Don't Miss!
- Sports
ಜಸ್ಪ್ರೀತ್ ಬೂಮ್ರಾ ಪಾಕ್ ವೇಗಿ ಶಾಹಿನ್ ಅಫ್ರಿದಿಯ ಹತ್ತಿರಕ್ಕೂ ಬರಲ್ಲ ಎಂದ ಪಾಕ್ ಮಾಜಿ ಕ್ರಿಕೆಟಿಗ
- News
ಬಿಬಿಸಿ ಸಾಕ್ಷ್ಯಚಿತ್ರ ವಿವಾದ: ಫೆಬ್ರವರಿ 6 ರಂದು ಕೇಂದ್ರದ ನಿಷೇಧದ ವಿರುದ್ಧದ ಮನವಿ ಆಲಿಸಲು SC ಒಪ್ಪಿಗೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಂಠಿ ಜೊತೆ ಇರುವ ಸ್ನೇಹಾಳನ್ನು ಬಂಗಾರಮ್ಮ ನೋಡೆ ಬಿಟ್ಟಳಾ?
ಪುಟ್ಟಕ್ಕ ಇದೀಗ ಸ್ನೇಹಾ ಹಾಗೂ ಶ್ರೀ ಚಿಂತೆಯಲ್ಲಿ ಇದ್ದಾಳೆ. ಶ್ರೀ ಅಸ್ವಸ್ಥನಾದ ವಿಚಾರ ಸ್ನೇಹಾ ಅಮ್ಮನ ಬಳಿ ಹೇಳುತ್ತಾಳೆ ಜೊತೆಗೆ ಆಸ್ಪತ್ರೆಗೆ ಸೇರಿಸಿದ್ದೇನೆ ಎಂದು ಕೂಡ ಹೇಳಿದ್ದಾಲೆ. ಇದನ್ನು ಕೇಳಿದ ಪುಟ್ಟಕ್ಕ ಕೊಂಚ ನಿರಾಳ ಆದರೂ ಮನೆಗೆ ಬಂದು ಅದೇ ಮಾತನಾಡುತ್ತಾ ಇದ್ದಾಳೆ. ಶ್ರೀಗೆ ಅದೇನಾಯ್ತೋ ಇದಕ್ಕಿಂತ ಮುಂಚೆ ಅವರ ಮೇಲೆ ದಾಳಿ ಆಗಿತ್ತು ಇದೀಗ ಪುನಃ ಅದೇನು ಸಮಸ್ಯೆ ಆಗಿದೆಯೋ ಎಂದು ಮಾತನಾಡುತ್ತಾ ಇರುತ್ತಾರೆ.
ಈ ವೇಳೆ ಸುಮಾ ಬಹಳ ಬೇಸರದಿಂದ, 'ಕಪ್ಪು ಗೆದ್ದಿರುವ ವಿಚಾರವನ್ನು ಖುಷಿಯಲ್ಲಿ ಸೆಲೆಬ್ರೇಟ್ ಮಾಡಬೇಕು ಅಂದುಕೊಂಡು ಇದ್ದೆ ಆದರೆ ಇಲ್ಲಿ ಏನೇನೋ ಆಗುತ್ತಿದೆ. ಏನು ಆಗದೆ ವಾಪಸ್ ಬಂದರೆ ಸಾಕು ಎಂದು ಯೋಚನೆ ಮಾಡುತ್ತಾಳೆ. ಇತ್ತ ಮುಂಗುಸಿಗೆ ಕರೆ ಮಾಡಿದ ಸ್ನೇಹಾ, ಕಂಠಿ ಜ್ವರ ಹೆಚ್ಚಾಗಿ ಆಸ್ವಸ್ಥ ಆಗಿರುವ ವಿಚಾರ ಹೇಳುತ್ತಾಳೆ. ಜೊತೆಗೆ ಆಸ್ಪತ್ರೆಗೆ ಸೇರಿಸಿದ ಬಗ್ಗೆಯೂ ಹೇಳುತ್ತಾಳೆ. ಇದನ್ನು ಕೇಳಿದ ಮುಂಗುಸಿಗೆ ಶಾಕ್ ಆಗುತ್ತದೆ. ಇದನ್ನು ವಸು ಬಳಿ ಕೂಡ ಹೇಳುತ್ತಾಳೆ. ಇದನ್ನು ಕೇಳಿ ವಸುಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ಯಾಕಾದರೂ ಅಣ್ಣಯ್ಯ ಹೊರಗೆ ಹೋದನು ಎಂದು ಬೇಸರ ಪಟ್ಟುಕೊಳ್ಳುತ್ತಾಳೆ ವಸು.
ಇತ್ತ ಬಂಗಾರಮ್ಮನ ಮನೆಗೆ ಡಾಕ್ಟರ್ ಬರುತ್ತಾರೆ. ಡಾಕ್ಟರ್ ಕಂಠಿ ರೂಮ್ ಬಳಿ ಅದೆಷ್ಟು ಬಾರಿ ಬಂದು ಕದ ತಟ್ಟುತ್ತಾರೆ ಇದನ್ನು ಕೇಳಿದ ಮುಂಗುಸಿ, ನಾಗ ಹಾಗೂ ವಸುಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಬಳಿಕ ಡಾಕ್ಟರ್ ಹತ್ತಿರ ಬಂದ ಬಂಗಾರಮ್ಮ ಏನಾಯಿತು ಬಾಗಿಲು ತೆಗೆಯುತ್ತಿಲ್ವಲ್ಲ ಎಂದು ಯೋಚನೆ ಮಾಡುತ್ತಾ ಬಾಗಿಲು ತಟ್ಟುತ್ತಾರೆ ಈ ವೇಳೆ ಬಾಗಿಲು ತೆಗೆದ ಮುಂಗುಸಿ ಬನ್ನಿ ಡಾಕ್ಟರ್ ಕಂಠಿಗೆ ಜ್ವರ ಹೆಚ್ಚಾದ ಹಾಗೆ ಕಾಣುತ್ತಿದೆ ಎಂದು ಹೇಳುತ್ತಾನೆ.

ವೈದ್ಯರಿಗೆ ಬೆದರಿಕೆ ಹಾಕಿದ ಕಂಠಿಯ ಗೆಳೆಯರು
ಇದನ್ನು ಕೇಳಿದ ಬಂಗಾರಮ್ಮ ಹೇಳುತ್ತಾರೆ ಏನು ಕಂಠಿಗೆ ಜ್ವರ ಜೋರಾಯಿತ ಎಂದು ಹೇಳಿ ಒಳಗೆ ಬರಬೇಕು ಅನ್ನುವಷ್ಟರಲ್ಲಿ ಬಂಗಾರಮ್ಮನನ್ನು ವಸು ಅಡ್ಡಗಟ್ಟಿ ಅಮ್ಮ ನೀನು ಹೋಗಬೇಡ ಡಾಕ್ಟರ್ ಏನು ಹೇಳುತ್ತಾರೋ ನೋಡೋಣ ಎಂದು ಹೇಳುತ್ತಾಳೆ. ರೂಮಿನ ಒಳಗೆ ಹೋದ ಡಾಕ್ಟರ್‌ಗೆ ನಾಗ ಹಾಗೂ ಮುಂಗುಸಿ ಇಬ್ಬರು ಬೆದರಿಕೆ ಹಾಕುತ್ತಾರೆ ಇದನ್ನು ನೋಡಿ ಹೆದರಿದ ಡಾಕ್ಟರ್ ಮುಂಗುಸಿ ಹೇಳಿ ಕೊಟ್ಟ ಹಾಗೆಯೇ ಬಂಗಾರಮ್ಮನ ಬಳಿ ಹೇಳಿ ಆಸ್ಪತ್ರೆಗೆ ಈಗಲೇ ಹೋಗಬೇಕು ಎಂದು ಬೆಡ್ ಅಲ್ಲಿ ಮಲಗಿದ್ದ ನಾಗನನ್ನು ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗುತ್ತಾರೆ ಇನ್ನೂ ನಾಗ ಆಂಬುಲೆನ್ಸ್‌ನಲ್ಲಿ ಕುಳಿತುಕೊಂಡು ಲೋ ಮುಂಗುಸಿ ಬಂಗಾರಮ್ಮ ನಮ್ಮನ್ನೇ ಫಾಲೋ ಮಾಡಿಕೊಂಡು ಬರುತ್ತಿದ್ದಾರೆ ಎನ್ನುತ್ತಾರೆ.

ಬಂಗಾರಮ್ಮನಿಗೆ ಯಾಮಾರಿಸಿದ ಕಂಠಿ ಗೆಳೆಯರು
ಒಂದು ವೇಳೆ ಅವರಿಗೆ ಗಾಡಿಯಲ್ಲಿ ಇರೋದು ನಾನು ಎಂದು ಗೊತ್ತಾದರೆ ನನ್ನ ಕಥೆ ಮುಗೀತು ಎಂದು ಅಳುತ್ತಾನೆ. ಈ ವೇಳೆ ಡಾಕ್ಟರ್ ಮಾತ್ರ ನನ್ನನ್ನು ಬಿಟ್ಟು ಬಿಡಿ ನಾನು ಎಲ್ಲಾದರೂ ಹೋಗುತ್ತೇನೆ ಎಂದು ಹೇಳುತ್ತಾರೆ ಇದನ್ನು ಕೇಳದೆ ನೀನು ಬಿಟ್ಟು ಹೋದರೆ ನನಗೆ ಕಷ್ಟ ಎಂದೆಲ್ಲ ಹೇಳುತ್ತಾರೆ. ನೀನು, ನಾನು ಮುಂಗುಸಿ ಜೈಲಲ್ಲಿ ಇರಬೇಕಾಗುತ್ತದೆ ಎಂದು ನಾಗ ಹೇಳುತ್ತಾನೆ. ಇನ್ನು ಮುರಳಿ ಮೇಷ್ಟ್ರು ಶಾಲೆಯಿಂದ ಬರಲು ಕೊಂಚ ತಡ ಆಗಿದ್ದಕ್ಕೆ ಮೇಷ್ಟ್ರ ತಂದೆ ಮುರಳಿಗೆ ಸರಿಯಾಗಿ ಬೈಯುತ್ತಾ ಇರುತ್ತಾರೆ. ಸ್ವಲ್ಪ ತಡ ಆಗಿದ್ದರಿಂದ ಮೇಷ್ಟ್ರ ತಂದೆ ನಾನೇ ಮುರಳಿಯನ್ನು ಕಾಲೇಜಿನಿಂದ ಕರೆದುಕೊಂಡು ಬರುತ್ತೇನೆ ಇಲ್ಲ ಅಂದರೆ ಆತ ಮೆಸ್ ಬಳಿ ಹೋಗುತ್ತಾನೆ ಎಂದು ಹೇಳುತ್ತಾರೆ.

ಮೇಷ್ಟ್ರ ತಂದೆಗೆ ಮುರಳಿ ಮೇಲೆ ಅನುಮಾನ
ಇತ್ತ ಫೋನ್‌ನಲ್ಲಿ ಮುರಳಿ ಮೇಷ್ಟ್ರ ಅಕ್ಕ ಚೈತ್ರ, ಮುರಳಿ ಬಳಿ ಫೋನ್‌ನಲ್ಲಿ ಮಾತನಾಡುತ್ತಾ ಇರುವ ಹಾಗೆ ಆಕ್ಟ್ ಮಾಡುತ್ತಾರೆ. ಮುರಳಿ ಇವತ್ತು ಶಾಲೆಯಿಂದ ಬರೋದು ತಡ ಆಗುತ್ತಾ ಏನು ಸ್ಪೆಷಲ್ ಕ್ಲಾಸ್ ಇದ್ಯಾ ಸರಿ ಹಾಗಾದರೆ ಅದನ್ನು ಮುಗಿಸಿ ಬಾ ಎಂದು ಹೇಳುತ್ತಾಳೆ ಈ ಮಾತನ್ನು ಕೇಳಿ ಮೇಷ್ಟ್ರ ತಂದೆ ಒಪ್ಪಲು ತಯಾರು ಇರಲಿಲ್ಲ. ಕೊನೆಗೆ ಹೇಗಾದರೂ ಸುಮ್ಮನಾಗುತ್ತಾರೆ. ಮುರಳಿ ಮೇಷ್ಟ್ರು ಪುಟ್ಟಕ್ಕನ ಮೆಸ್ ಗೆ ಬರುತ್ತಾರೆ. ಸುಮಾ ತಂಡ ಸ್ಪರ್ದೆಯಲ್ಲಿ ವಿಜೇತೆಯಾದ ಹಿನ್ನೆಲೆ ವಿಶ್ ಮಾಡಿ ಹೋಗೋಣ ಅನ್ನುವ ಕಾರಣಕ್ಕೆ ಬರುತ್ತಾನೆ.

ಮಗನ ನೆನೆದು ಓಡಿ ಬಂದ ಬಂಗಾರಮ್ಮ
ಜೊತೆಗೆ ಸಹನಾಳನ್ನು ನೋಡಿಕೊಂಡು ಹೋದ ಹಾಗೆ ಎಂದು ಬರುತ್ತಾನೆ ಮೇಷ್ಟ್ರು ಬಂದಿದ್ದನ್ನು ನೋಡಿ ಪುಟ್ಟಕ್ಕ ಮನೆಯಲ್ಲಿ ಏನಾದರೂ ಹೇಳಿದರ ಎಂದು ಕೇಳುತ್ತಾಳೆ ಆದರೆ ಮುರಳಿ ಮಾತ್ರ ಏನಿಲ್ಲ ಹಾಗೆಯೇ ಇದ್ದಾರೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕಗೆ ಆತಂಕ ಶುರು ಆಗುತ್ತದೆ. ಇನ್ನು ಸ್ನೇಹಾ, ಕಂಠಿ ಬಳಿ ಮಾತನಾಡುತ್ತಾ ಇರುತ್ತಾಳೆ ಆದರೆ ಇದನ್ನೆಲ್ಲ ಕೇಳುವ ಪರಿಸ್ಥಿತಿಯಲ್ಲಿ ಕಂಠಿ ಇಲ್ಲ. ಈ ವೇಳೆ ಸ್ನೇಹಾ ಮನದಲ್ಲಿ ಯೋಚನೆ ಮಾಡಿ ಶ್ರೀ ಗೆ ಏನಾದರು ಕಷಾಯ ಮಾಡಿ ತರಬೇಕು ಅಂದುಕೊಳ್ಳುತ್ತಾಳೆ. ಇನ್ನು ನಾಗ ಹಾಗೂ ಮುಂಗುಸಿ ಡಾಕ್ಟರ್ ಆಸ್ಪತ್ರೆಯ ಒಳಗೆ ಓಡಿಕೊಂಡು ಬರುತ್ತಾರೆ. ಇನ್ನೂ ನನ್ನ ಮಗನಿಗೆ ಏನು ಆಗಿದೆಯೋ ಎಂದು ಅಳುತ್ತಾ ಬಂಗಾರಮ್ಮನೂ ಓಡಿಕೊಂಡು ಬರುತ್ತಾಳೆ. ಇನ್ನೂ ಮುಂದೇನು ಕಾದು ನೋಡಬೇಕಿದೆ.