ ಎನ್ನುತ್ತಾರೆ.

  ಪುಟ್ಟಕ್ಕ ತನ್ನ ಮಗಳಿಗೊಸ್ಕರ ಕನಸಿನ ಗೋಪುರ ಕಟ್ಟಿದ್ದಾರೆ. ಇದನ್ನು ಕೆಡವವುದು ಎಷ್ಟು ಸರಿ ಎಂದು ಮನದಲ್ಲಿ ಬೇಸರ ಪಟ್ಟುಕೊಳ್ಳುತ್ತಾರೆ. ಆ ವೇಳೆ ಕಂಠಿ ಹೇಳುತ್ತಾನೆ ಈಗ ನೀವು ನಿಜ ಹೇಳದೆ ಇದ್ದರೆ ಮುಂದೆ ಯಾವತ್ತೂ ನಿಮಗೆ ನಿಜ ಹೇಳಲು ಆಗುವುದಿಲ್ಲ. ಇವತ್ತೇ ಹೇಳಿಬಿಡಿ ಎಂದು ಕಂಠಿ ಹೇಳಿದರೂ ಸಹ ಮೇಷ್ಟ್ರು ಮಾತ್ರ ಇದನ್ನೆಲ್ಲ ಕಿವಿಗೆ ಹಾಕಿಕೊಳ್ಳದೆ ಅಲ್ಲಿಂದ ತೆರಳುತ್ತಾರೆ. ಆ ವೇಳೆ ಕಂಠಿಯನ್ನು ಯಾರೋ ಕರೆದ ಹಾಗೆ ಆಗುತ್ತದೆ. ಯಾರೆಂದು ಹಿಂದಿರುಗಿ ನೋಡಿದಾಗ ಸ್ನೇಹಾ ಎಂದು ಗೊತ್ತಾಗುತ್ತದೆ. ಸ್ನೇಹಾಳನ್ನು ನೋಡಿ ಕಂಠಿಗೆ ಶಾಕ್ ಆದರೂ ನೇವರಿಸಿಕೊಂಡು ಮಿಸ್ಸು ಎಂದು ಕರೆಯುತ್ತಾನೆ.

  ಮೆಸ್‌ ಬಳಿ ಬರಬೇಡ ಎಂದ ಸ್ನೇಹಾ, ಕಂಠಿ ಶಾಕ್

  ಮೆಸ್‌ ಬಳಿ ಬರಬೇಡ ಎಂದ ಸ್ನೇಹಾ, ಕಂಠಿ ಶಾಕ್

  ಆಗ ಸ್ನೇಹಾ ಕೋಪದಿಂದ್, ನನ್ನ ಮಿಸ್ ಎಂದು ಕರೆಯಬೇಡಿ ಸ್ನೇಹಾ ಎಂದು ಒಳ್ಳೆಯ ಹೆಸರಿದೆ ಕರೆಯಿರಿ ಎಂದು ಹೇಳುತ್ತಾಳೆ. ನಿಮ್ಮನ್ನು ನಾನು ಒಳ್ಳೆಯ ಹುಡುಗ ಎಂದು ಕೊಂಡಿದ್ದೆ ಆದರೆ ನೀವು ಕೂಡ ಅದೇ ಹುಡುಗರ ಗ್ಯಾಂಗ್‌ಗೆ ಸೇರಿದ್ದೀರಿ ನಿಮ್ಮ ಮೇಲೆ ಎಷ್ಟೆಲ್ಲ ಅಭಿಮಾನ ಇತ್ತು ನೀವು ಅದನ್ನು ಉಳಿಸಿಕೊಳ್ಳದೆ ಇರುವುದು ನನಗೆ ಬಹಳ ಬೇಸರ ತಂದಿದೆ. ಇನ್ನು ಮೇಷ್ಟ್ರ ಗೆ ಖಡಕ್ ಆಗಿ ಹೇಳಿದ್ದೇನೆ ಮೆಸ್‌ನತ್ತ ಬರಬಾರದು ಎಂದು ಇನ್ನೂ ಮುಂದೆ ನಿಮಗೂ ಅದೇ ಹೇಳುತ್ತಿದ್ದೇನೆ ನೀವು ಮೆಸ್ ಕಡೆ ಬರಬೇಡಿ. ಈ ಊರಲ್ಲಿ ಸಾಕಷ್ಟು ಬೇರೆ ಮೆಸ್ ಇದೆ ನೋಡಿಕೊಳ್ಳಿ ಎಂದು ಹೇಳುತ್ತಾಳೆ.

  ಸ್ನೇಹಾ ಖಡಕ್ ಮಾತಿಗೆ ಕಂಠಿ ಬೇಸರ

  ಸ್ನೇಹಾ ಖಡಕ್ ಮಾತಿಗೆ ಕಂಠಿ ಬೇಸರ

  ಇದನ್ನು ಕೇಳಿದ ಕಂಠಿಗೆ ಬೇಸರ ಆದರೂ ಸುಮ್ಮನೆ ಇರುತ್ತಾನೆ. ಇನ್ನು ಅಲ್ಲಿಗೆ ಪೊಲೀಸ್ ವ್ಯಾನು ಬರುತ್ತದೆ. ಮುರಳಿ ಮೇಷ್ಟ್ರು ತಂದೆ ಹಾಗೂ ತಾಯಿ ಅದರಿಂದ ಇಳಿದು ನನ್ನ ಮಗ ಕಾಣಿಸದೆ ಇರಲು ಇವರೇ ಕಾರಣ ಎಂದು ಬೊಟ್ಟು ಮಾಡಿ ತೋರಿಸುತ್ತಾನೆ. ಆದರೆ ಸಾಕ್ಷಿ ಮಾತ್ರ ಇಲ್ಲ. ಇನ್ನು ಸ್ನೇಹಾ ಏನು ಮಾಡುತ್ತಾಳೆ ಎಂಬುವುದನ್ನು ನೋಡಬೇಕಿದೆ.

  ಬೇಸರದಲ್ಲಿರುವ ಮುರಳಿ ಮೇಷ್ಟ್ರು

  ಬೇಸರದಲ್ಲಿರುವ ಮುರಳಿ ಮೇಷ್ಟ್ರು

  ಇತ್ತ ಮುರಳಿ ಮೇಷ್ಟ್ರು ನನ್ನ ಕೈ ತಪ್ಪಿ ಹೋಗುತ್ತಿದ್ದಾರೆ ಎಂದು ಸಹನಾ ಗೋಳೋ ಎಂದು ಅಳುತ್ತಿದ್ದಾರೆ. ಸುಮಾ ಮಾತ್ರ ಅಕ್ಕನನ್ನು ಸಮಾಧಾನ ಪಡಿಸಿ ಸುಸ್ತಾಗಿದ್ದಾಳೆ. ಸುಮಾ ಹೇಳುತ್ತಾಳೆ ಅಕ್ಕ ನೀವೇನಾದರೂ ಮಾತನಾಡಬೇಕು ಅಕ್ಕ. ನೀನು ಏನೂ ಮಾತನಾಡದೆ ನಿಂತಿದ್ದರೆ ಅದನ್ನು ನೋಡುತ್ತಿದ್ದ ನನಗೆ ಸಹಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಮುರಳಿ ಸರ್ ಕಣ್ಣ ಮುಂದೆ ಇದ್ದರೂ ಯಾಕಕ್ಕ ಏನೂ ಮಾತನಾಡದೆ ಗರಡು ಗಂಬದ ಹಾಗೆ ನಿಂತಿದ್ದೆ ಎಂದು ಹೇಳಿದಾಗ ಸಹನಾ ಅಳುತ್ತಾಳೆ.

  ಸಹನಾಗೆ ಸಮಾಧಾನ ಹೇಳಿದ ಸುಮಾ

  ಸಹನಾಗೆ ಸಮಾಧಾನ ಹೇಳಿದ ಸುಮಾ

  ನಾನು ಈ ಸಂಬಂಧವನ್ನು ಒಪ್ಪಿಕೊಳ್ಳದೆ ಏನು ಮಾಡಲಿ ನನಗೆ ಅವ್ವನ ಮನಸನ್ನು ನೋಯಿಸಿ ಖುಷಿ ಪಡುವುದು ಇಷ್ಟ ಇಲ್ಲ ಸುಮಾ ಎಂದು ಹೇಳುತ್ತಾಳೆ. ಅದಕ್ಕೆ ಸುಮಾ ಹೇಳುತ್ತಾಳೆ ಅಕ್ಕ ಅವ್ವ ಬೇಸರ ಮಾಡುತ್ತಾಳೆ ಎಂದು ಜೀವನ ಪೂರ್ತಿ ಬೇರೆಯವರನ್ನು ಮದುವೆ ಆಗಿ ಖುಷಿಯಲ್ಲಿ ಇರಲು ಸಾಧ್ಯವೇ ನಿನಗೆ ಎಂದಾಗ ಸಹನಾ ಜೋರಾಗಿ ಅಳುತ್ತಾಳೆ. ಇನ್ನು ಕಂಠಿ ಬಳಿ ಮಾತನಾಡಿದ ತಾಂಡವ, ನಾಳೆ ಸಿಶ್ಚಿತಾರ್ಥ ಅಂತೆ. ಇಡೀ ಊರಿನಲ್ಲಿ ನಿನ್ನ ಹಾಗೂ ನಿನ್ನ ಹುಡುಗಿ ಬ್ಯಾನರ್ ಹಾಕಿದ್ದಾರೆ. ಸ್ನೇಹಾಗೆ ನಿಜ ಗೊತ್ತಿಲ್ವಾ. ಒಂದಲ್ಲ ಒಂದು ದಿನ ಈ ವಿಚಾರ ಆಕೆಗೆ ಗೊತ್ತಾಗುತ್ತದೆ ನೋಡುತ್ತಿರು ಎಂದು ಹೇಳುತ್ತಾನೆ. ಒಂದಲ್ಲ ಒಂದು ದಿನ ಆಕೆಗೆ ನಿಜ ಗೊತ್ತಾಗುತ್ತದೆ ಆಗ ಇದೆ ನಿನಗೆ ಎಂದು ಹೇಳಿ ಅಲ್ಲಿಂದ ತೆರಳುತ್ತಾನೆ.

  English summary
  Kannada serial Puttakkana Makkalu written updated on 14th October episode. Know more about it.
  Saturday, October 15, 2022, 17:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X