Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮನೆ ಬಿಟ್ಟು ಹೋದ ಮುರಳಿ! ಇನ್ನಾದರೂ ಮುರಳಿ-ಸಹನಾ ಪ್ರೀತಿಗೆ ಒಪ್ಪಿಗೆ ಸಿಗುತ್ತಾ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. 'ಪುಟ್ಟಕ್ಕನ ಮಕ್ಕಳು' ಧಾರವಾಹಿ ಶುರು ಆಗಿ ಒಂದು ವರುಷ ಕಳೆದ ಖುಷಿಯಲ್ಲಿ ಇಡೀ ತಂಡ ಇದೆ. ಆದರೆ ಧಾರಾವಾಹಿಯಲ್ಲಿ ಪುಟ್ಟಕ್ಕ ಮಾತ್ರ ಬಹಳ ಬೇಸರದಲ್ಲಿ ಇದ್ದಾಳೆ. ತನ್ನ ಮಗಳಿಗೆ ಎಂಥ ಸ್ಥಿತಿ ಬಂತು. ಆಕೆ ಜೀವನದಲ್ಲಿ ಮೊದಲನೇ ಬಾರಿ ನನ್ನ ಬಳಿ ಏನೋ ಕೇಳಿದ್ದಾಳೆ ಆದರೆ ಅದನ್ನು ನನಗೆ ಕೊಡಲು ಆಗುತ್ತಿಲ್ಲವಲ್ಲ ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾಳೆ.
ಇನ್ನು ಇದರಲ್ಲಿ ರಾಜೇಶ್ವರಿ ಕುಹಕದ ಮಾತು ಬೇರೆ, ಇದನ್ನೆಲ್ಲ ಕೇಳಿಸಿಕೊಂಡ ಪುಟ್ಟಕ್ಕನಿಗೆ ಬಹಳ ಬೇಸರ ಆಗುತ್ತದೆ. ಇನ್ನು ಚಂದ್ರುವನ್ನು ನೋಡಲು ಹೋದ ಸ್ನೇಹಾ, ಬಂಗಾರಮ್ಮನವರ ಮನೆಯಲ್ಲಿ ಸಿಲುಕಿ ಹಾಕಿಕೊಂಡಿದ್ದಾಳೆ ಏನು ಮಾಡುವುದು ಎಂದು ತೋಚದೇ ಅತ್ತಿಂದ ಇತ್ತ ಹೋಗುತ್ತಾ ಇರುತ್ತಾಳೆ. ಇದೀಗ ಏನು ಮಾಡುವುದು ನನಗೆ ಯಾರು ಈ ವೇಳೆ ಸಹಾಯಕ್ಕೆ ಬರುತ್ತಾರೆ ಎಂದು ಹೇಳಿದಾಗ ಶ್ರೀಯ ನೆನಪಾಗುತ್ತದೆ.
ಕಂಠಿಗೆ ಕರೆ ಮಾಡುವ ಸ್ನೇಹಾ, ಶ್ರೀ ನನಗೆ ನಿಮ್ಮಿಂದ ಒಂದು ಸಹಾಯ ಆಗಬೇಕಿತ್ತು ಎಂದಾಗ ಕಂಠಿ ನೀವು ಎಲ್ಲಿದ್ದೀರ ಎಂದು ಆತಂಕದಲ್ಲಿ ಕೇಳುತ್ತಾನೆ? ಇದನ್ನು ಕೇಳಿದ ಸ್ನೇಹಾ, ನಾನು ಬಂಗಾರಮ್ಮನ ಮನೆಯಲ್ಲಿ ಎದುರುಗಡೆ ರೂಮ್‌ನಲ್ಲಿ ಇದ್ದೇನೆ. ವಸು ಅಕ್ಕ ಎದುರುಗಡೆ ರೂಮ್‌ಗೆ ಕರೆದುಕೊಂಡು ಬಿಟ್ಟರು ಪ್ಲೀಸ್ ನನ್ನ ಕರೆದುಕೊಂಡು ಹೋಗಿ. ಪಾಪ ವಸು ಅತ್ತಿಗೆ ನನ್ನಿಂದ ಅವರು ಬೇಯಿಸಿಕೊಳ್ಳಬೇಕು ಆಗುತ್ತದೆ ಎಂದು ಹೇಳುತ್ತಾಳೆ.

ಬಂಗಾರಮ್ಮನ ಕೈಗೆ ಸಿಕ್ಕಿಬೀಳ್ತಾರಾ ಕಂಠಿ ಹಾಗೂ ಸ್ನೇಹಾ
ಇದನ್ನು ಕೇಳಿ ಕಂಠಿ ಶಾಕ್ ಆಗುತ್ತಾನೆ ಅಲ್ಲೇ ಇರುವ ಪೋಸ್ಟರ್ ಅನ್ನು ನೋಡಿದರೆ ನಾನೇ ಕಂಠಿ ಎಂಬ ವಿಚಾರ ಸ್ನೇಹಾಗೆ ತಿಳಿದು ಬಿಡುತ್ತದೆ ಎಂದು ತರಾತುರಿಯಲ್ಲಿ ಬರುತ್ತಾನೆ. ಈ ವೇಳೆ ಮನೆಗೆ ಬಂದ ಬಂಗಾರಮ್ಮ ಕಂಠಿ ಎಲ್ಲಿ ಎಂದು ಕೇಳುತ್ತಾರೆ. ಇದನ್ನು ಕೇಳಿದ ಆಕೆಯ ಗಂಡ ಹೇಳುತ್ತಾರೆ ಆತ ರೂಮ್ ನಲ್ಲಿ ಇದ್ದಾನೆ ಎಂದು ಹೇಳುತ್ತಾರೆ ಇದನ್ನು ಕೇಳಿದ ವಸು ಹೇಳುತ್ತಾಳೆ ಅಣ್ಣ ಹೊರಗೆ ಹೋಗಿರಬಹುದು ಎಂದು ಹೇಳುತ್ತಾನೆ ಇದನ್ನು ಕೇಳಿದ ಬಂಗಾರಮ್ಮ ಇಲ್ಲ ಹೋಗುವವನನ್ನು ತಡೆದೆ ನಾನು ಎಂದು ಹೇಳಿಕೊಂಡು ಬಂಗಾರಮ್ಮ ಕಂಠಿಯನ್ನು ಕಾಣಲು ರೂಮ್ ಕಡೆ ಹೋಗುತ್ತಾಳೆ.

ಮುರಳಿ ಮನೆಯಲ್ಲಿ ಹೈಡ್ರಾಮಾ
ಇನ್ನೂ ಮುರಳಿ ಮೇಷ್ಟ್ರ ಮನೆಯಲ್ಲಿ ಹೈ ಡ್ರಾಮಾ ನಡೆಯುತ್ತಿದೆ. ಪುಟ್ಟಕ್ಕನಿಗೆ ಅವಮಾನ ಮಾಡಿದ ಬಗ್ಗೆ ಅಕ್ಕ ಚೈತ್ರ ಮುರಳಿ ಮೇಷ್ಟ್ರ ಬಳಿ ಹೇಳಿರುತ್ತಾಳೆ. ಅಮ್ಮ, ಆತ್ಮಹತ್ಯೆ ನಾಟಕ ಆಡುತ್ತಾಳೆ ಏನು ಅಂತ ಸ್ವಲ್ಪ ವಿಚಾರಣೆ ನಡೆಸು. ಡ್ರಾಮಾ ಮಾಡಿದರೆ ನೀನು ಕರಗಿ ಬಿಡಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮುರಳಿಗೆ ಬಹಳ ನೋವಾಗುತ್ತದೆ. ರೂಮಿನಿಂದ ಹೊರಗೆ ಬಂದಾಗ ಊಟ ಮಾಡು ಮುರಳಿ ಎಂದು ಅಮ್ಮ ಹೇಳಿದ ವೇಳೆ ನನಗೆ ಹಸಿವಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮುರಳಿ ತಾಯಿ ನಟಿಸುತ್ತಾ ಏನೋ ನಾವು ಪುಟ್ಟಕ್ಕಗೆ ಹಾಗೆಲ್ಲ ಹೇಳಿದೆವು ಎಂದು ಸಿಟ್ಟ ಎಂದು ಕೇಳುತ್ತಾಳೆ.

ಆತ್ಮಹತ್ಯೆಗೆ ಮುಂದಾದ ಮೇಷ್ಟ್ರ ತಾಯಿ
ನಾನು ಮುಖ್ಯಾನ ಅಥವಾ ಆ ಹುಡುಗಿ ಮುಖ್ಯಾನ? ಎಂದು ಕೇಳಿದಾಗ ನನಗೆ ಸಹನಾ ಮುಖ್ಯ ಎಂದು ಹೇಳಿಬಿಡುತ್ತಾನೆ ಮುರಳಿ. ಇದನ್ನು ಕೇಳಿದ ಮುರಳಿ ತಾಯಿ ಲಬೋ ಲಬೋ ಎಂದು ಬಾಯಿ ಬಡಿಕೊಳ್ಳುತ್ತ ನಾನು ಮುಖ್ಯ ಅಲ್ಲ ಅಲ್ವಾ ನಿನಗೆ ಎಂದು ಹೇಳಿ ಅಳುತ್ತಾಳೆ. ಈ ವೇಳೆ ಅಲ್ಲಿಗೆ ಚೈತ್ರಾ ಬಂದು ಸಮಾಧಾನ ಮಾಡಿಕೋ ಎಂದು ಹೇಳಿದಾಗ ಚೈತ್ರಾಳನ್ನು ದೂರ ತಳ್ಳಿದ ತಾಯಿ ಏನು ಸಮಾಧಾನ ಮಾಡಿಕೊಳ್ಳಲಿ ಎಂದು ಬೇಸರ ಪಟ್ಟುಕೊಳ್ಳುತ್ತಾರೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಾಳೆ.

ಮನೆ ಬಿಟ್ಟು ಹೊರಟ ಮುರಳಿ ಮೇಷ್ಟ್ರು
ಇದನ್ನು ನೋಡಿದ ಮುರಳಿ, ಅಮ್ಮ ಏನು ಮಾಡುತ್ತಾ ಇದ್ದೀಯಾ? ಬಾ ಆಚೆ ಎಂದು ಹೇಳುತ್ತಾರೆ. ಆದರೆ ಮುರಳಿ ತಾಯಿ ಮಾತ್ರ ನಾಟಕೀಯವಾಗಿ ನಾನು ನೇಣು ಹಾಕಿಕೊಂಡು ಸಾಯ್ತೀನಿ ಎಂದು ಹೇಳಿ ಹೆದರಿಸುತ್ತಾರೆ. ಇದನ್ನು ನೋಡಿದ ಮೇಷ್ಟ್ರ ತಂದೆ ಮುರಳಿಗೆ ಬೈಯುತ್ತಾರೆ. ಆ ವೇಳೆ ಕುಪಿತಗೊಂಡ ಮೇಷ್ಟ್ರು ಏನಿದು ನಿಮ್ಮ ಡ್ರಾಮಾ ಸಾಕು ನಿಲ್ಲಿಸಿ. ನೀವು, ಸಹನಾ ನನ್ನ ಮದುವೆ ಒಪ್ಪಿದರೆ ಮಾತ್ರ ಮನೆಗೆ ಬರೋದು ಇಲ್ಲ ಅಂದರೆ ನಾನು ಮನೆಗೆ ಬರುವುದಿಲ್ಲ ಎಂದು ಹೇಳಿ ಮುರಳಿ ಹೋಗುತ್ತಾನೆ. ಇದನ್ನು ಕೇಳಿದ ಆತನ ತಾಯಿ ಮನೆ ಹೊರಗೆ ಬಂದು ಪುಟ್ಟಕ್ಕನ ವಿರುದ್ದ ಹಲ್ಲು ಮಸೆಯುತ್ತಾರೆ.