Puttakkana Makkalu: ಸ್ನೇಹಾ ದೃಢ ನಿರ್ಧಾರ: ಅವಳ ಮಾತಿಗೆ ಹೆಮ್ಮೆ ಪಟ್ಟ ಕಂಠಿ

By Poorva

ಅಮ್ಮನಿಗಾಗಿ ಸ್ನೇಹಾ ಬಹಳ ದೊಡ್ಡ ದಿಟ್ಟ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾಳೆ. ಪುಟ್ಟಕ್ಕಗೆ ಸ್ನೇಹಾ ಜೀವನ ಏನಾಗುತ್ತದೋ ಎನ್ನುವ ಚಿಂತೆ ಬೇಸರ ತಂದಿದೆ. ನನ್ನ ಮಗಳು ಬಂಗಾರಮ್ಮ ಅವರ ವಿರುದ್ಧ ನಿಂತಿದ್ದಾಳೆ. ಹೇಗಾದರೂ ಮಾಡಿ ಸ್ನೇಹಾ ಹಾಗೂ ಕಂಠಿಯನ್ನು ಒಂದು ಮಾಡಲೇಬೇಕು ಎಂದು ಪುಟ್ಟಕ್ಕ ಶತ ಪ್ರಯತ್ನ ಮಾಡುತ್ತಿದ್ದಾಳೆ.

ಇತ್ತ ಸ್ನೇಹಾ ಮಾತ್ರ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಮನೆಯವರೆಲ್ಲರ ಬುದ್ದಿ ಮಾತಿಗೆ ಮಣಿದ ಸ್ನೇಹಾ, ಕಂಠಿ ಜೊತೆ ಜೀವನ ಮಾಡಬೇಕು ಎಂದು ಮನದಲ್ಲಿ ಅಂದುಕೊಂಡು ಇರುತ್ತಾಳೆ.

ಶ್ರೀ ಅವರನ್ನು ಪ್ರೀತಿ ಮಾಡಿದ್ದು ನಿಜ ಆದರೆ ಇದೀಗ ಎಲ್ಲಾ ಬದಲಾಗಿದೆ ಎಂದು ಮನದ ನೋವನ್ನು ಹೇಳುತ್ತ ಇರುತ್ತಾಳೆ . ಇದೀಗ ಅಮ್ಮನ ಮನಸ್ಸಿಗೆ ಸ್ವಲ್ಪನಾದರೂ ನೆಮ್ಮದಿನೀಡಬೇಕು, ಆಕೆ ಯಾವತ್ತೂ ಚೆನ್ನಾಗಿ ಇರಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ.

kannada-serial-puttakkana-makkalu

ಕಂಠಿ ಜೊತೆ ಮಾತನಾಡಲು ನಿರ್ಧಾರ

ಆ ಕಾರಣದಿಂದ ಈಗ ಕಂಠಿ ಜೊತೆ ಮಾತನಾಡಲೇಬೇಕು ಎಂದು ಸ್ನೇಹಾ ನಿರ್ಧಾರ ಮಾಡುತ್ತಾಳೆ. ಕಂಠಿ ಕೂಡ ಯೋಚನೆ ಮಾಡುತ್ತಾ ಇರುತ್ತಾನೆ. ಸ್ನೇಹಾಗೆ ಇದೀಗ ಅಮ್ಮನ ಮೇಲೆ ನಂಬಿಕೆ ಇಲ್ಲ ಮುಂದೇನು ಎಂದು ಬಹಳ ಭಯದಲ್ಲಿ ಇರುತ್ತಾನೆ. ಆ ವೇಳೆ ಸುಮಾ, ಕಂಠಿಗೆ ಕರೆ ಮಾಡಿ ಅಕ್ಕ ನಿಮ್ಮ ಬಳಿ ಮಾತನಾಡಬೇಕೆಂದು ಹೇಳುತ್ತಾಳೆ.

ಸ್ನೇಹಾ ಮಾತಿಗೆ ಭಯಗೊಂಡ ಕಂಠಿ

ಸುಮಾ ಕೈಯಿಂದ ಮೊಬೈಲ್ ಕಸಿದು ಕೊಂಡು ನಿಮ್ಮ ಬಳಿ ಮಾತನಾಡಬೇಕು. ಆದರೆ ಪರ್ಸನಲ್ ವಿಚಾರ ಎಂದು ಹೇಳುತ್ತಾಳೆ. ಇನ್ನೂ , ಸ್ನೇಹಾನಾ ಮೀಟ್ ಮಾಡುತ್ತಾನೆ. ಆ ವೇಳೆಯೂ ಕೂಡ ಸ್ನೇಹಾ, ಬಂಗಾರಮ್ಮನ ಬಗ್ಗೆ ಕೊಂಚ ಒರಟಾಗಿ ಮಾತನಾಡುತ್ತಾ ಇರುತ್ತಾಳೆ. ಕಂಠಿಗೆ ಮಾತ್ರ ಏನು ಮಾಡಬೇಕು ತಿಳಿಯದೇ ನಿಂತುಕೊಂಡು ಇರುತ್ತಾನೆ.

ಬಾವಿ ಕಟ್ಟೆ ಬಳಿ ಮಾತನಾಡುತ್ತಾ ನಿಂತ ಸ್ನೇಹಾ

ಅವರಿಬ್ಬರೂ ಬಾವಿ ಕಟ್ಟೆಯ ಬಳಿ ಮಾತನಾಡುತ್ತಾ ನಿಂತಿರುತ್ತಾರೆ. ಸ್ನೇಹಾ ಹೇಳಿದ ಮಾತು ಕೇಳಿ ಅಮ್ಮನ ವಿರುದ್ದ ಮಾತನಾಡದೇ ತೆಪ್ಪಗಾಗಿ ಹೋಗುತ್ತಾನೆ. ಇನ್ನೂ ಸ್ನೇಹಾ ಮಾತ್ರ ಕಂಠಿ ಬಳಿ ಹೇಳುತ್ತಾಳೆ. ನಾನು ತಪ್ಪು ಮಾಡಿದ್ದೇನೆ ನಿಜ. ಆದರೆ ನಾನು ಆ ತಪ್ಪನ್ನು ಸರಿ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೇನೆ. ಆ ಕಾರಣದಿಂದ ಆಗಿ ನಾನು ನಿಮ್ಮನ್ನು ಪ್ರೀತಿ ಮಾಡಿರುವುದು ನಿಜ . ಆದ ಕಾರಣ ನಾನು ನಿಮ್ಮನ್ನು ಬಿಟ್ಟು ಬೇರೆ ಎಲ್ಲೂ ಹೋಗುವುದು ಇಲ್ಲ ಎಂದು ಜೋರಾಗಿ ಅಳುತ್ತಾಳೆ.

ಕಂಠಿಯನ್ನ ಬಾಚಿ ತಬ್ಬಿಕೊಂಡ ಸ್ನೇಹಾ

ಕಂಠಿಯನ್ನೂ ತಬ್ಬಿಕೊಂಡು ಸ್ನೇಹಾ ಬಹಳ ಜೋರಾಗಿ ಅಳುತ್ತಾಳೆ. ನಾನು ನಿಮ್ಮ ಮನೆಗೆ ಹಾಗೂ ನಿಮ್ಮ ತಾಯಿಗೂ ಹೊಂದಿಕೊಂಡು ನಿಮ್ಮ ಮನೆಯಲ್ಲಿ ಇರಬೇಕು ಎಂದು ನಿರ್ಧಾರ ಮಾಡಿದ್ದೇನೆ. ನಾನು ನಿಮ್ಮ ಮನೆಯ ಉತ್ತಮ ಸೊಸೆ ಎಂದು ನಿರೂಪಿಸುತ್ತೇನೆ ಎನ್ನುತ್ತಾಳೆ. ಇದನ್ನು ಕೇಳಿ ಕಂಠಿಗೆ ಬಹಳ ಖುಷಿ ಆಗುತ್ತದೆ . ನನ್ನ ತಾಯಿಯನ್ನು ಇನ್ನಾದರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭರವಸೆ ಮೂಡುತ್ತದೆ ಕಂಠಿಗೆ. ಇನ್ನೂ ಪುಟ್ಟಕ್ಕಗೆ ಸ್ನೇಹಾ ನಿರ್ಧಾರ ಇನ್ನಷ್ಟು ಖುಷಿ ನೀಡುವ ಸಾಧ್ಯತೆ ಇದೆ.

More from Filmibeat

English summary
Puttakkana makkalu Kannada Serial Today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X