Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಗಳ ಮದುವೆ ಗೆ ಒಪ್ಪಿಗೆ ಕೊಡದ ಪುಟ್ಟಕ್ಕ? ಮುಂದೇನು ಮಾಡುತ್ತಾರೆ ಮುರಳಿ ಮೇಷ್ಟ್ರು?
ಪುಟ್ಟಕ್ಕ ಮನದಲ್ಲಿ ಬಹಳ ಯೋಚನೆ ಮಾಡುತ್ತಾ ಇರುತ್ತಾಳೆ. ತನ್ನ ದೊಡ್ಡ ಮಗಳು ಎಲ್ಲರಿಗಿಂತಲೂ ಜಾಣೆ ಅಪರಂಜಿ. ಆದರೆ ಆಕೆಯ ಬಗ್ಗೆ ಮುರಳಿ ಮೇಷ್ಟ್ರ ತಂದೆ ತಾಯಿಗೆ ಸ್ವಲ್ಪ ಕೂಡ ಕಾಳಜಿ ಪ್ರೀತಿ ಇಲ್ಲದನ್ನು ಕಂಡು ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಒಬ್ಬ ಹೆಣ್ಣುಮಗಳಿಗೆ ಏನೆಲ್ಲ ಹೇಳಬಾರದು ಅದನ್ನೆಲ್ಲ ಹೇಳಿದ್ದಾರೆ, ಜೊತೆಗೆ ಪುಟ್ಟಕ್ಕನನ್ನು ಹೀಯಾಳಿಸಿ ಅವಮಾನ ಮಾಡುತ್ತಾರೆ. ಇದನ್ನು ನೋಡಿ, ಕೇಳಿ ಪುಟ್ಟಕ್ಕನಿಗೆ ಬಹಳ ಬೇಸರ ಆಗಿದೆ. ತನ್ನ ಮಗಳ ಬಗ್ಗೆ ಏನೂ ಗೊತ್ತಿಲ್ಲದೆ ಈ ರೀತಿ ಹೇಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ ಪುಟ್ಟಕ್ಕ.
ಅಷ್ಟರಲ್ಲಿ ಆಗಲೇ ಮೇಷ್ಟ್ರು ಮನೆಯ ಬಳಿ ಬಂದಿರುತ್ತಾರೆ. ಪುಟ್ಟಕ್ಕನ ಬಳಿ ಮೇಷ್ಟ್ರು ಮನದ ಗೋಳನ್ನು ಹೇಳಿಕೊಂಡು ಬೇಸರ ಪಟ್ಟುಕೊಳ್ಳುತ್ತಾರೆ. ಇದನ್ನು ನೋಡಿದ ಪುಟ್ಟಕ್ಕನಿಗೂ ಬೇಸರ ಆಗುತ್ತದೆ. ಈ ವೇಳೆ ಸಹನಾಗೆ ಚೆನ್ನಾಗಿ ಬೈಗುಳದ ಸುರಿಮಳೆಯೇ ಸಿಗುತ್ತದೆ. ಬಳಿಕ ಮೇಷ್ಟ್ರ ಬಳಿ ಪುಟ್ಟಕ್ಕ, ನೀವು ಇಲ್ಲಿಗೆ ಬಂದು ನಮ್ಮ ಬಳಿ ಕ್ಷಮೆ ಕೇಳುತ್ತಾ ಇರುವುದರಿಂದ ನಮಗೆ ತಿಳಿಯುತ್ತದೆ, ನೀವು ಎಷ್ಟು ಒಳ್ಳೆಯವರು ಎಂದು. ಈ ನಿಮ್ಮ ಒಳ್ಳೆ ಗುಣ ಹಾಗೆಯೇ ಇರಲಿ ಎಂದು ಹೇಳುತ್ತಾರೆ.

ಮನೆಯಲ್ಲಿ ನಡೆದಿದ್ದು ವಿವರಿಸಿದ ಮುರಳಿ ಮೇಷ್ಟ್ರು
ಇದನ್ನು ಕೇಳಿದ ಕಂಠಿ, ಇನ್ನೂ ಹೇಗೆ ಮೇಷ್ಟ್ರೇ? ನಿಮ್ಮ ಮನೆಯವರನ್ನು ಹೇಗೆ ಒಪ್ಪಿಸುತ್ತಿರಾ ಎಂದು ಆತಂಕದಲ್ಲಿ ಕೇಳುತ್ತಾನೆ. ಇದನ್ನು ಕೇಳಿದ ಮುರಳಿ ಮೇಷ್ಟ್ರು, ನಾನು ಇಲ್ಲಿಗೆ ಬರುವ ಮುನ್ನ ಈ ವಿಚಾರವಾಗಿ ಮನೆಯಲ್ಲಿ ಡ್ರಾಮಾ ನಡೆದು ಹೋಯಿತು. ದೊಡ್ಡ ಗಲಾಟೆ ಕೂಡ ಆಯಿತು. ನನ್ನ ಅಮ್ಮ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟರು. ಅವರು ಹಾಗೆ ಮಾಡಿಕೊಳಲ್ಲ ಎಂದು ಗೊತ್ತು. ಅವರ ಜೊತೆ ಕೂಡ ಜಗಳ ಆಡಿಕೊಂಡೆ ನಾನು ಬಂದೆ ಎಂದಾಗ ಪುಟ್ಟಕ್ಕನಿಗೆ ಆತಂಕ ಹೆಚ್ಚಾಗುತ್ತದೆ. ಈ ವೇಳೆ ಪುಟ್ಟಕ್ಕನ ಬಳಿ ಮುರಳಿ, 'ಅಮ್ಮ ನಮಗೆ ನಿಮ್ಮ ಒಪ್ಪಿಗೆ ಮಾತ್ರ ಸಾಕು. ಗುಣದಲ್ಲಿ ನೀವು ಎಲ್ಲರಿಗಿಂತ ದೊಡ್ಡವರು. ನನಗೆ ಸಹನಾ ಅವರಿಗೂ ನಿಮ್ಮ ಆಶೀರ್ವಾದ ಒಂದು ಇದ್ದರೆ ಸಾಕು. ನಿಮ್ಮ ಒಪ್ಪಿಗೆ ಇದ್ದರೆ ನಾವು ಮದುವೆ ಆಗುತ್ತೇವೆ. ನಮಗೆ ನಮ್ಮ ಮನೆಯವರ ಒಪ್ಪಿಗೆ ಬೇಕಾಗಿಲ್ಲ ಎಂದಾಗ ಪುಟ್ಟಕ್ಕ ಗೆ ಬಹಳ ಆತಂಕ ಆಗುತ್ತದೆ.

ಸಹನಾ ಮದುವೆಗೆ ಒಪ್ಪಿಗೆ ಕೇಳಿದ ಮುರಳಿ
ಇದನ್ನು ಕೇಳಿದ ಸುಮಾ ಹೇಳುತ್ತಾಳೆ, ಆದೆ ಸರಿ ಸರ್ ನಿಮ್ಮ ಮನೆಯವರಿಗಾಗಿ ನಾವು ಕಾಯುತ್ತಾ ಇದ್ದರೆ ನಮ್ಮ ಅಕ್ಕ ಹೀಗೆ ಇರಬೇಕಾಗುತ್ತದೆ ಎಂದು ಹೇಳಿದಾಗ ಪುಟ್ಟಕ್ಕ ಸುಮಾಳಿಗೆ ಗದರುತ್ತಾಳೆ. ಸುಮಾ ಒಳಗೆ ಹೋಗೆ ಎಂದು ಹೇಳುತ್ತಾರೆ. ಬಳಿಕ ಮುರಳಿ ಬಳಿ, ಇಲ್ಲ ಅಪ್ಪ ಇಲ್ಲ, ಇದು ತಪ್ಪು, ನಾವು ಹಾಗೆ ಮಾಡುವುದು ಬೇಡ. ಮದುವೆಗೆ ಮುಂಚೆಯೇ ಅವರ ತಂದೆತಾಯಿಯಿಂದ ಮಗನನ್ನು ದೂರ ಮಾಡಿದಳು ಎಂದು ನನ್ನ ಮಗಳಿಗೆ ಕೆಟ್ಟ ಹೆಸರು ಬರುತ್ತದೆ. ಹಾಗೆ ಮಾತ್ರ ಮಾಡಬೇಡಿ. ಎಂದು ಬಹಳ ಆತಂಕದಿಂದ ಹೇಳುತ್ತಾರೆ ಪುಟ್ಟಕ್ಕ. ಇದನ್ನು ಕೇಳಿದ ಮುರಳಿಗೆ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾನೆ.

ಮುರಳಿ ಪೋಷಕರ ಬಗ್ಗೆ ಪುಟ್ಟಕ್ಕನ ಬೇಸರ
ಮದುವೆ ಅನ್ನೋದು ನೀವು ಮಾತ್ರ ಒಂದಾಗೋದು ಅಲ್ಲ ಕಣಪ್ಪ, ಎರಡು ಮನೆತನಗಳು ಅವರ ಜೊತೆ ಇರುವ ಜನಗಳು, ಎಲ್ಲಾ ಮನಸುಗಳು ಸಂತೋಷವಾಗಿ ಒಂದಾಗಿ ನೆರವೇರಿಸುವ ಸಂಭ್ರಮವೇ ಮದುವೆ. ನನಗೆ ನಿಮ್ಮ ಅಪ್ಪ ಅಮ್ಮನ ಮೇಲೆ ಕೋಪ ಇಲ್ಲ ಆದರೆ ಬಹಳ ಬೇಸರ ಇದೆ ಎಂದು ಹೇಳುತ್ತಾರೆ. ಬಳಿಕ ಧೀರ್ಘ ಉಸಿರು ಎಳೆಯುತ್ತಾ ಮಾತು ಮುಂದುವರಿಸಿದ ಪುಟ್ಟಕ್ಕ ನನ್ನನ್ನು ಮನೆಯ ಒಳಗೆ ಕರೆದುಕೊಂಡು ಇಲ್ಲ ಅಂತಾನೂ ನನಗೆ ಹಾಗೆ ಮಾತನಾಡಿದರು ಎಂದು ಅಲ್ಲ. ನನ್ನ ಮಗಳ ಮೇಲೆ ನಿಮ್ಮ ಅಪ್ಪ ಅಮ್ಮನಿಗೆ ಇರುವ ಅಭಿಪ್ರಾಯ ನನಗೆ ಬಹಳ ನೋವು ತಂದಿದೆ ಎಂದು ಬೇಸರದಿಂದ ಹೇಳುತ್ತಾರೆ.

ಸಹನಾ ಗುಣದಲ್ಲಿ, ನಡತೆಯಲ್ಲಿ ದೊಡ್ಡವಳು: ಪುಟ್ಟಕ್ಕ
ಆ ವೇಳೆ ಕಂಠಿ ಗೆ ಸ್ನೇಹಾ ಮಾತುಗಳು ಕೇಳಿಸುತ್ತದೆ. ತನ್ನ ತಾಯಿಯ ಬಗ್ಗೆ ಸ್ನೇಹಾ ಇರುವ ಗೌರವ ನೋಡಿ ಕಂಠಿಗೆ ಖುಷಿ ಆಗುತ್ತದೆ. ಬಳಿಕ ಮಾತು ಮುಂದುವರೆಸಿದ ಪುಟ್ಟಕ್ಕ, ಊರಿನಲ್ಲಿ ನನ್ನ ಮಗಳ ಬಗ್ಗೆ ಯಾರು ಬೇಕಾದರೂ ಕೇಳಿ ನನ್ನ ಮಗಳ ಬಗ್ಗೆ ತಪ್ಪಾಗಿ ಮಾತನಾಡುವವರು ಒಬ್ಬರು ಸಿಗಲಿಕ್ಕೆ ಇಲ್ಲ. ಅವಳು ಅಪರಂಜಿ, ನೀನು ಹೇಳಿದೆ ಅಲ್ವಾ ಗುಣದಲ್ಲಿ ನಾನು ಎಲ್ಲರಿಗಿಂತ ದೊಡ್ಡವಳು ಎಂದು ಹೇಳುತ್ತ ಇದ್ದೀರಾ ಅಲ್ವಾ, ನಾನು ದೊಡ್ಡವಳು ಅಲ್ಲ, ನನ್ನ ಮಗಳು ಗುಣದಲ್ಲಿ ನಡತೆಯಲ್ಲಿ ಬಹಳ ದೊಡ್ಡವಳು ಎಂದು ತನ್ನ ಮಗಳನ್ನು ಹೊಗಳುತ್ತಾಳೆ. ಮೇಷ್ಟ್ರ ಬಳಿ ಹೇಳುತ್ತಾಳೆ ನಿಮ್ಮ ತಂದೆ ತಾಯಿಗೆ ಸಹನಾ ಬಗ್ಗೆ ಇರುವ ಕೆಟ್ಟ ಯೋಚನೆಯನ್ನು ನೀವು ತೆಗೆದು ಹಾಕಬೇಕು ಎಂದು ಹೇಳುತ್ತಾರೆ. ಮುಂದೇನು ಕಾದು ನೋಡಬೇಕಿದೆ.