Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುಟ್ಟಕ್ಕನ ಮಕ್ಕಳು: ಸಹನಾ ಮದುವೆ ಆಗಿಯೇ ಬಿಡುತ್ತಾ?
ಪುಟ್ಟಕ್ಕನ ಮಕ್ಕಳು ಧಾರವಾಹಿ ದಿನದಿಂದ ಕುತೂಹಲ ಕೆರಳಿಸುತ್ತಿದೆ. ಜನರು ಸಹನಾಳ ಪರಿಸ್ಥಿತಿ ಕಂಡು ಮರುಕ ಪಡುತ್ತಿದ್ದಾರೆ. ಸಹನಾಗೆ ಅಮ್ಮನ ಮನಸ್ಸಿಗೆ ನೋವು ನೀಡಲು ಕಿಂಚಿತ್ತೂ ಇಷ್ಟವಿಲ್ಲ ಜೊತೆಗೆ ಮುರಳಿ ಮೇಷ್ಟ್ರನ್ನು ಬಿಟ್ಟು ಇರಲಿಕ್ಕು ಆಗದೆ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾಳೆ.
ಇತ್ತ ಬಂಗಾರಮ್ಮನ ಮನೆಯಲ್ಲಿ ಕಂಠಿ, ವಸು ನಿಂತಿದ್ದಾರೆ. ಬಂಗಾರಮ್ಮ ವಸುವನ್ನು ಕೇಳುತ್ತಾಳೆ ಯಾಕೆ ಎಲ್ಲಿಗೆ ಹೋಗಿದ್ರಿ ನೀವು? ನಾನೆಷ್ಟು ಭಯ ಪಟ್ಟೆಗೊತ್ತಾ? ಯಾಕೆ ವಸು ನೀನು ಹೀಗೆ ಮಾಡಿದೆ. ಫೋನ್ ಮಾಡಿದ್ರೆ ಫೋನಲ್ಲಿ ಮಾತನಾಡಲ್ಲಾಂತ ಬೇರೆ ಹೇಳುತ್ತಿದ್ದಿ ಯಾಕೆ ಎಂದಾಗ ಕಂಠಿ ಗೆ ಏನು ಮಾಡಬೇಕೆಂದು ತಿಳಿಯದೇ ಅಮ್ಮ ನೀನು ಗಾಬರಿ ಮಾಡಬೇಡ. ಫೋನಿನಲ್ಲಿ ಅದೇನೋ ಬಾವ ಬಂದಿದ್ದರು ಅಂದೆಯಲ್ಲ ಎಂದು ಮಾತು ತಿರುಗಿಸಿದ.
ಸಹನಾ
ಮನಸ್ಸನ್ನು
ಅರ್ಥ
ಮಾಡಿಕೊಳ್ಳುತ್ತಾರಾ
ಪುಟ್ಟಕ್ಕ?
ಅದಕ್ಕೆ ಬಂಗಾರಮ್ಮ ಹೇಳುತ್ತಾಳೆ ಹೌದು ಬಂದಿದ್ದ ಆದರೆ ಅವ ಅಮ್ಮನನ್ನು ಮಾತ್ರ ಬಿಟ್ಟುಕೊಡಲು ಸಿದ್ದವೇ ಇಲ್ಲ. ಎಂದಾಗ ವಸು ಹೇಳುತ್ತಾಳೆ ಹಾ ಅಮ್ಮ ಅದೇ ಕಾರಣಕ್ಕೆ ನಾನು ಮನೆಬಿಟ್ಟು ಹೋಗಿದ್ದೆ ಎಂದಾಗ ಬಂಗಾರಮ್ಮಗೆ ಆಕಾಶವೇ ಕಳಚಿ ಬಿದ್ದಾಂತಗುತ್ತದೆ. ಬಳಿಕ ಮಾತು ಮುಂದುವರೆಸಿದ ವಸು ಅಮ್ಮ ಇವತ್ತು ಅವರನ್ನ ಮೀಟ್ ಆಗಿ ಒಂದು ತೀರ್ಮಾನ ಮಾಡಿ ಮನೆಗೆ ಬರೋಣ ಅಂದುಕೊಂಡೆ. ಅಂದು ನಾನು ಬೇಕಾ ಅಥವಾ ಅವಳು ಬೇಕಾ ಎಂದು ಅವರಮ್ಮ ಕೇಳಿದಾಗ ಒಂದು ಮಾತು ತುಟಿಕ್ ಪಿಟಿಕ್ ಎನ್ನಲಿಲ್ಲ. ಅದು ನನ್ನ ಮನಸ್ಸಿಗೆ ಬಹಳ ನೋವನ್ನು ಉಂಟುಮಾಡಿದೆ ಎಂದು ಹೇಳಿದಳು ಬೇಸರದಿಂದ. ಮಗಳ ಪರಿಸ್ಥಿತಿ ಕಂಡು ಬಂಗಾರಮ್ಮ ಮಮ್ಮಲ ಮರುಗುತ್ತಾರೆ.

ಚಂದ್ರು ಅಣ್ಣನಿಗೆ ಕರೆ ಮಾಡಿದ ಸ್ನೇಹಾ
ಇನ್ನೂ ಸ್ನೇಹಾ ಮತ್ತು ವಸು ಗಂಡ ಫೋನಿನಲ್ಲಿ ಮಾತುಕತೆಯಲ್ಲಿ ತೊಡಗಿರುತ್ತಾರೆ. ಇದನ್ನು ನಂಜಮ್ಮ ಕೇಳಿಸಿಕೊಳ್ಳುತ್ತಿದ್ದಳು. ಸ್ನೇಹಾ ಹೇಳುತ್ತಾಳೆ, ಅಣ್ಣಯ್ಯ ಅತ್ತಿಗೆ ತುಂಬಾ ಬೇಸರದಲ್ಲಿ ಇದ್ದರೂ ನೀನು ಅತ್ತಿಗೆ ಸ್ಥಿತಿ ನೋಡಬೇಕಿತ್ತು. ಬಹಳ ಬೇಸರವಾಗುತ್ತಿದೆ ಅಣ್ಣಯ್ಯ. ಎಂದು ಹೇಳಿದಾಗ ಚಂದ್ರು ಗೆ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು. ವಸು ಜೊತೆ ಒಮ್ಮೆ ಮಾತನಾಡು ಅಣ್ಣ ಎಂದು ಹೇಳುತ್ತಾಳೆ. ಬಳಿಕ ಚಂದ್ರು , ಸ್ನೇಹಾ ನಿನ್ನ ಜೊತೆ ಒಬ್ಬ ಇದ್ದಲ್ಲ ಅವ ಯಾರು ಎಂದು ಕೇಳಿದಾಗ ಯಾರಣ್ಣ ಇದ್ದಿದ್ದು , ಓ ಶ್ರೀ ಯ ಎಂದು ಹೇಳುತ್ತಾಳೆ. ಅದಕ್ಕೆ ಚಂದ್ರು ಅವನೇ ಅವನ ಮೇಲೆ ನಿನ್ನ ಒಪಿನಿಯನ್ ಹೇಗೆ ಎಂದು ಕೇಳುತ್ತಾನೆ. ಅದಕ್ಕೆ ಅವಳು ಶ್ರೀ ತುಂಬಾ ಓದಿಕೊಂಡು ಹಳ್ಳಿಗೆ ಬಂದು ವ್ಯವಸಾಯ ಮಾಡುತ್ತಿದ್ದಾರೆ ಎಂದು ಹೇಳುತ್ತಾಳೆ. ಇನ್ನೂ ಅದಕ್ಕೆ ಚಂದ್ರು ಓ ಹಾಗ ಎಂದು ಹೇಳಿ ಫೋನನ್ನು ಇಟ್ಟು ಬಾತ್ ರೂಂ ಗೆ ಹೋಗುತ್ತಾನೆ.

ಚಂದ್ರು ಮಾತನ್ನು ಕದ್ದು ಕೇಳಿಸಿಕೊಳ್ಳುತ್ತಿದ್ದ ನಂಜವ್ವ
ಇದನ್ನೇ ಕಾಯುತ್ತಿದ್ದ ನಂಜವ್ವ ಚಂದ್ರು ಫೋನನ್ನು ಮಗಳ ಕೈಯಲ್ಲಿ ತೆಗೆದುಕೊಂಡು ಬರಲು ಹೇಳುತ್ತಾಳೆ. ಅದನ್ನು ಬೇಗ ಬೇಗನೆ ತೆಗೆದುಕೊಂಡು ಅದ್ರಿಂದ ಯಾರಿಗೆ ಚಂದ್ರು ಕಾಲ್ ಮಾಡಿದ್ದಾನೆ ಎಂಬುವುದನ್ನು ತಿಳಿದುಕೊಂಡು ನಂಜವ್ವ ಮುಂದೇನು ಮಾಡುತ್ತಾಳೆ ಎಂಬುವುದನ್ನು ಕಾದುನೋಡಬೇಕಿದೆ. ಕಾಳಿ ಮನೆಯಲ್ಲಿ ಬಾರ್ ನ ಲೆಕ್ಕಾಚಾರದಲ್ಲಿ ಇರುತ್ತಾನೆ.

ಪುಟ್ಟಕ್ಕನ ಮನೆಗೆ ಹೊರಡುತ್ತಿದ್ದ ರಾಜೇಶ್ವರಿ
ಇತ್ತ ರಾಜೇಶ್ವರಿ ಹಾಗೂ ಆಕೆಯ ಗಂಡ ಪುಟ್ಟಕ್ಕನ ಮನೆಗೆ ಹೋಗಲು ರೆಡಿಯಾಗುತ್ತಿದ್ದಾರೆ. ಇನ್ನೂ ಕಾಳಿ ಹೇಳುತ್ತಾನೆ ಈ ಬಾರಿ ಬಾರ್ ನಿಂದ ಒಳ್ಳೆ ಇನ್ ಕಮ್ ಬರಲಿದೆ ಎಂದು ಹೇಳಿಕೊಂಡು ಪುಟ್ಟಕ್ಕನ ಮನೆಗೆ ಹೋಗಿದ್ಯಂತೆ ಅಕ್ಕೋ.. ಏನು ಮದುವೆ ವಿಚಾರ ಮತಾನಾಡಲು ಹೋಗಿದ್ರಾ ಅಕ್ಕ ನಿಮ್ಮಿಬ್ಬರ ಹೊಂದಾಣಿಕೆ ಮದುವೆ ಆದಗಿಂದ ನೋಡಿ ಇರಲಿಲ್ಲ. ಆದರೆ ಈಗ ನೋಡಿದ್ದೀನಿ ನಾನು ಮತ್ತು ಸಹನಾ ಮದುವೆ ಆದ ಮೇಲೆ ಹೀಗೆ ಇರುತ್ತೇವೆ ಎಂದು ಹಲ್ಲುಕಿರಿಯುತ್ತಾನೆ. ಬಳಿಕ ಅಲ್ಲಿಂದ ಬಾರ್ ಗೆ ತೆರಳುತ್ತಾನೆ. ಇತ್ತ ಇದನ್ನೆಲ್ಲ ನೋಡಿದ ರಾಜೇಶ್ವರಿ ಗಂಡ ಏನೇ ಇವ ಏನೇನೆಲ್ಲ ಮಾತನಾಡುತ್ತಿದ್ದಾನೆ. ನಿಜ ವಿಚಾರ ಗೊತ್ತಾದರೆ ನಮ್ಮಿಬ್ಬರ ಪ್ಲಾನ್ ಗೆ ಕಲ್ಲು ಬೀಳೋದು ಗ್ಯಾರಂಟಿ ಎಂದು ಹೇಳುತ್ತಾನೆ. ಅದಕ್ಕೆ ರಾಜೇಶ್ವರಿ ಎನು ಆಗುವುದಿಲ್ಲ ಸುಮ್ಮನಿರಿ ಎಂದು ಹೇಳುತ್ತಾಳೆ. ರಾಜೇಶ್ವರಿ ಪುರುಷಿನ ಕರೆದು ನಾವು ಬರೋದು ಹೊತ್ತಾಗುತ್ತದೆ ತೆಗೆದುಕೋ ಬೀಗದ ಕೀ ಎಂದು ಕೀ ಯಾನ್ನು ಕೊಟ್ಟು ಅಲ್ಲಿಂದ ತೆರಳುತ್ತಾರೆ.

ಪುಟ್ಟಕ್ಕನ ಮನೆಗೆ ಆಗಮಿಸಿದ ಗಂಡಿನ ಕಡೆಯವರು
ಪುಟ್ಟಕ್ಕ ಮೆಸ್ ನಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಜೋಯಿಸರು ಪುಟ್ಟಕ್ಕ ಗಂಡಿನ ಕಡೆಯವರು ಬರುವ ಹೊತ್ತಾಯಿತು. ಮನೆಗೆ ನಡಿ ಪುಟ್ಟಕ್ಕ ಎಂದು ಹೇಳುತ್ತಾರೆ. ಹಾ ಜೋಯಿಸರೆ ಹೋಗುತ್ತೇನೆ ಎಂದು ಹೇಳುತ್ತಾಳೆ. ಶಾಂತಕ್ಕ ಇರುತ್ತಿದ್ದರೆ ನಿನಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ವಾ ಪುಟ್ಟಕ್ಕ ಅಂದಾಗ ಯಾರೋ ಒಬ್ಬಾತ ಹೇಳುತ್ತಾನೆ ಶಾಂತಕ್ಕನ ಗಂಡ ಬಾರ್ ನಲ್ಲಿ ಕುಡಿದು ಇದೀಗ ಆಸ್ಪತ್ರೆ ಯಲ್ಲಿ ಇದ್ದಾನೆ ಎಂದು ಹೇಳುತ್ತಾರೆ ಇದನ್ನು ಕೇಳಿದ ಪುಟ್ಟಕ್ಕಗೆ ಬೇಸರವಾಗುತ್ತದೆ.

ಗಂಡಿನ ಮನೆಯವರು ಬಂದೇ ಬಿಟ್ಟರು
ಇತ್ತ ಸಹನಾಳನ್ನು ಸ್ನೇಹಾ ಹೊರಡಿಸುತ್ತಾ ಇರುತ್ತಾಳೆ. ಅಕ್ಕ ಯಾಕೆ ಕಣ್ಣಲ್ಲಿ ನೀರು ಏನಾಯಿತು ಎಂದಾಗ ಏನಿಲ್ಲ ಕಾಜಲ್ ತಾಕಿ ಕಣ್ಣಲ್ಲಿ ನೀರು ಬಂತು ಅನ್ನುತ್ತಾಳೆ ಅದಕ್ಕೆ ಅಯ್ಯೋ ನೀನು ಡೈಲಿ ಯುಸ್ ಮಾಡುವುದನ್ನು ಹಾಕಬೇಕಿತ್ತು ಎಂದು ಹೇಳುತ್ತಾಳೆ. ಆಗ ಪುಟ್ಟಕ್ಕ ಬಂದು ಸಹನಾ ಹೊರಟಳಾ ಎಂದು ಬಾಗಿಲು ತೆಗೆದು ಕೇಳುತ್ತಾಳೆ ಅದಕ್ಕೆ ಸ್ನೇಹಾ ಹೂ ಅಮ್ಮ ಹೊರಟಳು. ಕಣ್ಣಿಗೆ ಕಾಡಿಗೆ ತಾಕಿ ಸ್ವಲ್ಪ ಕಣ್ಣಲ್ಲಿ ನೀರು ಬಂದಿದೆ. ಇದೀಗ ಸರಿ ಹೋಗುತ್ತಾಳೆ ಎಂದಾಗ ಗಂಡಿನ ಕಡೆಯವರು ಬರುತ್ತಾರೆ. ಪುಟ್ಟಕ್ಕ ಗಂಡಿನ ಕಡೆಯವರು ಬಂದ್ರು ಎಂದು ಜೋರಾಗಿ ಹೇಳುತ್ತಾರೆ. ಇದನ್ನು ಕೇಳಿದ ಸಹನಾಗೆ ಆಕಾಶ ಕಳಚಿ ಬಿದ್ದ ಹಾಗೆ ಆಗುತ್ತದೆ. ಮುಂದೇನು ಮಾಡುತ್ತಾಳೆ ಸಹನಾ ಕಾದು ನೋಡಬೇಕಿದೆ.