Puttakkana Makkalu: ಪುಟ್ಟಕ್ಕಗೆ ಹೃದಯಾಘಾತ: ಗೆಳತಿ ನೋಡಲು ಆಸ್ಪತ್ರೆಗೆ ಬಂದ ಬಂಗಾರಮ್ಮ
ತನ್ನ ಮೆಸ್ ಇನ್ನಿಲ್ಲ. ತಾನು ಅಷ್ಟು ಕಷ್ಟ ಪಟ್ಟು ಮೆಸ್ ನನ್ನು ಕಟ್ಟಿದೆ ಆದರೆ ಇದೀಗ ಮೆಸ್ ಬೆಂಕಿ ಗೆ ಆಹುತಿ ಆಗಿ ಹೋಗಿದೆ ಎನು ಮಾಡುವುದು ಎಂದು ತಿಳಿಯದೇ ಪುಟ್ಟಕ್ಕ ಬಹಳ ಅಳುತ್ತಾಳೆ. ಪುಟ್ಟಕ್ಕನ ಸ್ಥಿತಿ ಕಂಡು ಆಕೆಯ ಮಕ್ಕಳು ಮರುಗುತ್ತಾರೆ.
ಏನು ಮಾಡುವುದು ಎಂದು ತಿಳಿಯದೇ ಪುಟ್ಟಕ್ಕ ಮಾತ್ರ ಮೌನಿ ಆಗಿ ಬಿಡುತ್ತಾಳೆ. ಅಷ್ಟರಲ್ಲಿ ರಾಜಿ ಬರುತ್ತಾಳೆ. ಆಕೆಯ ಮೇಲೆ ಎಲ್ಲರಿಗೂ ಅನುಮಾನ. ಈಕೆಯಿಂದಲೇ ಇಷ್ಟೆಲ್ಲ ಆಗಿದ್ದು ಎಂದು ಊರವರು ಮಾತನಾಡಿಕೊಂಡು ಇರುತ್ತಾರೆ. ಇನ್ನೂ ಬಂಗಾರಮ್ಮನಿಗೆ ಮಾತ್ರ ಪೊಲೀಸ್ ಮಾತನ್ನು ಕೇಳಿ ಶಾಕ್ ಆಗುತ್ತದೆ.

ಪುಟ್ಟಕ್ಕನ ಮೆಸ್‌ಗೆ ಬೆಂಕಿ ಇಟ್ಟಿದ್ದು ಮಾರನಾ? ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ. ಅಷ್ಟರಲ್ಲಿ ಮಾರ ಮಾಡಿದ ಕೆಲಸಕ್ಕೆ ಪ್ರೂಫ್ ಕೂಡ ಸಿಗುತ್ತದೆ. ಮಾರ ಮಾಡಿದ ಕೆಲಸ ನೋಡಿ ಬಂಗಾರಮ್ಮಗೆ ಬಹಳ ಬೇಸರ ಆಗುತ್ತದೆ. ಪುಟ್ಟಕ್ಕ ಏನು ತಪ್ಪು ಮಾಡದೇ ಹೋದರು ಮಾರ ಯಾಕೆ ಹೀಗೆ ಮಾಡಿದ ನನ್ನ ಮಾತನ್ನು ಕೇಳದೇ ಈ ರೀತಿ ಎಲ್ಲಾ ಮಾಡುವುದು ಇಲ್ಲ ಅಲ್ವಾ? ಅಂದು ಹೇಳುತ್ತ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ಇನ್ನೂ ರಾಜೀ ತೋರಿಸಿದ ವಿಡಿಯೋ ಕಂಡು ಪುಟ್ಟಕ್ಕ ಮಾತ್ರ ಅದನ್ನೇ ದಿಟ್ಟಿಸಿ ನೋಡುತ್ತಾ ಇರುತ್ತಾಳೆ..
ಮಾರನ ನೋಡಿ ಬಂಗಾರಮ್ಮ ಶಾಕ್
ಬಂಗಾರಮ್ಮನ ಜೊತೆ ಬಂದಿದ್ದ ಮಾರನನ್ನು ಆ ಫೋಟೋದಲ್ಲಿ ಕಂಡು ಪುಟ್ಟಕ್ಕ, ಕಂಠಿ ಬಳಿ ತೋರಿಸುತ್ತಾಳೆ. ಏನಪ್ಪಾ ಇವನು ನಿಮ್ಮ ಕಡೆಯವನ ಎಂದು ಕೇಳುತ್ತಳೆ. ಆಗ ಕಂಠಿಗೆ ಮಾರನನ್ನು ಕಂಡು ಶಾಕ್ ಆಗುತ್ತದೆ. ಈ ವೇಳೆ ಪುಟ್ಟಕ್ಕ ಕೇಳಿದ ಪ್ರಶ್ನೆಗೆ ಉತ್ತರ ಹೇಳುತ್ತಾನೆ ಕಂಠಿ. ಹೌದು ಅವ್ವ ಎಂದಾಗ ಪುಟ್ಟಕ್ಕಗೆ ಆಘಾತ ಆಗುತ್ತದೆ.

ಪುಟ್ಟಕ್ಕನ ಮೆಸ್ ಸುಟ್ಟು ಭಸ್ಮ
ಬಹಳ ಆಲೋಚನೆ ಮಾಡುತ್ತಾ ಆಘಾತಗೊಂಡು ಪುಟ್ಟಕ್ಕ ಎದೆ ಹಿಡಿದುಕೊಂಡು ಕೆಳಗೆ ಕುಸಿದು ಬೀಳುತ್ತಾಳೆ. ಇದನ್ನು ನೋಡಿದ ಅಲ್ಲಿದ್ದವರು ಶಾಕ್‌ಗೆ ಒಳಗಾಗುತ್ತಾರೆ. ಏನಾಯಿತು ಪುಟ್ಟಕ್ಕಗೆ ಎಂದು ಎಲ್ಲರೂ ಆತಂಕ ಪಡುತ್ತಾರೆ. ಇದೆಲ್ಲ ನೋಡಿದ ಕಂಠಿಗೆ ಶಾಕ್ ಆಗುತ್ತದೆ. ಇದೆಲ್ಲ ನನ್ನಿಂದಾನೆ ಆಗಿರುವುದು ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾನೆ.
ಅವ್ವನನ್ನು ಆಸ್ಪತ್ರೆಗೆ ಕರೆದೊಯ್ದ ಮಕ್ಕಳು
ಇನ್ನೂ ಪುಟ್ಟಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಇನ್ನುಮುಂದೆ ಆಕೆಗೆ ಯಾವುದೇ ವಿಚಾರ ಹೇಳಬಾರದು. ಆಕೆಯ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಆಕೆಗೆ ಆಘಾತ ಆಗುವ ಯಾವ ವಿಚಾರ ಹೇಳಬಾರದು ಎಂದು ಡಾಕ್ಟರ್ ಹೇಳಿರುವುದು ಸ್ನೇಹಾಗೆ ನೆನಪು ಆಗುತ್ತದೆ.
ಅಮ್ಮನ ಸ್ಥಿತಿ ನೆನೆದು ಅತ್ತ ಮಕ್ಕಳು
ತನ್ನ ಅವ್ವ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಂಡು ಇರುವುದನ್ನು ನೋಡಿದ ಮನೆ ಮಂದಿ ಬಹಳ ಬೇಸರ ಪಡುತ್ತಿದ್ದಾರೆ. ಇನ್ನೂ ಪುಟ್ಟಕ್ಕ ಆಸ್ಪತ್ರೆಗೆ ಸೇರಿದ್ದಾರೆ ಎನ್ನುವ ವಿಚಾರ ಕೇಳಿ ಬಂಗಾರಮ್ಮ ಪುಟ್ಟಕ್ಕನ ಬಳಿಗೆ ಓಡಿ ಬರುತ್ತಾಳೆ. ಅಷ್ಟರಲ್ಲಿ ಸ್ನೇಹಾ ಇತ್ತ ಕಂಠಿಯನ್ನು ತರಾಟೆಗೆ ತೆಗೆದುಕೊಂಡು ಬಿಡುತ್ತಾಳೆ. ಏನು ಮಾಡದ ಕಂಠಿ ಮಾತ್ರ ಸ್ನೇಹಾ ಕೈಯಿಂದ ಬೈಗುಳ ಕೇಳುವ ಪರಿಸ್ಥಿತಿ ಬಂದೊದಗಿದೆ.


Click it and Unblock the Notifications











