ಕಂಠಿ ನಿಶ್ಚಿತಾರ್ಥಕ್ಕೆ ದಿನ ನಿಗದಿ: ಅಮ್ಮನಾ-ಪ್ರೇಯಸಿಯಾ? ಕಂಠಿ ಆಯ್ಕೆ ಯಾವುದು?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಇತ್ತ ಬಂಗಾರಮ್ಮ ಮನೆಗೆ ಸರಳಾ ಮತ್ತು ಪೂರ್ವಿ ಆಗಮಿಸಿದ್ದಾರೆ. ಸರಳಾ ಗಂಡ ವಿದೇಶದಿಂದ ಶೀಘ್ರವಾಗಿ ಆಗಮಿಸುತ್ತಿರುವ ಸುದ್ದಿಯನ್ನು ಹೇಳಲೆಂದು ಸರಳಾ ಬಂಗಾರಮ್ಮನ ಮನೆಗೆ ಆಗಮಿಸಿದ್ದಾರೆ. ಇತ್ತ ಸುದ್ದಿ ತಿಳಿದ ಬಂಗಾರಮ್ಮ ಬಹಳ ಖುಷಿ ಸುದ್ದಿ ಸರಳಾ. ವಸು ಬಳಿ ಬಂಗಾರಮ್ಮ ಹೇಳುತ್ತಾಳೆ ವಸು ಹೋಗು ಸಕ್ಕರೆ ತೆಗೆದುಕೊಂಡು ಬಾ ಎಂದು ಹೇಳುತ್ತಾಳೆ.

ಬಳಿಕ ಗಂಡನ ಬಳಿ ರೀ ಕೇಳಿಸಿ ಕೊಂಡ್ರಾ ಅಣ್ಣಯ್ಯ ವಿದೇಶದಿಂದ ಬರುತ್ತಿದ್ದಾನೆ ಅಂತೆ. ಇದನ್ನು ಕೇಳಿದ ಬಂಗಾರಮ್ಮ ಗಂಡಗೆ ಖುಷಿಯಾಗುತ್ತದೆ. ಇನ್ನೂ ವಸು ಸಕ್ಕರೆ ತೆಗೆದುಕೊಂಡು ಬಂದಾಗ ಅದನ್ನು ತೆಗೆದುಕೊಂಡ ಬಂಗಾರಮ್ಮ ಸರಳ ಬಾಯಿಗೆ ಸಿಹಿ ಹಾಕಲು ಹೋಗುತ್ತಾಳೆ. ಅದಕ್ಕೆ ಸರಳಾ, ಅತ್ತಿಗೆ ಪರವಾಗಿಲ್ಲ ಎಂದು ಹೇಳುತ್ತಾಳೆ.

ಸಿಹಿ ಸುದ್ದಿ ಹೇಳಿದಾಗ ನಾಲಿಗೆ ಸಿಹಿ ಮಾಡಿಕೊಳ್ಳಬೇಕು ಸಿಹಿ ಸುದ್ದಿ ಹಾಗೆಯೇ ಇರಬೇಕು ಎಂದು ಬೇಡ ಎಂದು ಹೇಳಬಾರದು ಎಂದು ಸಕ್ಕರೆ ಬಾಯಿಗೆ ಹಾಕುತ್ತಾಳೆ. ಪೂರ್ವಿ ಬಾಯಿಗೆ ಸಕ್ಕರೆ ಹಾಕಲು ಹೋದಾಗ ಬಂಗಾರಮ್ಮನ ಬಳಿ ಕೇಳುತ್ತಾಳೆ ಅತ್ತೆ ಕಂಠಿ ಎಲ್ಲಿ ಎಂದು ಅದಕ್ಕೆ ಬಂಗಾರಮ್ಮ ಗಂಡನ ಬಳಿ ಹೇಳುತ್ತಾರೆ ನೋಡಿದ್ರಾ ನಿಮ್ಮ ಸೋಸೆನಾ ಸಿಹಿ ತೆಗೆದುಕೊಳ್ಳುವಾಗ ಅವಳ ಗಂಡ ಆಗೋನು ಜೊತೆಯಲ್ಲಿ ಇರಬೇಕು ಎಂಬುವುದು ಅವಳ ಆಸೆ ಎನ್ನುತ್ತಾಳೆ.

ಕಂಠಿಯನ್ನು ನೋಡಲು ಬಂದ ಪೂರ್ವಿ

ಕಂಠಿಯನ್ನು ನೋಡಲು ಬಂದ ಪೂರ್ವಿ

ಕಂಠಿ ಮೇಲಿಂದ ಕೆಳಗಿಳಿದು ಬರುತ್ತಿರುವುದನ್ನು ನೋಡಿದ ಪೂರ್ವಿ ಖುಷಿಯಾಗುತ್ತಾಳೆ. ವಸು ಮನದಲ್ಲಿ ಸರಿಯಾದ ಟೈಮ್ ಗೆ ಬಂದೆ ಅಣ್ಣಯ್ಯ ಎಂದುಕೊಳ್ಳುತ್ತಾಳೆ. ಬಳಿಕ ಇದಕ್ಕೂ ಏನಾದರು ಒಂದು ಹೇಳುತ್ತಾಳೆ ಅಮ್ಮ ಎಂದು ಮನದಲ್ಲಿ ಅಂದುಕೊಂಡಾಗ ಬಂಗಾರಮ್ಮ ಹೇಳುತ್ತಾಳೆ 'ನೋಡು ಸರಳಾ ನನ್ನ ಮಗನನ್ನು ಜ್ಞಾಪಿಸಿಕೊಂಡಾಗ ಮಗ ಬಂದ ಇವನಿಗೆ ನೂರುವರುಷ ಸುಖವಾಗಿರುತ್ತಾನೆ' ಎಂದಾಗ ಸರಳಾ ಹೇಳುತ್ತಾಳೆ 'ಹಾಗಾದರೆ ನನ್ನ ಮಗಳು ಧೀರ್ಘ ಸುಮಂಗಲಿ ಆಗುತ್ತಾಳೆ' ಎಂದಾಗ ಎಲ್ಲರೂ ಜೋರಾಗಿ ನಗುತ್ತಾರೆ. ವಸು ಕಂಠಿ ಬಳಿ ಹೇಳುತ್ತಾಳೆ. 'ಅಣ್ಣಯ್ಯ ಇದ್ಯಾಕೋ ವಿಪರೀತಕ್ಕೆ ಹೋಗೋ ಹಾಗೆ ಕಾಣುತ್ತಿದೆ. ನನ್ನ ಬಗ್ಗೆ ಯೋಚಿಸಬೇಡ ನಿನ್ನ ಬಗ್ಗೆ ಯೋಚಿಸು' ಎಂದು ಹೇಳುತ್ತಾಳೆ. ಬಂಗಾರಮ್ಮ ಕಂಠಿ ಬಳಿ ಬಂದು ಕಂಠಿ ನಿನ್ನ ಮಾವ ದುಬೈ ನಿಂದಾ ಬರುತ್ತಿದ್ದಾರಂತೆ ಎಂದು ಹೇಳುತ್ತಾಳೆ. ಅದಕ್ಕೆ ಕಂಠಿ ಸುಮ್ಮನಾಗುತ್ತಾನೆ.

ಬಾಯಿಗೆ ಸಕ್ಕರೆ ಹಾಕು ಎಂದ ಬಂಗಾರಮ್ಮ

ಬಾಯಿಗೆ ಸಕ್ಕರೆ ಹಾಕು ಎಂದ ಬಂಗಾರಮ್ಮ

ಬಳಿಕ ಬಂಗಾರಮ್ಮ ಏನೋ ಜ್ಞಾಪಿಸಿಕೊಂಡು 'ಬಾ ಪೂರ್ವಿ ನೀನೇ ಇವನ ಬಾಯಿಗೆ ಸಿಹಿ ಹಾಕು' ಎಂದು ಕರೆಯುತ್ತಾಳೆ. ಪೂರ್ವಿ, ಕಂಠಿ ಬಳಿ ಬಂದು ಕಂಠಿ ಎಲ್ಲಿ ಆ ಅನ್ನು ಅನ್ನುತ್ತಾಳೆ ಅದಕ್ಕೆ ಕಂಠಿ ಬೇಡ ಬೇಡ ಕೈಯಲ್ಲೇ ಕೊಡು ಎಂದು ಹೇಳುತ್ತಾನೆ ಅದಕ್ಕೆ ಪೂರ್ವಿ ಹೇಳುತ್ತಾಳೆ ಏನು ಕಂಠಿ ನಾಚಿಕೆನಾ ಎಂದು ಕೇಳಿದಾಗ ಬಂಗಾರಮ್ಮ ಹೇಳುತ್ತಾಳೆ ಎಲ್ಲಾ ಸುಳ್ಳು ನೀನು ಇಲ್ಲದಾಗ ಪ್ರೇಮ ಪತ್ರ ಬರೆಯುತ್ತಾನೆ. ಇದೀಗ ನಾಟಕ ಮಾಡುತ್ತಾನೆ ಎಂದು ಹೇಳುತ್ತಾಳೆ.

ಕಂಠಿಗೆ ಸಕ್ಕರೆ ನೀಡುವ ಪೂರ್ವಿ

ಕಂಠಿಗೆ ಸಕ್ಕರೆ ನೀಡುವ ಪೂರ್ವಿ

ಬಳಿಕ ಪೂರ್ವಿ, ಕಂಠಿ ಕೈಗೆ ಸಕ್ಕರೆ ಹಾಕುತ್ತಾಳೆ. ಇತ್ತ ಬಂಗಾರಮ್ಮ, ಅಣ್ಣ ದುಬೈ ಇಂದ ಯಾವಾಗ ಬರುತ್ತಾನೆ ಎಂದು ಏನಾದ್ರು ಹೇಳಿದ್ರಾ' ಎಂದಾಗ ಸರಳಾ, 'ಇನ್ನೂ ಚೂರು ಕೆಲಸ ಹಾಗೆ ಇದೆಯಂತೆ ಅದನ್ನು ಮುಗಿಸಿ ಬರುತ್ತಾರೆ' ಎನ್ನುತ್ತಾಳೆ. ಇತ್ತ ಕಂಠಿ ಅಮ್ಮನ ಬಳಿ 'ನನಗೆ ಸ್ವಲ್ಪ ಕೆಲ್ಸ ಇದೆ ನಾನು ಹೋಗುತ್ತೇನೆ' ಎಂದಾಗ ಬಂಗಾರಮ್ಮ ಸರಿ ಹೋಗು ಎಂದು ಹೇಳುತ್ತಾಳೆ. ಸರಳಾ, 'ನಾನು ತುಂಬಾ ಖುಷಿಯಲ್ಲಿ ಇದ್ದೀನಿ ಅಣ್ಣ, ಇವತ್ತೇ ದುಬೈ ಇಂದ ಬಂದ್ರೆ ಇವತ್ತೇ ನಿಶ್ಚಿತಾರ್ಥ ಮಾಡಿ ಮುಗಿಸಿಬಿದುತ್ತಿದ್ದೆ' ಎಂದು ಹೇಳುತ್ತಾಳೆ. ಬಳಿಕ ಹೇಳುತ್ತಾಳೆ 'ನಿಶ್ಚಿತಾರ್ಥ ನಿಧಾನಕ್ಕೆ ಇರಲಿ ನಾವು ದಿನಾಂಕ ಗೊತ್ತು ಮಾಡಿ ಇಡಬಹೂದಲ್ಲ' ಎಂದು ಹೇಳುತ್ತಾಳೆ.

ಕಂಠಿ ನಿಶ್ಚಿತಾರ್ಥಕ್ಕೆ ದಿನಾಂಕ ನಿಗದಿ?

ಕಂಠಿ ನಿಶ್ಚಿತಾರ್ಥಕ್ಕೆ ದಿನಾಂಕ ನಿಗದಿ?

'ನಾನು ಪುರೋಹಿತರನ್ನು ಕರೆಯಿಸುತ್ತೇನೆ ಮುಂದಿನ ವಾರ ಬಿಟ್ಟು ಬೇರೆ ಯಾವ ದಿನ ಒಳ್ಳೆದಿದೆ ಎಂದು ನೋಡೋಣ ಅಣ್ಣ ಬಂದ ಮೇಲೆ ಯಾವುದಾದರೂ ಒಂದು ಡೇಟ್ ನ ಫಿಕ್ಸ್ ಮಾಡೋಣ' ಅಂದಾಗ ಪೂರ್ವಿ ಖುಷಿಯಿಂದ ಸೂಪರ್ ಅತ್ತೆ ನಿಮ್ಮಸ್ಟ್ ಪಾಸ್ಟ್ ಇರಬೇಕು ಎಲ್ಲರೂ ಕಲಿಯಿರಿ ಕಲಿಯಿರಿ' ಎಂದಾಗ ಎಲ್ಲರೂ ಜೋರಾಗಿ ನಗುತ್ತಾರೆ. ಇನ್ನೂ ಬಂಗಾರಮ್ಮ ಪುರೋಹಿತರಿಗೆ ಕರೆ ಮಾಡಿ ಮನೆಗೆ ಕರೆಯಿಸುತ್ತಾಳೆ. ಇತ್ತ ಕಾಳಿ ಹಾಗೂ ರಾಜೇಶ್ವರಿ, ಪುಟ್ಟಕ್ಕನ ಮೇಲೆ ಕಿಡಿ ಕಾರುತ್ತಿದ್ದಾರೆ. ಪುಟ್ಟಕ್ಕ ನನ್ನು ಹೇಗಾದರೂ ಮಟ್ಟ ಹಾಕಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ಮುಂದೇನು ಆಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana makkalu written updated on 15th July. Know more about this episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X