ಅಕ್ಕನ ಲವ್ ಸ್ಟೋರಿಗೆ ಸಹಾಯ ಮಾಡುತ್ತಾಳೆಯೇ ಸುಮಾ?
'ಪುಟ್ಟಕ್ಕನ ಮಕ್ಕಳು' ಧಾರವಾಹಿ ಇದೀಗ ಎಲ್ಲಾ ಧಾರವಾಹಿಗಿಂತ ವಿಭಿನ್ನವಾಗಿ ಮೂಡಿ ಬರುತ್ತಿದೆ. ಇದೀಗ ಸಹನಾ ಮುರಳಿ ಮೇಷ್ಟ್ರು ಬಗ್ಗೆ ಪ್ರೀತಿ ಇಟ್ಟು ಕೊಂಡಿದ್ದರು ಅದನ್ನು ತೋರ್ಪಡಿಸಿಕೊಳ್ಳದೆ ಮುರಳಿ ಮೇಷ್ಟ್ರಿಗೆ ಮನದ ಮೂಲಕವೇ ಪ್ರಶ್ನೆಗಳನ್ನು ಹಾಕುತ್ತಿದ್ದಾಳೆ. ಏನು ಈ ಮೇಷ್ಟ್ರು ದಿಢೀರ್ ಬಂದು ತಬ್ಬಿಕೊಂಡು ಪ್ರೀತಿ ಹೇಳಿದರೆ ಅದು ಸರಿಯಾ ಎಂಬ ಲೆಕ್ಕಾಚಾರದಲ್ಲಿ ಇದ್ದಾಳೆ.
ಆದರೆ ಕಾಲೇಜಿನಲ್ಲಿ ಏಷ್ಟು ಜನ ಇರುವಾಗ ಆ ರೀತಿ ಎಳೆದುಕೊಂಡು ಹೋಗಿದ್ದು ಸರಿಯಾ? ಅಬ್ಬಾ... ಕಾಲೇಜಿಗೆ ಹೋಗಿ ಮೇಷ್ಟ್ರನ್ನು ದೂರದಿಂದ ನೋಡಿಕೊಂಡು ಬರೋಣ ಅಂದುಕೊಂಡೆ. ಆದರೆ ಮೇಷ್ಟ್ರು ಹೀಗಾ ಮಾಡೋದು. ಎಂದು ಕನ್ನಡಿಯನ್ನು ನೋಡಿ ಮೇಷ್ಟ್ರು ಎಳೆದುಕೊಂಡು ಹೋಗುವುದನ್ನು ನೋಡಿ ಮನದಲ್ಲಿಯೇ ಖುಷಿ ಪಟ್ಟುಕೊಳ್ಳುತ್ತಾಳೆ. ಇತ್ತ ಸುಮಾ ಕಾಲೇಜಿನಿಂದ ಮನೆಗೆ ಬರುತ್ತಾಳೆ. ಅವ್ವ ಮೆಸ್ ನಲ್ಲು ಇಲ್ಲ . ಆಚೆ ಸ್ನೇಹಾ ಅಕ್ಕನ ಚಪ್ಪಲಿ ಕೂಡ ಇಲ್ಲ. ಸಹನಾ ಅಕ್ಕ ಮನೆಯಲ್ಲಿ ಇದ್ದಾಳೊ ಅಥವಾ ಇಲ್ವಾ ಎಂದು ಯೋಚಿಸುತ್ತಾ ಸುಮಾ ಮನೆ ಒಳಗೆ ಬರುತ್ತಾಳೆ.
ಅಮ್ಮ ಅಮ್ಮ ಎಂದು ಅದೆಷ್ಟು ಬಾರಿ ಕರೆದರೂ ಮನೆಯ ಒಳಗೆ ಯಾರು ಇಲ್ಲದನ್ನು ನೋಡಿ ಸುಮ್ಮನಾಗುತ್ತಾಳೆ. ಬಳಿಕ ಅಕ್ಕ ಅಕ್ಕ ಎಂದು ಕರೆದುಕೊಂಡು ಹೋಗಿ ರೂಮಿನ ಬಾಗಿಲು ತೆರೆಯುತ್ತಾಳೆ ಅಲ್ಲಿ ಸಹನಾ ಒಬ್ಬಳೇ ಮಾತನಾಡುತ್ತಾ ಇರುತ್ತಾಳೆ. ಬಾಗಿಲು ತೆರೆದು ಇರುವುದನ್ನು ನೋಡಿ ಸಹನ ಶಾಕ್ ಆಗುತ್ತಾಳೆ. ಬಳಿಕ ಸುಮಾ ಒಳಗೆ ಬರುತ್ತಾಳೆ ಅಕ್ಕ ನನ್ನು ಕಂಡು ಏನಕ್ಕ ಎಂದು ಕೇಳುತ್ತಾಳೆ.

ಅದಕ್ಕೆ ಸಹನಾ ಏನಿಲ್ಲ ಕಣೆ ಸುಮಾ ಅನ್ನುತ್ತಾಳೆ ಅದಕ್ಕೆ ಸುಮಾ ಕೇಳುತ್ತಾಳೆ ಯಾರತ್ರ ಮಾತನಾಡುತ್ತಿದ್ದೆ. ನನಗೆ ಗೊತ್ತಿಲ್ಲದೆ ಯುಟ್ಯೂಬ್ ತೆಗೊಂಡು ಬಂದೆಯೋ ಹೆಂಗೆ ಎಂದು ಹೇಳುತ್ತಾಳೆ. ಅದಕ್ಕೆ ಸಹನಾ, ''ಇಲ್ಲ ಸುಮಾ ನಾನು ಯರ ಹತ್ರಾನೂ ಮಾತನಾಡುತ್ತಾ ಇರಲಿಲ್ಲ ಎನ್ನುತ್ತಾಳೆ. ಅದಕ್ಕೆ ಸುಮಾ ಹೇಳುತ್ತಾಳೆ ''ಓ ನೀನು ಬೇರೇನೇ ಮೂಡಲ್ಲಿ ಇದ್ದೀಯಾ ಅಂತ ಆಯ್ತು. ಕಾಲೇಜಿನಲ್ಲಿ ಮೇಷ್ಟರನ್ನು ನೋಡಿದ ಎಫೆಕ್ಟ್'' ಎಂದು ಅಕ್ಕನ ಕಾಲು ಎಳೆಯುತ್ತಾರೆ ಸುಮಾ ಅದಕ್ಕೆ ಸಹನಾ ಹುಸಿ ಕೋಪ ಮಾಡಿಕೊಳ್ಳುತ್ತಾಳೆ.
ಅದಕ್ಕೆ ಸುಮಾ ಹೇಳುತ್ತಾಳೆ, ''ಈಗಲೂ ಸುಮಾ ಸುಮಾ ಅಂತ ಅಂತಿರ ಬೇಡ ಅಕ್ಕ. ಅದೇ ಎಲ್ಲಾ ಗೊತ್ತಾಯ್ತಲ್ಲ. ಮೇಷ್ಟ್ರುಗೂ ಪಾಠ ಮಾಡಿ ಬಂದಿದ್ದೀನಿ ಎನ್ನುತ್ತಾಳೆ. ಅದಕ್ಕೆ ಸಹನಾ, ಏನಂತ ಪಾಠ ಮಾಡಿದ್ದೀಯಾ? ಎಂದು ಕೇಳುತ್ತಾಳೆ. ಆಗ ಸುಮಾ, ''ನಮ್ಮ ಅಕ್ಕನತ್ರ ಹೇಗ್ ಬೇಕೋ ಹಾಗೆ ನಡೆದುಕೊಳ್ಳಿ.. ಸ್ನೇಹಾ ಅಕ್ಕನ ಬಳಿ ಮಾತನಾಡಿ'' ಅಂತ ಹೇಳಿದೆ ಅನ್ನುತ್ತಾಳೆ. ಅದಕ್ಕೆ ಸಹನಾ ಹೇಳುತ್ತಾಳೆ, ''ನೀನು ಯಾಕೆ ಅದನ್ನೆಲ್ಲ ಮಾತಾಡಕ್ಕೆ ಹೋದೆ'' ಎನ್ನುತ್ತಾಳೆ ಅದಕ್ಕೆ ಸುಮಾ, ''ನಾನು ಮಾತನಾಡದೆ ಇನ್ಯಾರು ಮಾತಾಡಕ್ಕೆ ಆಗತ್ತೆ ಅಕ್ಕ ಕಾಲೇಜಿನಲ್ಲಿ ನಿನ್ನ ಮುಖ ಹೇಗಿತ್ತು ತೊಟ್ಟಿಲಲ್ಲಿ ಬಿದ್ದ ಮಗು ತರ ಗಾಬರಿಯಲ್ಲಿ ಇದ್ದೆ, ಈಗ ನಾನೇ ಲೀಡ್ ಮಾಡಬೇಕು ಮ್ಯಾಟರ್ ಅನ್ನು ಕ್ಲಿಯರ್ ಮಾಡಿ ನಿನಗೆ ಕೋಕ್ ಕೊಡ್ತೀನಿ ನೀನು ಅದನ್ನು ಕಂಟಿನ್ಯೂ ಮಾಡ್ಕೋ. ಮೇಷ್ಟ್ರು ಗೂ ಸ್ವಲ್ಪ ಭಯ ಇರಲಿ'' ಎಂದು ಹೇಳುತ್ತಾಳೆ.
ಆಗ ಸಹನಾ ರಾಗ ಎಳೆಯುತ್ತಾಳೆ, ಅದಕ್ಕೆ ಸುಮಾ, ''ಅದ್ರುವೆ ಏನಾದ್ರೂ..ಅವರು ಮೇಷ್ಟ್ರು ಅಲ್ಲ ನನ್ನ ಭಾವ ಆಗೊರು ಅಂತ ಹೇಳ್ತಿದ್ದಿಯಾ'' ಎಂದು ಕಾಲು ಎಳೆಯುತ್ತಾಳೆ. ಇವರಿಬ್ಬರ ಪ್ರೀತಿ ಎಲ್ಲಿ ಹೋಗಿ ಮುಟ್ಟುತ್ತದೆ ನೋಡಬೇಕಿದೆ.


Click it and Unblock the Notifications