ಪೂರ್ವಿ ಬಳಿ ನಿಜ ಹೇಳಿದ ಕಂಠಿ: ಕಂಠಿ ಮದುವೆ ತಪ್ಪುತ್ತದಾ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ನೋಡುಗರಲ್ಲಿ ಕಾತರತೆ ಹೆಚ್ಚು ಮಾಡುತ್ತಿದೆ. ಧಾರವಾಹಿ ಎಲ್ಲರ ಮನೆ ಮಾತಾಗಿದೆ. ಇದೀಗ ರಾಜೇಶ್ವರಿ ಹಾಗೂ ಗೋಪಾಲ ಪುಟ್ಟಕ್ಕ ಖೋ ಖೋ ಹೇಳಿ ಕೊಡುವಲ್ಲಿ ಎಂಟ್ರಿ ನೀಡಿದ್ದಾರೆ. ತಾಯಿ ಮಕ್ಕಳು ಕಿತ್ತಾಡುತ್ತಿರುವುದನ್ನು ನೋಡಿ ವಿಕೃತ ಆನಂದ ಪಡುತ್ತಿದ್ದಾರೆ.

ಪುಟ್ಟಕ್ಕನ ಮೇಲೆ ಸುಮಾಳನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಾಳೆ ರಾಜೇಶ್ವರಿ. ಇದನ್ನು ನೋಡಿದ ಪುಟ್ಟಕ್ಕ, ಈಗ ಜಗಳ ಆಡುತ್ತೇವೆ ರಾಜವ್ವ ಬಳಿಕ ನಾವು ಮುಂಚೆ ಹೇಗೆ ಇದ್ದೇವೋ ಹಾಗೆ ಇರುತ್ತೇವೆ. ನಮ್ಮಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮದ್ಯದಲ್ಲಿ ಬಂದ ನೀನು ಮಾತ್ರ ಹೊರಗಿನವಳಾಗಿ ಉಳಿತೀಯ. ತಾಯಿ ಮಕ್ಕಳ ಬಂದು ನೀನೇನೆ ಮಾಡಿದರು ನಮ್ಮನ್ನು ಬೇರೆ ಮಾಡಲು ನಿನ್ನಿಂದ ಸಾದ್ಯವಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ರಾಜೇಶ್ವರಿ, ಸುಮಾ ಬಳಿ ಪುಟ್ಟಕ್ಕನನ್ನು ಕೋಚ್ ಆಗಿ ಸ್ವೀಕರಿಸಲು ಹೇಳುತ್ತಾಳೆ.

ಒಂದು ವೇಳೆ ಸುಮಾ ಪುಟ್ಟಕ್ಕನನ್ನು ಖೋ ಖೋ ಕೋಚ್ ಎಂದು ಪರಿಗಣನೆ ಮಾಡಿದರೆ ನಾವು ಇಲ್ಲಿಂದ ಹೋಗುತ್ತೇವೆ. ಇಲ್ಲಾ ಎಂದಾದರೆ ನೀವು ಇಲ್ಲಿಂದ ತೆರಳಬೇಕು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಸ್ನೇಹಾ ಕುಪಿತಗೊಂಡು ಗೋಪಾಲ ನೀನು ಏನಯ್ಯ ನಿನ್ನ ಹೆಂಡತಿಯೊಂದಿಗೆ ಇರುತ್ತಿಯಾ ಆಕೆಗೆ ಬುದ್ದಿನಾದರು ಹೇಳು. ನನ್ನ ಅಮ್ಮನನ್ನು ಖೋ ಖೋ ಆಡಲು ಬಿಡದೆ ನಿನ್ನ ಕಾರ್ಯ ಸಾಧಿಸಿಕೊಂಡೆ ಅಲ್ವಾ ಎಂದು ಹೇಳುತ್ತಾಳೆ. ಬಳಿಕ ಪುಟ್ಟಕ್ಕ ಹೇಳುತ್ತಾಳೆ. ರಾಜವ್ವ ನನ್ನಿಂದ ನನ್ನ ಗಂಡನ ಕಿತ್ತುಕೊಂಡೆ. ಈಗ ಮಕ್ಕಳನ್ನು ದೂರ ಮಾಡಲು ಯತ್ನ ಮಾಡುತ್ತಿದ್ದೀಯಾ ಇದು ಮಾತ್ರ ನಿನ್ನಿಂದ ಖಂಡಿತ ಸಾಧ್ಯವಿಲ್ಲ ಎಂದು ಹೇಳುತ್ತಾಳೆ.

ಸುಮಾಳ ಬಳಿ ಹೋಗಿ ಹೋಗು ಸುಮಾ ಅಮ್ಮನ ಕೋಚ್ ಆಗಿರುತ್ತಾರೆ. ನೀನು ಆಟ ಆಡು ಎಂದು ಹೇಳುತ್ತಾಳೆ ಇದರಿಂದ ಕುಪಿತಗೊಂಡ ಸುಮಾ, ರಾಜೇಶ್ವರಿ ಮುಂದೆ ಮಾತನಾಡದೆ ಸೀದಾ ಮನೆಯತ್ತ ಮುಖ ಮಾಡುತ್ತಾಳೆ. ಇದರಿಂದ ಕೊಂಚ ಬೇಸರ ಗೊಂಡ ಸ್ನೇಹಾ ಮಾತ್ರ ರಾಜೇಶ್ವರಿಗೆ ಸಿಟ್ಟಿನಿಂದ ಬಯ್ಯುತ್ತಾಳೆ. ಎಷ್ಟೇ ಹೇಳಿದರೂ ರಾಜೇಶ್ವರಿಗೆ ಮಾನ ಮರ್ಯಾದೆ ಎನು ಇಲ್ಲ ಎಂದು ತಿಳಿಯುತ್ತದೆ. ಅಂಥವರಲ್ಲಿ ಮಾತು ಏನಕ್ಕೆ ಎಂದು ಪುಟ್ಟಕ್ಕ ಹಾಗೂ ಮಕ್ಕಳು ತೆರಳುತ್ತಾರೆ. ಇದನ್ನು ಕಂಡ ರಾಜೇಶ್ವರಿ ಜೋರಾಗಿ ನಗುತ್ತಾ ಏನಯ್ಯ ಮಜ ಬಂತಲ್ವಾ, ಪುಟ್ಟಕ್ಕ ಹಾಗೂ ಮಕ್ಕಳನ್ನು ನೋಡಿ ನನಗಂತೂ ತುಂಬಾ ಸಂತೋಷ ಆಯ್ತು. ನಿನಗೂ ಖುಷಿ ಆಯಿತಾ ಎಂದು ರಾಜೀ ಗಂಡನ ಬಳಿ ಕೇಳುತ್ತಾಳೆ.

ವಸು ಬಳಿ ಕಷ್ಟ ತೋಡಿಕೊಳ್ಳುತ್ತಿರುವ ಕಂಠಿ

ವಸು ಬಳಿ ಕಷ್ಟ ತೋಡಿಕೊಳ್ಳುತ್ತಿರುವ ಕಂಠಿ

ಇನ್ನೂ ಕಂಠಿ ತನ್ನ ತಂಗಿ ವಸು ಬಳಿ ಮದುವೆ ಬಗ್ಗೆ ಮಾತುಕತೆ ನಡೆಸುತ್ತಿದ್ದಾನೆ. ಕಂಠಿಗೆ ಪೂರ್ವಿನ ಕಂಡರೆ ಸ್ವಲ್ಪವೂ ಇಷ್ಟವಿಲ್ಲ ಆದರೂ ನಿಶ್ಚಿತಾರ್ಥದ ವರೆಗೆ ಮಾತುಕತೆಯಾಗಿದೆ. ತಂಗಿ ವಸು ಬಳಿ, ''ಪೂರ್ವಿ ಬಳಿ ಹೇಳಿ ಈ ಮದುವೆ ಮಾತುಕತೆಯನ್ನು ಹೇಗಾದರೂ ಮಾಡಿ ನಿಲ್ಲಿಸುತ್ತೇನೆ. ಅಮ್ಮ ಹಾಗೂ ಪೂರ್ವಿ ಮಾಡಿರುವ ಕೆಲಸದಿಂದ ಅದೆಷ್ಟು ತೊಂದರೆ ಆಯಿತು ಎಂದೆಲ್ಲಾ ಹೇಳುತ್ತಾ ಇರುತ್ತಾನೆ. ಈ ವೇಳೆ ಬಂಗಾರಮ್ಮ ಬರುತ್ತಾಳೆ ಬಂದು ನಿಶ್ಚಿತಾರ್ಥದ ನಡೆಸಲು ಬೇಕಾಗುವ ವಸ್ತುಗಳ ಬಗ್ಗೆ ಬರೆದಿದ್ದ ಚೀಟಿಯನ್ನು ಕೇಳುತ್ತಾಳೆ. ಅದು ವಸು ಕೈಯಲ್ಲಿ ಇದೆ ಎಂದು ಗೊತ್ತಾಗಿ ವಸು ರೂಮಿಗೆ ಬರುತ್ತಾಳೆ.

ಮುಂದೇನು ಮಾಡುತ್ತಾನೆ

ಮುಂದೇನು ಮಾಡುತ್ತಾನೆ

ಈ ವೇಳೆ ವಸು, ಕಂಠಿ ಮಾತನಾಡುತ್ತಾ ಇರುತ್ತಾರೆ. ಇದನ್ನು ಗಮನಿಸಿದ ಬಂಗಾರಮ್ಮ ಏನು ಮಾತನಾಡುತ್ತಾ ಇದ್ದೀರಿ ತಂಗಿ ಬಳಿ ಮಾತ್ರ ಮಾತನಾಡುವುದಾ. ನನ್ನ ಬಳಿ ಏನು ವಿಷಯ ಹೇಳುವುದು ಇಲ್ವಾ ಎಂದು ಕೇಳುತ್ತಾಳೆ. ಬಳಿಕ ಪೂರ್ವಿ ಯನ್ನು ಮಾತನಾಡಿಸಲು ಕಂಠಿ ಹಾತೊರೆಯುತ್ತಾ ಇದ್ದಾನೆ ಎಂದು ವಸು ಹೇಳಿದಾಗ ಅವರ ಮನೆಗೆ ಹೋಗಿ ಅವರ ಅಪ್ಪ ಅಮ್ಮನ ಒಪ್ಪಿಗೆ ಪಡೆದು ಪೂರ್ವಿಯನ್ನು ಹೊರಗೆ ಕರೆದುಕೊಂಡು ಹೋಗು ಎಂದು ಬಂಗಾರಮ್ಮ ತಾಕೀತು ಮಾಡುತ್ತಾಳೆ.

ಸುಮಾಳ ವರ್ತನೆ ಬಗ್ಗೆ ಬೇಸರ ಹೊರ ಹಾಕಿದ ಸ್ನೇಹಾ

ಸುಮಾಳ ವರ್ತನೆ ಬಗ್ಗೆ ಬೇಸರ ಹೊರ ಹಾಕಿದ ಸ್ನೇಹಾ

ಇತ್ತಕಡೆ ಸ್ನೇಹಾ, ಪುಟ್ಟಕ್ಕ ಹಾಗೂ ಸಹನಾ ಮೂವರು ಮಾತನಾಡಿಕೊಂಡು ಇರುತ್ತಾರೆ. ಸ್ನೇಹಾ ಹೇಳುತ್ತಾಳೆ ಅಮ್ಮ ಸುಮಾ ಹಾಗೆ ಮಾಡಬಾರದಿತ್ತು ರಾಜೇಶ್ವರಿ ಮುಂದೆ ನಿನ್ನ ಕೋಚ್ ಎಂದು ಒಪ್ಪಿಕೊಳ್ಳಬೇಕಿತ್ತು ಆದರೆ ಆಕೆ ಹಾಗೆಯೇ ಸೀದಾ ಹೋಗಿದ್ದು ನನಗೆ ಇಷ್ಟ ಆಗಿಲ್ಲ. ನನಗೆ ಆ ವೇಳೆ ಬಹಳ ಸಿಟ್ಟು ಬಂತು ಎಂದಾಗ ಸಹನಾ ಕೂಡ ಹೇಳುತ್ತಾಳೆ ನನಗೂ ಬಹಳ ಸಿಟ್ಟು ಬಂತು ಎಂದಾಗ ಪುಟ್ಟಕ್ಕಗೆ ಸ್ನೇಹಾಗೆ ಶಾಕ್ ಆಗುತ್ತದೆ ಪುಟ್ಟಕ್ಕ ಕೇಳುತ್ತಾಳೆ ನಿನಗೆ ಯಾಕೆ ಕೋಪ ಎಂದಾಗ ಹೇಳುತ್ತಾಳೆ ಸುಮಾ ಆ ರೀತಿ ನಡೆದುಕೊಂಡಿದ್ದು ನನಗೆ ಚೂರು ಇಷ್ಟ ಆಗಲಿಲ್ಲ ಎಂದು ಹೇಳುತ್ತಾಳೆ. ಬಹಳ ಸಿಟ್ಟು ಬಂತು ಎಂದಾಗ ಸ್ನೇಹಾ ಹೇಳುತ್ತಾಳೆ ಸಿಟ್ಟು ಬಾರದವರಿಗೂ ಸಿಟ್ಟು ಬಂತು ಎಂದರೆ ಅರ್ಥ ಮಾಡಿಕೋ ಎಂದು ಹೇಳುತ್ತಾಳೆ.

ಪೂರ್ವಿ ಬಳಿ ನಿಜ ಹೇಳುವ ಕಂಠಿ

ಪೂರ್ವಿ ಬಳಿ ನಿಜ ಹೇಳುವ ಕಂಠಿ

ಪುಟ್ಟಕ್ಕ ಕೋಚ್ ಆಗಿ ಖೋ ಖೋ ಹೇಳಿಕೊಟ್ಟು ಪ್ರಶಸ್ತಿ ಪಡೆದುಕೊಂಡರೆ ಅಮ್ಮನನ್ನು ಊರು ತುಂಬಾ ಮೆರೆಸುತ್ತಾರೆ ಮಕ್ಕಳು. ಇತ್ತ ಕಾಳಿ ಪುಟ್ಟಕ್ಕನ ಮೆಸ್ ಗೆ ಬಂದಿದ್ದಾನೆ, ಕಂಠಿ ಪೂರ್ವಿಗೆ ಇಂದು ತಿಳಿ ಹೇಳಲೇ ಬೇಕು ಎಂದು ಪೂರ್ವಿಯನ್ನು ಭೇಟಿಯಾಗುತ್ತಾನೆ. ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾನೆ ಕಂಠಿ. ಆ ಜಾಗ ನೋಡಿ ಪೂರ್ವಿಗೆ ಬಹಳ ಖುಷಿ ಆಗುತ್ತದೆ. ಕಂಠಿ ಒಳ್ಳೆ ಜಾಗಕ್ಕೆ ಕರೆದುಕೊಂಡು ಬಂದಿದ್ದೀಯಾ ನನಗೆ ಖುಷಿ ಆಯಿತು ಎಂದು ಹೇಳುತ್ತಾಳೆ ಮಾತು ಮುಂದುವರಿಸಿದ ಕಂಠಿ ಹೇಳುತ್ತಾನೆ. ಪೂರ್ವಿ ನನಗೆ ಈ ಮದುವೆ ಇಷ್ಟ ಇಲ್ಲ. ನೀನು ಹಾಗೂ ಅವ್ವ ನನ್ನನ್ನು ಕೇಳದೆ ನಿರ್ಧಾರ ತೆಗೆದುಕೊಂಡಿದ್ದಿರಾ ನನಗೆ ಮದುವೆ ಆಗಲು ಚೂರು ಇಷ್ಟ ಇಲ್ಲ. ದಯವಿಟ್ಟು ನನ್ನ ಪಾಡಿಗೆ ಬಿಡಿ. ನನ್ನನ್ನು ಈಗ ಕಾಪಾಡಲು ನಿಮ್ಮಿಂದ ಮಾತ್ರ ಸಾಧ್ಯ. ದಯವಿಟ್ಟು ನನ್ನನ್ನು ಕಾಪಾಡಿ. ನೀನೇ ಅಮ್ಮನಿಗೆ ಈ ಮದುವೆ ಇಷ್ಟ ಇಲ್ಲ ಎಂದು ಹೇಳು ಪೂರ್ವಿ ಎಂದು ಒಂದೇ ಉಸಿರಿಗೆ ಹೇಳುತ್ತಾನೆ. ಇನ್ನೂ ಪೂರ್ವೀ ಗೆ ಶಾಕ್ ಆಗುತ್ತದೆ. ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 1th September. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X