ಕಂಠಿ ಮೇಲೆ ಕಾಳಿಯ ಕೆಂಗಣ್ಣು, ಸ್ನೇಹಾ ಸಹವಾಸದಿಂದಲೇ ಕಂಠಿ ಜೀವಕ್ಕೆ ಕುತ್ತು

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ನೋಡುಗರ ಮನ ಸೆಳೆಯುತ್ತಿದೆ. ಪುಟ್ಟಕ್ಕನ ಮೆಸ್ ಅನ್ನು ಹೇಗಾದರೂ ಮಾಡಿ ಅಗ್ನಿಗೆ ಆಹುತಿ ನೀಡಬೇಕು ಎಂದು ಕಾಯುತ್ತಿದ್ದಾಳೆ ರಾಜಿ. ಇದೀಗ ಈ ವಿಚಾರವನ್ನು ಕಾಳಿ ಬಳಿ ಹೇಳಿಕೊಂಡಿದ್ದಾಳೆ. ಅಕ್ಕನ ಮಾತು ಕೇಳಿದ ಕಾಳಿ, ಸಹನಾ ತನ್ನ ಪಾಲಾಗುತ್ತಿದ್ದಾಳೆ ಎಂದು ತಿಳಿದು ಕಾಳಿ ಪುಟ್ಟಕ್ಕನ ಮೆಸ್ ಅನ್ನು ಸುಟ್ಟು ಹಾಕಲು ನಿರ್ಧಾರ ಮಾಡಿದ್ದಾನೆ. ಗೋಪಾಲ ಅದೆಷ್ಟೆ ಬೇಡ ಎಂದು ಹೇಳಿದರು ಅದನ್ನು ಕೆಲಿಸಿಕೊಳ್ಳದೆ ರಾಜಿ ಮಾತ್ರ ತಾನು ಮಾಡುತ್ತಿರುವುದು ಸರಿ ಎಂದು ಧೃಡ ನಿರ್ಧಾರ ಮಾಡಿದ್ದಾಳೆ.

ಸ್ನೇಹಾ, ಸಹನಾ ಹಾಗೂ ಸುಮಾ ಮೂವರು ದೊರೆಯನ್ನು ಹೇಗೆ ಕಂಡು ಹುಡುಕುವುದು ಎಂದು ಯೋಚನೆಯಲ್ಲಿ ಮಗ್ನರಾಗಿರುತ್ತಾರೆ. ಬಳಿಕ ಸಹನಾ ಹಾಗೂ ಸ್ನೇಹಾ ಹೊಲದ ಕಡೆ ಹೋಗುವುದು ಎಂದು ಡಿಸೈಡ್ ಆಗುತ್ತದೆ. ಈ ವೇಳೆ ಪುಟ್ಟಕ್ಕನ ಮೆಸ್ ಬಳಿ ಕಾಳಿ ಹಾಗೂ ಆತನ ಗೆಳೆಯ ಬರುತ್ತಾರೆ. ಬಂದು ಸೀಮೆ ಎಣ್ಣೆಯನ್ನು ಪುಟ್ಟಕ್ಕನ ಮೆಸ್‌ಗೆ ಹಾಕುವ ವೇಳೆ ಸ್ನೇಹಾ ಹಾಗೂ ಸಹನಾ ಮನೆಯಿಂದ ಮೆತ್ತಗೆ ಹೊರ ಬರುತ್ತಾರೆ. ಇದನ್ನು ನೋಡಿದ ಕಾಳಿ ಇವರೆಕೆ ಈಗ ಹೊರಗೆ ಬರುತ್ತಿದ್ದಾರೆ ಎಂದು ಅಡಗಿ ಕುಳಿತುಕೊಳ್ಳುತ್ತಾರೆ. ಇದನ್ನೆಲ್ಲ ಗಮನಿಸದ ಸ್ನೇಹಾ ಮನೆಯಿಂದ ಹೊರ ಹೋಗುತ್ತಾರೆ.

ಕಂಠಿಗೆ ಕರೆ ಮಾಡಿ ಕರೆದ ಸ್ನೇಹಾ

ಕಂಠಿಗೆ ಕರೆ ಮಾಡಿ ಕರೆದ ಸ್ನೇಹಾ

ಕಂಠಿಗೆ ಕರೆ ಮಾಡಿ ತಾನು ಹೊಲದ ಬಳಿ ಬರುತ್ತಾ ಇದ್ದೇನೆ ನೀನು ಬಾ ಎಂದು ಹೇಳಿ ಕರೆ ಕಟ್ ಮಾಡಿ ಇರುತ್ತಾಳೆ. ಇನ್ನು ಸ್ನೇಹಾ ಹಾಗೂ ಸಹನಾ ಎತ್ತ ಹೋಗುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಗೆಳೆಯನ ಜೊತೆ ಹೋಗಲು ಮುಂದಾದಾಗ ಕಾಳಿ ಗೆಳೆಯ ಮಾತ್ರ ನಾನು ಬರುವುದಿಲ್ಲ ನನಗೆ ಅಗತ್ಯ ಇಲ್ಲ ಎನ್ನುವ ಹಾಗೆ ಮಾತನಾಡಿ ಅಲ್ಲಿಂದ ಹೋಗುತ್ತಾನೆ. ಗೆಳೆಯನ ವರ್ತನೆ ಕಂಡು ಕ್ಯಾರೇ ಎನ್ನದ ಕಾಳಿ ಸ್ನೇಹಾ ಹಾಗೂ ಸಹನಾ ಹಿಂದೆ ಹೋಗುತ್ತಾನೆ.

ಬಂಗಾರಮ್ಮಗೆ ಕಂಠಿಯದ್ದೆ ಯೋಚನೆ

ಬಂಗಾರಮ್ಮಗೆ ಕಂಠಿಯದ್ದೆ ಯೋಚನೆ

ಇನ್ನು ಬಂಗಾರಮ್ಮ ಕಂಠಿಗೆ ರಾತ್ರಿ ಹೊತ್ತು ಹೊರಗೆ ಹೋಗಬಾರದು ಎಂದು ತಾಕೀತು ಮಾಡಿ ಇರುತ್ತಾರೆ. ಸ್ನೇಹಾ ಕರೆ ಮಾಡಿ ಮಾತನಾಡಲು ಇದೆ ಎಂದ ಮೇಲೂ ಕಂಠಿ ಗೆ ತಡೆಯಲಾಗುವುದಿಲ್ಲ. ಕಂಠಿ ಅಮ್ಮನನ್ನು ಮಲಗಿಸಿ ರೂಮ್ ಗೆ ಹೋಗುವಾಗ ಅಲ್ಲಿ ವಸುವನ್ನು ಕಂಡು ಕೊಂಚ ಗಾಬರಿ ಬೀಳುತ್ತಾನೆ. ಬಳಿಕ ನಿಜ ವಿಚಾರವನ್ನು ವಸು ಜೊತೆ ಹೇಳಿ ಮನೆಯಿಂದ ಹೊರ ನಡೆಯುತ್ತಾನೆ. ಕಂಠಿ ಹಾಗೂ ಆತನ ಗೆಳೆಯರು ಹೊಲದ ಬಳಿ ನಿಂತುಕೊಂಡು ಯಾಕೆ ಬರ ಹೇಳಿರಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಆ ವೇಳೆ ಅಲ್ಲಿಗೆ ಸ್ನೇಹಾ ಹಾಗೂ ಸಹನಾ ಬರುತ್ತಾಳೆ.

ದೊರೆಯನ್ನು ಕಂಡು ಹಿಡಿಯಲು ಸ್ನೇಹಾ ಪ್ಲಾನ್

ದೊರೆಯನ್ನು ಕಂಡು ಹಿಡಿಯಲು ಸ್ನೇಹಾ ಪ್ಲಾನ್

ಕಂಠಿ ಬಳಿ ದೊರೆಯನ್ನು ಹೇಗಾದರೂ ಮಾಡಿ ನೋಡ ಬೇಕು ಎಂದು ಹೇಳುತ್ತಾ ಇರುತ್ತಾರೆ. ಬಳಿಕ ಒಂದು ಐಡಿಯಾವನ್ನು ಹೇಳುತ್ತಾಳೆ ಇದನ್ನೆಲ್ಲ ಕೇಳಿ ಕಂಠಿಗೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನಾಗುತ್ತಾನೆ. ಇನ್ನು ಸಹನಾಳನ್ನು ನೋಡಿದ ಸ್ನೇಹಾ ಹೇಳುತ್ತಾಳೆ ಅಕ್ಕ ಇವತ್ತು ಮುರಳಿ ಮೇಷ್ಟ್ರು ಬಂದ ಹಾಗೆಯೇ ಅವರು ಬರುವುದಿಲ್ಲ ಬಿಡು ಎಂದಾಗ ಕೊಂಚ ಬೇಸರ ಆಗುತ್ತದೆ. ಆದರೆ ಅದನ್ನೆಲ್ಲ ತೋರಿಸಿಕೊಳ್ಳದೆ ಖಂಡಿತ ಬಂದೆ ಬರುತ್ತಾರೆ ಎಂದು ಕಾಯುತ್ತಾ ಇರುತ್ತಾಳೆ. ಆಗ ಮುರಳಿ ಮೇಷ್ಟ್ರು ಬರುತ್ತಿರುವುದು ಕಾಣಿಸುತ್ತದೆ. ಮೇಷ್ಟ್ರನ್ನ ನೋಡಿ ಸಹನಾ ಗೆ ಖುಷಿ ಆಗುತ್ತದೆ. ನೇರವಾಗಿ ಸಹನಾ ಬಳಿ ಬಂದು ಮಾತನಾಡುತ್ತಾರೆ. ಇದನ್ನು ನೋಡಿದ ಸಹನಾ ಮೊಗದಲ್ಲಿ ಕೊಂಚ ನಗು ಮೂಡುತ್ತದೆ.

ಕಂಠಿಗೆ ಹೊಟ್ಟೆಗೆ ಚಾಕು

ಕಂಠಿಗೆ ಹೊಟ್ಟೆಗೆ ಚಾಕು

ಇನ್ನು ಇದನ್ನೆಲ್ಲ ನೋಡಿದ ಕಾಳಿ, ಸ್ನೇಹಾ, ಸಹನಾ ತಲೆ ಕೆಡಿಸಿ ಮಾತನಾಡಲು ಹೇಳುತ್ತಿದ್ದಾಳೆ ಎಂದು ಅಂದುಕೊಳ್ಳುತ್ತಾನೆ. ಬಳಿಕ ಆತನ ರೌಡಿ ಗ್ಯಾಂಗ್‌ಗೆ ಕರೆ ಮಾಡಿ ಕಂಠಿ ಇಲ್ಲೇ ಇದ್ದಾನೆ ಇವತ್ತೇ ಆತನ ಕತೆ ಮುಗಿಸಿ ಎಂದು ಹೇಳುತ್ತಾನೆ. ಆ ವೇಳೆ ಕಂಠಿ ಗೆಳೆಯರನ್ನ ಬಿಟ್ಟು ಕೊಂಚ ದೂರ ಬರುತ್ತಾನೆ ಆಗ ಅಲ್ಲಿಗೆ ಬಂದ ರೌಡಿ ಗ್ಯಾಂಗ್ ಕಂಠಿಯನ್ನು ಅಟ್ಯಾಕ್ ಮಾಡುತ್ತದೆ. ಬಳಿಕ ಕಂಠಿ ಹೊಟ್ಟೆಗೆ ಚಾಕುವಿನಿಂದ ಜೋರಾಗಿ ತಿವಿಯುತ್ತಾರೆ. ಇನ್ನೂ ಬಂಗಾರಮ್ಮ ಮಗನ ಬಗ್ಗೆ ಕೆಟ್ಟ ಕನಸು ಕಂಡು ಜೋರಾಗಿ ಚೀರುತ್ತಾರೆ. ಇದನ್ನು ಕೇಳಿದ ಆಕೆಯ ಗಂಡ ಬಂಗಾರ ಕನಸು ಬಿತ್ತಾ ಎಂದೆಲ್ಲ ಕೇಳುತ್ತಾನೆ. ಇದನ್ನು ಕೇಳಿದ ಬಂಗಾರಮ್ಮ ನಾನೊಮ್ಮೆ ಮಗನ ಬಳಿ ಮಾತನಾಡಿಕೊಂಡು ಬರುತ್ತೇನೆ ಎಂದು ಮಗನ ರೂಮಿಗೆ ಹೋಗಿ ಕಂಠಿ ಇಲ್ಲದನ್ನು ಕಂಡು ಬಹಳ ಭಯ ಪಡುತ್ತಾಳೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 18th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X