Puttakkana Makkalu: ಸ್ನೇಹಾ ಮದುವೆ ಮಾಡಲು ಹೊರಟ ಪುಟ್ಟಕ್ಕ: ಬೇರೆ ಹುಡುಗನನ್ನು ಸ್ನೇಹಾ ಒಪ್ಪುತ್ತಾಳಾ?

By Poorva

ಸ್ನೇಹಾಗೆ ಮದುವೆ ಮಾಡುವ ಬಗ್ಗೆ ಪುಟ್ಟಕ್ಕ ಯೋಚನೆ ಮಾಡುತ್ತಿದ್ದಾಳೆ. ಸ್ನೇಹಾ ಕಂಠಿ ದೂರ ಆದಷ್ಟು ಪುಟ್ಟಕ್ಕಗೆ ಸ್ವಲ್ಪ ಸಮಾಧಾನ. ಬಂಗಾರಮ್ಮನವರ ಮಾತಿಗೆ ಕಟ್ಟು ಬಿದ್ದು ಎಂದೂ ಮಗಳನ್ನು ನೋಯಿಸದ ಪುಟ್ಟಕ್ಕ ಈಗ ತಾನು ಪ್ರೀತಿಸುವ ಹುಡುಗನನ್ನು ಮರೆತು ಬಿಡಲು ಬಲವಾಗಿ ಒತ್ತಡ ಹಾಕಿದ್ದಾಳೆ. ಸ್ನೇಹಾ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾಳೆ.

ಈ ವಿಚಾರವನ್ನು ಭುವನ್ ಸ್ನೇಹಾಗೆ ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ಬಹಳ ಖುಷಿಯಾಗಿ ಇರುತ್ತಾಳೆ. ತಾನು ಪರೀಕ್ಷೆಯಲ್ಲಿ ಫಸ್ಟ್ ಬಂದ ವಿಚಾರವನ್ನು ತನ್ನ ತಾಯಿ ಬಳಿ ಹೇಳಿದ್ದಾಗ ಪುಟ್ಟಕ್ಕಗೂ ಬಹಳ ಖುಷಿ ಆಗುತ್ತದೆ. ಅಮ್ಮ ಅಕ್ಕ ತಂಗಿಗೆ ಸಿಹಿ ತಿನ್ನಿಸಿ ಖುಷಿ ಪಡುತ್ತಾಳೆ ಸ್ನೇಹಾ. ಆದರೆ ಸುಮಾಗೆ ಮಾತ್ರ ಪ್ರೀತಿ ವಿಚಾರದಲ್ಲಿ ಕೊಂಚ ಅಸಮಾಧಾನ ಇರುತ್ತದೆ.

Kannada serial puttakkana makkalu written updated on 16th may

ಪುಟ್ಟಕ್ಕ ಮಾತ್ರ ಸುಮನಾ ಮಾತಿಗೆ ಕೊಂಚ ಕೋಪಗೊಳ್ಳುತ್ತ ಇರುತ್ತಾಳೆ. ಬಳಿಕ ಅಲ್ಲಿಂದ ಸ್ನೇಹಾ ಓದಲು ಲೈಬ್ರರಿಗೆ ಹೋಗುವುದಾಗಿ ತನ್ನ ಪುಸ್ತಕಗಳನ್ನು ತೆಗೆದುಕೊಂಡು ಹೊರಡಲು ಸಿದ್ದ ಆದಾಗ ಅಲ್ಲಿಗೆ ಸಹನಾ ಬರುತ್ತಾಳೆ. ಸಹನಾ ಮೆತ್ತಗೆ ಸ್ನೇಹಾ ಬಳಿ ಹೇಳುತ್ತಾಳೆ.

ಸ್ನೇಹಾಗೆ ಸಹನಾಳಿಂದ ಸಲಹೆ

ಅಮ್ಮನಿಗೆ ಯಾವುದೇ ವಿಚಾರದಲ್ಲಿ ನೋವು ಆಗದೆ ಇರುವ ಹಾಗೆ ನೋಡಿಕೋ ಯಾಕೆಂದರೆ ಅಮ್ಮ ತುಂಬಾ ನೊಂದಿದ್ದಾರೆ. ಅದು ಯಾವುದೇ ವಿಚಾರದಲ್ಲಿ ಆದರೂ ಎಂದು ಕಿವಿ ಮಾತು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ಅಮ್ಮನಿಗೆ ಯಾವುದೇ ನೋವು ಮಾಡುವುದಿಲ್ಲ ಅಕ್ಕ ಎಂದು ಹೇಳಿ ಲೈಬ್ರೆರಿಗೆ ಹೋಗುತ್ತಾಳೆ. ಇನ್ನೂ ಚಂದ್ರು, ಪುಟ್ಟಕ್ಕನ ಮನೆಯ ಹತ್ತಿರದಲ್ಲೇ ಇರುವ ಗುಡಿ ಬಳಿ ಬರುತ್ತಾನೆ.

Kannada serial puttakkana makkalu written updated on 16th may

ಪುಟ್ಟಕ್ಕನ ಬಳಿ ಬಂದ ಚಂದ್ರು

ಅಲ್ಲಿ ಪುಟ್ಟಕ್ಕ ಇರುವುದನ್ನು ಕಂಡು ಅಲ್ಲಿಗೆ ಬರುತ್ತಾನೆ. ಚಂದ್ರುವನ್ನ ನೋಡಿದ ಪುಟ್ಟಕ್ಕ ಮಾತ್ರ ಬಹಳ ಖುಷಿಯಲ್ಲಿ ಮಾತನಾಡುತ್ತಾ ಇರುವಾಗ ಚಂದ್ರು ಮೆತ್ತಗೆ ಕೇಳುತ್ತಾನೆ. ಸ್ನೇಹಾ ಚೆನ್ನಾಗಿ ಇದ್ದಾಳಾ ಎಂದು. ಆಗ ಪುಟ್ಟಕ್ಕ ಖುಷಿಯಿಂದ ಇವತ್ತು ಸ್ನೇಹಾ ಬಹಳ ಖುಷಿಯಲ್ಲಿ ಇದ್ದಾಳೆ. ಆಕೆ ಪರೀಕ್ಷೆಯಲ್ಲಿ ಫಸ್ಟ್ ಬಂದಿದ್ದಾಳೆ, ಅಲ್ವಾ ಹಾಗಾಗಿ ಎಂದಾಗ ಚಂದ್ರು ನನಗೆ ಈ ವಿಚಾರ ತಿಳಿಯಿತು ಎಂದು ಹೇಳುತ್ತಾನೆ

ಚಂದ್ರು ಮಾತಿಗೆ ಎದುರಾಡದ ಪುಟ್ಟಕ್ಕ

ಆಗ ಪುಟ್ಟಕ್ಕ, ಸ್ನೇಹಾ ಹೇಳಿದ್ಲಾ ಎಂದು ಕೇಳಿದಾಗ ಇಲ್ಲ ಗೆಳೆಯ ಹೇಳಿದ ಎಂದು ಚಂದ್ರು ಹೇಳಿದ್ದಕ್ಕೆ ಪುಟ್ಟಕ್ಕಳ ಖುಷಿ ಇಮ್ಮಡಿ ಆಗುತ್ತದೆ. ಚಂದ್ರು ಬಳಿಕ ಕಂಠಿ ವಿಚಾರವನ್ನು ಪುಟ್ಟಕ್ಕ ಬಳಿ ಮಾತನಾಡುತ್ತಾನೆ. ಸ್ನೇಹಾ ಖುಷಿಯಲ್ಲಿ ಇದ್ದಾಳಾ ಈ ವಿಚಾರದಲ್ಲಿ ಎಂದಾಗ ಪುಟ್ಟಕ್ಕ ಸುಮ್ಮನೆ ಆಗುತ್ತಾರೆ.

Kannada serial puttakkana makkalu written updated on 16th may

ಭುವನ್ ಬಗ್ಗೆ ಹೇಳಿದ ಚಂದ್ರು

ಇನ್ನು ಚಂದ್ರು, ಭುವನ್ ಬಗ್ಗೆ ಪುಟ್ಟಕ್ಕನ ಬಳಿ ಹೇಳುತ್ತಾನೆ. ಸ್ನೇಹಾ ಭುವನ್‌ಗೆ ಬಹಳ ಇಷ್ಟ ಆಗಿದ್ದಾಳೆ. ಆ ಕಾರಣಕ್ಕೆ ಸ್ನೇಹಾನಾ ಭುವನ್‌ಗೆ ಕೊಟ್ಟು ಮದುವೆ ಮಾಡಲು ಚಂದ್ರು ಸಲಹೆ ನೀಡುತ್ತಾನೆ. ಆದರೆ ಸ್ನೇಹಾ ಮನಸ್ಥಿತಿ ಚೆನ್ನಾಗಿ ಇರದ ಕಾರಣ ಪುಟ್ಟಕ್ಕಗೆ ಒಂದು ರೀತಿಯ ಅಳುಕು ಆಗುತ್ತದೆ.

ರಾಜಿ ಮಾತಿಗೆ ಪೆಚ್ಚಾದ ಬಂಗಾರಮ್ಮ

ಇನ್ನು ಬಂಗಾರಮ್ಮ ಮನದಲ್ಲಿ ರಾಜಿ ವಿಷ ಬೀಜ ಬಿತ್ತುತ್ತಿದ್ದಾಳೆ. ಕಂಠಿಗೆ ಮದುವೆ ಮಾಡಿಸುವ ಪ್ಲಾನ್ ಅನ್ನು ರಾಜಿ ಕೊಡುತ್ತಾಳೆ . ಆಕೆ ಹೋದ ಬಳಿಕ ಬಂಗಾರಮ್ಮ ಆ ಬಗ್ಗೆ ಪ್ಲಾನ್ ಮಾಡುತ್ತಾ ಇರುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 16th may.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X