ಖೊ-ಖೊ ಅಂಗಳಕ್ಕೆ ಪುಟ್ಟಕ್ಕ: ಅಮ್ಮನ ನೋಡಿ ಸುಮಾಗೆ ಶಾಕ್!
ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಮುರಳಿ ಮೇಷ್ಟ್ರು ಸಹನಾ ಲವ್ ಸ್ಟೋರಿ ನಡೆಯುತ್ತಿದೆ. ಸುಮಾಗೆ ಖೊ-ಖೊ ಸ್ಪರ್ಧೆಯಲ್ಲಿ ಏನಾದರು ಸಾಧನೆ ಮಾಡಬೇಕು ಹಂಬಲ ಈಗ ಆಕೆಗೆ ಕೋಚ್ ಆಗಿ ಪುಟ್ಟಕ್ಕ ಬಂದಿದ್ದಾಳೆ. ಪುಟ್ಟಕ್ಕ ಸಣ್ಣ ವಯಸ್ಸಿನಿಂದಲೂ ಖೊ-ಖೊ ಆಟಗಾರ್ತಿ ಆದರೆ ಈ ವಿಚಾರ ಸ್ವತಃ ಆಕೆಯ ಮಕ್ಕಳಿಗೆ ತಿಳಿದಿಲ್ಲ.
ಆದರೆ ಈಗ ಸತ್ಯ ತಿಳಿದುಕೊಳ್ಳುವ ಸಮಯ ಬಂದಿದೆ. ಈ ಹಿಂದೆ ಮಕ್ಕಳಿಗೆ ಸಿಕ್ಕ ಪ್ರಶಸ್ತಿ ಪತ್ರ ಪುಟ್ಟಕ್ಕನದ್ದೇ ಎಂದು ಸುಮಾಗೆ ತಿಳಿಯುವ ದಿನ ಬಂದಿದೆ. ಇತ್ತ ಮುರಳಿ ಮೇಷ್ಟ್ರ ಮೇಲೆ ಸಹನಾಗೆ ಲವ್ ಆಗಿದೆ. ಪ್ರೀತಿ ಮಾಡೋದು ಮಾಡಿ ಆಗಿದೆ ಆದರೆ ಇದನ್ನು ಮನೆಯವರ ಬಳಿ ಹೇಳಲು ಸಹನಾಗೆ ಭಯ. ಮನೆಯಲ್ಲಿ ಅಮ್ಮ ತಂಗಿಯಂದಿರು ಏನನ್ನುತ್ತಾರೆ ಎಂದು ಯೋಚಿಸುತ್ತಾ ಭಯ ಭೀತಗೊಳ್ಳುತ್ತಿದ್ದಳು.. ಇನ್ನೂ ಇದನ್ನೆಲ್ಲ ಗಮನಿಸಿದ ಸುಮಾ ಮುರಳಿ ಮೇಷ್ಟ್ರು ಹಳ್ಳಿ ರಸ್ತೆಯಲ್ಲಿ ಕಾಣ ಸಿಕ್ಕಾಗ ಹೇಳುತ್ತಾಳೆ.

ತಪ್ಪಿನ ಅರಿವಾಗಿ ಸಹನಾ ಬಳಿ ಕ್ಷಮೆ ಕೇಳುತ್ತಾರ?
ಸರ್ ನೀವು ಮಾಡಿದ್ದು ಚೂರು ಸರಿ ಇಲ್ಲ. ಸಹನಾ ಅಕ್ಕನ ಮನಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು ಸರ್. ನೀವು ಮೊದಲಿಗೆ ಅಮ್ಮನ ಬಳಿ ಸ್ನೇಹಾ ಅಕ್ಕನ ಬಳಿ ಮದುವೆಯ ಬಗ್ಗೆ ಮಾತುಕತೆ ನಡೆಸಿ ಬಳಿಕ ಸಹನಾ ಅಕ್ಕನ ಬಳಿ ಮಾತನಾಡಿ ಎಂದು ಹೇಳುತ್ತಾಳೆ. ತನ್ನ ತಪ್ಪಿನ ಅರಿವಾಗಿ ಮೇಷ್ಟ್ರಿಗೆ ಪಶ್ಚಾತ್ತಾಪ ಆಗುತ್ತದೆ. ತಪ್ಪಾಯಿತು ಎಂದು ಕ್ಷಮೆಯನ್ನು ಕೇಳುತ್ತಾರೆ ಆದರೆ ಏನು ಪ್ರಯೋಜನ ಕ್ಷಮಿಸಲು ಸಹನಾ ಅಲ್ಲಿಲ್ಲ. ಆದರೆ ಮದುವೆಯ ಮಾತುಕತೆಗೆ ಮುರಳಿ ಮೇಷ್ಟ್ರು ರೆಡಿ ಆಗಿರುವ ರೀತಿ ಸೂಮಾಗೆ ಅನ್ನಿಸುತ್ತದೆ.

ಕಂಠಿ ಜೊತೆ ಬೆಂಗಳೂರಿಗೆ ಪಯಣ
ಪೂರ್ವಿಗೆ ಕಂಠಿ ಅಂದರೆ ಪ್ರಾಣ ಆದರೆ. ಕಂಠಿ ಮನಸ್ಸು ಮಾತ್ರ ಸ್ನೇಹಾ ಕಡೆ ವಾಲುತ್ತಿದೆ. ಈ ಬಗ್ಗೆ ಪೂರ್ವಿಗೆ ಈ ಬಗ್ಗೆ ಕೊಂಚ ಅನುಮಾನ ಮೂಡಿರುವುದಂತು ಸತ್ಯ. ಪೂರ್ವಿ ತಂದೆ ವಿದೇಶದಿಂದ ಬರುತ್ತಿದ್ದಾರೆ ಆ ಖುಷಿಯಲ್ಲಿ ಪೂರ್ವಿ ಹಿರಿ ಹಿರಿ ಹಿಗ್ಗುತ್ತಾ ಇದ್ದಾಳೆ. ಆದರೆ ಕಂಠಿ ಮಾತ್ರ ಮುಖ ಸಪ್ಪಗೆ ಮಾಡಿಕೊಂಡಿದ್ದಾನೆ. ಪೂರ್ವಿಯನ್ನೂ ನೋಡಿದರೆ ಮಾರುದ್ದ ಹೋಗುತ್ತಿದ್ದ ಕಂಠಿ ಇದೀಗ ಪೂರ್ವಿ ಬಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಅಮ್ಮನ ಮಾತನ್ನು ಮೀರಲಾಗದೆ ಪೂರ್ವಿ ಜೊತೆ ಆಕೆಯ ತಂದೆಯನ್ನು ಕರೆತರಲು ಬೆಂಗಳೂರಿಗೆ ಹೋಗಿದ್ದಾನೆ.

ಕಂಠಿಯನ್ನೂ ಪೂರ್ವಿ ಜೊತೆ ನೋಡಿದ ಸ್ನೇಹಾ
ಆದರೆ ದಾರಿಯುದ್ದಕ್ಕೂ ಸಿಡಿ ಮಿಡಿಗೊಳ್ಳುತ್ತಿದ್ದ. ಕಂಠಿ ಮುಖವನ್ನು ನೋಡಿ ಗಾಡಿ ಓಡಿಸುತ್ತಿದ್ದ ಪೂರ್ವಿಗೆ ಎದುರಲ್ಲಿ ವಾಹನ ಬಂದದ್ದೇ ತಿಳಿಯದಾಗುತ್ತದೆ. ಆದರೆ ಈ ಬಗ್ಗೆ ಕೋಪಿಸಿಕೊಂಡು ಕಂಠಿ ಪೂರ್ವಿಗೆ ಚೆನ್ನಾಗಿ ಮಂಗಳಾರತಿ ಮಾಡುತ್ತಾನೆ. ಅದೆಷ್ಟು ಬಾರಿ ಪೂರ್ವಿ ಕೈ ಯಲ್ಲಿ ತಪ್ಪಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರು ಪೂರ್ವಿ ಮಾತ್ರ ಆತನ ಬೆನ್ನು ಬಿಡುವ ಹಾಗೆ ಕಾಣುತ್ತಿಲ್ಲ. ಇತ್ತ ಕಂಠಿ ಹಾಗೂ ಪೂರ್ವಿನ ಒಟ್ಟಿಗೆ ನೋಡಿದ ಸ್ನೇಹಾಗೆ ಅರ್ಥವಾಗದೆ ನೋಡುತ್ತಾಳೆ. ಪೂರ್ವಿಗೆ ಶ್ರಿ ಹೇಗೆ ಪರಿಚಯ ಎಂದೆಲ್ಲ ಪ್ರಶ್ನೆಗಳು ಆಕೆಯ ಮನದಲಿ ಮೂಡದಿರದು ಇನ್ನೂ ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications