Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವರಮಹಾಲಕ್ಷ್ಮೀ ಹಬ್ಬದ ಸಂತಸದಲ್ಲಿರುವ ಪುಟ್ಟಕ್ಕನ ಸಂಸಾರ
'ಪುಟ್ಟಕ್ಕನ ಮಕ್ಕಳು' ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಮುರಳಿ ಮೇಷ್ಟ್ರು ಸಹನಾಗೆ ಪ್ರಪೋಸ್ ಮಾಡಿದ್ದಾರೆ. ಸಹನಾ ಇದರಿಂದ ಸ್ವಲ್ಪ ಶಾಕ್ ಆದರೂ ಮನದಲ್ಲಿ ಖುಷಿಪಟ್ಟುಕೊಂಡಿದ್ದಾಳೆ. ನನ್ನ ಮನಸ್ಸಲ್ಲಿದ್ದುದನ್ನು ನಿಮಗೆ ಹೇಳಿದ್ದೇನೆ. ನಿಮ್ಮ ಮನಸ್ಸಿನಲ್ಲಿ ಇರುವುದನ್ನು ಹೇಳಿ ಎಂದು ಮುರಳಿ ಮೇಷ್ಟ್ರು ಕೇಳುತ್ತಾರೆ.
ಆಗ ಸಹನಾ ಏನೂ ಹೇಳದೆ ಮುಂದೆ ಹೋಗುತ್ತಾಳೆ. ಮುರಳಿ ಮೇಷ್ಟ್ರು ಸಹನಾ ಮಾತಿಗೆ ಕಾಯುತ್ತಾ ಇರುತ್ತಾರೆ. ಮುರಳಿ ಹೇಳುತ್ತಾರೆ ಸಹನಾ ಅವರೇ ಏನೇ ಇದ್ದರೂ ಹೇಳಿ ಬಿಡಿ ದಯವಿಟ್ಟು ಏನು ಹೇಳದೆ ಹಾಗೆ ಹೋಗಬೇಡಿ. ಪ್ಲೀಸ್.. ಎಂದಾಗ ಸಹನಾ ಹೇಳುತ್ತಾಳೆ ಮನೆಗೆ ಬಂದು ಮಾತನಾಡಿ ಎಂದು ಹೇಳುತ್ತಾಳೆ ಅದಕ್ಕೆ ಮೇಷ್ಟ್ರು ಹಾ.. ಖಂಡಿತ ಪಕ್ಕಾ ಬಂದು ಮಾತನಾಡುತ್ತೇನೆ ಎನ್ನುತ್ತಾರೆ.
ಜೊತೆ
ಜೊತೆಯಲಿ:
ಅನು
ಸ್ನೇಹಿತೆ
ರಮ್ಯಾ
ಪಾತ್ರಧಾರಿ
ಪ್ರಿಯದರ್ಶಿನಿ
ಬಗ್ಗೆ
ಇಂಟ್ರಸ್ಟಿಂಗ್
ಸ್ಟೋರಿ!
ನಿಮಗೆ ನಾನು ಒಪ್ಪಿಗೆ ತಾನೇ. ಅದರ ಬಗ್ಗೆ ನೀವೇನು ಹೇಳೆ ಇಲ್ಲ. ಎಂದಾಗ ಸಹನಾ ಹೇಳುತ್ತಾಳೆ ಆಗಲೇ ಹೇಳಿದ್ದೀನಿ ಎಂದು ಜೋಡಿ ದೀಪ ಹಚ್ಚುತ್ತಾಳೆ. ಇದನ್ನು ಕಂಡ ಮೇಷ್ಟ್ರು ಏನಿದು ದೀಪ ಏನು ಸಹನಾ ಅವರೇ ನನಗೇ ಎನು ಅರ್ಥ ಆಗುತ್ತಿಲ್ಲ ಎಂದಾಗ ಊರ ಹೆಂಗಸರು ಬರುತ್ತಾರೆ. ಅವರಿಬ್ಬರೂ ಮಾತನಾಡಿಕೊಳ್ಳುತ್ತಿದ್ದರು ನೋಡೆ ಯವ್ವಿ ಯಾರೋ ಜೋಡಿ ದೀಪ ಹಚ್ಚಿದ್ದಾರೆ ಎನ್ನುತ್ತಾಳೆ. ಅದಕ್ಕೆ ಮತ್ತೊಬ್ಬಳು ಕೇಳುತ್ತಾಳೆ ಜೋಡಿ ದೀಪ ಅಂದರೆ ಏನು ಎಂದು ಕೇಳುತ್ತಾಳೆ ಅದಕ್ಕೆ ಮತ್ತೊಬ್ಬಾಕೆ ಹೇಳುತ್ತಾಳೆ ಗಂಡ ಹೆಂಡತಿಯರು ಸಾಯೋ ತನಕ ಒಟ್ಟಿಗೆ ಇರಬೇಕು ಎಂದು ಜೋಡಿ ದೀಪ ಹಚ್ಚುತ್ತಾರೆ ಎಂದಾಗ ಸಹನಾ ಮೇಷ್ಟ್ರು ಮುಖ ನೋಡಿ ಜೋರಾಗಿ ನಗುತ್ತಾಳೆ. ಇದನ್ನು ಕೇಳಿ ಮೇಷ್ಟ್ರು ಖುಷಿಯಾಗುತ್ತಾರೆ. ಬಳಿಕ ಅಲ್ಲಿಂದ ಸಹನಾ ನಾಚಿ ಓಡಿ ಹೋಗುತ್ತಾಳೆ.

ಅಕ್ಕಂದಿರ ಮೇಲೆ ಸಿಡುಕಿದ ಸುಮಾ
ಪುಟ್ಟಕ್ಕನ ಮನೆಯಲ್ಲಿ ವರ ಮಹಾಲಕ್ಷ್ಮೀ ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ಸ್ನೇಹಾ, ಸಹನಾ ಅದಕ್ಕೆ ಬೇಕಾದ ತಯಾರಿಯನ್ನು ನಡೆಸುತ್ತಿದ್ದಾರೆ. ಇನ್ನೂ ಸುಮಾ ಮಲಗಿ ನಿದ್ರೆಗೆ ಜಾರಿರುತ್ತಾಳೆ. ಇನ್ನೂ ಸ್ನೇಹಾ ಬೀರು ಮೇಲಿರುವ ಕಬ್ಬಿಣದ ಪೆಟ್ಟಿಗೆಯಿಂದ ದೀಪಗಳನ್ನು ತೆಗೆಯುತಿರುತ್ತಾಳೆ. ಆಗ ಸುಮಾ ನಿದ್ದೆಯಿಂದ ಎದ್ದು, ಏನು ನಿಮ್ಮ ಗಲಾಟೆ ಬೆಳಗ್ಗೇನೆ ಎಂದಾಗ ಸ್ನೇಹಾ ಹೇಳುತ್ತಾಳೆ ನಾವು ಕೆಲಸ ಮಾಡುತ್ತಿದ್ದರೆ ಅದು ನಿನಗೆ ಗಲಾಟೆನಾ ಎಂದಾಗ ಸುಮಾ ಹೇಳುತ್ತಾಳೆ ಈ ಸದ್ದು ಕನಸಲ್ಲಿ ಬೇರೆಯೇ ರೀತಿ ಕೇಳಿಸುತ್ತಿತ್ತು. ಎಷ್ಟು ಭಯದಲ್ಲಿ ಎದ್ದೆ ಗೊತ್ತಾ ಎಂದು ಹೇಳಿ ಟೈಮ್ ಎಷ್ಟಯ್ತು ಎಂದು ವಾಚ್ ನೋಡುತ್ತಾಳೆ ಸುಮಾ.

ದಿಢೀರನೆ ಅಯ್ಯೋ ಎಂದು ಕಿರುಚಿದ ಸುಮಾ
ಟೈಮ್ ನೋಡಿದ ಕೂಡಲೇ ಸುಮಾ ಅಯ್ಯೋ ಎಂದು ಕಿರುಚಿಕೊಳ್ಳುತ್ತಾಳೆ. ಆಗ ಸಹನಾ ಹೇಳುತ್ತಾಳೆ ಏನು. ಇಂದು ಬೆಳ್ಳಂಬೆಳಗ್ಗೆ ಎದ್ದು ಅಯ್ಯೋ ಎನ್ನುತ್ತಿದ್ದೀಯ ಮತ್ತೆ ಮಲಗಿ ಬಲಗಡೆಯಿಂದ ಎದ್ದೇಳು ಎಂದು ಹೇಳುತ್ತಾಳೆ. ಆಗ ಸುಮಾ ನನಗೆ ಲೇಟ್ ಆಯ್ತು ಸ್ನೇಹಾ ಅಕ್ಕ ನೀನು ರೆಡಿ ತಾನೇ ಎಂದಾಗ ಸ್ನೇಹಾ ಹೇಳುತ್ತಾಳೆ ನೀನು ಕಾಲೇಜಿಗೆ ಹೋಗಲು ನಾನು ಯಾಕೆ ರೆಡಿ ಆಗಬೇಕು. ಅದಕ್ಕೆ ಸುಮಾ ಏನೋ ಬಡ ಬಡಯಿಸುತ್ತಾರೆ. ಅದಕ್ಕೆ ಸಹನಾ ಹೇಳುತ್ತಾಳೆ ನನ್ನ ಯಾವುದಕ್ಕೂ ಎಳೆಯ ಬಿಡಿ ಕಾಲೇಜು ವಿಚಾರ ನಿಂದು ಮತ್ತು ಸ್ನೇಹಾನದ್ದು. ಎಂದಾಗ ಇನ್ನೂ ನಮ್ಮಿಬ್ಬರಿಗಿಂತ ಕಾಲೇಜು ವಿಚಾರ ನಿನ್ನದೊಬ್ಬಳದ್ದೆ ಎಂದು ಕಿಚಾಯಿಸುತ್ತಾಳೆ ಸುಮಾ.

ಹಬ್ಬ ಎನ್ನುವುದು ಮರೆತಿರುವ ಸುಮಾ
ಅದಕ್ಕೆ ಸಹನಾ ಹೇಳುತ್ತಾಳೆ ಸ್ನೇಹಾ ಬಾರವ್ವಿ ಅವಳು ಏನೇನೋ ಹೇಳುತ್ತಾಳೆ ಬಾ ನಾವು ದೀಪಗಳನ್ನು ತೊಳಿಯೋಣ ಎಂದು ಹೇಳಿ ಹೊರಡುತ್ತಾರೆ. ಈ ವೇಳೆ ಸ್ನೇಹಾಳನ್ನು ತಡೆದ ಸುಮಾ ಕಾಲೇಜಿಗೆ ಬರುತ್ತೇನೆ ಎಂದು ಹೇಳಿ ಏನ್ಮಾಡ್ತಾ ಇದ್ದೀಯಾ ಟೈಮ್ ಆಯ್ತು. ರೆಡಿಯಾಗು ಎಂದಾಗ ಸ್ನೇಹಾ ಹೇಳುತ್ತಾಳೆ ಮೊದಲು ನೀನು ರೆಡಿಯಾಗು ಆದರೆ ಕಾಲೇಜಿಗಲ್ಲ ಹಬ್ಬಕ್ಕೆ ಎಂದು ಹೇಳುತ್ತಾಳೆ. ಇವತ್ತು ವರ ಮಹಾಲಕ್ಷ್ಮಿ ಹಬ್ಬ ಕಣೆ ಎಂದಾಗ ಹೇಳುತ್ತಾರೆ ಹಾಗಾದರೆ ಕಾಲೇಜು ಇಲ್ವಾ ಎಂದು ಸುಮಾ ಕೇಳುತ್ತಾಳೆ. ಬಳಿಕ ಪುಟ್ಟಕ್ಕನ ಬಳಿ ಬಂದ ಸುಮಾ ಅವ್ವ ಎನ್ನುತ್ತಾಳೆ.

ಸುಮಾಳನ್ನು ಪ್ರೀತಿಯಿಂದ ಬೈಯ್ಯುವ ಪುಟ್ಟಕ್ಕ
ಬಳಿಕ ಪುಟ್ಟಕ್ಕ ಕೇಳುತ್ತಾಳೆ ಈಗ ಎದ್ದೀಯಾ ಹೋಗು ಬೇಗ ಹೋಗು ಸ್ನಾನ ಮಾಡು. ಎಂದು ಹೇಳುತ್ತಾಳೆ. ಅದಕ್ಕೆ ಸುಮಾ ಹೇಳುತ್ತಾಳೆ ಹಬ್ಬ ಅಂತ ಯಾರು ಹೇಳಿಲ್ಲ. ಎಂದಾಗ ಪುಟ್ಟಕ್ಕ ಹೇಳುತ್ತಾಳೆ ಹಬ್ಬ ಅಂತ ಯಾರಾದ್ರೂ ಹೇಳಿಕೊಂಡು ಓಡಾಡುತ್ತಾರೆ. ಎಂದಾಗ ಸುಮಾ ಹೇಳುತ್ತಾಳೆ ಯಾಕಮ್ಮ ಕೋಪ ಮಾಡುತ್ತೀಯಾ ಎಂದಾಗ ಹೋಗಮ್ಮ ಸ್ನಾನ ಮಾಡು ಇನ್ನೂ ತುಂಬಾ ಕೆಲಸ ಇದೆ ಎಂದು ಬಿರ ಬಿರನೆ ಮುಂದಕ್ಕೆ ನಡೆದು ಬಿಟ್ಟಳು ಪುಟ್ಟಕ್ಕ.