Puttakkana Makkalu: ಕಂಠಿ ವಿಚಾರದಲ್ಲಿ ಕಠೋರವಾಗಿ ನಡೆದುಕೊಂಡ ಸ್ನೇಹಾ

By Poorva

ಸ್ನೇಹಾ ಮನಸ್ಥಿತಿ ಇತ್ತೀಚಿನ ದಿನಗಳಲ್ಲಿ ಬಹಳ ಕಠೋರ ಆಗುತ್ತಿದೆ. ಕಂಠಿ, ಸ್ನೇಹಾಗೆ ಹೇಗಾದರೂ ಹತ್ತಿರ ಆಗಬೇಕು ಎಂದು ಅಂದುಕೊಂಡಷ್ಟು ಸ್ನೇಹಾ ಬಹಳ ದೂರ ಹೋಗಿ ಬಿಡುತ್ತಾಳೆ. ಮನದಲ್ಲಿ ಅತಿಯಾದ ಪ್ರೇಮ ಇಟ್ಟುಕೊಂಡು ತೋರಿಸಿಕೊಳ್ಳಲು ಸಾಧ್ಯ ಆಗದ ಪರಿಸ್ಥಿತಿಯಲ್ಲಿ ಇದ್ದಾಳೆ ಸ್ನೇಹಾ. ಆದರೆ ಕಂಠಿ ಮಾತ್ರ ಸ್ನೇಹಾನ ಮರೆಯಲು ಸಾಧ್ಯ ಆಗದೇ ಒದ್ದಾಡುತ್ತಾ ಇದ್ದಾನೆ.

ಇದೀಗ ಸ್ನೇಹಾಗೆ ಕಂಠಿ ಗಿಫ್ಟ್ ಒಂದನ್ನು ಸುಮಾ ಮೂಲಕ ಕಳುಹಿಸುತ್ತಾನೆ. ಸುಮಾ, ಸ್ನೇಹಾ ಬಳಿ ಗಿಫ್ಟ್ ನೀಡಿ ತಾನೇ ಗಿಫ್ಟ್ ಕೊಟ್ಟ ಹಾಗೆ ನಟನೆ ಮಾಡುತ್ತಾಳೆ. ಇದನ್ನು ನೋಡಿದ ಸ್ನೇಹಾಗೆ ಬಹಳ ಖುಷಿ ಆಗುತ್ತದೆ. ಆಕೆ ಗಿಫ್ಟ್ ಪ್ಯಾಕ್ ತೆಗೆದು ನೋಡಿದಾಗ ಅದರಲ್ಲಿ ಕಾಲ್ಗೆಜ್ಜೆ ಇದ್ದಿದ್ದನ್ನು ಕಂಡು ಎಲ್ಲರಿಗೂ ಖುಷಿ ಆಗುತ್ತದೆ. ಸ್ನೇಹಾ ಕಾಲ್ಗೆಜ್ಜೆ ಕಾಲಿಗೆ ಹಾಕಿಕೊಳ್ಳುತ್ತಾ ಇರುವ ವಿಡಿಯೋ ಮಾಡಿ ಕಂಠಿಗೆ ಮೆಸೇಜ್ ಮಾಡುತ್ತಾಳೆ.

Kannada serial puttakkana makkalu written updated on 19th may

ಇನ್ನೂ ಸುಮಾ ಹಾಗೂ ಸಹನಾ ಮಾತನಾಡಿಕೊಂಡು ಇರುತ್ತಾಳೆ. ಏನು ಸುಮಾ ನೀನು ನನ್ನ ಬಳಿ ಈ ವಿಚಾರವನ್ನು ಹೇಳಿದ್ದಿದ್ರೆ ನಾನು ಏನಾದರೂ ಗಿಫ್ಟ್ ಕೊಡುತ್ತಿದ್ದೆ ಅಲ್ವಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸುಮಾ ಮೆತ್ತಗೆ ಅದು ತಾನು ಗಿಫ್ಟ್ ಕೊಟ್ಟಿದ್ದು ಅಲ್ಲ ಶ್ರೀ ಕೊಟ್ಟಿರುವುದು ಎಂದಾಗ ಅದನ್ನು ಸ್ನೇಹಾ ಕೇಳಿಸಿಕೊಳ್ಳುತ್ತಾ ಇರುತ್ತಾಳೆ. ಸ್ನೇಹಾ ಬಹಳ ದುಃಖ ಆದರೂ ಆ ಕಾಲ್ಗೆಜ್ಜೆಯನ್ನು ಕಾಲಿನಿಂದ ತೆಗೆದು ಶ್ರೀಗೆ ವಾಪಸ್ ಕೊಡುವಂತೆ ಹೇಳುತ್ತಾಳೆ.

ಮನೆ ಕಡೆ ಬರದಂತೆ ಸ್ನೇಹಾ ಎಚ್ಚರಿಕೆ

ಹಾಗೆಯೇ ಇನ್ನು ಈ ಮನೆಯ ಕಡೆ ತಲೆ ಹಾಕಬಾರದು ಎಂದು ಹೇಳಿಬಿಡು, ಎಂದು ಕಠೋರವಾಗಿ ಹೇಳಿ ಕಳುಹಿಸುತ್ತಾಳೆ. ಆದರೆ ಶ್ರೀ ಮಾತ್ರ ತನ್ನ ಹುಡುಗಿ ನನ್ನ ಬಳಿಗೆ ಬಂದ ಬರುತ್ತಾಳೆ. ಎನ್ನುವ ವೇಳೆ ಸ್ನೇಹಾ ನಿಜವಾಗಿಯೂ ಬಂದ ಹಾಗೆ ಎಲ್ಲಾ ಅನುಭವ ಆಗಿ ನನ್ನ ಕ್ಷಮಿಸಿ ಬಿಡು ಎಂದು ಅಪ್ಪಿಕೊಳ್ಳುವ ಹಾಗೆ ಅನ್ನಿಸುತ್ತದೆ. ಇದೆಲ್ಲವನ್ನೂ ನೋಡಿದ ಕಂಠಿ ಗೆಳೆಯ ಮೆತ್ತಗೆ ಕಂಠಿಯನ್ನು ಎಚ್ಚರಿಸುತ್ತಾನೆ.

ಸುಮಾ ಮಾತಿಗೆ ಬೇಸರಗೊಂಡ ಕಂಠಿ

ಕಂಠಿ ಎಲ್ಲರನ್ನೂ ನೋಡಿದಾಗ ಎದುರಿಗೆ ಸುಮಾ ನಿಂತುಕೊಂಡು ಇರುತ್ತಾಳೆ. ಸುಮಾ ಬೇಸರದಿಂದ ಸ್ನೇಹಾ ಹೇಳಿದ ಮಾತುಗಳನ್ನು ಕಂಠಿ ಬಳಿ ಹೇಳಿದಾಗ ಕಂಠಿಗೆ ಬಹಳ ಬೇಸರ ಆಗುತ್ತದೆ. ಆದರೂ ಏನು ಮಾತನಾಡದೇ ಅಲ್ಲಿಂದ ನಡೆದೇ ಹೋಗುತ್ತಾನೆ. ಇದೆಲ್ಲವನ್ನೂ ನೋಡಿದಾ ಚಂದ್ರುಗೆ ಖುಷಿ ಆದ್ರೆ ಮಿಕ್ಕವರು ಮಾತ್ರ ಬಹಳ ನೊಂದುಕೊಂಡು ಇರುತ್ತಾರೆ.

Kannada serial puttakkana makkalu written updated on 19th may

ಸ್ನೇಹಾ ವರ್ತನೆಗೆ ಖುಷಿ ಪಟ್ಟ ಚಂದ್ರು

ಇನ್ನು ಒಳಗೆ ಬಂದ ಚಂದ್ರು ನಾಳೆ ಭುವನ್ ಮನೆಯಲ್ಲಿ ಪಾರ್ಟಿ ಇರುವ ಬಗ್ಗೆ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ಆ ಬಳಿಕ ಸ್ನೇಹಾ ಬಳಿ ಯಾರು ಕೂಡ ಮಾತನಾಡದೆ ಅಲ್ಲಿಂದ ಹೋಗುತ್ತಾರೆ. ಸ್ನೇಹಾಗೆ ಮಾತ್ರ ಬಹಳ ನೋವಾಗಿ ಅಳುತ್ತಾ ಇರುತ್ತಾಳೆ.

ಕಂಠಿ ಗೆಳೆಯರಿಗೆ ಸ್ನೇಹಾ ಕ್ಲಾಸ್

ಇನ್ನು ಬೆಳಗ್ಗೆ ಸ್ನೇಹಾ ಮೆಸ್‌ಗೆ ಬರುವ ವೇಳೆ ಕಂಠಿ ಗೆಳೆಯರು ಮೆಸ್‌ ಅಲ್ಲಿ ಬಂದು ಕುಳಿತು ಇರುತ್ತಾರೆ. ಆ ಬಳಿಕ ಕಂಠಿ ಗೆಳೆಯರು ಸ್ನೇಹಾನಾ ಪ್ರಶ್ನೆ ಮಾಡಿದಾಗ ಬಹಳ ಖಾರವಾಗಿ ಪ್ರತಿಕ್ರಿಯೆ ನೀಡುತ್ತಾಳೆ. ಇನ್ನು ಸ್ನೇಹಾ ಮಾತ್ರ ತನ್ನ ಅಮ್ಮನನ್ನು ಹುಡುಕಿಕೊಂಡು ಅಲ್ಲಿಂದ ಹೋಗುತ್ತಾಳೆ .

ಕಂಠಿಗೆ ಸ್ನೇಹಾ ಮೇಲಿನ ಪ್ರೀತಿ ಹೆಚ್ಚಾಗಿದೆ

ಇತ್ತ ಕಂಠಿಗೆ ಅದೆಷ್ಟೇ ನೋವು ಆದರೂ ತಡೆದುಕೊಂಡು ಇರುತ್ತಾನೆ. ಸ್ನೇಹಾ ಮೇಲೆ ಆತ ಬಲವಾದ ನಂಬಿಕೆ ಇಟ್ಟುಕೊಂಡು ಇರುತ್ತಾನೆ. ನನ್ನ ಸ್ನೇಹಾ ಯಾವತ್ತೂ ಬಿಟ್ಟು ಹೋಗುವುದು ಇಲ್ಲ ಬಂದೆ ಬರುತ್ತಾಳೆ, ಎಂಬುವುದನ್ನು ಗೆಳೆಯರ ಬಳಿ ಸಾರಿ ಸಾರಿ ಹೇಳುತ್ತ ಇರುತ್ತಾನೆ. ರಾಜೇಶ್ವರಿ ಗೋಪಾಲನ ಕರೆದುಕೊಂಡು ಪುಟ್ಟಕ್ಕನ ಮನೆಗೆ ಬಂದು ಪುಟ್ಟಕ್ಕನ ಬಳಿ ಮಾತನಾಡುತ್ತಾ ಇರುತ್ತಾಳೆ.

ರಾಜಿ ಮಾತು ಕೇಳಿ ಪುಟ್ಟಕ್ಕ ಶಾಕ್

ರಾಜೀ ಮನೆಗೆ ಬಂದಿರುವ ಉದ್ದೇಶ ಗೊತ್ತಿಲ್ಲದ ಪುಟ್ಟಕ್ಕ ಮಾತ್ರ ಸುಮ್ಮನೆ ಇರುತ್ತಾಳೆ. ಆದರೆ ಕೊನೆಗೆ ಸ್ನೇಹಾ, ಬಂಗಾರಮ್ಮನ ಮಗನನ್ನು ಪ್ರೀತಿ ಮಾಡುತ್ತಾ ಇದ್ದಾಳೆ ಎಂದು ಹೇಳಿದಾಗ ಪುಟ್ಟಕ್ಕಗೆ ಶಾಕ್ ಆಗುತ್ತದೆ.

More from Filmibeat

English summary
Kannada serial puttakkana makkalu written updated on 19th may. here is Detials about sneha returns Kanti Gift. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X