ಕಂಠಿಯನ್ನು ಪಡೆಯಲು ಪೂರ್ವಿಯ ಹೊಸ ತಂತ್ರ!

By ಪೂರ್ವಿ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ, ಪೂರ್ವಿಗೆ ಕಂಠಿಯನ್ನು ಪಡೆಯಲೇ ಬೇಕು ಎಂಬ ಹಠ ಹೆಚ್ಚಾಗಿದೆ. ಆದರೂ ಸುಮ್ಮನೆ ಕಂಠಿ ಹೇಳಿದ್ದಕ್ಕೆಲ್ಲ ಪೂರ್ವಿ ತಲೆಯಾಡಿಸುತ್ತಾಳೆ. ಮನೆಗೆ ತೆರಳಿ ಅಳುತ್ತಾಳೆ ಆದರೆ ಇದು ನಾಟಕ ಎಂಬುವುದು ಕಂಠಿಗೆ ಮನವರಿಕೆ ಆಗಿದೆ. ಕಂಠಿಗೆ ಕರೆ ಮಾಡಿದ ಪೂರ್ವಿ ಎಂದು ಅತ್ತೆ ಬಳಿ ಮಾತನಾಡುತ್ತೇನೆ ಎಂದು ಹೇಳಿದಾಗ ಅದೇ ಉತ್ಸಾಹ ದಲ್ಲಿ ಕಂಠಿ ಮನೆಗೆ ಬರುತ್ತಾನೆ ಆ ವೇಳೆ ಪೂರ್ವಿ ಹಾಗೂ ಆಕೆಯ ತಂದೆ ತಾಯಿ ಬಂದಿರುವುದನ್ನು ನೋಡಿದ ಕಂಠಿ ಗೆ ಮನದಲ್ಲಿ ಸಂತಸವೇ ಮೂಡುತ್ತದೆ.

ಪೂರ್ವಿ, ಅತ್ತೆ ಬಂಗಾರಮ್ಮನ ಬಳಿ ಬಂದು ಒಂದು ವಿಷಯ ಹೇಳಬೇಕಿತ್ತು ಅತ್ತೆ ನಿಮ್ಮ ಬಳಿ ಕಂಠಿಗೆ ಹೇಳಲು ಭಯ ಆಗುತ್ತದೆ ಅಂತೆ ಅದಕ್ಕೆ ನನ್ನ ಬಳಿ ಹೇಳಲು ಹೇಳಿದ್ದಾರೆ ಎಂದಾಗ ಬಂಗಾರಮ್ಮ ಏನದು ವಿಚಾರ ಎಂದು ಕೇಳುತ್ತಾಳೆ ಮಗನ ಬಳಿ. ನನ್ನ ಬಳಿ ಹೇಳಲು ಏನು ಭಯ ನಿನಗೆ ಎಂದು ಕೇಳುತ್ತಾಳೆ ಅದಕ್ಕೆ ಕಂಠಿ ಮಾತನಾಡದೆ ಸುಮ್ಮನಾಗುತ್ತಾನೆ. ಆ ವೇಳೆ ವಸು ಮನದಲ್ಲಿ ಯೋಚನೆ ಮಾಡುತ್ತಾಳೆ. ಪೂರ್ವಿ ಯಾಕೋ ಉಲ್ಟಾ ಹೊಡೆಯುವ ಹಾಗೆ ಕಾಣುತ್ತಿದೆ, ಅಣ್ಣ ಹೋಗಿ ಹೋಗಿ ಆಕೆಯನ್ನು ನಂಬಿದ್ದಾರೆ ಎಂದು ಹಣೆ ಹಣೆ ಚಚ್ಚಿಕೊಳ್ಳುತ್ತಾಳೆ.

ನಿಶ್ಚಿತಾರ್ಥವನ್ನು ಆದಷ್ಟು ಬೇಗ ಮಾಡಿ ಎಂದ ಪೂರ್ವಿ

ನಿಶ್ಚಿತಾರ್ಥವನ್ನು ಆದಷ್ಟು ಬೇಗ ಮಾಡಿ ಎಂದ ಪೂರ್ವಿ

ಅತ್ತೆ ಕಂಠಿಗೆ ಈಗೀಗ ನನ್ನ ಮೇಲೆ ಬಹಳ ಲವ್ ಆಗಿದೆ ನನಗೆ ಬಹಳ ನನ್ನನ್ನು ಸುತ್ತಾಡಲು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ ಕೂಡ ಎಂದು ಹೇಳಿದಾಗ ಬಂಗಾರಮ್ಮ ಖುಷಿ ಪಡುತ್ತಾರೆ. ಆದರೆ ಕಂಠಿಗೆ ಹಾಗೂ ವಸುಗೆ ಶಾಕ್ ಮೇಲೆ ಶಾಕ್ ಆಗುತ್ತದೆ. ಇದೇನು ಪೂರ್ವಿ ವರಸೆ ಬದಲಾಯಿಸಿ ಬಿಟ್ಟಳು ಅಲ್ವಾ ಎಂದು ಮನದಲ್ಲಿ ಅಂದುಕೊಂಡು ಪೂರ್ವಿಯನ್ನು ನೋಡಿ ಕುಪಿತನಾಗುತ್ತಾನೆ. ಬಳಿಕ ಪೂರ್ವಿ ನಿಶ್ಚಿತಾರ್ಥವನ್ನು ಆದಷ್ಟು ಬೇಗ ಇಟ್ಟುಕೊಳ್ಳುವಂತೆ ಹೇಳಿ ಅಲ್ಲಿಂದ ತೆರಳುತ್ತಾಳೆ.

ಸ್ನೇಹಾಳನ್ನೆ ಮದುವೇ ಆಗುತ್ತೇನೆ ಎಂದ ಕಂಠಿ

ಸ್ನೇಹಾಳನ್ನೆ ಮದುವೇ ಆಗುತ್ತೇನೆ ಎಂದ ಕಂಠಿ

ಆ ವೇಳೆ ಕಂಠಿ ಪೂರ್ವಿಯನ್ನು ಹಿಂಬಾಲಿಸುತ್ತಾನೆ. ಪುರ್ವಿಯನ್ನು ಕರೆದು ಏನೇ ಹೀಗೆಲ್ಲಾ ಅಮ್ಮನ ಬಳಿ ಹೇಳಿದ್ದಿಯಾ? ಯಾಕೆ ಹೀಗೆಲ್ಲ ಮಾತನಾಡಿದೆ ನನಗೆ ನಿನಂದರೇ ಇಷ್ಟ ಇಲ್ಲ ಇದನ್ನು ಎಷ್ಟು ಬಾರಿ ನಾನು ಹೇಳುವುದು. ನೀನು ನನಗೆ ಚಮಕ್ ಕೊಟ್ಟೆ ಅಲ್ವಾ. ಇಷ್ಟು ದಿನ ನೀನು ಸಾಫ್ಟ್ ಕಂಠಿಯನ್ನು ನೋಡಿದ್ದೀಯಾ ಆದರೆ ಇನ್ನೂ ಮೇಲೆ ನೀನು ಶ್ರೀ ಕಂಟೇಶ್ವರನನ್ನು ನೋಡುತ್ತಿಯ. ಒಂದು ಮುಖ ಮಾತ್ರ ನೋಡಿದ್ದೀಯಾ ನನ್ನ ಇನ್ನೊಂದು ಮುಖ ಇನ್ನೂ ನಿನಗೆ ತಿಳಿದಿಲ್ಲ. ಇನ್ನೂ ಮುಂದೆ ನಿನಗೆ ತಿಳಿಯುತ್ತದೆ ನಾನು ಮದುವೆ ಆಗೋದು ಪುಟ್ಟಕ್ಕನ ಮಗಳು ಸ್ನೇಹಾ ಳನ್ನು ಮಾತ್ರ ನೀನೇನು ಮಾಡಿಕೊಳ್ಳುತ್ತಿಯಾ ಮಾಡಿಕೋ ಎಂದು ಹೇಳುತ್ತಾನೆ.

ಪೂರ್ವಿಯನ್ನು ಕಂಡು ಕಂಠಿ ಕಿಡಿ ಕಿಡಿ

ಪೂರ್ವಿಯನ್ನು ಕಂಡು ಕಂಠಿ ಕಿಡಿ ಕಿಡಿ

ಇದನ್ನು ಕೇಳಿ ಫೂರ್ವಿ ಗೆ ಬಹಳ ಸಿಟ್ಟು ಬರುತ್ತದೆ. ಭಯ ಕೂಡ ಆಗುತ್ತದೆ. ಬಳಿಕ ಅಲ್ಲಿಂದ ಮನೆಗೆ ತೆರಳುತ್ತಾರೆ. ಈ ವೇಳೆ ಕಂಠಿಗೆ ಸ್ನೇಹಾ ಕರೆ ಮಾಡುತ್ತಾಳೆ. ಗಣೇಶನ ಹಬ್ಬ ಆಚರಣೆ ಮಾಡಿದ್ದಾಯಿತು ಈಗ ಪೂರ್ವಿ ಮುಂದೆಯೇ ಸ್ನೇಹಾನಾ ಕರೆ ಸ್ವೀಕರಿಸುತ್ತಾನೆ ಹಾಗೆಯೇ ಲೌಡ್ ಸ್ಪೀಕರ್‌ಗೆ ಹಾಕಿ ಮಾತನಾಡುತ್ತಾನೆ. ಇದನ್ನು ಕೇಳಿ ಪೂರ್ವಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಸ್ನೇಹಾ ಹೇಳುತ್ತಾಳೆ ನೀವು ಕೊಟ್ಟ ಅಕ್ಕಿಯಿಂದ ಪ್ರಸಾದ ಮಾಡಿದ್ದೀವಿ ಅದನ್ನು ನಿಮ್ಮ ಕೈ ಯಾರೇ ನೀಡಬೇಕು ನೀವು ಬನ್ನಿ ಇಲ್ಲಿಗೆ ಎಂದು ಕರೆಯುತ್ತಾಳೆ. ಅದಕ್ಕೆ ಕಂಠಿ ಮಿಸ್ಸು ನಾನು ಈಗಲೇ ಬರುತ್ತೀನಿ, ಖಂಡಿತ ಬರುತ್ತೇನೆ ನನ್ನ ಕೆಲಸ ಎಲ್ಲಾ ಮುಗೀತು ಇನ್ನೂ ನನ್ನ ಹಾಗೂ ನಿಮ್ಮ ಮದ್ಯೆ ಯಾರು ಇಲ್ಲ ಎಂದು ಹೇಳುತ್ತಾನೆ.

ಕಂಠಿಯನ್ನು ಮನೆಗೆ ಕರೆದ ಸ್ನೇಹಾ

ಕಂಠಿಯನ್ನು ಮನೆಗೆ ಕರೆದ ಸ್ನೇಹಾ

ಸ್ನೇಹಾ ಅರ್ಥ ಆಗದೆ ಏನು ಎಂದು ಕೇಳುತ್ತಾಳೆ ಅದಕ್ಕೆ ನನ್ನ ಕೆಲಸಕ್ಕೆ ಯಾರು ಅಡ್ಡಿ ಬರಲ್ಲ ಎಂದು ಹೇಳಿದೆ ಎಂದು ಹೇಳಿದಾಗ ಸ್ನೇಹಾ ನಕ್ಕು ಫೋನ್ ಇಡುತ್ತಾಳೆ. ಬಳಿಕ ಹೇಳುತ್ತಾನೆ ಇನ್ನೂ ನಾನು ಹೊರಡುತ್ತೇನೆ ನೀನು ನಗುತ್ತಾ ಹೋಗು ಎಂದು ಹೇಳಿ ಅಲ್ಲಿಂದ ತೆರಳುತ್ತಾನೆ ಮುಂದೆ ಎನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 15th September. Know more about episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X