Don't Miss!
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- News
Budget 2023; ರಾಜಕೀಯ ಉದ್ದೇಶದಿಂದ ಬಜೆಟ್ ಮಂಡನೆ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುಟ್ಟಕ್ಕನನ್ನು ಸಮಾಧಾನ ಮಾಡಿದ ಕಂಠಿಗೆ ಇನ್ನೂ ಹತ್ತಿರವಾದ ಸ್ನೇಹಾ
ಬಂಗಾರಮ್ಮ ಪುಟ್ಟಕ್ಕನನ್ನು ಮನೆಯಲ್ಲಿ ಬಿಟ್ಟು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕಂಠಿ ಕಾಣಿಸುತ್ತಾನೆ. ಆಗ ಬಂಗಾರಮ್ಮ ಕಂಠಿಯನ್ನು ಕರೆದು ವಿಚಾರಣೆ ಮಾಡುತ್ತಾರೆ. ಆ ವೇಳೆ ಸ್ನೇಹಾ ಕಿಟಕಿ ಬದಿಯಿಂದ ಬಂಗಾರಮ್ಮ ಹಾಗೂ ಕಂಠಿ ಮಾತನಾಡುತ್ತಾ ಇರುವುದನ್ನು ನೋಡುತ್ತಾಳೆ. ಇದನ್ನು ನೋಡಿದ ಕಂಠಿ ಬಂಗಾರಮ್ಮನ ಬಳಿ ಕೆಲಸದಾಳು ಯಾವ ರೀತಿ ಮಾತನಾಡುತ್ತಾ ಇರುತ್ತಾರೋ ಅದೇ ರೀತಿ ಮಾತನಾಡುತ್ತಾನೆ. ಇದನ್ನು ನೋಡಿದ ಸ್ನೇಹ ಅಷ್ಟೇನೂ ತಪ್ಪು ತಿಳಿದುಕೊಳ್ಳುವುದಿಲ್ಲ. ಇನ್ನು ಬಂಗಾರಮ್ಮ ತನ್ನ ಮಗನ ಬಳಿ ಹೀಗೆಲ್ಲ ಯಾಕೆ ಮಾತನಾಡುತ್ತಾ ಇದ್ದೀಯಾ ಯಾರು ಏನು ಅಂದುಕೊಂಡಿರುತ್ತಾರೆ ಎಂದಾಗ ಅಮ್ಮನ ಬಳಿ ಕಂಠಿ ನಾನು ನಿನ್ನ ಮಗ ಎಂದು ಹೇಳಿಲ್ಲ, ಹೇಳಿದರೆ ಕೆಲಸ ಮಾಡಲು ಬಿಡುವುದಿಲ್ಲ ಎಂದೆಲ್ಲ ಹೇಳಿದ ಬಳಿಕ ಬಂಗಾರಮ್ಮ ಅಲ್ಲಿಂದ ಹೋಗುತ್ತಾಳೆ.
ಬಂಗಾರಮ್ಮ ಹೋದ ಬಳಿಕ ಪುಟ್ಟಕ್ಕನ ಬಳಿಗೆ ಬಂದ ಸ್ನೇಹಾ ಏನಿದೆಲ್ಲಾ ಎಂದು ಕೇಳುತ್ತಾಳೆ. ಮುರಳಿ ಮೇಷ್ಟ್ರ ಮನೆಗೆ ಹೋಗಿದ್ದೆ ಅಲ್ಲಿ ಏನಾದರು ತಕರಾರು ನಡೆಯಿತ ನನ್ನ ಬಳಿ ಹೇಳು ಅಮ್ಮ ಎಂದು ಹೇಳಿದಾಗ ಪುಟ್ಟಕ್ಕ ಏನು ಇಲ್ಲ, ದಾರಿಯಲ್ಲಿ ಬಂದಾಗ ಸುಸ್ತು ಆಯಿತು ಆದ ಕಾರಣ ನಾನು ಮರದ ಬಳಿ ಕುಳಿತೆ ಆಗ ಅಲ್ಲಿಗೆ ಬಂಗಾರಮ್ಮ ಬಂದರು, ಮಾತನಾಡಿದರು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ಸುಮ್ಮನೆ ಆಗುತ್ತಾಳೆ, ಬಳಿಕ ತನ್ನ ಪಾಡಿಗೆ ಕೆಲಸಕ್ಕೆ ಹೋಗುತ್ತಾಳೆ.
ಪುಟ್ಟಕ್ಕ ಕುಳಿತು ಯೋಚನೆ ಮಾಡುತ್ತಾ ಇರುವ ವೇಳೆ ಅಲ್ಲಿಗೆ ಬಂದ ಕಂಠಿ ಪುಟ್ಟಕ್ಕನ ಬಳಿ ಆರೋಗ್ಯ ವಿಚಾರಣೆ ಮಾಡುತ್ತಾನೆ. ಆದರೆ ಪುಟ್ಟಕ್ಕ ಏನು ಹೇಳುವುದು ಇಲ್ಲ. ಅದನ್ನು ನೋಡಿದ ಕಂಠಿ ನನ್ನ ನೀವು ಮಗ ಮಗ ಎಂದು ಹೇಳುತ್ತೀರಾ ಮಗ ಅಂದರೆ ಇಷ್ಟೇ ಅಲ್ವಾ ಎಂದು ಹೇಳುತ್ತಾನೆ. ಆಗ ನಗುತ್ತಾ ಪುಟ್ಟಕ್ಕ ಸುಮ್ಮನೆ ಇರುತ್ತಾಳೆ. ಬಳಿಕ ಕಂಠಿ ಏನೇ ಆದರೂ ಈ ಮದುವೆಯನ್ನು ನಾವು ನಡೆಸಿಕೊಡುತ್ತೇವೆ ಗಂಡು ಮಕ್ಕಳು ಅಂತ ನಾವು ಇದ್ದೇವೆ ಎಂದು ಹೇಳುತ್ತಾನೆ.

ಕಂಠಿ ಮಾತಿಗೆ ಖುಷಿಗೊಂಡ ಪುಟ್ಟಕ್ಕ
ಇದನ್ನು ಕೇಳಿದ ಪುಟ್ಟಕ್ಕಗೆ ಬಹಳ ಖುಷಿಯಾಗಿ ಕಂಠಿಯನ್ನ ತಬ್ಬಿಕೊಳ್ಳುತ್ತಾರೆ. ಇದನ್ನೆಲ್ಲಾ ನೋಡಿದ ಸ್ನೇಹಾಗೆ ಖುಷಿ ಆಗುತ್ತದೆ, ಕಂಠಿ ಮೇಲಿನ ಗೌರವ ಇನ್ನೂ ಹೆಚ್ಚು ಆಗುತ್ತದೆ. ಇನ್ನು ಸಂಜೆಯ ವೇಳೆ ಸಹನಾ ತನ್ನ ಗೆಳತಿಯ ಬಳಿಗೆ ಬರುತ್ತಾಳೆ. ಅಲ್ಲಿ ಆಕೆ ನಡೆದ ವಿಚಾರವನ್ನು ಗೆಳತಿಯ ಬಳಿ ಹೇಳಿದಾಗ ಆಕೆ ಸಹನಾ ಕಿವಿಗೆ ಆಕೆಯ ಬಾಯ್ ಫ್ರೆಂಡ್ ಮಾಡಿದ ಕತೆಯನ್ನು ಹೇಳುತ್ತಾಳೆ. ಇದನ್ನು ಕೇಳಿದ ಸುಮಾನಿಗೆ ಬಹಳ ಕೋಪ ಬರುತ್ತದೆ. ಆದರೂ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ..

ಮುರಳಿ ಮೇಷ್ಟ್ರನ್ನು ಟೆಸ್ಟ್ ಮಾಡುತ್ತಿರುವ ಸಹನಾ
ಇನ್ನು ಸಹನಾ ಗೆಳತಿ ನಿಮ್ಮ ಮುರಳಿ ಮೇಷ್ಟ್ರು ಒಳ್ಳೆಯವರೇ, ಆದರೆ ನಾನು ಅವರಿಗೆ ಮೆಸೇಜ್ ಕಳುಹಿಸುತ್ತೇನೆ ಅವರು ನನಗೆ ರಿಪ್ಲೈ ಮಾಡಿದರೆ ಅವರು ಕೆಟ್ಟವರು ಎಂದು ಅರ್ಥ ಎಂದು ಹೇಳಿ ಮುರಳಿ ಮೇಷ್ಟ್ರುಗೆ ಮೆಸೇಜ್ ಮಾಡುತ್ತಾಳೆ. ಆಗ ಮುರಳಿ ಮೇಷ್ಟ್ರು ಫೋನ್ ಚಾರ್ಜ್ ಮಾಡು ಇಟ್ಟು ಹೋಗುತ್ತಾರೆ. ಇದನ್ನು ನೋಡುತ್ತಿದ್ದ ಮೇಷ್ಟ್ರ ಬಾವ ಆ ಮೆಸೇಜ್ ಗೆ ಹೃದಯದ ಸಿಂಬಲ್ ಕಳುಹಿಸಿ ಮೆತ್ತಗೆ ಸೋಫಾದ ಮೇಲೆ ಬಂದು ಕೂರುತ್ತಾನೆ. ಇದನ್ನು ನೋಡಿದ ಸಹನಾ ಗೆಳತಿ ಹಾಗೂ ಸಹನಾಗೆ ಶಾಕ್ ಆಗುತ್ತದೆ.

ಮೇಷ್ಟ್ರ ಮೆಸೇಜ್ ನೋಡಿ ಸಹನಾ ಶಾಕ್
ಮೇಷ್ಟ್ರು ಇಷ್ಟು ಕೆಟ್ಟವರ ಎಂದು ಸಹನಾ ಜೋರಾಗಿ ಹೇಳುತ್ತಾಳೆ. ಹೃದಯದ ಸಿಂಬಲ್ ಕಳುಹಿಸಿದರು ಬೇರೆ ಇನ್ನೇನು ಮೆಸೇಜ್ ಮಾಡುತ್ತಾ ಇದ್ದರೆ ನನಗೆ ಅನ್ನಿಸುತ್ತದೆ ಮೇಷ್ಟ್ರು ಸರಿ ಇಲ್ಲ ಎಂದು ಹೇಳುತ್ತಾಳೆ. ಆಗ ಸುಮಾ ಕೋಪಗೊಂಡು ಮೇಷ್ಟ್ರು ಹಾಗೇನಿಲ್ಲ, ಬಹಳ ಡಿಸೆಂಟ್ ಕೂಡ ನೀವು ಏನೇನೋ ಹೇಳಿ ನನ್ನ ಅಕ್ಕನ ಮನಸನ್ನು ನಮ್ಮ ಮನಸ್ಸನ್ನು ಕೆಡಿಸಬೇಡಿ ಎನ್ನುತ್ತಾಳೆ. ಇನ್ನು ಕಂಠಿ ಅವನ ಗೆಳೆಯರ ಜೊತೆ ಮಾತನಾಡುತ್ತಾ ಇರುತ್ತಾನೆ. ಆ ವೇಳೆ ಕಂಠಿ ನೆನಪಾಗಿ ಸ್ನೇಹಾ ಕರೆ ಮಾಡುತ್ತಾಳೆ. ಇದನ್ನು ನೋಡಿದ ಕಂಠಿಗೆ ಖುಷಿ ಆಗುತ್ತದೆ. ಕರೆ ಸ್ವೀಕರಸಿ ಮಾತನಾಡುತ್ತಾನೆ. ಶ್ರೀ ನನಗೆ ದೊರೆ ಕರೆ ಮಾಡಿದ್ದರು ಅದಕ್ಕೆ ಕರೆ ಮಾಡಿದೆ ಎಂದು ಹೇಳಿದಾಗ ಕಂಠಿಗೆ ಶಾಕ್ ಆಗುತ್ತದೆ. ಮುಂದೆ ಏನು ಕಾದು ನೋಡಬೇಕಿದೆ .