ಸಹನಾ ಪ್ರೀತಿ ವಿಚಾರ ಸ್ನೇಹಾಗೆ ತಿಳಿಯಿತು! ಸ್ನೇಹಾಳ ಮುಂದಿನ ನಡೆ ಏನು?
ಪುಟ್ಟಕ್ಕನ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ ಮನೆ ಮಾಡಿದೆ. ಸಹನಾಳನ್ನು ನೋಡಲು ಗಂಡಿನ ಕಡೆಯವರ ಆಗಮಿಸುತ್ತಿದ್ದಾರೆ. ಈ ವಿಚಾರ ಪುಟ್ಟಕ್ಕನ ಮನಸ್ಸಿಗೆ ಖುಷಿ ನೀಡಿದೆ. ಇನ್ನೊಂದೆಡೆ ಮೇಷ್ಟ್ರು ಬಹಳ ನೊಂದಿದ್ದಾರೆ ತಾನು ಪ್ರೀತಿ ಮಾಡಿದ ಹುಡುಗಿ ನನ್ನ ಬಿಟ್ಟು ಹೋಗುತ್ತಾಳೆ. ಅವಳು ಬೇಕು ಎಂದು ಕೇಳಲು ಇನ್ನೂ ನನಗೆ ಮನಸ್ಸು ಬರುತ್ತಿಲ್ಲ. ಆಕೆ ತುಂಬಾ ಒಳ್ಳೆಯವಳು ಹಾಗೆಯೇ ಆಕೆಯ ತಾಯಿ ಪುಟ್ಟಕ್ಕ ತನ್ನ ಮಗಳ ಬಗ್ಗೆ ಸಾವಿರ ಕನಸು ಕಾಣುತ್ತಿದ್ದಾರೆ.
ಆದರೆ ಏನು ಮಾಡುವುದು ನಾವು ಇಬ್ಬರು ದೂರ ಆಗುವುದು ವಿಧಿ ಲಿಖಿತ ಇರಬೇಕು ಎಂದು ತನ್ನನ್ನು ತಾನು ಮೇಷ್ಟ್ರು ಸಮಾಧಾನ ಮಾಡಿಕೊಳ್ಳುತ್ತಾ ಇದ್ದರೂ, ಇತ್ತ ಮುರಳಿ ತಂದೆ ಮಾತ್ರ ನಿನಗೆ ಉತ್ತಮ ವಾದ ಹೆಣ್ಣು ಹುಡುಕಿದ್ದೀನಿ ಅವಳನ್ನೇ ಮದುವೆ ಆಗಬೇಕು ಎಂದು ಹೇಳುತ್ತಿರುತ್ತಾರೆ. ಇನ್ನು ಸಹನಾ ಮಾತ್ರ ಬಹಳ ಬೇಸರದಲ್ಲಿ ಇರಬೇಕಾದರೆ ಅಲ್ಲಿಗೆ ಬಂದ ಸ್ನೇಹಾ ಏನಾಯಿತೆಂದು ಕೇಳುತ್ತಾಳೆ.
ಯಾಕೆ ಅಕ್ಕ ಇನ್ನೂ ಹೊರಟು ಆಗಿಲ್ವ ಕೈ ಗೆ ವಾಚ್ ಹಾಕಿಕೋ ಎಂದು ಕೊಡುತ್ತಾಳೆ ಸ್ನೇಹಾ ಆದರೆ ಆ ವಾಚ್ ನೋಡಿದ ಕೂಡಲೇ ಸಹನಾಗೆ ಇನ್ನ ಜೋರಾಗಿ ಅಳುಬರುತ್ತದೆ. ಆದರೆ ಇದ್ಯಾವುದೂ ಸ್ನೇಹಾ ಗೆ ಅರ್ಥ ಆಗುವುದೇ ಇಲ್ಲ. ಬಳಿಕ ಅಲ್ಲಿಗೆ ಬಂದ ಪುಟ್ಟಕ್ಕನ ಬಳಿ ಅಮ್ಮ ನೀನು ಕೊಡಿಸಿದ ಈ ವಾಚ್ ತುಂಬಾ ಚೆನ್ನಾಗಿದೆ ಅವ್ವ ಎಂದು ಹೇಳಿದಾಗ ಪುಟ್ಟಕ್ಕ ಹೇಳುತ್ತಾಳೆ ನಾನು ಯಾವಾಗ ಕೊಡಿಸಿದೆ ವಾಚ್. ಎಂದು ನೆನಪು ಮಾಡಿಕೊಳ್ಳುತ್ತ ಇರುವಾಗ ಸುಮಾ ಇಬ್ಬರು ಮಾತನಾಡುತ್ತಿರುವುದು ಕೇಳಿ ಬೇರೆ ಟಾಪಿಕ್ ಎತ್ತುತ್ತಾಳೆ.
ಇನ್ನು ಅಲ್ಲಿಗೆ ಬಂದ ಪುರುಷೋತ್ತಮ ಜೋರಾಗಿ ಸ್ನೇಹಾಳನ್ನು ಕರಿಯಬೇಕಾದರೆ ಅಲ್ಲಿಗೆ ಬಂದ ಸುಮಾ ಏನಾಯ್ತು ಪುರುಷೋತ್ತಮ ಎಂದು ಕೇಳಿದಾಗ ಸುಮಾ, ಸಹನಾ ಅಕ್ಕನ ಮದುವೆ ನಿಲ್ಲಿಸಲು ಕಾಳಿ ಹಾಗೂ ಅಮ್ಮ ಕಾಯುತ್ತಿದ್ದಾಳೆ ಎಂದು ಹೇಳಿ ಸ್ನೇಹಾ ಅಕ್ಕನ ಕರೆ ಎಂದು ಹೇಳಿದಾಗ ಅಲ್ಲಿಗೆ ಸ್ನೇಹ ಬರುತ್ತಾಳೆ ಇದನ್ನು ನೋಡಿದ ಸುಮಾ ಪುರುಷೋತ್ತಮನನ್ನು ಸುಮಾ ತಡೆಯುತ್ತಾರೆ.

ಸ್ನೇಹಾಗೆ ತಿಳಿಯಿತು ಅಕ್ಕನ ಪ್ರೇಮಕತೆ
ಬಳಿಕ ಸ್ನೇಹಾ ಹಿಂದಿರುಗಿ ಹೋಗುತ್ತಾಳೆ. ಆ ವೇಳೆ ಪುರುಷೋತ್ತಮನನ್ನು ಕರೆದುಕೊಂಡು ಸಹನಾ ರೂಮ್‌ಗೆ ಹೋಗುತ್ತಾಳೆ. ಸಹನಾ ಅಕ್ಕ ಮೇಷ್ಟ್ರುನ್ನ ಪ್ರೀತಿ ಮಾಡುತ್ತಿದ್ದಾಳೆ ಅವರು ಮದುವೆ ನಿಲ್ಲಿಸಿದರೆ ಪರವಾಗಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿ ಪುರುಷೋತ್ತಮ ಖುಷಿಗೊಂಡರೆ ಸ್ನೇಹಾ ಮಾತ್ರ ಬಾಗಿಲ ಬಳಿ ಸುಮಾ ಹೇಳುವುದನ್ನು ಕೇಳುತ್ತಾ ಇರುತ್ತಾಳೆ. ಬಾಗಿಲು ತೆಗೆದು ಬಂದ ಸ್ನೇಹಾಳನ್ನು ನೋಡಿ ಗಾಬರಿಯಾದ ಸಹನಾ, ಸ್ನೇಹಾಳ ಮುಖ ನೋಡುತ್ತಾಳೆ. ಏನಕ್ಕ ಈ ವಿಚಾರ ಮುಂಚೆ ಹೇಳುತ್ತಿದ್ದರೆ ಈ ರೀತಿ ಅನಾಹುತ ಆಗುತ್ತಾ ಇರಲಿಲ್ಲ. ಮೊನ್ನೆ ಮೇಷ್ಟ್ರು ಬಂದಾಗ ತಡೆಯದೆ ಎಲ್ಲಾ ವಿಚಾರ ನಿನ್ನ ಬಳಿ ಹೇಳಲು ಬಿಡಬೇಕಿತ್ತು. ಇನ್ನು ಇವತ್ತು ಅಮ್ಮನ ಬಳಿ ಹೇಗೆ ಈ ವಿಚಾರ ಪ್ರಸ್ತಾಪ ಮಾಡಲಿ ಎಂದು ಅತ್ತಿಂದ ಇತ್ತ ಹೋಗುತ್ತಾ ಇರುತ್ತಾಳೆ ಸ್ನೇಹಾ.

ಪುಟ್ಟಕ್ಕನನ್ನು ಭೇಟಿ ಆದ ಗೋಪಾಲ
ಇನ್ನು ಗೋಪಾಲಯ್ಯ ಪುಟ್ಟಕ್ಕನ ಮೆಸ್‌ಗೆ ಬಂದಿದ್ದಾನೆ ಅದರಲ್ಲೂ ಯಾರಿಗೂ ತನ್ನ ಪರಿಚಯ ಸಿಗಬಾರದು ಎಂದು ಮಂಕಿ ಕ್ಯಾಪ್ ಬೇರೆ ಹಾಕಿಕೊಂಡು ಬಂದಿದ್ದಾರೆ. ಆಗ ಅಲ್ಲಿ ನೆರೆದವರು ಹೇಳುತ್ತಾರೆ. ಗೋಪಾಲಯ್ಯ ಮಂಕಿ ಟೋಪಿ ಹಾಕಿಕೊಂಡು ಕುಳಿತಿದ್ದಿಯಾ ಯಾಕಣ್ಣ ನಿಮ್ಮ ಹೆಂಗಸರು ತಿಂಡಿ ಮಾಡಿಲ್ವ ಎಂದು ಕೇಳುತ್ತಾರೆ. ಇದನ್ನೆಲ್ಲ ಕೇಳಿದ ಪುಟ್ಟಕ್ಕ ಗೋಪಾಲನನ್ನು ಒಮ್ಮೆ ನೋಡುತ್ತಾಳೆ. ಬಳಿಕ ಅಲ್ಲಿ ನೆರೆದವರಿಗೆ ಹೇಳುತ್ತಾಳೆ ಏನಪ್ಪ ಬೇರೆಯವರ ಮನೆ ವಿಚಾರ ನಿಮಗೆ ಯಾಕೆ ಸುಮ್ಮನೆ ತಿನ್ನಿ ಎಂದು ಹೇಳಿ ಗೋಪಾಲನತ್ತ ನೋಡುತ್ತಾಳೆ.

ಕಾಳಿ ಹುನ್ನಾರ ಪುಟ್ಟಕ್ಕನೆದುರು ಬಯಲು
ಆತ ರಾಜಿ ಹಾಗೂ ಕಾಳಿ ಮಾಡುತ್ತಿರುವ ಯೋಜನೆಯನ್ನು ಪುಟ್ಟಕ್ಕನ ಕಿವಿಗೆ ಹಾಕುತ್ತಾನೆ. ಆ ವೇಳೆ ಪುಟ್ಟಕ್ಕ ಹೇಳುತ್ತಾಳೆ ಏನಯ್ಯ ನೀನು ಹೇಳುವುದನ್ನು ನಾನು ನಂಬಬೇಕಾ ಎಂದು ಗೋಪಾಲ ಹೇಳದ ಮಾತನ್ನು ನಂಬದೆ ಪುಟ್ಟಕ್ಕ ಹೇಳುತ್ತಾಳೆ, ಇದು ನಮ್ಮ ಮನೆ ವಿಚಾರ ನಾವು ಹೇಗಾದರೂ ನೋಡಿಕೊಳ್ಳುತ್ತೇನೆ. ನೀನು ಇದರಲ್ಲಿ ತಲೆ ಹಾಕಬೇಡ. ತಿನ್ನಕ್ಕೆಂತ ಬಂದಿದ್ದೀಯಾ ತಿಂದು ಎದ್ದು ಹೋಗು ಎಂದು ಹೇಳುತ್ತಾಳೆ.

ಕಂಠಿಯ ನಿಶ್ಚಿತಾರ್ಥ ಮುರಿದು ಬಿತ್ತು
ಗೋಪಾಲಯ್ಯ ನಿಜ ವಿಚಾರ ಹೇಳುತ್ತಿದ್ದೀನಿ, ಯಾಕೆ ಅರ್ಥ ಆಗುತ್ತಿಲ್ಲ ನಿನಗೆ. ಗಂಡಿನ ಕಡೆಯವರು ಬರುವುದಿಲ್ಲ. ಎಂದಾಗ ಕೋಪ ಗೊಂಡ ಪುಟ್ಟಕ್ಕ ಗಂಡಿನ ಕಡೆಯವರು ಬಂದೆ ಬರುತ್ತಾರೆ ನಾನು ಯಾರೂ ಹೇಳಿದರು ಈ ಮದುವೆ ನಿಲ್ಲಲು ಬಿಡುವುದಿಲ್ಲ ಎಂದು ಹೇಳಿ ಅಲ್ಲಿಂದ ತೆರಳುತ್ತಾಳೆ. ಇನ್ನು ಬಂಗಾರಮ್ಮ ಮನೆಯಲ್ಲಿ ನಿಶ್ಚಿತಾರ್ಥ ಮುರಿದು ಬಿದ್ದಿವೆ. ಕಂಠಿ ತಂದೆ ಮಾತನ್ನು ಅಸ್ತ್ರವಾಗಿ ಪ್ರಯೋಗ ಮಾಡಿ ಪೂರ್ವಿ ಜೊತೆ ನಿಶ್ಚಿತಾರ್ಥ ಆಗುವುದನ್ನು ತಪ್ಪಿಸಿಕೊಂಡಿದ್ದಾನೆ. ಆದರೆ ಇದರಿಂದ ಪೂರ್ವಿ ಮನಸ್ಸಿಗೆ ಬಹಳ ನೋವಾಗುತ್ತದೆ ಮುಂದೆ ಏನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











