ಯಾರ ಹೂವು ಯಾರ ಮುಡಿಗೋ? ಪ್ರೇಮಕ್ಕೆ ಅಗ್ನಿಪರೀಕ್ಷೆ
ಪುಟ್ಟಕ್ಕ, ಸ್ನೇಹಾಗೆ ಹೊಸ ಡ್ರೆಸ್ ಹಾಕಿಕೊಳ್ಳಲು ಹೇಳುತ್ತಾಳೆ. ಸ್ನೇಹಾ ರೂಮಿಗೆ ತೆರಳಿ ಕಬೋರ್ಡ್ ತೆಗೆದು ನೋಡಿದಾಗ ಕಂಠಿ ಕೊಟ್ಟ ಸೀರೆ ನೋಡುತ್ತಾಳೆ. ಅದನ್ನು ಕೈಯಲ್ಲಿ ಹಿಡಿದುಕೊಂಡು ಕಂಠಿ, ಮೇಷ್ಟ್ರಿಗೆ ಸಹಾಯ ಮಾಡಿದ ಎಂಬ ಒಂದೇ ಕಾರಣಕ್ಕೆ ಸರಿಯಾಗಿ ಬೈದು ಇನ್ನೂ ಮೇಲೆ ಮೆಸ್‌ಗೆ ಬರಬಾರದು ಎಂದು ಹೇಳಿರುವುದು ನೆನಪಾಗಿ ಸೀರೆ ಇಡಲು ನಿರ್ಧಾರ ಮಾಡಿದರು ಮನಸ್ಸು ತಡೆಯದೆ ಆ ಸೀರೆಯನ್ನು ಉಟ್ಟುಕೊಳ್ಳುತ್ತಾಳೆ. ಸೀರೆ ಉಟ್ಟು ಹೊರ ಬಂದ ಸ್ನೇಹಾಳನ್ನು ನೋಡಿದ ಪುಟ್ಟಕ್ಕ ಬೆರಗಾಗಿ ಬಿಡುತ್ತಾರೆ.
ಈ ವೇಳೆ ಅಲ್ಲಿಗೆ ಬಂದ ಶಾಂತಕ್ಕ ಕೂಡ ಆಶ್ಚರ್ಯದಿಂದ ಸ್ನೇಹಾ ಮುಖ ನೋಡಿ ಖುಷಿ ಪಡುತ್ತಾರೆ. ಈ ವೇಳೆ ಶಾಂತಕ್ಕ ಹೇಳುತ್ತಾರೆ ಯವ್ವಿ ಯವ್ವಿ ಏನವ್ವ ಸ್ನೇಹಾ ಗಂಡಿನ ಕಡೆಯವರು ಸಹನಾ ನೋಡಲು ಬರುತ್ತಿದ್ದಾರಾ ಅಥವಾ ನಿನ್ನ ನೋಡಲು ಬರುತ್ತಾ ಇದ್ದಾರ? ಈ ರೀತಿ ತಯಾರಾಗಿ ಬಿಟ್ಟಿದ್ದಿಯ ಅಲ್ವಾ. ಗಂಡಿನ ಕಡೆಯವರು ನಿನ್ನೆ ಒಪ್ಪಿಕೊಂಡು ಬಿಟ್ಟರೆ ಏನು ಮಾಡುತ್ತೀಯಾ ಎಂದಾಗ ಸ್ನೇಹ ಹೇಳುತ್ತಾಳೆ. ಏನು ಹೇಳುತ್ತಿದ್ದಿಯ ಶಾಂತಕ್ಕ. ನಾನು ಸೀರೆ ಉಡುವಾಗಲೆ ಎರಡು ಮನಸ್ಸಿನಿಂದ ಉಟ್ಟುಕೊಂಡೆ. ಸರಿ ಬಿಡು ನಾನು ಚೂಡಿ ದಾರ ಹಾಕಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.

ಮಗಳ ಅಂದ ಹೊಗಳಿದ ಪುಟ್ಟಕ್ಕ
ಪುಟ್ಟಕ್ಕ, ಸ್ನೇಹಾಳನ್ನು ತಡೆದು ಎಷ್ಟು ಮುದ್ದಾಗಿ ಕಾಣುತ್ತಿದ್ದಿಯ, ಈ ಶಾಂತ ಯಾವಾಗಲೂ ಹೀಗೆ ಯಾವ ಟೈಮ್‌ನಲ್ಲಿ ಎನು ಹೇಳಬೇಕು ಗೊತ್ತಾಗಲ್ಲ ಎಂದು ಹೇಳುತ್ತಾಳೆ. ಸಹನಾ ಇನ್ನೂ ತಯಾರಾಗಿಲ್ವಾ? ಅಯ್ಯೋ ನೋಡಿಕೊಂಡು ಬಾ ಹೋಗು ಎಂದು ಹೇಳುತ್ತಾಳೆ ಪುಟ್ಟಕ್ಕ. ಬಳಿಕ ಸಹನಾ ಬಳಿಗೆ ಸ್ನೇಹಾ ತೆರಳುತ್ತಾಳೆ. ಇನ್ನು ಬಂಗಾರಮ್ಮನ ಮನೆಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥದ ಸಂಭ್ರಮ ಮನೆ ಮಾಡಿದೆ. ಆದರೆ ಕಂಠಿಗೆ ಹಾಗೂ ಆತನ ತಂದೆಗೆ ವಸುಗೆ ಯಾರಿಗೂ ಈ ಮದುವೆ ಇಷ್ಟ ಇಲ್ಲ ಆದರೂ ಅಮ್ಮನ ಗೌರವಕ್ಕೆ ಕುಂದು ಬರಬಾರದು ಎಂದು ಒಪ್ಪಿಕೊಳ್ಳುತ್ತಾರೆ. ಇನ್ನು ಬಂಗಾರಮ್ಮ ಕೂಡ ಕೊಟ್ಟ ಮಾತಿಗೆ ಎಂದಿಗೂ ತಪ್ಪಲ್ಲ ಎಂದು ಹಠ ಹಿಡಿದು ಕೂತು ಬಿಟ್ಟಿದ್ದಾಳೆ ಆದರೆ ಕಂಠಿ ಹಾಗೂ ಪೂರ್ವಿ ನಿಶ್ಚಿತಾರ್ಥವನ್ನು ಪೂರ್ವಿ ತಂದೆಯೇ ನಿಲ್ಲಿಸುವ ಹಂತಕ್ಕೆ ಬಂದಿದ್ದಾರೆ.

ಬಂಗಾರಮ್ಮನ ಮನೆಯಲ್ಲೂ ನಿಶ್ಚಿತಾರ್ಥ
ಇದನ್ನು ಕೇಳಿದ ಬಂಗಾರಮ್ಮ ಏನು ಮಾಡುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ. ಇತ್ತ ವಸು ಚಂದ್ರುನ ನೆನೆದು ಅಳುತ್ತಾಳೆ. ಆದರೆ ಅತ್ತ ಚಂದ್ರು, ಸ್ನೇಹಾ ಹಾಗೂ ಕಂಠಿಯನ್ನು ದೂರ ಮಾಡಬೇಕು ಎಂದು ಒದ್ದಾಡುತ್ತಿದ್ದಾಳೆ. ಇತ್ತ ನಂಜವ್ವ ಮಾತ್ರ ಆರಾಮದಲ್ಲಿ ಇದ್ದಾಳೆ. ಅಲ್ಲಿಗೆ ಬಂದ ಚಂದ್ರು ಬಳಿ ಬಂಗಾರಮ್ಮನ ಮಗನಿಗೆ ಇಂದು ನಿಶ್ಚಿತಾರ್ಥ. ಪುಟ್ಟಕ್ಕನ ಮನೆಗೆ ಬಂಗಾರಮ್ಮ ಬರುವುದಿಲ್ಲ. ಹಂಗೆ ನಮ್ಮ ಮನೆಯಲ್ಲೂ ಒಂದು ಶುಭ ಕಾರ್ಯ ನಡೆದು ಬಿಟ್ಟರೆ ಎಷ್ಟು ಒಳ್ಳೆಯದು ಇತ್ತು ಎಂದು ಹೇಳುತ್ತಾ ಇರುತ್ತಾಳೆ.

ಮದುವೆ ನಿಲ್ಲಿಸಲು ಕಾಳಿ ಸಜ್ಜು
ಇನ್ನು ಚಂದ್ರು ಮಾತ್ರ ಬೇರೆ ಕೆಲಸ ಇದೆ ನಾನು ಪುಟ್ಟಕ್ಕನ ಮನೆಗೆ ಬರುವುದಿಲ್ಲ ಎಂದು ಹೊರ ನಡೆಯುತ್ತಾನೆ. ಇತ್ತ ಕಾಳಿ ಸಹನಾ ಮದುವೆನಾ ಹೇಗಾದರೂ ನಿಲ್ಲಿಸಲೇ ಬೇಕು ಎಂದು ಪಣ ತೊಟ್ಟು ರಸ್ತೆ ಯಲ್ಲಿ ನಿಂತಿದ್ದಾನೆ. ಪುಟ್ಟಕ್ಕನ ಗಂಡ ಮಾತ್ರ ಮೆಸ್ ಬಳಿ ಬಂದು ಈ ಎಲ್ಲಾ ವಿಚಾರವನ್ನು ಪುಟ್ಟಕ್ಕ ಬಳಿ ಹೇಳಿ ರಾಜಿ ಮತ್ತು ಕಾಳಿ ಪ್ಲಾನ್ ಫ್ಲಾಪ್ ಮಾಡಲು ಬಂದಿದ್ದಾನೆ ಆದರೆ ಮಾಂಜಕ್ಕಳನ್ನು ನೋಡಿ ಪುಟ್ಟಕ್ಕನ ಗಂಡ ಹೆದರಿ ಪುಟ್ಟಕ್ಕನ ಮೊಬೈಲ್‌ಗೆ ಕರೆ ಮಾಡುತ್ತಾನೆ ಆದರೆ ರೀಚ್ ಆಗುವುದಿಲ್ಲ.

ಮುರಳಿ ಮೇಷ್ಟ್ರಿಗೂ ಬೇರೆಡೆ ಮದುವೆ!
ಮೇಷ್ಟ್ರ ತಂದೆ ಹುಡುಗಿ ಕಡೆಯವರಿಗೆ ಫೋನ್ ಮಾಡಿ ಹೆಣ್ಣು ನೋಡಲು ಬರುತ್ತಿದ್ದೇವೆ ಎಂದು ಖುಷಿ ಯಿಂದ ಹೇಳುತ್ತ ಫೋನ್ ಇಡುತ್ತಾರೆ. ಸಪ್ಪೆ ಮುಖ ಮಾಡಿ ಬಂದ ಮೇಷ್ಟ್ರನ್ನು ನೋಡಿ ಏನೋ ನೀನು ಮದುವೆ ಆಗುವ ಹುಡುಗಿ ಒಬ್ಬಳೇ ಮಗಳು ಕಾರು ಬಂಗಲೆ ಬೆಂಗಳೂರಲ್ಲಿ ಒಂದು ಸೈಟು ತೆಗೆದುಕೊಡುತ್ತಾರೆ ನಿನ್ನ ಲೆವೆಲ್ ಇದು, ಮುಸುರೆ ತಿಕ್ಕೊರನ್ನು ಮದುವೆ ಆದರೆ ಏನು ಸಿಗದು ಎಂದು ಹೇಳಿದಾಗ ಮೇಷ್ಟ್ರ ಮುಖ ಇನ್ನೂ ಬೇಸರ ಮಾಡಿಕೊಳ್ಳುತ್ತಾರೆ. ಇನ್ನು ಇದನ್ನು ನೋಡಿದ ಮೇಷ್ಟ್ರ ತಂದೆ ಏನಾಯ್ತು ಇವನಿಗೆ ಎಂದಾಗ ಮೇಷ್ಟ್ರ ತಾಯಿ ಹೇಳುತ್ತಾರೆ ಸರಿಯಾಗುತ್ತೆ ಬಿಡಿ ಎಂದು ಹೇಳುತ್ತಾಳೆ. ಮುಂದೆ ಎನು ಕಾದು ನೋಡಬೇಕಿದೆ.


Click it and Unblock the Notifications











