ಸ್ನೇಹಳ ಮಾತಿಗೆ ಬಂಗಾರಮ್ಮ ಕಿಡಿ, ಹಾಳಾಗುತ್ತಾ ಪುಟ್ಟಕ್ಕ-ಬಂಗಾರಮ್ಮನ ಗೆಳೆತನ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿಯಲ್ಲಿ ಇದೀಗ ಸ್ನೇಹಾಳ ಮಾತಿಗೆ ಸಿಡಿದು ನಿಂತಿದ್ದಾಳೆ ಬಂಗಾರಮ್ಮ. ಪುಟ್ಟಕ್ಕನ ಮಕ್ಕಳಲ್ಲಿ ಎರಡನೆಯವಳು ಯಾರು ಎಂಬ ಸತ್ಯ ಬಂಗಾರಮ್ಮನಿಗೆ ಗೊತ್ತಾಗಿದೆ. ಸ್ನೇಹಾನೆ ತನ್ನ ಮಗನ ವಿರುದ್ಧ ದೂರು ನೀಡಿದ್ದಾಕೆ ಎಂಬ ಸತ್ಯವೂ ಗೊತ್ತಾಗಿದೆ. ಗಣೇಶ ಹಬ್ಬದ ಆಚರಣೆಯಲ್ಲಿ ಇದ್ದ ಪುಟ್ಟಕ್ಕನ ಸಂಸಾರದಲ್ಲಿ ಇದೀಗ ಮಹಾ ಅಲೆ ಬಂದು ಅಪ್ಪಳಿಸಿದ ರೀತಿ ಆಗಿದೆ.

ಪುಟ್ಟಕ್ಕನ ಮನೆಗೆ ಬಂಗಾರಮ್ಮ ಬಂದ ವೇಳೆ ನಂಜವ್ವ ಸಂಸಾರವನ್ನು ಹಾಗೂ ಸ್ನೇಹಾಳನ್ನು ಮನೆಯ ಒಳಗೆ ಸಾಗ ಹಾಕುತ್ತಾಳೆ ಪುಟ್ಟಕ್ಕ. ಗೆಳತಿ ಪುಟ್ಟಕ್ಕನ ಮನೆಗೆ ಬಹಳ ಖುಷಿಯಿಂದ ಆಗಮಿಸಿದ ಬಂಗಾರಮ್ಮ ದೇವರಿಗೆ ನಮಸ್ಕಾರ ಮಾಡಿ ನೈವೇದ್ಯವನ್ನು ಸ್ವೀಕರಿಸುತ್ತಾರೆ. ಬಳಿಕ ಪುಟ್ಟಕ್ಕನ ಕುಷಲೋಪರಿ ವಿಚಾರಿಸುತ್ತಾರೆ. ಅಲ್ಲಿ ನಡೆಯುತ್ತಿರುವುದನ್ನೆಲ್ಲ ಕಂಠಿ ಹಾಗೂ ಆತನ ಗೆಳೆಯರು ಮರೆಯಲ್ಲಿ ನಿಂತು ನೋಡುತ್ತಿರುತ್ತಾರೆ. ಅಮ್ಮ ಬಂದಿರುವ ಭಯದಲ್ಲಿ ಕಂಠಿ ಇದ್ದಾನೆ ಹಾಗೆಯೇ ಸ್ನೇಹಾ ಅಮ್ಮನ ಬಳಿ ಸಿಕ್ಕಿ ಹಾಕಿಕೊಂಡರೆ ಎನು ಮಾಡುವುದು ದೊಡ್ಡ ಬಿರುಗಾಳಿ ಎದ್ದು ಬಿಡುತ್ತಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಕಂಠಿ-ಪೂರ್ವಿಯ ನಿಶ್ಚಿತಾರ್ಥಕ್ಕೆ ಪುಟ್ಟಕ್ಕನಿಗೆ ಆಹ್ವಾನ!

ಕಂಠಿ-ಪೂರ್ವಿಯ ನಿಶ್ಚಿತಾರ್ಥಕ್ಕೆ ಪುಟ್ಟಕ್ಕನಿಗೆ ಆಹ್ವಾನ!

ಇನ್ನು ಪುಟ್ಟಕ್ಕನನ್ನು ಬಂಗಾರಮ್ಮ ಕಂಠಿ ಹಾಗೂ ಪೂರ್ವಿಯ ನಿಶ್ಚಿತಾರ್ಥಕ್ಕೆ ಕರೆಯುತ್ತಾರೆ. ಪುಟ್ಟಕ್ಕನ ಬಳಿ ಬಂಗಾರಮ್ಮ ಹೇಳುತ್ತಾರೆ ಪುಟ್ಟಕ್ಕ ನನ್ನ ಮಗ ಇಲ್ಲಿಗೆ ಬಂದಿದ್ದಾನೆ ಎಂದು ಹೇಳಿದ ಬರಲಿಲ್ವ ಎಂದಾಗ ಪುಟ್ಟಕ್ಕ ಯಾರು ನಿಮ್ಮ ಮಗ ಎಂದೆಲ್ಲ ಹೇಳಿದಾಗ ಮಾತು ತಪ್ಪಿಸುತ್ತಾಳೆ ವಸು. 'ಅಮ್ಮ ಮನೆಗೆ ಬೇಗ ಹೋಗಬೇಕು ಮನೆಯಲ್ಲೂ ಇವತ್ತು ಪೂಜೆ ಇದೆ ಆಲ್ವಾ ಮರೆತು ಬಿಟ್ಟೆಯ? ಎಂದು ವಸು ಹೇಳಿದಾಗ ಬಂಗಾರಮ್ಮ ಅದನ್ನು ಮರೆತು ಬಿಟ್ಟಿದ್ದೇನೆ ಮನೆಯಲ್ಲೂ ಆಚರಣೆ ಮಾಡಲು ಇದೆ ಎಂದು ಹೇಳಿ ಪುಟ್ಟಕ್ಕನ ಬಳಿ ನಿಶ್ಚಿತಾರ್ಥದ ಕಾರ್ಡ್ ಅನ್ನು ಕೊಟ್ಟು ಪುಟ್ಟಕ್ಕ ನಿನಗೆ ಇದು ನಿಶ್ಚಿತಾರ್ಥದ ಮೊದಲ ಪತ್ರಿಕೆ ನೀಡುತ್ತಿದ್ದೇನೆ. ಮೊದಲನೆಯದಾಗಿ ನಿನ್ನನ್ನೇ ಕರೆಯುತ್ತಿದ್ದೆನೆ ಮನೆಯವರೆಲ್ಲರೂ ನಿಶ್ಚಿತಾರ್ಥ ಕ್ಕೇ ಬರಬೇಕು ಎಂದು ಹೇಳುತ್ತಾಳೆ.

ಸ್ನೇಹಾಳನ್ನು ನೋಡಿ ಬಂಗಾರಮ್ಮಗೆ ಶಾಕ್

ಸ್ನೇಹಾಳನ್ನು ನೋಡಿ ಬಂಗಾರಮ್ಮಗೆ ಶಾಕ್

ಬಳಿಕ ಅಲ್ಲಿಂದ ಹೊರಡಲು ಅನುವಾದಾಗ ಸ್ನೇಹಾ ಮನೆಯ ಹೊರಗೆ ಬರುತ್ತಾಳೆ. ಬಂಗಾರಮ್ಮನನ್ನು ನೋಡಿ ಬಂಗಾರಮ್ಮನವರೆ ಎಂದು ಕರೆಯುತ್ತಾಳೆ ಬಳಿಕ ಬಂಗಾರಮ್ಮನ ಹತ್ತಿರ ಬಂದು ನಿಲ್ಲುತ್ತಾಳೆ. ಸ್ನೇಹಳನ್ನು ನೋಡಿ ಪುಟ್ಟಕ್ಕನಿಗೆ ಭಯ ಶುರುವಾಗಿ ಬಿಡುತ್ತದೆ. ಮಗಳು ಏನು ಮಾಡುತ್ತಾಳೆ ಎಂಬ ಆತಂಕ ಪುಟ್ಟಕ್ಕನಿಗೆ. ದೂರದಲ್ಲಿ ಇದನ್ನೆಲ್ಲ ನೋಡುತ್ತಿರುವ ಕಂಠಿಗೂ ಭಯ.

ದೂರು ಕೊಟ್ಟಿದ್ದು ನಾನೇ ಎಂದ ಸ್ನೇಹಾ

ದೂರು ಕೊಟ್ಟಿದ್ದು ನಾನೇ ಎಂದ ಸ್ನೇಹಾ

ಬಂಗಾರಮ್ಮನವರೆ ನಾನು ಪುಟ್ಟಕ್ಕನ ಎರಡನೇ ಮಗಳು ಎಂದಾಗ ಬಂಗಾರಮ್ಮ ಗೆ ಶಾಕ್ ಆಗುತ್ತದೆ. ಬಂಗಾರಮ್ಮನವರೆ ನಿಮ್ಮ ಮಗನ ಮೇಲೆ ಕೇಸ್ ಕೊಟ್ಟಿರುವುದು ಬೇರೆ ಯಾರೂ ಅಲ್ಲಾ ನಾನೇ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮ ಗೆ ಕೆಂಡದಂಥ ಕೋಪ ಉಕ್ಕಿ ಬರುತ್ತದೆ. ಅದನ್ನು ತಡೆದುಕೊಂಡು ಸುಮ್ಮನಾಗುತ್ತಾರೆ. ಯಾಕೆಂದರೆ ಪುಟ್ಟಕ್ಕ ಹಾಗೂ ತನ್ನ ಗೆಳೆತನ ಯಾವತ್ತೂ ಬೇರೆ ಆಗಬಾರದು ಎಂಬ ಕಾರಣಕ್ಕೆ ಸ್ನೇಹಾ ಮಾತುಗಳನ್ನು ಕೇಳಿ ನಂಜವ್ವ ಹಾಗೂ ಚಂದ್ರು ಕೂಡ ಬರುತ್ತಾರೆ. ಇವರನ್ನು ನೋಡಿ ಬಂಗಾರಮ್ಮ ತಲೆ ಕೆಟ್ಟು ಹೋಗುತ್ತದೆ.

ಕ್ಷಮೆ ಕೇಳುತ್ತೀನಿ ಎಂದ ಸ್ನೇಹಾ

ಕ್ಷಮೆ ಕೇಳುತ್ತೀನಿ ಎಂದ ಸ್ನೇಹಾ

ಸ್ನೇಹಾ ಅಮ್ಮನ ಬಳಿ ಮಾತಾಡಿರುವುದನ್ನು ನೋಡಿ ಅಮ್ಮ ಮದುವೆಗೆ ಒಪ್ಪಿಗೆ ಕೊಡುವುದಿಲ್ಲ ಎಂದು ಭಯಗೊಳ್ಳುತ್ತಾನೆ ಕಂಠಿ. ಬಳಿಕ ಸ್ನೇಹಾ, ಬಂಗಾರಮ್ಮನ ಬಳಿ ಮನವಿ ಮಾಡಿಕೊಳ್ಳುತ್ತಾಳೆ. ನನ್ನ ಅತ್ತಿಗೆಯನ್ನು ಹಾಗೂ ಅಣ್ಣನನ್ನು ಒಂದು ಮಾಡಿ ಪುಣ್ಯ ಕಟ್ಟಿಕೊಳ್ಳಿ ಬಂಗಾರಮ್ಮನವರೆ. ಅವರು ಜೀವನದಲ್ಲಿ ಬಹಳ ನೊಂದು ಕೊಂಡಿದ್ದಾರೆ. ಇದಕ್ಕಾಗಿ ನಾನು ನಿಮ್ಮ ಬಳಿ ಕ್ಷಮೆ ಕೇಳಲು ಸಿದ್ದನಿರುವೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗರಮ್ಮ ಸುಮ್ಮನಿರುತ್ತಾರೆ. ಬಳಿಕ ಬಂಗಾರಮ್ಮ ಹೇಳುತ್ತಾಳೆ ಇದನ್ನೆಲ್ಲ ಕೇಳೋಕೆ ನೀನ್ಯಾರು ಎಂದು ಹೇಳುತ್ತಾಳೆ. ಅದಕ್ಕೆ ಸ್ನೇಹಾ ಹೇಳುತ್ತಾಳೆ ನಿಮ್ಮ ಮಗಳಿಗೆ ನಿಮಗೆ ನ್ಯಾಯ ಹೇಳಲು ಸಾಧ್ಯ ಆಗುತ್ತಿಲ್ಲ ಇನ್ನೂ ಊರಿಗೆ ಏನು ನ್ಯಾಯ ಹೇಳುತ್ತೀರಿ ನೀವು ಎಂದು ಕೇಳುತ್ತಾಳೆ. ಅದಕ್ಕೆ ಸಿಟ್ಟುಗೊಂಡ ಬಂಗಾರಮ್ಮ ಏನು ಮಾತನಾಡದೆ ಬಾ ವಸು ಹೋಗೋಣ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇದನ್ನೆಲ್ಲ ನೋಡಿದ ನಂಜವ್ವ ಮನದಲ್ಲೆ ಖುಷಿ ಪಡುತ್ತಾರೆ.

More from Filmibeat

English summary
Kannada serial Puttakkana Makkalu written updated on 19th September. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X