Puttakkana Makkalu :ಕಂಠಿ ಮನೆಯಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬ ಆಚರಣೆ, ತುಪ್ಪದ ದೀಪ ಹಚ್ಚಿದ ಸ್ನೇಹಾ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಉತ್ತಮವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಸ್ನೇಹಾ ಕಂಠಿ ಮನೆಗೆ ಆಗಮಿಸಿದ್ದಾಳೆ. ಬದುಕು ಹೇಗೆ ಇರಲಿ ಸಿಹಿ ಇರಲಿ ಕಹಿ ಇರಲಿ ಅದೆಲ್ಲವನ್ನೂ ನುಂಗಿ ಜೀವನ ಸಾಗಿಸಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನೂ ಚೆನ್ನಾಗಿರುವ ಸೀರೆ ಧರಿಸಿ ಗೌರಿ ಹಬ್ಬ ಹಾಗೂ ಗಣೇಶ ಹಬ್ಬ ತನ್ನ ಗಂಡನ ಮನೆಯಲ್ಲಿ ಆಚರಣೆ ಮಾಡಬೇಕು ಎಂದುಕೊಂಡು ಬಂದಿದ್ದಾಳೆ ಸ್ನೇಹಾ.
ಅದಕ್ಕಾಗಿ ಬೇಗ ಬೇಗ ಮನೆಯವರನ್ನು ಹೊರಡಿಸಿಕೊಂಡು ಬಂದಿದ್ದಾಳೆ. ತಾಯಿ ಹಾಗೂ ತಂಗಿ ಸ್ನೇಹಾ ಸಾರಿಯುಟ್ಟು ಅದ್ಭುತವಾಗಿ ಕಾಣುತ್ತಾ ಇರುತ್ತಾರೆ. ಅವರಿಬ್ಬರನ್ನು ನೋಡಿದ ಸ್ನೇಹಾ ಮಾತ್ರ ಬಹಳ ಖುಷಿಯಲ್ಲಿ ಇರುತ್ತಾಳೆ. ಇನ್ನೂ ಸ್ನೇಹಾ ಏನು ಮಾತನಾಡದೆ ಅಮ್ಮ ನಾವು ಬಂಗಾರಮ್ಮ ಅವರ ಮನೆಗೆ ಹೋಗೋಣ. ಅಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಮಾಡೋಣ ಎಂದು ಹೇಳುತ್ತಾಳೆ.

ಇದನ್ನು ಕೇಳಿ ಪುಟ್ಟಕ್ಕಗೆ ಬಹಳ ಖುಷಿ ಆಗುತ್ತದೆ. ಪುಟ್ಟಕ್ಕ ಮಾತ್ರ ಎನು ಮಾತನಾಡದೆ ಮಗಳ ಜೊತೆ ಮಗಳ ಮನೆಗೆ ತೆರಳುತ್ತಾರೆ. ಪುಟ್ಟಕ್ಕ ಹಾಗೂ ಆಕೆಯ ಮಕ್ಕಳನ್ನು ನೋಡಿದ ಬಂಗಾರಮ್ಮಗೆ ಕೊಂಚ ಶಾಕ್ ಆಗುತ್ತದೆ. ಆದರೆ, ಬಂಗಾರಮ್ಮ ತಾಯಿಗೆ ಬಹಳ ಖುಷಿ ಆಗುತ್ತದೆ ಅವರನ್ನು ಆದರದಿಂದ ಸ್ವಾಗತ ಮಾಡುತ್ತಾರೆ. ಪುಟ್ಟಕ್ಕ ಮಾತ್ರ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ.
ಅಜ್ಜಿ ಮಾತಿಗೆ ಖುಷಿ ಪಟ್ಟ ಪುಟ್ಟಕ್ಕ
ಇನ್ನೂ ಕಂಠಿ ಅಜ್ಜಿ ಸ್ನೇಹಾ ಬಳಿ ಗಣೇಶ ದೇವರಿಗೆ ದೀಪ ಹಚ್ಚಲು ಹೇಳುತ್ತಾಳೆ. ಅಜ್ಜಿಯ ಮಾತಿನ ಹಾಗೆಯೇ ಸ್ನೇಹಾ ಗಣೇಶ ದೇವರಿಗೆ ದೀಪ ಹಚ್ಚುತ್ತಾರೆ. ಇದನ್ನು ನೋಡಿದ ಬಂಗಾರಮ್ಮ ಸುಮ್ಮನೆ ಇರುತ್ತಾರೆ. ಯಾಕೆಂದರೆ ಆಕೆಗೆ ಅಮ್ಮನ ಬಳಿ ಎನು ಹೇಳಲಾಗದ ಸ್ಥಿತಿ ಅದಕ್ಕೆ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಇನ್ನೂ ಸ್ನೇಹಾ ಕುತ್ತಿಗೆಯಲ್ಲಿ ಅರಶಿನ ದಾರ ಇರುವುದನ್ನು ಕಂಡು ಕಂಠಿ ಅಜ್ಜಿ ಪ್ರಶ್ನೆ ಮಾಡುತ್ತಾರೆ.
ತಾಳಿ ಶಾಸ್ತ್ರ ಮಾಡಲು ಹೇಳಿದ ಅಜ್ಜಿ
ಏನಾಯಿತು ಪುಟ್ಟಕ್ಕ ಸ್ನೇಹಾ ಕುತ್ತಿಗೆಯಿಂದ ಅರಶಿನ ದಾರ ತೆಗೆಯಲಿಲ್ಲವೆ ಎಂದೆಲ್ಲ ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಹೌದು ಆಕೆಯ ಕುತ್ತಿಗೆಗೆ ತಾಳಿ ಬಿದ್ದ ಬಳಿಕ ಒಂದಲ್ಲ ಒಂದು ಅಡಚಣೆ ಆಗುತ್ತಾ ಬಂದಿದೆ. ಆ ಕಾರಣದಿಂದ ನನಗೆ ತಾಳಿ ಬದಲಾವಣೆ ಮಾಡಲು ಆಗಲಿಲ್ಲ ಎಂದು ಬೇಸರದಿಂದ ಹೇಳುವಾಗ ಕಂಠಿ ಅಜ್ಜಿ ಸಮಾಧಾನ ಮಾಡುತ್ತಾರೆ.

ಕಂಠಿ ಮೇಲೆ ಸ್ನೇಹಾಗೆ ಒಲವು
ಆ ಬಳಿಕ ಅವರು ನಾವು ಯಾರು ಕಂಠಿ ಸ್ನೇಹಾ ಮದುವೆ ನೋಡಲಿಲ್ಲ ಈ ಮೂಲಕ ಅವರಿಬ್ಬರ ಮದುವೆ ನೋಡೋಣ ಎಂದು ಹೇಳುತ್ತಾರೆ. ಇದನ್ನು ಕೇಳಿದ ಬಂಗಾರಮ್ಮ ಕೊಂಚ ಶಾಕ್ ಆಗುತ್ತಾರೆ. ಆ ವೇಳೆ ಅವರು ಎನು ಮಾತನಾಡಲು ಆಗದೆ ಸುಮ್ಮನೆ ಇರುತ್ತಾರೆ. ಆದೆ ಹೊತ್ತಿಗೆ ಅರ್ಚಕರು ಒಂದು ದೇವರಿಗೆ ಪೂಜೆ ಮಾಡಿದ ಬಳಿಕ ತಾಳಿ ಶಾಸ್ತ್ರ ಮಾಡಲು ಗಂಡೇ ಬರಲಿಲ್ಲ ಎಂದು ಹೇಳುತ್ತಾರೆ. ಅದನ್ನು ಕೇಳಿದ ಮನೆ ಮಂದಿಗೆ ಕೊಂಚ ಗಲಿಬಿಲಿ ಆಗುತ್ತದೆ.
ಕಂಠಿ ಮೇಲೆ ಸ್ನೇಹಾ ಕಾಳಜಿ ಕಂಡು ಖುಷಿಪಟ್ಟ ಮನೆ ಮಂದಿ
ಇನ್ನೂ ಕಂಠಿ ಮನೆಗೆ ಬಂದು ವಸು ನೀರು ಕೊಡು ಎಂದು ಹೇಳುತ್ತಾನೆ. ಅದಕ್ಕೆ ಸ್ನೇಹಾ ಬಂದು ಕಂಠಿಗೆ ನೀರು ಕೊಡುತ್ತಾಳೆ. ಇದನ್ನು ನೋಡಿ ಕಂಠಿಗೆ ಬಹಳ ಖುಷಿ ಆಗುತ್ತದೆ. ಇನ್ನೂ ಕಂಠಿ ಕೈಯಲ್ಲಿ ರಕ್ತ ನೋಡಿ ಬಂಗಾರಮ್ಮ ಆತಂಕ ಪಡುತ್ತಾರೆ. ಆದರೆ ಸ್ನೇಹಾಗೆ ಮಾತ್ರ ಜೀವ ಹೋದ ಹಾಗೆ ಆಗುತ್ತದೆ. ಏನಾಯಿತು ಎಂದೆಲ್ಲ ಗಾಬರಿಯಿಂದ ಪ್ರಶ್ನೆ ಮಾಡುತ್ತಾಳೆ. ಇದನ್ನು ನೋಡಿದ ಮನೆ ಮಂದಿಗೆ ಖುಷಿ ಆಗುತ್ತದೆ. ಕಂಠಿ ಮೇಲೆ ಸ್ನೇಹಾ ಕಾಳಜಿ ನೋಡಿ ಕೊಂಚ ಮಟ್ಟಿಗೆ ಪುಟ್ಟಕ್ಕ ಸಮಾಧಾನ ಪಟ್ಟುಕೊಂಡಿದ್ದಾಳೆ.


Click it and Unblock the Notifications











