For Quick Alerts
  ALLOW NOTIFICATIONS  
  For Daily Alerts

  ಮಗನ ನಡವಳಿಕೆಯ ಬಗ್ಗೆ ಅನುಮಾನ ಪಟ್ಟ ಬಂಗಾರಮ್ಮ: ಸಿಕ್ಕಿ ಬೀಳುತ್ತಾನ ಕಂಠಿ?

  By ಪೂರ್ವ
  |

  'ಪುಟ್ಟಕ್ಕನ ಮಕ್ಕಳು' ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಸ್ನೇಹಾ ಮತ್ತು ಕಂಠಿ ಗಾಡಿಲಿ ಒಟ್ಟಿಗೆ ಬಂದಿರುವುದಕ್ಕೆ ಕಂಠಿ ಅವರ ಗೆಳೆಯರಿಗೆ ಔತಣ ಕೂಟ ಏರ್ಪಾಡು ಮಾಡಿರುತ್ತಾನೆ. ಇದನ್ನು ಕಂಡ ಕಂಠಿ ತಂಗಿ ವಸು ಗೆ ಕೊಂಚ ಆಶ್ಚರ್ಯ ಆಗುತ್ತದೆ. ಆಕೆ ಅಣ್ಣನ ಬಳಿ ಬಂದು, ಏನಣ್ಣ ಔತಣ ಕೂಟ ಏರ್ಪಾಡು ಮಾಡಿದ್ದೀಯಾ? ಏನು ವಿಷಯ ಎಂದು ಕೇಳುತ್ತಾಳೆ ಅದಕ್ಕೆ ಕಂಠಿಯ ಗೆಳೆಯ ಹೇಳುತ್ತಾನೆ ಸಿಸ್ಟರ್ ಅಣ್ಣ ಅದರ ಬಗ್ಗೆ ಒಂದು ದಿನ ಬೇಕಾದ್ರೆ ಹೇಳುತ್ತಾರೆ ಎನ್ನುತ್ತಾರೆ.

  ಏನು ವಿಷಯ ಎಂದು ನನಗೆ ಚುಟುಕು ಆಗಿ ಹೇಳಿದರೆ ಸಾಕು ಎಂದು ವಸು ಹೇಳಿದಾಗ. ಚುಟುಕು ಸಾಕಾ ಎಂದು ಕಂಠಿ ಪ್ರಶ್ನೆ ಮಾಡುತ್ತಾನೆ. ಬಳಿಕ ವಸು ಹೇಳುತ್ತಾಳೆ ''ಒಂದಂತೂ ಪಕ್ಕಾ ಇದೆ ನನಗೆ, ನಿನಂತೂ ಸ್ನೇಹಾ ಗೆ ಪ್ರೀತಿಯಂತು ಹೇಳಿರಲ್ಲ. ನಿಮ್ಮ ಅಣ್ಣಯ್ಯನ ಬಗ್ಗೆ ತಂಗಿಯವ್ವಗೆ ತುಂಬಾ ಚೆನ್ನಾಗಿ ಗೊತ್ತು. ಸ್ನೇಹಾ ದೊರೆ ನಾ ನೋಡಿ ಸ್ಮೈಲ್ ಮಾಡಿದ್ದಕ್ಕೆ ಅಣ್ಣ ಔತಣಕ್ಕೆ ಕರೆದಿರ್ಯಾನೆ. ಅಲ್ವಾ ಅಣ್ಣ ಎಂದು ಕೇಳುತ್ತಾಳೆ ವಸು. ಅದಕ್ಕೆ ಕಂಠಿ ಹೇಳುತ್ತಾನೆ ಬರಿ ಸ್ಮೈಲ್ ಅಲ್ಲ ತಂಗಿ ಬೈಕ್ ನಲ್ಲಿ ಜೋಡಿ ಪ್ರಯಾಣ ಎಂದು ಹೇಳುತ್ತಾನೆ ಇದನ್ನು ಕೇಳಿ ವಸುಗೆ ಶಾಕ್ ಆಗುತ್ತದೆ.

  ಕಂಠಿ, ಮೈಸೂರಿನಲ್ಲಿ ನಡೆದ ಘಟನೆ. ಬುಲೆಟ್ ಅನ್ನು ಸ್ನೇಹಾ ಓಡಿಸಿಕೊಂಡು ಬಂದಿರುವುದು ಇದನ್ನೆಲ್ಲ ಹೇಳುತ್ತಾನೆ. ಬಳಿಕ ಹೇಳುತ್ತಾನೆ ಇದು ಬರೀ ಸ್ಯಾಂಪಲ್ ಅಷ್ಟೇ ಇನ್ಮೇಲೆ ನೋಡು ಎಂದು ಹೇಳಿ ಗೆಳೆಯರಿಗೆ ಹೇಳುತ್ತಾನೆ ಲೋ ಹುಡುಗುರಾ ಇನ್ನೊಂದು ಔತಣಕ್ಕೆ ರೆಡಿಯಾಗಿರಿ ಎಂದು ಹೇಳುತ್ತಾನೆ.

  ನಾನು ಸ್ನೇಹಾಗೆ ಪ್ರೀತಿ ಹೇಳೋ ದಿನ ತುಂಬಾ ದೂರ ಇಲ್ಲ. ಆದಷ್ಟು ಬೇಗ ಐ ಲವ್ ಯು ಎಂದು ಹೇಳಿ ಬಿಡುತ್ತೇನೆ ಆದಷ್ಟು ಬೇಗ ಎಂದು ಹೇಳುವಾಗ ಕಂಠಿ ತಾಯಿ ಬಂಗಾರಮ್ಮ ಬರುತ್ತಾಳೆ. ಮಗನ ನಡೆ ಕಂಡು ಆಶ್ಚರ್ಯ ಆಗುತ್ತದೆ. ಕಂಠಿ ಎಂದು ಹೇಳುತ್ತಾರೆ ಬಂಗಾರಮ್ಮ. ಅಮ್ಮನನ್ನು ನೋಡಿದ ಕಂಠಿ ಗಾಬರಿಗೊಳ್ಳುತ್ತಾನೆ.

  ಬಳಿಕ ಊಟ ಕ್ಕೆ ಕುಳಿತ ಕಂಠಿ ಗೆಳೆಯರ ಬಳಿ ಓಹೋ ಎಂಡ್ರಾಲಾ ಇವತ್ತು ಎಲ್ಲಾ ಮನೆಯಲ್ಲಿ ಇದ್ದೀರಿ ಭರ್ಜರಿ ಭೋಜನ ನಡೆಯುತ್ತಿದೆ ಎನ್ನುತ್ತಾಳೆ. ಚಿಕ್ಕೆಜಮಾನರು ಭೋಜನ ನೀಡುತ್ತಿದ್ದಾರೆ ಎಂದು ಗೆಳೆಯರು ಹೇಳಿದಾಗ ಬಂಗಾರಮ್ಮ ಕಂಠಿ ಬಳಿ, ಏನು ಕಂಠಿ ಯಾರಾದಾದರೂ ಹುಟ್ಟು ಹಬ್ಬವಾ? ಎಂದು ಕೇಳುತ್ತಾಳೆ. ಅದಕ್ಕೆ ಕಂಠಿ, ಹುಡುಗರೆಲ್ಲಾರನ್ನು ಕರೆಸಿ ಊಟ ಹಾಕಬೇಕು ಅನ್ನಿಸಿತು. ಎಂದಾಗ ಬಂಗಾರಮ್ಮ ಓಹೋ ಒಳ್ಳೇದೇ ಒಳ್ಳೇದೇ ಹಾಗೆಲ್ಲ ನಿನಗೆ ದಿಢೀರ್ ಆಗಿ ಅನಿಸುವುದಿಲ್ಲ ಅಲ್ವಾ ಎಂದಾಗ ವಸು ಹೇಳುತ್ತಾಳೆ ಅವ್ವ ಅದು ಹಾಗೆ ಸುಮ್ಮನೆ ಎಂದಾಗ ಬಂಗಾರಮ್ಮ ಹೇಳುತ್ತಾರೆ ನನ್ನ ಮಗನ ಬಗ್ಗೆ ನನಗೆ ಗೊತ್ತಿದೆ ಎಂದು ಅನುಮಾನ ವ್ಯಕ್ತ ಪಡಿಸುತ್ತಾರೆ.

  English summary
  Kannada serial Puttakkana Makkalu written updated on 15th August. Know more about the episode.
  Tuesday, August 16, 2022, 23:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X