Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುಟ್ಟಕ್ಕನ ಕ್ಷಮೆ ಕೇಳಿದ ಮುರಳಿ ಮೇಷ್ಟ್ರು, ಸಹನಾ ವಿರುದ್ಧ ಕಿಡಿ!
ಕಂಠಿಯ ಹುಡುಕುತ್ತಾ ಬಂಗಾರಮ್ಮ ಕಂಠಿ ರೂಮ್‌ಗೆ ಬರುತ್ತಾರೆ ಆ ವೇಳೆ ಕಂಠಿ ಹಾಗೂ ಸ್ನೇಹಾ ಇಬ್ಬರು ಅಡಗಿಕೊಳ್ಳುತ್ತಾರೆ. ಬಂಗಾರಮ್ಮ ಕಂಠಿ ರೂಮ್ ಬಾಗಿಲು ತೆಗೆದು ಕಂಠಿ ಎಂದು ಕರೆಯುತ್ತಾರೆ ಆದರೆ ಕಂಠಿ ರೂಮ್‌ನಲ್ಲಿ ಯಾರು ಇರದ್ದನ್ನು ಕಂಡ ವಸು, ಅಮ್ಮ ನಾನು ಆಗಲೇ ಹೇಳಿದೆ ಅಲ್ವಾ ಅಣ್ಣ ಇಲ್ಲ ಅವ ಎಲ್ಲಿಗೆ ಹೋಗಿದ್ದಾನೆ ಗೊತ್ತಿಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ಬಂಗಾರಮ್ಮ ಸರಿ ಹಾಗಾದರೆ ಎಂದು ಹೇಳಿ ಅಲ್ಲಿಂದ ಹೋಗುತ್ತಾರೆ.
ಇದನ್ನೇ ಕಾಯುತ್ತಿದ್ದ ಕಂಠಿ ಅಡಗಿರುವ ಜಾಗದಿಂದ ಮೆತ್ತಗೆ ಎದ್ದೇಳುತ್ತಾನೆ ಈ ವೇಳೆ ಸ್ನೇಹಾ ತಲೆಕೂದಲು ಕಂಠಿಯ ಕೊರಳಿನಲ್ಲಿನ ಚೈನ್‌ಗೆ ಸಿಕ್ಕಿಕೊಳ್ಳುತ್ತದೆ. ಕಂಠಿ, ಸ್ನೇಹಾ ಬಳಿ 'ಮಿಸ್ಸು ಇದನ್ನೊಂದು ಬಿಚ್ಚಿಕೊಡಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸ್ನೇಹಾ ಸರದಿಂದ ಕೂದಲನ್ನು ಬಿಡಿಸುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ವಸು, ಸ್ನೇಹಾ ಇಲ್ಲಿಂದ ಬೇಗ ಹೋಗಿ ಎಂದು ಹೇಳುತ್ತಾರೆ. ಆಗ ಸ್ನೇಹಾ, ಹೇಗೆ ಹೋಗುವುದು ಬಂಗಾರಮ್ಮನವರು ಇಲ್ವಾ ಎಂದಾಗ ವಸು, ಎದುರುಗಡೆಯಿಂದ ಹೋಗುವುದು ಬೇಡ. ಮನೆಯ ಹಿಂದಿನಿಂದ ಹೋಗಿ ಎಂದು ಹೇಳುತ್ತಾಳೆ. ಈ ವೇಳೆ ಕಂಠಿ ಆಯಿತು ಎಂದು ಹೇಳುತ್ತಾನೆ. ಬಳಿಕ ಕಂಠಿ ಟೆರೆಸ್ ಮೇಲೆ ಹೋಗಿ ಒಂದು ಜಾಗಕ್ಕೆ ಸೀರೆಯನ್ನು ಕಟ್ಟಿ ಸೀರೆ ಹಿಡಿದು ಕೆಳಗೆ ಇಳಿದು ತಪ್ಪಿಸಿಕೊಳ್ಳುತ್ತಾರೆ.
ಇಳಿವ ವೇಳೆ ಕಂಠಿಯ ಎದೆ ಮೇಲಿನ ಅವ್ವ ಹಚ್ಚೆಯನ್ನು ನೋಡುತ್ತಾಳೆ ಸ್ನೇಹಾ. ಬಳಿಕ ಪುಟ್ಟಕ್ಕನ ಮನೆವರೆಗೂ ಸ್ನೇಹಾ ಜೊತೆ ಬರುತ್ತಾನೆ ಕಂಠಿ. ಬಳಿಕ, ನಿಮ್ಮ ವಾಹನದ ಜೊತೆ ಇವತ್ತು ಸುತ್ತಾಟ ಆಯಿತು ಎಂದು ಹೇಳಿದಾಗ ಇದು ನನ್ನ ಕುದುರೆ ಎಂದು ಹೇಳಿದಾಗ ಕಂಠಿಗೆ ಇನ್ನಷ್ಟು ನಗು ಬರುತ್ತದೆ. ಈ ವೇಳೆ ಮುರಳಿ ಮೇಷ್ಟ್ರು ಬಹಳ ಆತಂಕದಿಂದ ಪುಟ್ಟಕ್ಕನ ಮನೆಗೆ ಹೋಗುತ್ತಾ ಇರುತ್ತಾರೆ. ಮೇಷ್ಟ್ರನ್ನು ಕಂಡ ಸ್ನೇಹಾ, ಮೇಷ್ಟ್ರೇ ಎಂದು ಕರೆಯುತ್ತಾಳೆ. ಆದರೆ ಮೇಷ್ಟ್ರಿಗೆ ಅದು ಯಾವುದು ಕೇಳಿಸುವುದೇ ಇಲ್ಲ. ಇದರಿಂದಾಗಿ ಕಂಠಿ ಸ್ನೇಹಾ ಬಳಿ ಹೇಳುತ್ತಾನೆ ಏನೋ ಸೀರಿಯಸ್ ವಿಚಾರ ಆಗಿರಬೇಕು ಎಂದು.

ಪುಟ್ಟಕ್ಕನ ಮನೆಗೆ ಬಂದ ಮುರಳಿ ಮೇಷ್ಟ್ರು
ಏನು ಎಂದು ನೋಡೋಣ ಎಂದು ಹೇಳಿ ಮೇಷ್ಟ್ರ ಹಿಂದೆ ಹೋಗುತ್ತಾರೆ. ಮುರಳಿ ಮೇಷ್ಟ್ರು ಮನೆಗೆ ಬಂದಾಗ ಸುಮಾ ಜೋರಾಗಿ ಕೂಗಿ ಅಮ್ಮ ಮುರಳಿ ಮೇಷ್ಟ್ರು ಬಂದರು ಎಂದು ಹೇಳಿದಾಗ ಸಹನಾ ಮೊಗದಲ್ಲಿ ನೋವು ತುಂಬಿದ ನಗು ಬರುತ್ತದೆ. ಇನ್ನು ಪುಟ್ಟಕ್ಕ ಬಹಳ ಬೇಸರದಿಂದ ಮನೆಯ ಹಾಲ್ ಗೆ ಬರುತ್ತಾರೆ.. ಮೇಷ್ಟ್ರ ನ್ನೂ ಕಂಡ ಪುಟ್ಟಕ್ಕ ಹೇಳುತ್ತಾರೆ ಬನ್ನಿ ಮೇಷ್ಟ್ರೇ ಎಂದು ಕರೆಯುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಸ್ನೇಹಾ, ಮೇಷ್ಟ್ರ ಬಳಿ ಕೇಳುತ್ತಾಳೆ ಏನು ಮೇಷ್ಟ್ರೇ ಎಷ್ಟು ಕರೆದೆ ನಿಮ್ಮನ್ನು ಕೆಳಿಸಿಕೊಳ್ಳದೆ ಸೀದಾ ಹೋದಿರಿ ಏನಾಯಿತು ಎಂದಾಗ ಪುಟ್ಟಕ್ಕನ ಬಳಿ ಕ್ಷಮಿಸಿ ಪುಟ್ಟಕ್ಕನವರೆ ಎಂದು ಹೇಳುತ್ತಾನೆ.

ಪುಟ್ಟಕ್ಕನ ಕ್ಷಮೆ ಕೇಳಿದ ಮುರಳಿ
ಬಳಿಕ ಪುಟ್ಟಕ್ಕನ ಕಾಲಿಗೆ ಬೀಳುತ್ತಾನೆ. ಆದರೆ ಇದೆಲ್ಲ ಯಾಕೆ ಎಂದು ಸ್ನೇಹಾಗೆ ತಿಳಿಯುತ್ತಿಲ್ಲ. ಸ್ನೇಹಾ ಏನೆಂದು ವಿಚಾರ ಮಾಡಿದಾಗ ತಿಳಿಯುತ್ತದೆ ತನ್ನ ಅಮ್ಮನಿಗೆ ಅವಮಾನ ಮಾಡಿದ್ದಾರೆ ಎಂದು ಇದರಿಂದ ಕೋಪಗೊಂಡ ಸ್ನೇಹಾ ಮುರಳಿಗೆ ಸರಿಯಾಗಿ ಬೈಯುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ ಸ್ನೇಹಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ನಿನ್ನಿಂದಲೇ ನಿನ್ನ ಅಕ್ಕನ ಮದುವೆಗೆ ಅಡ್ಡಿಯಾಗುತ್ತಿದೆ. ನೀನು ಸಹನಾ ಮದುವೆ ವಿಚಾರಕ್ಕೆ ತಲೆ ಹಾಕಬೇಡ ಎಂದು ತಾಕೀತು ಬೇರೆ ಮಾಡುತ್ತಾಳೆ. ಇದನ್ನು ಕೇಳಿದ ಸ್ನೇಹಾಗೆ ಬಹಳ ಬೇಸರ ಆಗುತ್ತದೆ. ಇನ್ನು ಮುರಳಿ ಮೇಷ್ಟ್ರ ಮನೆಯಲ್ಲಿ ಸಹನಾ ಜೊತೆ ಮುರಳಿ ಮದುವೆಗೆ ಆತನ ತಂದೆ ತಾಯಿ ಒಪ್ಪುತ್ತಿಲ್ಲ. ಆದರೆ ಇದನ್ನೆಲ್ಲ ಕೇಳಿದ ಮುರಳಿ ಅಕ್ಕ ಹೇಳುತ್ತಾರೆ ಮುರಳಿ ಸಣ್ಣ ಹುಡುಗ ಅಲ್ಲ ಆತನಿಗೆ ಎಲ್ಲಾ ತಿಳಿಯುತ್ತದೆ, ನೀವು ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಾಳೆ.

ಮಗನ ಆಗಮನಕ್ಕೆ ಕಾದು ಕುಳಿತ ಮುರಳಿ ತಾಯಿ
ಇದನ್ನು ಕೇಳಿದ ಮುರಳಿಯ ತಾಯಿ, 'ಇಲ್ಲ ಅವ ನನ್ನ ಮಗ ಅವ್ನು ಬಂದೆ ಬರುತ್ತಾನೆ. ಕೋಪ ಹೋದ ಬಳಿಕ ಅಮ್ಮನ ಬಳಿಗೆ ಬಂದೆ ಬರುತ್ತಾನೆ ಎಂದು ಅಳುತ್ತಾ ಒಳಗೆ ಹೋಗುತ್ತಾರೆ. ಇನ್ನು ನಂಜಮ್ಮ ಮಾತ್ರ ತನ್ನ ಮಗ ಕೋರ್ಟ್‌ಗೆ ಯಾಕೆ ಹೋಗಿಲ್ಲ ಎಂದು ತಲೆ ಕೆಡಿಸಿಕೊಂಡು ಹೈರಾಣು ಆಗಿದ್ದಾಳೆ. ಇದಕ್ಕೆ ಕಾರಣ ಬಂಗಾರಮ್ಮ ನೆ ಎಂದು ಕಿಡಿಕಾರುತ್ತ ಇರುತ್ತಾಳೆ ಮುಂದೇನು ಕಾದು ನೋಡಬೇಕಿದೆ.