ಪುಟ್ಟಕ್ಕನ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ: ಕಂಠಿ-ಸ್ನೇಹಾ ನಡುವೆ ಬಂಧ ಗಟ್ಟಿ

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಪುಟ್ಟಕ್ಕನ ಮನೆಯಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬ ನಡೆಯುತ್ತಿದೆ. ಕಂಠಿ ತಂದಿರುವ ಅಕ್ಕಿಯಲ್ಲಿ ದೇವರಿಗೆ ವಿಶೇಷ ನೈವೇದ್ಯವನ್ನು ಮಾಡಲಾಯಿತು. ಇತ್ತ ಸ್ನೇಹಾ ಕಂಠಿಗೆ ಕರೆ ಮಾಡಿ ನೈವೇದ್ಯ ನೀಡಲು ಬರಬೇಕಾಗಿ ಕೇಳಿಕೊಳ್ಳುತ್ತಾಳೆ. ಈ ವೇಳೆ ಪೂರ್ವಿ ಮಾಡಿದ ಅವಾಂತರದಿಂದ ಮುಖವನ್ನು ಇಷ್ಟು ದಪ್ಪ್ಪಾಗೆ ಮಾಡಿಕೊಂಡು ಕಂಠಿ ಸ್ನೇಹಿತರ ಬಳಿಗೆ ಬರುತ್ತಾರೆ.

ಕಂಠಿಯನ್ನು ನೋಡಿದ ಆತನ ಗೆಳೆಯ ಏನಣ್ಣ ಬೇಸರ ಮಾಡಿಕೊಂಡಿದ್ದೀಯ? ಪೂರ್ವಿ ವಿಚಾರ ಏನಾಯ್ತು ಎಂದು ಕೇಳಿದಾಗ ಕಂಠಿ, ಪೂರ್ವಿ ಉಲ್ಟಾ ಹೊಡೆದಳು ಕಣೋ. ಏನೋ ಮಾಡಲು ಹೋಗಿ ಏನೋ ಆಗಿ ಬಿಟ್ಟಿತು ಎಂದೆಲ್ಲ ಹೇಳಿ ಕೋಪಗೊಳ್ಳುತ್ತಾನೆ. ಆದರೆ ಸ್ನೇಹಾಳನ್ನು ನೋಡಿದ ಕೂಡಲೇ ಕೋಪವೆಲ್ಲ ಇಳಿದು ಮನದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಸ್ನೇಹಾಳ ಬಳಿ ಬಂದ ಕಂಠಿಯನ್ನು ನೋಡಿ ಹೇಳುತ್ತಾಳೆ ಇವತ್ತು ನೈವೇದ್ಯ ಕೊಡೋದು ನೀವೇ ಎಂದು ಹೇಳುತ್ತಾಳೆ.

ಸ್ನೇಹಾ ಯಾರ ಬಳಿಯೂ ಸಲಿಗೆಯಿಂದ ಮಾತನಾಡಲ್ಲಾ ಇವನ ಬಳಿ ಏನೇ ಇಷ್ಟು ಸಲಿಗೆಯಿಂದ ಇದ್ದಾಳೆ ಎಂದು ಸಹನಾಳ ಗೆಳತಿ ಸಹನಾ ಬಳಿ ಕೇಳುತ್ತಾಳೆ. ಇದನ್ನು ಕೇಳಿದ ಸಹನಾ ಹೇಳುತ್ತಾಳೆ ಸುಮ್ಮನಿರು ಎಲ್ಲರನ್ನೂ ಒಂದೇ ಥರ ನೋಡಬೇಡ ಎಂದು ಹೇಳಿ ಬಾಯಿ ಮುಚ್ಚಿಸಿ ಬಿಡುತ್ತಾಳೆ. ಕಂಠಿ ಬಂದು ಮೊದಲಿಗೆ ನಮಸ್ಕಾರ ಮಾಡಿದ್ದು ಪುಟ್ಟಕ್ಕಗೆ ಆ ವೇಳೆ ಪುಟ್ಟಕ್ಕ ಹೇಳುತ್ತಾರೆ ನನ್ನ ಕಾಲಿಗೆ ಮೊದಲು ಬೀಳಬೇಡಪ್ಪ ದೇವರ ಕಾಲಿಗೆ ಬೀಳು ಎಂದು ಹೇಳುತ್ತಾಳೆ.

ದೇವರ ಆಶೀರ್ವಾದ ಪಡೆದುಕೊಂಡ ಕಂಠಿ

ದೇವರ ಆಶೀರ್ವಾದ ಪಡೆದುಕೊಂಡ ಕಂಠಿ

ಅದಕ್ಕೆ ಕಂಠಿ, ಇಬ್ಬರ ಕಾಲಿಗೂ ಬೀಳುತ್ತೇನೆ ನನಗೆ ಆಶಿರ್ವಾದ ಮಾಡಿ ಎಂದು ಹೇಳುತ್ತಾನೆ ಅದಕ್ಕೆ ಪುಟ್ಟಕ್ಕ, ನಿನ್ನ ಒಳ್ಳೆ ಮನಸಿಗೆ ಮುದ್ದಾದ ಹುಡುಗಿ ನಿನ್ನ ಕೈ ಹಿಡಿಯಲಿ ಎಂದು ಹೇಳಿದಾಗ ಸ್ನೇಹಾ ನಗುತ್ತಾಳೆ. ಕಂಠಿ ಮೆತ್ತಗೆ ಸ್ನೇಹಾಳತ್ತ ನೋಡುತ್ತಾನೆ. ಸ್ನೇಹಾ ನಗುತ್ತಾ ಕೆಲಸ ಮಾಡುತ್ತಾ ಇರುತ್ತಾಳೆ. ಇದನ್ನು ನೋಡಿ ಕಂಠಿ ಖುಷಿ ಪಡುತ್ತಾನೆ. ಇನ್ನೂ ಬಂಗಾರಮ್ಮನ ಮನೆಯಲ್ಲಿ ಒಬ್ಬಾತ ದುಡ್ಡು ಕೇಳಿದಾಗ ಎರಡು ಲಕ್ಷ ರೂಪಾಯಿ ಕೊಡುತ್ತಾರೆ. ಆದರೆ ಆತ ದುಡ್ಡು ಕೊಡದೆ ಅಡಗಿ ಕೂತಿರುತ್ತಾರೆ. ಅವನನ್ನು ಎಳೆದು ತರುತ್ತಾನೆ ಲೆಕ್ಕಾಚಾರ. ಆತನ ಬಗ್ಗೆ ಹೇಳಿದಾಗ ಬಂಗಾರಮ್ಮಗೆ ಬಹಳ ಸಿಟ್ಟು ಬಂದು ಆತನ ಕೆನ್ನೆಗೆ ಸರಿಯಾಗಿ ಬಾರಿಸುತ್ತಾಳೆ. ಬಳಿಕ ಅಲ್ಲಿಂದ ಕರೆದುಕೊಂಡು ಹೋಗಲು ಹೇಳುತ್ತಾರೆ. ಇದನ್ನು ನೋಡಿ ಪೂರ್ವಿ ತಂದೆಗೆ ಭಯ ಆಗುತ್ತದೆ. ಬಡ್ಡಿ ದುಡ್ಡು ಎಂದರೆ ನಾನು ಯಾರಿಗೂ ಬಿಡಲ್ಲ ಅದು ಸಂಬಂಧಿಕ ಆದರೂ ಮನೆಯವನು ಆದರೂ ಕೊಡಲೇ ಬೇಕು ಎಂದು ಹೇಳಿದಾಗ ಆಕೆಯ ಅಣ್ಣನಿಗೆ ಇನ್ನೂ ಭಯ ಆಗುತ್ತದೆ. ಬಳಿಕ ಅಲ್ಲಿಂದ ಹೊರಡುತ್ತಾರೆ ತಂದೆ ಮಗಳು.

ಕಂಠಿಯ ಮೇಲೆ ಸಿಟ್ಟಾಗಿರುವ ಬಾವ

ಕಂಠಿಯ ಮೇಲೆ ಸಿಟ್ಟಾಗಿರುವ ಬಾವ

ಆ ಮೇಷ್ಟ್ರು ಇಲ್ಲದನ್ನು ನೋಡಿದ ಕಂಠಿ ಗೆಳೆಯರು ಮೇಷ್ಟ್ರು ಎಲ್ಲಿ ಹೋಗಿದ್ದಾರೆ ಆತ ಬಾರದೆ ಇರುವುದೇ ಒಳ್ಳೆಯದು ಎಂದು ಹೇಳಿ ಸುಮ್ಮನಾಗುತ್ತಾರೆ. ಬಳಿಕ ಗಣೇಶನಿಗೆ ಪುಟ್ಟಕ್ಕ ಪೂಜೆ ಮಾಡುತ್ತಾಳೆ. ಪೂಜೆ ಮಾಡುತ್ತಿರುವ ವೇಳೆ ಅಲ್ಲಿಗೆ ಕಂಠಿಯ ಬಾವ ಬರುತ್ತಾನೆ. ಕಂಠಿಯನ್ನ ಸ್ನೇಹಾ ಜೊತೆ ನೋಡಿ ಆತನಿಗೆ ಕೋಪ ಉಕ್ಕಿ ಬರುತ್ತದೆ. ಇದನ್ನು ನೋಡಿದ ಕಂಠಿ ಗೆಳೆಯರು ಕಂಠಿ ಬಳಿ ಬಂದು ಹೇಳುತ್ತಾರೆ. ಏನು ಅಣ್ಣ ನಿನ್ನ ಬಾವ ಮುಖ ಇಷ್ಟು ದೊಡ್ಡ ಮಾಡಿದ್ದಾರೆ ಅವರು ಸರಿಯಾಗಿ ಉರಿದುಕೊಂಡಿದ್ದಾರೆ ಎಂದು ಅನ್ನಿಸುತ್ತದೆ ಎಂದು ಹೇಳುತ್ತಾರೆ.

ನಂಜಮ್ಮನ ಕಂಡು ಪರಾರಿಯಾದ ಕಂಠಿ

ನಂಜಮ್ಮನ ಕಂಡು ಪರಾರಿಯಾದ ಕಂಠಿ

ಬಳಿಕ ಪ್ರಸಾದ ನೀಡಲು ಸ್ನೇಹಾ ಜೊತೆ ಕಂಠಿ ಸೇರುತ್ತಾನೆ. ಈ ವೇಳೆ ಕಂಠಿ ಬಾವ ಸ್ನೇಹಾ ಬಳಿ ಹೇಳುತ್ತಾನೆ ನಾನು ಕೊಡುತ್ತೇನೆ ಎಂದಾಗ ಸ್ನೇಹಾ ಹೇಳುತ್ತಾಳೆ ಬೇಡ ಅಣ್ಣ ಶ್ರಿ ಮತ್ತು ನಾನು ಪ್ರಸಾದ ಕೊಡುತ್ತೇವೆ ಎಂದು ಹೇಳುತ್ತಾಳೆ. ಇದನ್ನು ಕೇಳಿದಾಗ ಇನ್ನೂ ಕೋಪ ಉಕ್ಕಿ ಬರುತ್ತದೆ. ಇತ್ತ ನಂಜಮ್ಮ ಬರುತ್ತಿರುವುದನ್ನು ಕಂಠಿ ಗೆಳೆಯ ನೋಡಿ ಕಂಠಿ ಬಳಿ ಹೇಳುತ್ತಾನೆ ಆಗ ಕಂಠಿ ತಪ್ಪಿಸಿಕೊಳ್ಳಲು ಸ್ನೇಹಾ ಬಳಿ ಏನೋ ಒಂದು ಸಬೂಬು ಹೇಳಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನೂ ಗಣೇಶ ಹಬ್ಬಕ್ಕೆ ನಂಜಮ್ಮ ಬಂದಿರುವುದನ್ನು ಕಂಡು ಪುಟ್ಟಕ್ಕ ಖುಷಿ ಪಡುತ್ತಾಳೆ. ಗಣೇಶನಿಗೆ ನಂಜಮ್ಮನ ಕೈ ಯಿಂದಲೂ ವಿಶೇಷ ಪೂಜೆಯನ್ನು ಮಾಡಿಸುತ್ತಾಳೆ ಪುಟ್ಟಕ್ಕ ಬಳಿಕ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಅಥಿತಿ ಸತ್ಕಾರ ಮಾಡುತ್ತಾರೆ.

ಸ್ನೇಹಾ ಪುಟ್ಟಕ್ಕನ ಮಗಳೆಂದು ಬಂಗಾರಮ್ಮಗೆ ತಿಳಿದು ಹೋಯ್ತು

ಸ್ನೇಹಾ ಪುಟ್ಟಕ್ಕನ ಮಗಳೆಂದು ಬಂಗಾರಮ್ಮಗೆ ತಿಳಿದು ಹೋಯ್ತು

ಆ ಬಳಿಕ ಅಲ್ಲಿಗೆ ಬಂಗಾರಮ್ಮ ಹಾಗೂ ವಸು ಬರುತ್ತಾಳೆ. ಇದನ್ನು ನೋಡಿದ ಕಂಠಿ ಹಣೆ ಚಚ್ಚಿಕೊಳ್ಳುತ್ತಾನೆ. ಇತ್ತ ಬಂಗಾರಮ್ಮ ಹಾಗೂ ನಂಜಮ್ಮಗೆ ಆಗೋದೇ ಇಲ್ಲ. ಆ ಬದ್ಧ ಶತ್ರುಗಳು ಆಡಿದ ರೀತಿಯಲ್ಲಿ ಆಡುತ್ತಾರೆ ಇನ್ನೂ ಅದರ ಮಧ್ಯೆ ಸ್ನೇಹಾ ಕೂಡ ಹಾಗೆಯೇ ನಡೆದುಕೊಳ್ಳುತ್ತಾರೆ. ಬಂಗಾರಮ್ಮನನ್ನು ಆದರದಿಂದ ಸ್ವಾಗತಿಸುತ್ತಾರೆ ಪುಟ್ಟಕ್ಕ. ಆ ವೇಳೆ ಸ್ನೇಹಾ, ಪುಟ್ಟಕ್ಕನ ಎರಡನೇ ಮಗಳು ಎಂದು ತಿಳಿಯುತ್ತದೆ ಬಂಗಾರಮ್ಮನಿಗೆ ಪೂಜೆ ಎಲ್ಲಾ ಆದ ಬಳಿಕ ಸ್ನೇಹಾ ಹೇಳುತ್ತಾಳೆ ನಿಮ್ಮ ಮಗನ ಬಗ್ಗೆ ಪೊಲೀಸ್ ಸ್ಟೇಶನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದು ನಾನೇ ಎಂದು ಹೇಳುತ್ತಾಳೆ. ಇದನ್ನು ಕೇಳಿ ಬಂಗಾರಮ್ಮನಿಗೆ ಪಿತ್ತ ನೆತ್ತಿಗೇರಿತ್ತದೆ. ಇನ್ನೇನು ಎಂಬುವುದನ್ನು ಮುಂದೆ ನೋಡಬೇಕಷ್ಟೇ.

More from Filmibeat

English summary
Kannada serial Puttakkana Makkalu written updated on 16th September Know more episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X