Puttakkana Makkalu: ಚಂದ್ರು ವರ್ತನೆ ಕಂಡು ಸುಮಾಗೆ ಅಚ್ಚರಿ: ಕಂಠಿ ಗಿಫ್ಟ್ ಸ್ನೇಹಾ ಕೈ ಸೇರುತ್ತಾ ?
ಇದೀಗ ಬಂಗಾರಮ್ಮ ಹೇಗಾದರೂ ಮಾಡಿ ತನ್ನ ಮಗನಿಗೆ ಮದುವೆ ಮಾಡಿ ಬಿಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಇನ್ನು ಗಂಡನ ಬಳಿ ಬಂದು ಅವರನ್ನು ಉಪಚಾರ ಮಾಡುತ್ತಾ ಇರುವಾಗ ಕಂಠಿ ಮದುವೆ ಬಗ್ಗೆ ಬಂಗಾರಮ್ಮ ಪ್ರಸ್ತಾಪ ಮಾಡುತ್ತಾರೆ. ಇದನ್ನು ಕೇಳಿದ ಕಂಠಿ ತಂದೆ ಮಾತ್ರ ಪುಟ್ಟಕ್ಕನ ಮಗಳೇ ಎಂದು ಹೇಳುತ್ತಾರೆ. ಬಂಗಾರಮ್ಮಗೆ ಶಾಕ್ ಆಗುತ್ತದೆ.
ಹೇಗೆ ನನ್ನ ಗಂಡನಿಗೆ ಈ ವಿಚಾರ ತಿಳಿಯಿತು ಎಂದು ಯೋಚನೆ ಮಾಡಲು ಶುರು ಮಾಡುತ್ತಾಳೆ. ಬಂಗಾರಮ್ಮ ತನ್ನ ಗಂಡನ ಬಳಿ ಪ್ರಶ್ನೆ ಕೇಳಿದಾಗ ಮೆತ್ತಗೆ ನುಣುಚಿಕೊಂಡು ಬಿಡುತ್ತಾನೆ. ಇನ್ನೂ ಕಂಠಿ ತಂದೆ ಬಂಗಾರಮ್ಮ ಬಳಿ ಹೇಳುತ್ತಾರೆ. ಪುಟ್ಟಕ್ಕ ಬಹಳ ಒಳ್ಳೆಯವರು. ಹಾಗೆಯೇ ಅವರ ಮಗಳು ಕೂಡ ಒಳ್ಳೆಯವಳು ಆಗಿ ಇರುತ್ತಾಳೆ ಎಂದಾಗ ಮಾತ್ರ ಆ ಮಾತನ್ನು ಬಂಗಾರಮ್ಮ ಸ್ವತಃ ಒಪ್ಪದೇ ಅವಳದೇ ಆದ ವಾದವನ್ನು ಗಂಡನ ಬಳಿ ಮಾಡುತ್ತಾರೆ.

ಇನ್ನು ಪುಟ್ಟಕ್ಕ, ಚಂದ್ರು ಹೇಳಿದ ಮಾತಿಗೆ ಒಪ್ಪಿಗೆ ಕೊಟ್ಟು ಮರುದಿನ ದಿಢೀರನೆ ದೇವಾಲಯಕ್ಕೆ ಹೋಗುತ್ತಾಳೆ. ಸಹನಾ ಮಾತ್ರ ಈ ವಿಚಾರವನ್ನು ಅಪಾರ್ಥ ಮಾಡಿಕೊಂಡು ಇರುತ್ತಾಳೆ. ತನ್ನಿಂದಲೇ ಅಮ್ಮನಿಗೆ ಇಷ್ಟೆಲ್ಲ ಕಷ್ಟ ಎಂದೆಲ್ಲ ಯೋಚನೆ ಮಾಡಿ ಸುಮಾ ಬಳಿ ಹೇಳುತ್ತಾಳೆ.
ಸಹನಾಗೆ ಅವ್ವನದ್ದೇ ಚಿಂತೆ
ಬಂಗಾರಮ್ಮ ನಾನು ಮದುವೆ ಆದ ಬಳಿಕ ಈ ಮನೆಗೆ ಬಂದು ಹೋಗಿ ಮಾಡುತ್ತಾ ಇದ್ರು ಎಂದಾಗ ಸುಮಾ ಅಕ್ಕನ ಬಳಿ ಹೇಳುತ್ತಾಳೆ. ಅಕ್ಕ ಈಗ ಅಮ್ಮ ಮತ್ತು ಬಂಗಾರಮ್ಮ ಬಹಳ ಹತ್ತಿರ ಆಗಿದ್ದಾರೆ ಎಂದು ಹೇಳಿದಾಗ ಅಲ್ಲಿಗೆ ಸ್ನೇಹಾ ಬಂದು ಬಂಗಾರಮ್ಮ ವಿರುದ್ದ ಅಸಮಾಧಾನ ಹೊರ ಹಾಕುತ್ತಾಳೆ.

ಮಾತು ಮಾತಿಗೆ ಕೋಪಗೊಂಡ ಸ್ನೇಹಾ
ಇನ್ನು ಎಲ್ಲರೂ ಮೆಸ್‌ನಲ್ಲಿ ಕೆಲಸ ಮಾಡುತ್ತಾ ಇರುವಾಗ ಮುತ್ತು ಮೆತ್ತಗೆ ಕೇಳುತ್ತಾನೆ. ಈಗೀಗ ಶ್ರೀ ಅವರು ಕಾಣಿಸುತ್ತಿಲ್ಲ ಯಾಕೆ ಏನಾಯಿತು ಎಂದೆಲ್ಲ ಕೇಳಿದಾಗ ಸ್ನೇಹಾಗೆ ಬಹಳ ಕೋಪ ಬಂದು ಊಟ ಮಾಡಿ ಎದ್ದು ಹೋಗುವಂತೆ ಹೇಳುತ್ತಾಳೆ. ಇದನ್ನು ಕೇಳಿದ ಮುತ್ತು ಸುಮ್ಮನಾಗುತ್ತಾನೆ. ಇನ್ನು ಕಂಠಿ ಬಹಳ ಬೇಸರ ಮಾಡಿಕೊಂಡು ತೋಟದಲ್ಲಿ ಕುಳಿತಿರುತ್ತಾನೆ. ಆಗ ಅಲ್ಲಿಗೆ ಬಂದ ಸುಮಾ ಹಾಗೂ ಮುರಳಿ, ಸ್ನೇಹಾ ಮೊದಲ ಸ್ಥಾನ ಬಂದಿರುವುದರ ಬಗ್ಗೆ ಹೇಳುತ್ತಾಳೆ.
ಪುಟ್ಟಕ್ಕನ ಮೆಸ್ ಬಳಿ ಬಂದ ಕಂಠಿ
ಇದನ್ನು ಕೇಳಿದ ಕಂಠಿ ಹಿರಿ ಹಿರಿ ಹಿಗ್ಗುತ್ತಾ. ಸ್ನೇಹಾ ಬಳಿ ಈ ಖುಷಿಯನ್ನು ಶೇರ್ ಮಾಡೋಣ ಎಂದುಕೊಂಡರೂ ಆಕೆ ಮಾತ್ರ ಯಾವುದೇ ಕಾರಣಕ್ಕೂ ಮಾತನಾಡಬಾರದು ಎಂದು ಹೇಳಿರುವುದು ನೆನಪಾಗಿ ಸುಮ್ಮನೆ ಇರುತ್ತಾನೆ. ಆ ಬಳಿಕ ಸುಮಾ ಕೊಟ್ಟ ಕೇಕ್ ತಿಂದು ಖುಷಿ ಪಡುತ್ತಾನೆ. ಇನ್ನೂ ಚಂದ್ರು ಹಾಗೂ ಮುರಳಿ ಪುನಃ ಮನೆಗೆ ಬಂದು ಸ್ನೇಹಾ ಬಳಿ ಕೇಕ್ ಕಟ್ ಮಾಡಲು ಹೇಳುತ್ತಾನೆ.

ಸ್ನೇಹಾ ಮಾತ್ರ ಏನೋ ಕಳೆದುಕೊಂಡ ಹಾಗೆ ಇರುತ್ತಾಳೆ. ಆಕೆಯ ಮುಖದಲ್ಲಿ ನಗು ಬಾಡಿ ಹೋಗಿ ಇರುತ್ತದೆ. ಇನ್ನು ಚಂದ್ರು ಅಣ್ಣನ ಬಲವಂತಕ್ಕೆ ಕೇಕ್ ಕಟ್ ಮಾಡಿ ಎಲ್ಲರಿಗೂ ಕೊಡುತ್ತಾಳೆ. ಆ ವೇಳೆ ಮೆಸ್ ಬಳಿ ಕಂಠಿ ಹಾಗೂ ಆತನ ಗೆಳೆಯ ಬರುತ್ತಾರೆ.
ಸುಮಾ ಬಳಿ ಗಿಫ್ಟ್ ಕಳುಹಿಸಿದ ಕಂಠಿ
ಪುಟ್ಟಕ್ಕನ ಮನೆಯ ಒಳಗೆ ಬರಲು ಧೈರ್ಯ ಇಲ್ಲದೇ ಸುಮನನ್ನು ಕರೆದು ಕಂಠಿ ಗಿಫ್ಟ್ ಒಂದನ್ನು ಕೊಡುತ್ತಾನೆ. ಇದನ್ನು ನೋಡಿದ ಸುಮಾ ಒಂದು ಕೇಕ್ ಪೀಸ್ ಅನ್ನು ಕೊಡುತ್ತಾಳೆ. ಇನ್ನೂ ಸ್ನೇಹಾ ಜೊತೆ ಫೋಟೋ ತೆಗೆದುಕೊಂಡಿದ್ದನ್ನೂ ಚಂದ್ರು, ಭುವನ್‌ಗೆ ಕಳುಹಿಸುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











