ಸಹನಾ ಮುರಳಿ ಮೇಷ್ಟ್ರ ಲವ್ ಸ್ಟೋರಿಗೆ ಸಾಥ್ ನೀಡುತ್ತಿರುವ ಕಂಠಿ

By ಪೂರ್ವ

ಸಹನಾ ಬಹಳ ಸೂಕ್ಷ್ಮ ಮನಸ್ಥಿತಿಯವಳು. ಆಕೆಯ ಮನಸ್ಸನ್ನು ಅರಿಯದೆ ಪುಟ್ಟಕ್ಕ ಹಾಗೂ ಸ್ನೇಹಾ ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ. ಆದರೆ ಸಹನಾ ಮಾತ್ರ ಮುರಳಿ ಮೇಷ್ಟ್ರನ್ನು ನೆನೆದುಕೊಂಡು ನೋವುಣ್ಣುತ್ತಿದ್ದಾಳೆ. ಸಹನಾ ಮೇಷ್ಟ್ರನ್ನು ಬಹಳ ಪ್ರೀತಿ ಮಾಡುತ್ತಾಳೆ. ಆದರೆ ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಮೇಷ್ಟ್ರು ಸಹನಾಳನ್ನು ಕಳೆದುಕೊಳ್ಳುವ ಎಲ್ಲಾ ಪ್ರಮೇಯವೂ ಬಂದೊದಗಿದೆ.

ಎಲ್ಲರೂ ಮಲಗಿದ್ದ ವೇಳೆ ಸಹನಾ, ಮುರಳಿ ಮೇಷ್ಟ್ರನ್ನು ನೆನದು ಜೋರಾಗಿ ಅಳುತ್ತಾ ಇರುತ್ತಾಳೆ ಇದನ್ನು ನೋಡಿದ ಸುಮಾ, ಅಕ್ಕ ಎಂದು ಹೇಳುತ್ತಾಳೆ. ಅಳುವನ್ನು ತಡೆದುಕೊಂಡ ಸಹನಾ ಹೇಳುತ್ತಾಳೆ. ಯಾಕೆ ಎದ್ದೆ ನಿದ್ದೆ ಬರಲಿಲ್ಲ ಎಂದು ಹೇಳುತ್ತ ಇರುತ್ತಾಳೆ. ಇದನ್ನು ನೋಡಿದ ಸುಮಾ ಯಾಕೆ ಅಕ್ಕ ಅಳುತ್ತಿದ್ದಿಯ ಏನಾಯ್ತು? ಎಂದು ಕೇಳುತ್ತಾಳೆ.

ನಾನು ಹೇಳಿದ ಹಾಗೆ ಅಮ್ಮನ ಬಳಿ ಎಲ್ಲಾ ವಿಚಾರ ಹೇಳುವುದು ಒಳಿತು ಇಲ್ಲವಾದರೆ ಬಹಳ ಕಷ್ಟ. ಜೀವನ ಪೂರ್ತಿ ನಿನ್ನ ಗೋಳಾಟ ಮುಗಿಯುವುದಿಲ್ಲ. ಮೇಷ್ಟ್ರ ಮೇಲಿನ ಪ್ರೀತಿಯನ್ನೂ ಅಮ್ಮನ ಮುಂದೆ ಹೇಳಿಬಿಡು ಎಂದು ಹೇಳುತ್ತಾಳೆ ಸುಮಾ. ನೀನು ಹೇಳದೆ ಇದ್ದರೆ ಇದೀಗ ನಾನೇ ಹೇಳಿ ಬಿಡುತ್ತೇನೆ ಎಂದು ಹೇಳುತ್ತಾಳೆ.

ಅವಳನ್ನು ತಡೆದ ಸುಮಾ ನನ್ನ ಮೇಲೆ ಆಣೆ ಸುಮಾ ಎಂದು ಆಣೆ ಪ್ರಮಾಣ ಮಾಡಿಸಿಕೊಂಡು ಬಿಡುತ್ತಾಳೆ. ಇದರಿಂದ ಸುಮಾಗೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ. ಇನ್ನು ಮರುದಿನ ಪುಟ್ಟಕ್ಕನ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ ಆದರೆ ಸಹನಾ ಮೊಗದಲ್ಲಿ ನಗುವೇ ಮಾಸಿ ಹೋಗಿದೆ. ಇತ್ತ ಸುಮಾ ಅಕ್ಕನ ಮೊಗ ನೋಡುತ್ತಾ ನಿಜ ಹೇಳಿಬಿಡು ಅಕ್ಕ ಎಂದು ಗೋಗರೆಯುತ್ತಾ ಇರುತ್ತಾಳೆ. ಇನ್ನು ಅಲ್ಲಿಗೆ ಬಂದ ಸಹನಾ ಮಧುವಣ ಗಿತ್ತಿಯನ್ನು ಸಿಂಗರಿಸಲು ಬರುತ್ತಾಳೆ ಇದನ್ನೆಲ್ಲ ನೋಡಿದ ಪುಟ್ಟಕ್ಕ ಬಹಳ ಖುಷಿ ಪಡುತ್ತಾಳೆ.

ತಂದೆಗೆ ಎದುರಾಡಿದ ಮೇಷ್ಟ್ರು

ತಂದೆಗೆ ಎದುರಾಡಿದ ಮೇಷ್ಟ್ರು

ಇನ್ನು ಮುರಳಿ ಮೇಷ್ಟ್ರು ಮನೆಯಲ್ಲಿ ಮೇಷ್ಟ್ರು ತಂದೆಗೆ ಎದುರಾಡಿದ್ದನ್ನು ನೆನಪಿಸಿಕೊಂಡು ಆಶ್ಚರ್ಯ ಪಡುತ್ತಾನೆ. ಜೊತೆಗೆ ತನ್ನ ಮಗ ಯಾವ ಸಂಕಟ ಕೆಲಸದಲ್ಲಿ ಸಿಲುಕಿದ್ದಾನೆ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಮುರಳಿ ಮೇಷ್ಟ್ರ ತಾಯಿ ಗಂಡನ ಮುಖ ನೋಡಿ ಹೇಳುತ್ತಾಳೆ ಇನ್ನೂ ಯಾಕೆ ಅವನ ಮೇಲೆ ಕೋಪ ಅವನು ಮದುವೆಗೆ ಒಪ್ಪಿಗೆ ನೀಡಿದ ಅಲ್ವಾ ನನಗೆ ಅದೇ ಖುಷಿ ಎಂದು ಹೇಳುತ್ತಾರೆ.

ಬಂಗಾರಮ್ಮನಿಗೆ ನಿಜ ವಿಚಾರ ತಿಳಿಸಿದ ಕಂಠಿ

ಬಂಗಾರಮ್ಮನಿಗೆ ನಿಜ ವಿಚಾರ ತಿಳಿಸಿದ ಕಂಠಿ

ಇನ್ನು ಬಂಗಾರಮ್ಮ ನ ಬಳಿ ಆಕೆ ಗಂಡ ಹೇಳುತ್ತಾರೆ. ಬಂಗಾರ ನಿನಗೆ ಈ ನಿಶ್ಚಿತಾರ್ಥ ನಡೆಯುತ್ತೆ ಎಂದು ಅನ್ನಿಸುತ್ತದಯೆ ಎಂದು ಕೇಳುತ್ತಾನೆ. ಕಂಠಿಗೆ ಈ ಮದುವೆ ಇಷ್ಟ ಇಲ್ಲ. ಜೊತೆಗೆ ನಿಮ್ಮ ಅಣ್ಣ ಕೂಡ ಸರಿ ಇಲ್ಲ ಬಂಗಾರ ಎಂದು ಕೇಳಿದಾಗ ಗಂಡನನ್ನು ಕೆಂಗಣ್ಣಿನಿಂದ ನೋಡುತ್ತಾಳೆ. ಆದರೆ ಬಂಗಾರಮ್ಮ ಮಾತ್ರ ಯಾವತ್ತೂ ಮಾತನಾಡದ ಗಂಡ ಇವತ್ತು ಈ ರೀತಿ ಮಾತನಾಡುತ್ತಾ ಇದ್ದಾರಲ್ವ ಎಂದು ಹೇಳುತ್ತಾ ಕಾರಣ ಏನು ಎಂಬುವುದನ್ನು ಮೊದಲು ಹೇಳಿ ನೀವು ಸುಮ್ಮನೆ ಯಾರ ಬಗ್ಗೆ ಈ ರೀತಿ ಹೇಳಿದವರು ಅಲ್ಲ ಎಂದು ಹೇಳುತ್ತಾ ಇರುತ್ತಾಳೆ.

ಗೊಂದಲಕ್ಕೀಡಾದ ಬಂಗಾರಮ್ಮ

ಗೊಂದಲಕ್ಕೀಡಾದ ಬಂಗಾರಮ್ಮ

ಇನ್ನು ಪೂರ್ವಿ ತಂದೆ ತಾಯಿ ಮನೆಗೆ ಬಂದಿದ್ದ ವೇಳೆ ಕಿಟಕಿ ಬಳಿ ಮಗಳನ್ನು ಮದುವೆ ಮಾಡಿಕೊಟ್ಟ ಮೇಲೆ ಆಸ್ತಿ ಎಲ್ಲ ನನ್ನದೇ ಬಳಿಕ ನಿಮಗೆ ಹಣ ಹಿಂದಿರುಗಿಸುತ್ತೇನೆ ಎಂದು ಹೇಳುತ್ತಿದ್ದ, ನಿನ್ನ ಅಣ್ಣ ಸರಿ ಇಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಬಂಗಾರಮ್ಮಗೆ ಏನು ಮಾಡಬೇಕು ತಿಳಿಯುವುದಿಲ್ಲ ಕೊನೆಗೆ ತಾನು ಸರಳಾಗೆ ಮಾತು ಕೊಟ್ಟು ಬಿಟ್ಟಿದ್ದೇನೆ ನಾನು ಮದುವೆ ಮಾಡಿಯೇ ತೀರುತ್ತೇನೆ ಎಂದು ಅಲ್ಲಿಂದ ಹೊರ ನಡೆಯುತ್ತಾಳೆ. ಮರುದಿನ ಕಂಠಿ ರೂಮಿಗೆ ವಸು ಬರುತ್ತಾಳೆ.

ನಿಶ್ಚಿತಾರ್ಥ ನಿಲ್ಲಿಸುತ್ತಾನಾ ಕಂಠಿ

ನಿಶ್ಚಿತಾರ್ಥ ನಿಲ್ಲಿಸುತ್ತಾನಾ ಕಂಠಿ

ಏನು ಅಣ್ಣ ಮದುವೆ ನಿಲ್ಲಿಸಲು ರೆಡಿ ಆಗಿದ್ದೀಯಾ? ಈ ಎಂಗೇಜ್‌ಮೆಂಟ್ ನಡೆಯುತ್ತಾ ಎಂದು ಕೇಳಿದಾಗ ಮತ್ತೆ ನೋಡವ್ವ ಏನಾಗುತ್ತದೆ ಎಂದು ಹೇಳುತ್ತಾಳೆ. ಆಗ ಕಂಠಿ ಗೆಳೆಯರು ಬಂದು ಏನು ಅಣ್ಣ ಬೇಗ ಬರಕ್ಕೆ ಹೇಳಿದ್ಯಂತೆ ಏನು ವಿಚಾರ ಎಂದು ಕೇಳುತ್ತಾನೆ. ಇತ್ತ ಮಗನ ಬಳಿ ಮಾತನಾಡಲು ಬಂಗಾರಮ್ಮ ಬರುತ್ತಾಳೆ. ಇನ್ನು ಮುಂದೆ ಏನು ಎಂಬುವುದನ್ನು ಕಾದು ನೋಡಬೇಕಿದೆ.

English summary
Kannada serial Puttakkana Makkalu written updated on 16th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X