ಗಿಫ್ಟ್‌ ಹುಡುಕಲು ಬಾವಿಗೆ ಬಿದ್ದ ಮೇಷ್ಟ್ರು! ಕಂಗಾಲಾದ ಸಹನಾ

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಮುರಳಿ ಮೇಷ್ಟ್ರು ಸಹನಾಗಾಗಿ ಮೆಸ್ ಬಳಿ ಬಂದಿದ್ದಾರೆ. ಮೆಸ್ ನಲ್ಲಿ ಟೀ ಕಾಫಿ ಕುಡಿದು ಸಹನಾ ಸಿಗುತ್ತಾಳ ಎಂದು ಕಾದು ಕುಳಿತಿದ್ದಾರೆ. ಕೊನೆಗೆ ಸಹನಾ ಬಾವಿ ದಂಡೆಯ ಬಳಿ ಬಂದು ನಿಲ್ಲುತ್ತಾಳೆ. ಅಲ್ಲಿಗೆ ಬಂದ ಮೇಷ್ಟ್ರು ಸಹನಾ ಬಳಿ ಯಾಕೆ ಬರಲಿಲ್ಲ ನೀನು? ನೀನು ಬರುತ್ತೀಯಾ ಎಂದು ಎಷ್ಟೆಲ್ಲಾ ಕಾದು ಕುಳಿತೆ ಎಂದೆಲ್ಲ ಹೇಳುತ್ತಾರೆ.

ಇದನ್ನು ಕೇಳಿ ಸಹನಾ ಹೇಳುತ್ತಾಳೆ ನೀವು ಕೊಟ್ಟ ಗಿಫ್ಟ್ ಬಾವಿಯೊಳಗೆ ಬಿತ್ತು. ಅದರಿಂದಾಗಿ ನೀವು ಹೇಳಿದ ಪ್ಲೇಸ್ ಗೆ ನನಗೆ ಬರಲು ಸಾಧ್ಯ ಆಗಲಿಲ್ಲ ಎಂದಾಗ ಮುರಳಿ ಮೇಷ್ಟ್ರು ಬಾವಿಗೆ ಧುಮುಕುತ್ತಾರೆ. ಇದನ್ನು ಕಂಡ ಸಹನಾಗೆ ಶಾಕ್ ಆಗುತ್ತದೆ. ಸಹನಾ ಜೋರಾಗಿ ಕಿರುಚಿಕೊಳ್ಳುತ್ತಾಳೆ. ಇದನ್ನು ಕೇಳಿ ಮೆಸ್‌ನವರೆಲ್ಲ ಓಡಿ ಬರುತ್ತಾರೆ. ಮೇಷ್ಟ್ರು ಬಾವಿಗೆ ಬಿದ್ದಿದ್ದಾರೆ ಯಾರಾದರೂ ಸಹಾಯ ಮಾಡಿ ಎಂದು ಕೇಳಿ ಕೊಳ್ಳುತ್ತಾಳೆ.

ಬಾವಿಗೆ ಬಿದ್ದ ಮೇಷ್ಟ್ರು

ಬಾವಿಗೆ ಬಿದ್ದ ಮೇಷ್ಟ್ರು

ಇಲ್ಲಿಂದ ಹೇಗೆ ಬಾವಿಯೊಳಗೆ ಬೀಳಲು ಸಾಧ್ಯ ಎಂದು ಸ್ನೇಹಾ ಅನುಮಾನ ವ್ಯಕ್ತಪಡಿಸಿದಾಗ, ಬಾವಿಯಲ್ಲಿ ನೀರು ಏಷ್ಟು ಇದೆ ಎಂದು ನೋಡಲು ಹೋಗಿ ಬಾವಿಗೆ ಬಿದ್ದರು ಎಂದು ಬಹಳ ಆತಂಕದಿಂದ ಹೇಳುತ್ತಾಳೆ ಸಹನಾ. ಇದನ್ನು ಕೇಳಿದ ಸ್ನೇಹಾ ಅದು ಹೇಗೆ ಎಂದು ಯೋಚನೆ ಮಾಡುತ್ತಾಳೆ. ಬಳಿಕ ಕಂಠಿ ಹಾಗೂ ಆತನ ಗೆಳೆಯರು ಮಾತನಾಡುತ್ತಾ ಇರುತ್ತಾರೆ. ಮೇಷ್ಟ್ರು ಸ್ನೇಹಾಗೆ ಲವ್ ಪ್ರಪೋಸ್ ಮಾಡಿದ್ದಾರೆ ಸ್ನೇಹಾ ಒಪ್ಪಿಕೊಳ್ಳದ ಕಾರಣ ಬಾವಿಗೆ ಬಿದ್ದಿದ್ದಾರೆ ಎಂದು ಅನ್ನಿಸುತ್ತದೆ ಎಂದು ಮುಂಗುಸಿ ಹೇಳುತ್ತಾನೆ.

ಮೇಷ್ಟ್ರನ್ನು ರಕ್ಷಿಸಿದ ಕಂಠಿ

ಮೇಷ್ಟ್ರನ್ನು ರಕ್ಷಿಸಿದ ಕಂಠಿ

ಸ್ನೇಹಾಗೆ ಕಂಠಿ ಪ್ರಪೋಸ್ ಮಾಡಿದರೆ ಆಕೆಯೇ ಬಾವಿಗೆ ತಳ್ಳುತ್ತಿದ್ದಳು ಎಂದು ಹೇಳುತ್ತಾನೆ. ಬಳಿಕ ಬಾವಿಗೆ ಬಿದ್ದ ಮೇಷ್ಟ್ರನ್ನು ಕಂಠಿ ಎತ್ತುತ್ತಾನೆ. ಅಷ್ಟರಲ್ಲಿ ಮೇಷ್ಟ್ರಿಗೆ ಜ್ಞಾನ ತಪ್ಪಿ ಹೋಗಿರುತ್ತದೆ. ಬಳಿಕ ಕೈ ಕಾಲನ್ನು ಉಜ್ಜುತ್ತಾರೆ. ಈ ವೇಳೆ ಸ್ನೇಹಾ ಬಳಿ ಕಂಠಿ ಹೇಳುತ್ತಾನೆ ಮೇಷ್ಟ್ರು ಬಾವಿಯಲ್ಲಿ ಏನೋ ಹುಡುಕಾಡುತ್ತಿದ್ದರು ಎನ್ನುತ್ತಾನೆ. ಇದನ್ನು ಕೇಳಿ ಸ್ನೇಹಾ ಏನಿರಬಹುದು ಎಂದು ಯೋಚಿಸುತ್ತಾಳೆ ಅಷ್ಟರಲ್ಲಿ ಮುರಳಿ ಮೇಷ್ಟ್ರು ತಂದೆ ತಾಯಿ ಊರಿನಿಂದ ಬರುತ್ತಾರೆ.

ಮಗನ ಸ್ಥಿತಿ ಕಂಡು ಮರುಗಿದ ತಂದೆ ತಾಯಿ

ಮಗನ ಸ್ಥಿತಿ ಕಂಡು ಮರುಗಿದ ತಂದೆ ತಾಯಿ

ಮುರಳಿಯನ್ನು ಈ ಸ್ಥಿತಿಯಲ್ಲಿ ನೋಡಿದ ತದೆ ತಾಯಿ ಆತಂಕ ಪಡುತ್ತಾರೆ. ಬಳಿಕ ಮುರಳಿ ಮೇಷ್ಟ್ರಿಗೆ ಎಚ್ಚರ ಆಗುತ್ತದೆ. ತಂದೆ ತಾಯಿಯನ್ನು ನೋಡಿ ಅವರೊಂದಿಗೆ ಹೊರಡುತ್ತಾರೆ. ಅಲ್ಲಿಂದ ಎಲ್ಲರೂ ಹೊರಟ ಬಳಿಕ ಸ್ನೇಹಾ ಬಾವಿ ಕಟ್ಟೆ ಬಳಿ ಬರುತ್ತಾಳೆ ಅದನ್ನು ನೋಡಿದ ಸುಮಾ, ಸಹನಾ ಬರುತ್ತಾರೆ. ಹೇಗೆ ಇಲ್ಲಿಂದ ಮೇಷ್ಟ್ರು ಬಾವಿಗೆ ಬಿದ್ದರು. ಅದು ಹೇಗೆ ಬೀಳಲು ಸಾಧ್ಯ? ಎಂದಾಗ ಪುಟ್ಟಕ್ಕನು ಅಲ್ಲಿಗೆ ಬರುತ್ತಾರೆ. ಪುಟ್ಟಕ್ಕನು ಹೇಳುತ್ತಾರೆ ಅದು ಹೇಗೆ ಸಾಧ್ಯ ಎಂದಾಗ ಸುಮಾ ಜೋರಾಗಿ ನಗುತ್ತಾಳೆ, ಇದನ್ನು ನೋಡಿದ ಸ್ನೇಹಾ ಏನಾಗಿದೆ ಸುಮಾನೀಗೆ ಯಾಕೆ ಹೀಗೆ ಮಾತನಾಡುತ್ತಾ ಇದ್ದಾಳೆ ಎಂದು ಯೋಚನೆ ಮಾಡುತ್ತಾಳೆ.

ಕಂಠಿಗೆ ಕರೆ ಮಾಡಿದ ಪೂರ್ವಿಯ ತಂದೆ

ಕಂಠಿಗೆ ಕರೆ ಮಾಡಿದ ಪೂರ್ವಿಯ ತಂದೆ

ಸುಮಾ ನಗುತ್ತಾ ಎಲ್ಲಾ ಸಹನಾ ಅಕ್ಕನ ಮಹಿಮೆ ಎನ್ನುತ್ತಾಳೆ. ಅದನ್ನು ಕೇಳಿದ ಸ್ನೇಹಾ ಏನು ಸರಿಯಾಗಿ ಹೇಳು ಅಂದಾಗ. ಮುರಳಿ ಮೇಷ್ಟ್ರು ಕಾಲು ಜಾರಿ ಬಿದ್ದಾಗ ಅಕ್ಕನೇ ಇದ್ದಿದ್ದು ಅಲ್ವಾ ಎಂದು ಹೇಳುತ್ತಾಳೆ. ಬಳಿಕ ಕಂಠಿ ಅಲ್ಲಿಗೆ ಬಂದು ತಾನು ಮನೆಗೆ ಹೋಗುವುದಾಗಿ ತಿಳಿಸಿ ಅಲ್ಲಿಂದ ತೆರಳುತ್ತಾರೆ. ಇತ್ತಕಡೆ ಪೂರ್ವಿ ಬಹಳ ಅಳುತ್ತಾ ಇರುತ್ತಾಳೆ ಇದನ್ನು ಕಂಡ ಪೂರ್ವಿ ತಂದೆ ತಾಯಿ ಏನಾಯ್ತು ಎಂದು ಕೇಳಿದಾಗ ಪೂರ್ವಿ ನಿಜ ವಿಚಾರ ಎಲ್ಲಾ ಹೇಳುತ್ತಾಳೆ ಬಳಿಕ ಕಂಠಿಗೆ ಪೂರ್ವಿ ಕಾಲ್ ಮಾಡಿ ನಾಳೆ ನಾನು ನಿನ್ನ ತಾಯಿ ಬಳಿ ಮಾತನಾಡುತ್ತೇನೆ ಎಂದು ಹೇಳಿ ಕರೆ ಕಟ್ ಮಾಡುತ್ತಾಳೆ. ಕಂಠಿ ಬಹಳ ಖುಷಿ ಪಡುತ್ತಾನೆ.

More from Filmibeat

English summary
Kannada serial Puttakkana Makkalu written updated on 15th September. Know more about episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X