ತಂದೆಗೆ ಎದುರಾಡಿದ ಮೇಷ್ಟ್ರು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಸಹನಾ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಇದೀಗ ಸಹನಾ ಮದುವೆಗೆ ಒಪ್ಪಿಗೆ ನೀಡಿದೆ ಇದುದರಿಂದ ಮುರಳಿ ಮೇಷ್ಟ್ರುಗೆ ಬಹಳ ಬೇಸರ ಆಗುತ್ತದೆ. ಮುರಳಿ, ಸ್ನೇಹಾ ಮಾತು ಕೇಳಿ ಯಾರ ಬಳಿಯೂ ಮಾತನಾಡದೆ ತೆರಳುತ್ತಾನೆ. ಇನ್ನೂ ಸಹನಾ ಮಾತ್ರ ಮೇಷ್ಟ್ರು ಸಿಕ್ಕಿಬಿಟ್ಟರು ಎಂದು ಖುಷಿ ಪಡಬೇಕಾ ಅಥವಾ ಇನ್ನೂ ಮೇಷ್ಟ್ರು ನನ್ನ ಪಾಲಿಗೆ ನೆನಪು ಮಾತ್ರ ಎಂದು ಒದ್ದಾಡುತ್ತ ಇರುತ್ತಾಳೆ. ಇನ್ನು ಮುರಳಿ ಮೇಷ್ಟ್ರನ್ನು ಹುಡುಕಿ ಹುಡುಕಿ ಸುಸ್ತಾದ ಆತನ ತಂದೆ ತಾಯಿ ಮನೆಗೆ ಬಂದು ನೋಡಿದರೆ ಮುರಳಿ ಮೇಷ್ಟ್ರು ಮನೆ ಒಳಗೆ ಕುಳಿತಿರುತ್ತಾರೆ.
ಇದನ್ನು ನೋಡಿದ ಮೇಷ್ಟ್ರ ತಂದೆ ಕೋಪದಿಂದ, 'ನೋಡೆ ಇವನು, ನಮ್ಮನ್ನು ಗಲ್ಲಿ ಗಲ್ಲಿಯಲ್ಲಿ ತಿರುಗುವ ಹಾಗೆ ಮಾಡಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ ಹಾಗೆ ಮಾಡಿ ಎಷ್ಟು ನೆಮ್ಮದಿಯಿಂದ ಕುಳಿತಿದ್ದಾನೆ. ನಾವು ಊರೆಲ್ಲ ಹುಡುಕಿ ಸಾಯಬೇಕು ಎಂದು ಹೇಳಿ ಮುರಳಿ ಮೇಷ್ಟ್ರಿಗೆ ಸರಿಯಾಗಿ ಹೊಡೆಯುತ್ತಾರೆ. ಈ ವೇಳೆ ಇದನ್ನು ತಡೆಯಲು ಬಂದ ಅಮ್ಮನಿಗು ಕೂಡ ಎರಡೇಟು ಬೀಳುತ್ತದೆ.
ಈ ವೇಳೆ ಮೇಷ್ಟ್ರ ತಂದೆ ಬಿಡೆ ನನ್ನ.. ಇವತ್ತು ಹುಟ್ಲಿಲ್ಲ ಎಣಿಸಿ ಬಿಡುತ್ತೇನೆ ಎಂದು ಕೋಪದಿಂದ ಹೇಳುತ್ತಿರುತ್ತಾನೆ. ಆ ವೇಳೆ ಮುರಳಿ ಅಮ್ಮ ಕೂಡ ಹೇಳುತ್ತಾರೆ ಇಲ್ಲಿ ಹೋದೆ ಮಗನೇ ನಿನ್ನನ್ನು ಹುಡುಕಿಕೊಂಡು ಪೊಲೀಸ್ ಮೆಟ್ಟಿಲು ಹತ್ತಿದ್ದೀರಿ ಎಂದು ಕೇಳಿದಾಗ ನಾನು ನಿನ್ನ ಅಪ್ಪ ಅಮ್ಮ ಅಲ್ವಾ ಅದಕ್ಕೆ ನೋಡಿದವರು ಎಲ್ಲಾ ಹೇಳಬಾರದು ಅಲ್ವಾ ಜವಾಬ್ದಾರಿ ಇಲ್ಲದ ಮಗನನ್ನು ಹೆತ್ತು ಬಿಟ್ಟಿದ್ದಾರೆ ಅಲ್ವಾ ಎಂದು ಹೇಳಬಾರದು ಅಲ್ವಾ.. ಎಂದು ಹೇಳುತ್ತಾನೆ.

ತಂದೆಯಿಂದ ಹೊಡೆಸಿಕೊಂಡ ಮೇಷ್ಟ್ರು
ಆಗ ಮೇಷ್ಟ್ರು ಬೇಸರದಿಂದ, 'ನನಗೆ ಏನಾದರು ಪರವಾಗಿಲ್ಲ ಊರವರು ಏನಾದರು ಹೇಳುತ್ತಾರೆ ಎಂಬ ಭಯ ಅಲ್ವಾ ಅಪ್ಪ ನಿನಗೆ ಎಂದು ಎನ್ನುತ್ತಾರೆ. ಮುರಲಿ ತಂದೆಗೆ ಒಂಚೂರು ಬೇಜಾರು ಇಲ್ಲ. ತನ್ನ ಮಗ ಎಂಥ ಸ್ಥಿತಿಯಲ್ಲಿ ಇದ್ದಾನೆ ಎಂಬ ಪರಿಜ್ಞಾನ ಕೂಡ ಇಲ್ಲದೆ ಆತನ ಮನಸ್ಸನ್ನು. ಇನ್ನಷ್ಟು ನೋಯಿಸುವ ಪ್ರಯತ್ನ ಮಾಡುತ್ತಾರೆ.

ಮೇಷ್ಟ್ರ ತಂದೆಗೆ ಮಗನಿಗಿಂತ ಮರ್ಯಾದೆ ಹೆಚ್ಚು
ಇನ್ನು ಮುಂದುವರೆದು ಮಾತನಾಡಿದ ಮೇಷ್ಟ್ರ ತಂದೆ ಹೇಳುತ್ತಾರೆ, ಸಮಾಜದ ಮುಂದೆ ಭಯ ಇದೆ ನನಗೆ. ಊರಿನವರ ಮುಂದೆ ಹೆದರಿ ಬದುಕುವ ಜನ ನಾವು. ನಿನ್ನ ಆ ಮೆಸ್‌ನವರೂ ಇದ್ದಾರಲ್ಲ ಅಂತ ಥರ್ಡ್ ಕ್ಲಾಸ್ ಜನ ಅಲ್ಲ ನಾವು ಎಂದಾಗ ಸಿಟ್ಟುಗೊಂಡ ಮುರಳಿ ಮೇಷ್ಟ್ರು, ಅಪ್ಪ ಎಂದು ಜೋರಾಗಿ ಕರೆಯುತ್ತಾನೆ. ಅದಕ್ಕೆ ಮೇಷ್ಟ್ರ ತಂದೆ ಅಪ್ಪ ಎಂದು ಯಾವಾಗಲೂ ಧ್ವನಿ ಎತ್ತರಿಸಿ ಕರೆಯೋತಿಯಾ ಎಂದು ಕೋಪದಿಂದ ಹೊಡೆಯಲು ಹೋಗುತ್ತಾರೆ.

ಅಪ್ಪ-ಅಮ್ಮನ ಬಲವಂತಕ್ಕೆ ಮಣಿದ ಮುರಳಿ ಮೇಷ್ಟ್ರು
ಆತನನ್ನು ತಡೆದ ಮುರಳಿ ತಾಯಿ ಹೇಳುತ್ತಾರೆ ಯಾಕೋ ಮುರಳಿ ಹೀಗೆ ಆಡುತ್ತಾ ಇದ್ದೀಯಾ ಏನಾಯ್ತು ಎಂದು ಕೇಳಿದಾಗ ಅಮ್ಮ ನನ್ನ ಬಳಿ ಏನು ಕೇಳಬೇಡ. ನಿಮ್ಮ ಜೊತೆ ಹೆಣ್ಣು ನೋಡಲು ಬರಬೇಕು ಅಷ್ಟೇ ತಾನೆ ನಾನು ಬರುತ್ತೇನೆ ನನ್ನ ಏನೂ ಕೇಳಬೇಡಿ ನನ್ನನ್ನು ಬಿಡಿ ಎಂದು ಹೇಳುತ್ತಾರೆ. ಬಳಿಕ ಅಲ್ಲಿಂದ ಹೊರಟು ಹೋಗುತ್ತಾನೆ. ಬಳಿಕ ರೂಮ್ ಬಾಗಿಲು ಮುಚ್ಚಿ ಜೋರಾಗಿ ಅಳುತ್ತಾ ಇರುತ್ತಾನೆ. ಮಗನ ಸ್ಥಿತಿ ಕಂಡು ಮೇಷ್ಟ್ರ ತಂದೆಗೆ ತಲೆಬಿಸಿ ಶುರು ಆಗುತ್ತದೆ. ಇನ್ನು ಸಹನಾ ಮೇಷ್ಟ್ರು ಕೊಟ್ಟ ವಾಚ್ ನೋಡಿ ಜೋರಾಗಿ ಅಳುತ್ತಾಳೆ.

ಮೇಷ್ಟ್ರ ನೆನಪಲ್ಲಿ ಸಹನಾ ಕಣ್ಣೀರು
ಸಹನಾ ಕೂಡ ಜೋರಾಗಿ ಅಳುತ್ತಾ ತನ್ನ ನೋವನ್ನು ಯಾರಿಗೂ ಹೇಳಿಕೊಳ್ಳಲು ಆಗದೆ ಮನದಲ್ಲಿ ಬಚ್ಚಿಟ್ಟುಕೊಂಡು ನೋವುಣ್ಣುತ್ತಿರುತ್ತಾಳೆ. ಸುಮಾಗೆ ಈ ವಿಚಾರ ತಿಳಿದಿದೆ ಆದರೆ ಇದನ್ನು ಯಾರ ಮುಂದೆಯೂ ಹೇಳಲು ಆಗದೆ ಬಹಳ ಬೇಸರ ವ್ಯಕ್ತ ಪಡಿಸುತ್ತಾಳೆ. ಇನ್ನು ಕಂಠಿ ಕೂಡ ಸ್ನೇಹಾ ಕೈ ಗೆ ಸಿಕ್ಕಿ ಬಿದ್ದು ಇನ್ನೂ ಮೆಸ್ ಬಳಿ ಬರಬೇಡಿ ಎಂದು ಖಡಕ್ ಆಗಿ ಹೇಳುತ್ತಾಳೆ ಆದರೆ ಕಂಠಿ ಮಾತ್ರ ಬಹಳ ಬೇಸರಿಸಿಕೊಳ್ಳುತ್ತ ಇರುತ್ತಾರೆ. ಕಂಠಿ ಹೇಳುತ್ತಾನೆ ತಾನು ಮಾಡುವುದು ಒಂದು ಆದರೆ ಆಗುತ್ತಿರುವುದು ಇನ್ನೊಂದು ಹೀಗೆ ಅಂದುಕೊಂಡು ಬಹಳ ಬೇಸರ ವ್ಯಕ್ತ ಪಡಿಸುತ್ತಾನೆ.


Click it and Unblock the Notifications











