ಪುಟ್ಟಕ್ಕನ ಮೆಸ್ ಬೆಂಕಿ ಇಡಲು ರಾಜೇಶ್ವರಿ ಪ್ಲಾನ್! ಯಶಸ್ವಿಯಾಗುತ್ತಾ?

By ಪೂರ್ವ

ಪುಟ್ಟಕ್ಕನ ಮನೆಗೆ ಬ್ರೋಕರ್ ಆಗಮಿಸುತ್ತಾರೆ. ಇದನ್ನು ಕಂಡ ಪುಟ್ಟಕ್ಕ ಬಹಳ ಪ್ರೀತಿಯಿಂದ ಅವರನ್ನು ಭರ ಮಾಡಿಕೊಳ್ಳುತ್ತಾರೆ ಬಳಿಕ ಸಹನಾ ಬಳಿ ಮಜ್ಜಿಗೆ ತರಲು ಹೇಳುತ್ತಾಳೆ ಈ ವೇಳೆ ಬ್ರೋಕರ್ ಹೇಳುತ್ತಾರೆ ಪುಟ್ಟಕ್ಕ ನನ್ನ ಬಿಟ್ಟು ನೀವೇ ಹುಡುಗನ ಹುಡುಕಿದುರಿ ಅಲ್ವಾ ಎಂದು ಹೇಳುತ್ತಾನೆ ಇದನ್ನು ಕೇಳಿದ ಪುಟ್ಟಕ್ಕ ಇಲ್ಲ ಬ್ರೋಕರ್ ಅಣ್ಣ ಅವಳೇ ಹುಡುಕಿ ಕೊಂಡದ್ದು ಎಂದು ಹೇಳುತ್ತಾರೆ. ಆ ವೇಳೆ ಅಲ್ಲಿಗೆ ಸಹನಾ ಮಜ್ಜಿಗೆ ತೆಗೆದುಕೊಂಡು ಬರುತ್ತಾಳೆ.

ಆಗ ಸಹನಾಳನ್ನು ನೋಡಿ ಬ್ರೋಕರ್ ಹೇಳುತ್ತಾರೆ, ನನಗೆ ಬರುವ ಕಮಿಷನ್ ಅನ್ನು ಕಟ್ ಮಾಡಿ ಬಿಟ್ಟೆ ಅಲ್ವಾ ಸಹನಾ ಇದು ನಿನಗೆ ನ್ಯಾಯಾನಾ ಎಂದು ಕಾಲು ಎಳೆಯುತ್ತಾರೆ. ಇದನ್ನು ನೋಡಿದ ಸಹನಾಗೆ ನಾಚಿಗೆ ಆಗುತ್ತದೆ. ಬಳಿಕ ಬ್ರೋಕರ್ ಹೇಳುತ್ತಾರೆ ತಮಾಷೆ ಮಾಡಿದೆ ಅಮ್ಮ ತಪ್ಪಾಗಿ ತಿಳಿಯ ಬೇಡ ಎಂದು ಹೇಳುತ್ತಾರೆ. ಬಳಿಕ ಜಾತಕವನ್ನು ವಾಪಸ್ ತೆಗೆದುಕೊಳ್ಳುತ್ತಾಳೆ. ಈ ವೇಳೆ ಪುಟ್ಟಕ್ಕ ಹೇಳುತ್ತಾಳೆ ನಿಮ್ಮಿಂದ ಈ ಜಾತಕ ವಾಪಸ್ ತೆಗೆದುಕೊಳ್ಳಲು ಬಹಳ ಬೇಸರ ಆಗುತ್ತದೆ ಬ್ರೋಕರ್ ಅಣ್ಣ. ನನ್ನ ಮಗಳು ಒಬ್ಬನನ್ನು ಒಪ್ಪಿಕೊಂಡ ಬಳಿಕ ನೀವು ಇನ್ನೊಬರಿಗೆ ಆಕೆಯ ಜಾತಕ ತೋರಿಸೋದು ಸರಿ ಇರುವುದಿಲ್ಲ ಆ ಕಾರಣಕ್ಕೆ ನಾನು ಬರಲು ಹೇಳಿದೆ ಎಂದು ಪುಟ್ಟಕ್ಕ ಹೇಳುತ್ತಾರೆ.

ಇದನ್ನು ಕೇಳಿದ ಬ್ರೋಕರ್ ತಮ್ಮಣ್ಣ, ಪುಟ್ಟಕ್ಕ ಅದೇ ನ್ಯಾಯ ಅಲ್ಲವೆ ನಿಮ್ಮ ಮಗಳು ಚೆನ್ನಾಗಿದ್ದರೆ ನಮಗೆ ಅಷ್ಟೇ ಸಾಕು ಎಂದು ಹೇಳುತ್ತಾರೆ. ಬಳಿಕ ಪುಟ್ಟಕ್ಕ ಬೇಸರದಿಂದ ತಮ್ಮಣ್ಣನ ಬಳಿ ಹೇಳುತ್ತಾಳೆ ಇನ್ನೂ ಗಂಡಿನ ಕಡೆಯವರು ಇದಕ್ಕೆಲ್ಲ ಒಪ್ಪಿಗೆ ನೀಡಿಲ್ಲ. ಮದುವೆ ಆಗುವ ಹುಡುಗ ಹೇಳಿದ್ದಾನೆ ಮನೆಯಲ್ಲಿ ಹೇಗಾದರೂ ಒಪ್ಪಿಗೆ ನೀಡುವ ಹಾಗೆ ಮಾಡುತ್ತೇನೆ ಎಂದಾಗ ತಮ್ಮಯ್ಯ, ಆದಷ್ಟು ಬೇಗ ಮದುವೆ ಮಾಡುವುದು ಒಳಿತು ಎಂದು ಹೇಳಿ ಹೊರಡಲು ಸಿದ್ಧವಾದಾಗ ಜಾತಕ ಎಲ್ಲಾ ಕೆಳಗೆ ಬಿದ್ದು ಹೋಗುತ್ತದೆ ಆ ವೇಳೆ ಸಹನಾ ಸಹಾಯ ಮಾಡಲು ಬರುತ್ತಾಳೆ.

ಸಹನಾ ಪುಸ್ತಕದಲ್ಲಿ ಇದ್ದ ಸ್ನೇಹಾ ಫೋಟೋ ಕೂಡ ಅದರಲ್ಲಿ ಸೇರಿಕೊಳ್ಳುತ್ತದೆ. ಬಳಿಕ ಅಲ್ಲಿಂದ ತಮ್ಮಣ್ಣ ಹೊರಟು ಹೋಗುತ್ತಾರೆ. ಇನ್ನು ಪುಟ್ಟಕ್ಕನ ಮೂವರು ಹೆಣ್ಣು ಮಕ್ಕಳು ದೊರೆಯನ್ನು ಹೇಗೆ ಕಂಡು ಹಿಡಿಯುವುದು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಇದಕ್ಕೆ ಒಳ್ಳೆಯ ಉಪಾಯವನ್ನು ಹುಡುಕುತ್ತಾ ಇರುತ್ತಾರೆ. ಆದರೆ ಉತ್ತಮ ಉಪಾಯ ಯಾರಿಗೂ ಹೊಳೆಯುವುದಿಲ್ಲ.

ದೊರೆ ಹುಡುಕಲು ಕಸರತ್ತು ನಡೆಸುತ್ತಿರುವ ಸ್ನೇಹಾ

ದೊರೆ ಹುಡುಕಲು ಕಸರತ್ತು ನಡೆಸುತ್ತಿರುವ ಸ್ನೇಹಾ

ಆಗ ಸುಮಾ ಹೇಳುತ್ತಾಳೆ ನಾವು ಯಾಕೆ ಅಕ್ಕ ಆ ದೊರೆಯನ್ನು ಹುಡುಕಬೇಕು ಇರಲಿ ಅಕ್ಕ ಎಂದು ಹೇಳುತ್ತಾನೆ ಇದನ್ನು ಕೇಳಿದ ಸ್ನೇಹಾ ಮಾತ್ರ ಇಲ್ಲ ದೊರೆ ಯಾರು ಅಂತ ಕಂಡು ಹಿಡಿಯಬೇಕು ಎಂದು ಯೋಚನೆ ಮಾಡುತ್ತಿರುತ್ತಾಳೆ. ಎಲ್ಲಾ ವಿಚಾರದಲ್ಲಿ ಆತ ನಮಗೆ ಸಹಾಯ ಮಾಡುತ್ತಾ ಇರುತ್ತಾನೆ. ಇನ್ನು ಹೇಗೆ ಸುಮ್ಮನಿರಲು ಸಾಧ್ಯ ಎಂದುಕೊಳ್ಳುತ್ತಾ ಇರುತ್ತಾಳೆ. ಏನೇ ಆಗಲಿ ದೊರೆಗಾಗಿ ಮೂವರು ಪುಟ್ಟಕ್ಕನ ಮಕ್ಕಳು ಬಲೆ ಹೆಣೆದು ಆಗಿದೆ.

ಪ್ರತೀಕಾರ ತೀರಿಸಿಕೊಳ್ಳಲು ರಾಜಿ ಸಜ್ಜು

ಪ್ರತೀಕಾರ ತೀರಿಸಿಕೊಳ್ಳಲು ರಾಜಿ ಸಜ್ಜು

ಇತ್ತಕಡೆ ರಾಜಿ ಮಾತ್ರ ನಡೆದ ಅವಮಾನದ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾಳೆ. ಕಾಳಿ ಕೂಡ ಊಟ ಮಾಡದೇ ಅನ್ನವನ್ನು ಕೋಪದಲ್ಲಿ ಕಲಸುತ್ತಾ ಕುಳಿತಿರುತ್ತಾನೆ. ಈ ವೇಳೆ ಪುರುಷೋತ್ತಮ, ಅಪ್ಪ ಇನ್ನೂ ಊಟ ಬಡಿಸಪ್ಪ ಎಂದು ಹೇಳಿದಾಗ ಗೋಪಾಲ ಹೇಳುತ್ತಾನೆ ನೀನು ಮಧ್ಯಾಹ್ನದ ಊಟಕ್ಕೆ ಬರಬೇಕಿತ್ತು ಕಣೋ. ಈಗ ನಿನಗೆ ಹಸಿವೆ ಆಗುತ್ತಾ ಇರಲಿಲ್ಲ ಎಂದು ಹೇಳಿದಾಗ ರಾಜಿ ಕೋಪದಿಂದ ಗೋಪಾಲನನ್ನು ಕೆಂಗಣ್ಣಿನಿಂದ ನೋಡುತ್ತಾಳೆ.

ರಾಜಿಯ ಕಾಲೆಳೆದ ಗೋಪಾಲ

ರಾಜಿಯ ಕಾಲೆಳೆದ ಗೋಪಾಲ

ಬಳಿಕ ರಾಜಿ ಹೇಳುತ್ತಾಳೆ, ಇಲ್ಲಿ ಇಷ್ಟೆಲ್ಲ ನಡೆದ ಬಳಿಕ ನಿನಗೆ ಊಟ ಮಾಡಬೇಕು ಅನ್ನಿಸುತ್ತಾ ಇದೆಯಾ ಎಂದಾಗ ಗೋಪಾಲ ಮಾತ್ರ ಏನು ಮಾಡೋದು ಊಟ ಮಾಡದೆ ಸುಮ್ಮನೆ ಮಲಗು ಅಂತೀಯಾ ಎಂದು ಹೇಳುತ್ತಾನೆ. ಇದನ್ನು ನೋಡಿದ ರಾಜಿ ಮಾತ್ರ ನಿನಗೆ ಕಾದು ಮತ್ತೆ ಹಸಿವಿದ್ದೆ ಚಿಂತೆ ಎಂದು ಹೇಳಿದಾಗ ಮಗ ಪುರುಷೋತ್ತಮ ತಂದೆಯ ಬಳಿ ಹೇಳುತ್ತಾನೆ ಡ್ಯಾಡಿ ಹಪ್ಪಳ ಕೊಡು ಎಂದು ಹೇಳುತ್ತಾನೆ. ಊಟ ಮುಗಿದ ಬಳಿಕ ಪುರುಷೋತ್ತಮ ಮಲಗಲು ಹೋಗುತ್ತಾನೆ. ಈ ವೇಳೆ ಗೋಪಾಲನ ವಿರುದ್ದ ನಿಂತಿದ್ದಾನೆ. ಗಣೇಶ ಹಬ್ಬದ ರಾತ್ರಿ ಬಂಗಾರಮ್ಮ ನ ಮಗನನ್ನು ಮುಗಿಸುತ್ತ ಇದ್ದೆ ಆದರೆ ನೀನೇ ಅಕ್ಕನಿಗೆ ಹುಷಾರ್ ಇಲ್ಲ ಎಂದು ಹೇಳಿ ವಾಪಸ್ ಕರೆಸಿಕೊಂಡೆ ಎಂದಾಗ ಗೋಪಾಲ ಹೇಳುತ್ತಾನೆ ನಾನು ಹಾಗೆ ಮಾಡದೆ ಇದ್ದಿದ್ದರೆ ನಿನ್ನ ತಿಥಿ ಮಾಡಬೇಕಿತ್ತು ನಾವು ಎಂದು ಹೇಳುತ್ತಾನೆ.

ಮೆಸ್‌ಗೆ ಬೆಂಕಿ ಇಡೋಣ ಎಂದ ರಾಜಿ

ಮೆಸ್‌ಗೆ ಬೆಂಕಿ ಇಡೋಣ ಎಂದ ರಾಜಿ

ಇದನ್ನೆಲ್ಲ ಕೇಳಿದ ರಾಜೇಶ್ವರಿ ಇಬ್ಬರು ಕೊಂಚ ಸುಮ್ಮನಿರಿ ಎಂದು ಹೇಳುತ್ತಾಳೆ. ಬಳಿಕ ಮಾತು ಮುಂದುವರಿಸಿದ ರಾಜಿ ಕೋಪದಿಂದ ನನಗೆ ಆಗಿರುವ ಅವಮಾನ ಮರೆಯಲು ಸಾದ್ಯ ಆಗುತ್ತಿಲ್ಲ. ನಾವು ಮೆಸ್ ನ ಯಾಕೆ ಸುಟ್ಟು ಹಾಕಬಾರದು ಎಂದು ಹೇಳುತ್ತಾಳೆ ಇದನ್ನು ಕೇಳಿದ ಗೋಪಾಲ ರಾಜಿ ಎಂದು ಕೂಗಿ ಸುಮ್ಮನಾಗುತ್ತಾನೆ. ಬಳಿಕ ಕಾಳಿ ಬಳಿ ಹೇಳುತ್ತಾಳೆ, ಹೆಂಗೋ ನಮಗೆ ಆ ಮೆಸ್ ಕೊಡಲ್ಲ. ಅದನ್ನು ಸುಟ್ಟು ಹಾಕಿ ನೆಲಸಮ ಮಾಡಿದರೆ ನಾವು ಹೇಳಿದ ಹಾಗೆ ಇರುತ್ತಾಳೆ ಎಂದು ಮಾಸ್ಟರ್ ಪ್ಲಾನ್ ಮಾಡುತ್ತಾರೆ. ಬಳಿಕ ಕಾಳಿ ಪುಟ್ಟಕ್ಕನ ಮೆಸ್ ಗೆ ಬೆಂಕಿ ಇಡಲು ತೆರಳುತ್ತಾನೆ.

ಶ್ರೀಯನ್ನು ಭೇಟಿ ಆಗಲು ಹೊಲಕ್ಕೆ ಹೊರಟ ಸ್ನೇಹಾ

ಶ್ರೀಯನ್ನು ಭೇಟಿ ಆಗಲು ಹೊಲಕ್ಕೆ ಹೊರಟ ಸ್ನೇಹಾ

ಪುಟ್ಟಕ್ಕನ ಮನೆಯಲ್ಲಿ ದೊರೆ ಹುಡುಕಲು ಮಾಸ್ಟರ್ ಪ್ಲಾನ್ ಮಾಡಿ ಆಗಿದೆ. ಇದಕ್ಕಾಗಿ ಸ್ನೇಹಾ ಗದ್ದೆಯ ಬಳಿ ಒಬ್ಬಳೇ ಹೋಗುತ್ತಾಳೆ. ಅದಕ್ಕೆ ಸುಮಾ ಈಗ ಹೊಗುತ್ತಿಯಾ ಬೇಡ ನಾನು ಬರುತ್ತೇನೆ ಎಂದಾಗ ನೀನು ಬಂದರೆ ಪ್ರಾಬ್ಲೆಮ್ ಆಗುತ್ತದೆ ಬೇಡ ಎಂದು ಖಡಕ್ ಆಗಿ ಹೇಳುತ್ತಾಳೆ. ಬಳಿಕ ಸಹನಾ ಹಾಗೂ ಸ್ನೇಹಾ ಗದ್ದೆ ಕಡೆ ಹೋಗುವುದು ಎಂದು ಡಿಸೈಡ್ ಆಗುತ್ತದೆ. ಈ ವಿಚಾರವನ್ನು ಶ್ರೀ ಗೆ ಹೇಳುತ್ತೇನೆ ಎಂದು ಕಂಠಿ ಗೆ ಕರೆ ಮಾಡುತ್ತಾರೆ. ಈ ವೇಳೆ ಮನೆಯಲ್ಲಿ ಊಟಕ್ಕೆ ಕುಳಿತಿರುತ್ತಾರೆ. ಬಂಗಾರಮ್ಮ ಆಗಲೇ ಹೇಳಿ ಇರುತ್ತಾರೆ ರಾತ್ರಿ ಎಲ್ಲಿ ಕೂಡ ಹೋಗಬೇಡಿ ಎಂದೆಲ್ಲ ಬುದ್ದಿ ಮಾತು ಹೇಳುತ್ತಾರೆ. ಈ ವೇಳೆ ಕರೆ ಬಂದಿದ್ದನ್ನು ಕಂಡು ಏನೇನೋ ಸುಳ್ಳುಗಳನ್ನು ಯೋಚನೆ ಮಾಡುತ್ತಾ ಆತನ ಸ್ನೇಹಿತರು ಬಂಗಾರಮ್ಮನ ಬಳಿ ಹೇಳುತ್ತಾರೆ. ಈ ವೇಳೆ ಕಂಠಿ ಬಳಿ ಸ್ನೇಹಾ ಹೇಳುತ್ತಾಳೆ ಈಗ ನಾವು ಹೊಲದ ಬಳಿ ಬರುತ್ತಾ ಇದ್ದೇವೆ ನೀವು ಅಲ್ಲಿಗೆ ಬನ್ನಿ ಶ್ರೀ ಎಂದು ಹೇಳುತ್ತಾಳೆ. ಕಾಳಿ ಮತ್ತು ಆತನ ಗೆಳೆಯ ಪುಟ್ಟಕ್ಕನ ಮೆಸ್ ಸುಡಲು ಆಗಮಿಸಿದ್ದಾರೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 17th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X