ರಾಜಿಗೆ ತಿರುಗೇಟು ಕೊಟ್ಟ ಕಂಠಿ: ಸುಮಾಗೆ ಮತ್ತೆ ಕಂಠಿ ಮೇಲೆ ಅನುಮಾನ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ನೋಡುಗರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಂಠಿ ಹಾಗೂ ಸ್ನೇಹಾ ಜೋಡಿ ಬಲು ಅಂದ. ಇದೀಗ ರಾಜಿ ಮಾಡಿದ ಕುತಂತ್ರ ಕಂಠಿಗೆ ತಿಳಿದು ಹೋಗಿದೆ. ಅದಕ್ಕಾಗಿ ರಾಜಿಗೆ ಹೇಗಾದರೂ ತಿರುಗೇಟು ನೀಡುವ ಸಲುವಾಗಿ ಕಂಠಿ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಇದೀಗ ರಾಜೇಶ್ವರಿ, ಕಂಠಿ ಹೆಣೆದ ಬಲೆಗೆ ಬಿದ್ದಾಗಿದೆ.

ಕರೆ ಬಂದ ಕೂಡಲೇ ತಾನು ಪಂಚಾಯತ್ ಎಲೆಕ್ಷನ್‌ಗೆ ನಿಲ್ಲುತ್ತೇನೆ ಎಂದು ಹೇಳಿಕೊಂಡು ಮೆರೆಯಲು ಶುರು ಮಾಡುತ್ತಾಳೆ ರಾಜಿ. ಬಳಿಕ ರಾಜಿಗಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಆಕೆಯನ್ನು ಪಾರ್ಟಿ ಸದಸ್ಯರು ಆಮಂತ್ರಣ ನೀಡುತ್ತಾರೆ. ಇನ್ನು ಕಾಳಿ ಅದೆಷ್ಟೇ ಬೇಡ-ಬೇಡ ಎಂದು ಹೇಳಿದರು ಕೇಳದೆ ಅಲ್ಲಿಂದ ಕಾರ್ಯಕ್ರಮಕ್ಕೆ ತೆರಳುತ್ತಾರೆ. ಈ ವೇಳೆ ರಾಜಿ ಕಡೆ ಯಾರು ಜನ ನೋಡದೆ ಇದ್ದರೂ ರಾಜಿ ಮಾತ್ರ ಗತ್ತಿನಿಂದ ಹೋಗುತ್ತಾಳೆ. ಬಳಿಕ ಎಲ್ಲರಿಗೂ ಊಟದ ವ್ಯವಸ್ಥೆ ಕೂಡ ಆಯೋಜಿತವಾಗಿರುತ್ತದೆ. ಈ ವೇಳೆ ಅಲ್ಲಿ ಪುಟ್ಟಕ್ಕ ಮಾಡಿದ ಊಟವನ್ನೇ ಅಲ್ಲಿ ಬಡಿಸಲಾಗುತ್ತದೆ.

ಊಟ ಸವಿದ ರಾಜೇಶ್ವರಿ, ಈ ಊಟ ದೊಡ್ಡ ಹೋಟೆಲ್‌ನದ್ದು ಅನ್ನಿಸುತ್ತದೆ. ಬಹಳ ಅದ್ಭುತವಾಗಿದೆ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾಳೆ. ಆದರೆ ಗೋಪಾಲನಿಗೆ ಪುಟ್ಟಕ್ಕ ಮಾಡಿದ ಅಡುಗೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಇದನ್ನು ರಾಜಿಗೆ ಹೇಳಬೇಕು ಎಂದು ಹೊರಟಾಗ ಸುಮ್ಮನೆ ಯಾಕೆ ಹೇಳುವುದು ಇರಲಿ ಎಂದು ಊಟ ಮಾಡುತ್ತಾನೆ. ಕಾಳಿ ಹಾಗೂ ಇತರ ಜನರೂ ಊಟ ಮಾಡುತ್ತಿರುತ್ತಾರೆ.

ಆಗ ಅಲ್ಲಿಗೆ ಬಂದ ಕಾರ್ಯಕ್ರಮದ ಆಯೋಜಕ, ಇವತ್ತಿನ ಊಟದ ಸ್ಪಾನ್ಸರ್ ಬೇರೆ ಯಾರೂ ಅಲ್ಲ ನಮ್ಮ ರಾಜೇಶ್ವರಿ ಅವರು ಎಂದು ಹೇಳಿದಾಗ ರಾಜೇಶ್ವರಿಗೆ ತಿನ್ನುವ ಅಗಳು ನೆತ್ತಿಗೇರುತ್ತದೆ. ಬಳಿಕ ಕೊಂಚ ಸಮಾಧಾನ ಮಾಡಿಕೊಂಡ ರಾಜಿಗೆ ಮತ್ತೊಂದು ಶಾಕ್ ಕಾದಿತ್ತು. ಇತ್ತ ಕಂಠಿ ನೇರವಾಗಿ ಸ್ನೇಹಾಳನ್ನು ರಾಜಿಗೆ ಏರ್ಪಡಿಸಿದ ಸಮಾರಂಭಕ್ಕೆ ಕರೆದುಕೊಂಡು ಬರುತ್ತಾನೆ. ಇದನ್ನು ನೋಡಿದ ಸ್ನೇಹಾ ಯಾಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ ಏನು ನಡೆಯುತ್ತಿದೆ ಎಂದಾಗೆಲ್ಲ ಕಂಠಿ ಹೇಳುತ್ತಾನೆ ಇದೆಲ್ಲ ದೊರೆ ಪ್ಲಾನ್ ಎಂದೆಲ್ಲ ಹೇಳಿ ಸ್ನೇಹ ಮನವೊಲಿಸಿ ಊಟದ ಹತ್ತಿರ ಕರೆದುಕೊಂಡು ಬರುತ್ತಿರುವ ವೇಳೆ ಒಂದಿಬ್ಬರು ಜೋರಾಗಿ ನಾನು ಹೇಳಿದೆ ಅಲ್ವಾ ಇದು ಪುಟ್ಟಕ್ಕನ ಮೆಸ್ ಊಟ ಎಂದು ಹೇಳುತ್ತಾರೆ.

ರಾಜಿಗೆ ಶಾಕ್ ಕೊಟ್ಟ ಕಾರ್ಯಕ್ರಮ ಆಯೋಜಕ

ರಾಜಿಗೆ ಶಾಕ್ ಕೊಟ್ಟ ಕಾರ್ಯಕ್ರಮ ಆಯೋಜಕ

ಇದನ್ನು ಕೇಳಿದ ರಾಜಿಗೆ ವಾಂತಿ ಬಂದ ಹಾಗೆ ಆಗುತ್ತದೆ. ನಾನು ಪುಟ್ಟಕ್ಕನ ಮೆಸ್ ಊಟ ತಿಂದೆನಾ ಎಂದುಕೊಳ್ಳುತ್ತಾ ಇರಬೇಕಾದರೆ ರಾಜಿ ಸ್ನೇಹಾಳನ್ನು ನೋಡುತ್ತಾಳೆ. ಸ್ನೇಹಾ, ರಾಜಿಯನ್ನು ನೋಡಿ ಶಾಕ್ ಆಗುತ್ತದೆ ಬಳಿಕ ರಾಜಿ ಊಟದಿಂದ ಎದ್ದು ನಿಲ್ಲುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ಪಾರ್ಟಿ ಮೆಂಬರ್ ಜೋರಾಗಿ ಹೇಳುತ್ತಾನೆ ಇವತ್ತಿನ ಊಟದ ಖರ್ಚು ರಾಜೇಶ್ವರಿ ಅವರದ್ದು ಎಂದು ಹೇಳಿದಾಗ ಎಲ್ಲರೂ ಚಪ್ಪಾಳೆ ಮೇಲೆ ಚಪ್ಪಾಳೆ ತಟ್ಟಿದರೆ ರಾಜಿ ಮಾತ್ರ ಇನ್ನಷ್ಟು ಸಿಟ್ಟಾಗುತ್ತಾಳೆ.

ಪುಟ್ಟಕ್ಕನ ಅಡುಗೆಗೆ ಹಣ ಕೊಟ್ಟ ರಾಜಿ!

ಪುಟ್ಟಕ್ಕನ ಅಡುಗೆಗೆ ಹಣ ಕೊಟ್ಟ ರಾಜಿ!

ಇನ್ನು ಅದರ ಹಣವನ್ನು ಸ್ನೇಹಾಗೆ ರಾಜಿ ನೀಡಲು ಬಂದಾಗ ನನಗೆ ಈ ಹಣ ಬೇಡ ಎಂದು ಹೇಳುತ್ತಾಳೆ. ಇದನ್ನು ನೋಡಿದ ಕಂಠಿ ಹಣವನ್ನು ಯಾವತ್ತೂ ಬೇಡ ಎಂದು ಹೇಳಬಾರದು ಎನ್ನುತ್ತಾನೆ. ಇದನ್ನು ಕೇಳಿದ ಸ್ನೇಹಾ ರಾಜೇಶ್ವರಿ ಕೈಯಿಂದ ಹಣ ತೆಗೆದುಕೊಳ್ಳುತ್ತಾಳೆ. ಆ ವೇಳೆ ಅಲ್ಲೇ ಇದ್ದವರು ಪುಟ್ಟಕ್ಕನಿಗೆ ಒಳ್ಳೆಯದಾಗಲಿ ಎಂದು ಹರಸಿದಾಗ ರಾಜಿಗೆ ಇನ್ನೂ ಕೋಪ ಹೆಚ್ಚಾಗುತ್ತದೆ. ಇನ್ನು ಕೋಪದಿಂದ ಮನೆಗೆ ಬಂದ ರಾಜಿ, ಪುಟ್ಟಕ್ಕನ ಊಟ ತಿಂದು ವಾಂತಿ ಮಾಡಲು ಆಗದೆ ಚಡಪಡಿಸುತ್ತಾ ಇರುವಾಗ ಗೋಪಾಲ ಮಾತ್ರ ಏನು ಮಾಡಲಿ ನಾನು ನನಗೆ ಐದು ಲಕ್ಷ ಕೊಡಲು ಇದೆ ಎಂದೆಲ್ಲ ಹೇಳುತ್ತಾನೆ.

ಏರು ಧ್ವನಿಯಲ್ಲಿ ಮಾತನಾಡಿದ ಗೋಪಾಲ

ಏರು ಧ್ವನಿಯಲ್ಲಿ ಮಾತನಾಡಿದ ಗೋಪಾಲ

ಇದನ್ನು ಕೇಳಿದ ರಾಜಿ ಏನಯ್ಯ ಧ್ವನಿ ಏರಿಸಿ ಮಾತನಾಡುತ್ತಾ ಇದ್ದೀಯಾ ನಿನಗೆ ನಿನ್ನದೇ ಚಿಂತೆ ಎಂದೆಲ್ಲ ಹೇಳುತ್ತಾಳೆ. ಬಳಿಕ ಕಂಠಿಗೆ ಹಾಗೂ ಪುಟ್ಟಕ್ಕಗೆ ಯಾಕೆ ಏಷ್ಟು ನಂಟು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ನಂಜವ್ವ ಮನೆಗೆ ಬಂದು ಜೋರಾಗಿ ಮಗನನ್ನು ಕರೆಯುತ್ತಾಳೆ. ಇದನ್ನು ಕೇಳಿದ ಚಂದ್ರು ಓಡಿ ಬರುತ್ತಾನೆ.

ವಸು ಮದುವೆ ಆಗುತ್ತಿದ್ದಾಳೆ, ನೀನು ನಾನು ಹೇಳಿದ ಹುಡುಗಿಯನ್ನು ಮದುವೆ ಆಗು ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಚಂದ್ರುಗೆ ಬಹಳ ಶಾಕ್ ಆಗುತ್ತದೆ. ಪುಟ್ಟಕ್ಕನ ಮನೆಗೆ ಬಂದ ಸ್ನೇಹಾ ಹಾಗೂ ಕಂಠಿ ಅಲ್ಲಿ ನಡೆದ ವಿಚಾರವನ್ನು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕನಿಗೆ ಬಹಳ ಶಾಕ್ ಆಗುತ್ತದೆ. ಬಳಿಕ ಇದಕ್ಕೆಲ್ಲ ಕಾರಣ ರಾಜಿ ಎಂಬುವುದು ತಿಳಿಯುತ್ತದೆ.

ಸ್ನೇಹಾಗೆ ಕಂಠಿ ಮೇಲೆ ಅನುಮಾನ

ಸ್ನೇಹಾಗೆ ಕಂಠಿ ಮೇಲೆ ಅನುಮಾನ

ರಾಜಿ ಮಾಡಿದ ಕುತಂತ್ರಕ್ಕೆ ಆಕೆಯನ್ನೇ ಬಳಿ ಪಶು ಮಾಡಬೇಕು ಎಂದುಕೊಂಡು ಈ ರೀತಿ ಮಾಡಲಾಯಿತು ಎಂದು ಅರಿವಾಗುತ್ತದೆ. ಇನ್ನು ಊಟ ಆರ್ಡರ್ ಮಾಡಿದಾತನನ್ನೂ ಪುಟ್ಟಕ್ಕನ ಬಳಿ ಬಂದು ಒಪ್ಪಿಸುತ್ತಾರೆ. ಆಕೆ ಆತನನ್ನು ಕ್ಷಮಿಸಿ ಅಲ್ಲಿಂದ ಕಳುಹಿಸುತ್ತಾರೆ. ಇದನ್ನೆಲ್ಲ ನೋಡಿದ ಸ್ನೇಹಾಗೆ ಕಂಠಿ ಮೇಲೆ ದೊರೆ ಮೇಲೆ ಇನ್ನೂ ಗೌರವ ಹೆಚ್ಚು ಆಗುತ್ತದೆ. ಆದರೆ ಸ್ನೇಹಾಗೆ ಮಾತ್ರ ಯಾಕೋ ಕಂಠಿಯೇ ದೊರೆಯ ಎಂಬ ಅನುಮಾನ ಶುರುವಾಗುತ್ತದೆ. ಮೊದಲಿನಿಂದಲೂ ಸ್ನೇಹಾಗೆ ಕಂಠಿ ಮೇಲೆ ಅನುಮಾನ ಇದ್ದೇ ಇದೆ.

More from Filmibeat

English summary
Kannada serial Puttakkana Makkalu written updated on 16th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X