For Quick Alerts
  ALLOW NOTIFICATIONS  
  For Daily Alerts

  ಬಂಗಾರಮ್ಮನ ಮನೆಗೆ ಬಂದು ರಾದ್ದಾಂತ ಮಾಡಿದ ನಂಜಮ್ಮ

  By Poorva
  |

  ಮನೆಯಿಂದ ಹೊರ ಹೋಗಿದ್ದ ಮುರಳಿ ಮೆಸ್ ಗೆ ಹೋಗಿ ವಾಪಸ್ ಮನೆಗೆ ಬರುತ್ತಾರೆ.. ಇದನ್ನು ನೋಡಿದ ಮೇಷ್ಟ್ರ ತಾಯಿ ಬಹಳ ಖುಷಿ ಪಡುತ್ತಾರೆ. ಇದನ್ನು ನೋಡಿದ ಮೇಷ್ಟ್ರು ಹೇಳುತ್ತಾರೆ ಜಾಸ್ತಿ ಖುಷಿ ಪಡಬೇಡಿ ನಾನು ಮನೆಗೆ ವಾಪಸ್ ಬಂದಿದ್ದು ನಿಮ್ಮ ಮಾತು ಕೇಳಲು ಅಲ್ಲ. ನಾನು ಮನೆ ಬಿಟ್ಟು ಹೋದರೆ ಮನೆ ಮರ್ಯಾದೆ ಹೋಗುತ್ತಲ್ವ ಅದಕ್ಕೆ .. ನಾನು ಕಾಯುತ್ತೇನೆ.. ಮದುವೆಗೆ ನೀವು ಒಪ್ಪಿಗೆ ನೀಡುವ ವರೆಗೆ ನಾನು ಕಾಯುತ್ತೇನೆ ಎಂದು ಮನೆಯ ಒಳಗೆ ಹೋಗುತ್ತಾರೆ. ಇದನ್ನು ನೋಡಿದ ಮೇಷ್ಟ್ರ ತಾಯಿಗೆ ದುಃಖ ಆಗುತ್ತದೆ.

  ಅವರ ತಂದೆಗೆ ಎನು ಮಾಡಬೇಕು ಎಂದು ತೋಚದೇ ಸುಮ್ಮನೆ ಇರುತ್ತಾರೆ. ಇನ್ನು ನಂಜಮ್ಮ ಸ್ನೇಹಾಗೆ ಕರೆ ಮಾಡುತ್ತಾರೆ. ನಮ್ಮ ಚಂದ್ರು ಏನಾದರು ನೋಡಿದಿಯಾ ಸ್ನೇಹಾ ಬೆಳಗ್ಗೆ ನಿಂದಾ ಎಲ್ಲೂ ಕಾಣಿಸುತ್ತ ಇಲ್ಲ. ಎಲ್ಲಿ ಹೋಗಿದ್ದಾರೆ ಗೊತ್ತಾ ಎಂದಾಗ ಸ್ನೇಹಾ ಸಹ ಗೊತ್ತಿಲ್ಲದ ಹಾಗೆ ನಟಿಸುತ್ತಾಳೆ. ಹಾಗಾದರೆ ಬಂಗಾರಮ್ಮ ಏನಾದರು ಮಾಡಿರಬೇಕು ಎಂದುಕೊಂಡು ಬಂಗಾರಮ್ಮನನ್ನು ತರಾಟೆಗೆ ತೆಗೆದುಕೊಳ್ಳಲು ಪೊಲೀಸರನ್ನು ಕರೆದುಕೊಂಡು ಬರುತ್ತಾಳೆ.

   ಬಂಗಾರಮ್ಮನ ಮನೆಗೆ ಆಗಮಿಸಿದ ಪೊಲೀಸರು

  ಬಂಗಾರಮ್ಮನ ಮನೆಗೆ ಆಗಮಿಸಿದ ಪೊಲೀಸರು

  ಪೊಲೀಸ್ ಬಂದಿರುವುದನ್ನು ನೋಡಿದ ಬಂಗಾರಮ್ನನವರ ಗಂಡ ಎಲ್ಲಿಗೆ ಬಂದು ಹೀಗೆ ಮಾತನಾಡುತ್ತಾ ಇದ್ದೀರಾ ಗೊತ್ತಾ ಎಂದಾಗ ಬಂಗಾರಮ್ಮ ಗಂಡನ ಹೆಗಲು ಮುಟ್ಟುತ್ತಾರೆ. ಅದನ್ನು ನೋಡಿದ ನಂಜಮ್ಮ ಕೆಲವರು ಕೈ ಸನ್ನೆ ಕಣ್ಣು ಸನ್ನೆಯಲ್ಲಿ ನಿಭಾಯಿಸಬಹುದು ಎಂದು ಮೆರಿಯುತ್ತಾ ಇದ್ದಾರೆ. ನಿಮ್ಮ ಕೆಲಸ ನೀವು ಮಾಡಿ ನಮಗೆ ನನ್ನ ಮಗ ಬೇಕು ಅಷ್ಟೆ ಎಂದು ಖಡಕ್ ಆಗಿ ಹೇಳುತ್ತಾರೆ. ಇದಕ್ಕೆ ಬಂಗಾರಮ್ಮ ಹೇಳುತ್ತಾರೆ ಕೈ ಸನ್ನೆ ಕಣ್ಣು ಸನ್ನೆ ಮಾಡಿದರೆ ನಿಮ್ಮ ಮಗನನ್ನು ಅಪಹರಣ ಮಾಡಿದ್ದೇವೆ ಎಂದು ಅರ್ಥ ನಾ, ಮೊದಲು ತಲೆ ನೆಟ್ಟಗೆ ಇದೆಯೋ ಇಲ್ಲವೋ ಎಂಬುವುದನ್ನು ಟೆಸ್ಟ್ ಮಾಡಿಸಿಕೊ, ಇನ್ಸ್ಪೆಕ್ಟರ್ ಇವಳು ನನ್ನ ಮೇಲೆ ಸುಮ್ಮನೆ ಆಪಾದನೆ ಮಾಡಿದ್ದಾಳೆ ಇವಳು ನನ್ನ ಕ್ಷಮೆ ಕೇಳಬೇಕು ಎಂದು ಹಲ್ಲು ಮಸೆಯುತ್ತ ಹೇಳುತ್ತಾಳೆ

   ಬಂಗಾರಮ್ಮ ಮಾತಿಗೆ ಹಲ್ಲು ಮಸೆದ ನಂಜಮ್ಮ

  ಬಂಗಾರಮ್ಮ ಮಾತಿಗೆ ಹಲ್ಲು ಮಸೆದ ನಂಜಮ್ಮ

  ನಂಜಮ್ಮ ನಾನು ಯಾಕೆ ನಿನ್ನ ಬಳಿ ಕ್ಷಮೆ ಕೇಳಬೇಕು ಎಂದಾಗ ಬಂಗಾರಮ್ಮ ಕೂಡ ಮಾತಿಗೆ ಮಾತು ಬೆಳೆಸುತ್ತಾ ಇರುತ್ತಾರೆ. ಇದನ್ನು ನೋಡಿದ ನಂಜಮ್ಮ ಒಂದು ವೇಳೆ ನನ್ನ ಮಗ ನಿನ್ನ ಮನೆಯ ಒಳಗೆ ಇದ್ದ ಅಂದುಕೊಳ್ಳೋಣ ಎನ್ನುತ್ತಾಳೆ. ಆಗ ಬಂಗಾರಮ್ಮ ನಾನೇ ಕ್ಷಮೆ ಕೇಳುತ್ತೇನೆ ಎಂದು ಹೇಳುತ್ತಾಳೆ. ಮನೆಗೆ ನಂಜಮ್ಮ ಹಾಗೂ ಪೊಲೀಸ್ ಬಂದಿರುವುದನ್ನು ನೋಡಿದ ವಸು ಚಂದ್ರು ಬಳಿ ಎಲ್ಲಾ ವಿಚಾರವನ್ನು ಹೇಳುತ್ತಾಳೆ ಇದನ್ನು ಕೇಳಿದ ಚಂದ್ರು ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ನೋಡುತ್ತಾನೆ. ಬಳಿಕ ಚಂದ್ರು ಹೇಗೊ ತಪ್ಪಿಸಿಕೊಳ್ಳುತ್ತಾನೆ.

   ಚಂದ್ರುನನ್ನು ಹುಡುಕುತ್ತಿರುವ ಪೊಲೀಸರು

  ಚಂದ್ರುನನ್ನು ಹುಡುಕುತ್ತಿರುವ ಪೊಲೀಸರು

  ಪೊಲೀಸ್ ಎಲ್ಲಾ ರೂಮ್ ಗಳನ್ನ ಹುಡುಕಿದರೂ ಅಲ್ಲಿ ಚಂದ್ರು ಇಲ್ಲದ್ದು ಕಂಡು ವಾಪಸ್ ಬರುತ್ತಾರೆ. ಇನ್ನು ನಂಜಮ್ಮ ಬಂಗಾರಮ್ಮ ಬಳಿ ಬಂದು ಸಾರಿ ಕೇಳಿ ಮನೆಯ ಹೊರಗೆ ಬರುತ್ತಾಳೆ. ಚಂದ್ರು ಎಲ್ಲಿ ಹೋಗಿರಬಹುದು ಎಂದು ಯೋಚನೆ ಮಾಡುತ್ತಾ ಇರುವಾಗ ಅಲ್ಲಿಗೆ ಸ್ನೇಹಾ ಬರುತ್ತಾಳೆ. ಸ್ನೇಹಾ ಬಂದಿರುವುದನ್ನು ನೋಡಿದ ನಂಜಮ್ಮ ಇವಳು ಯಾಕಪ್ಪ ಬಂದಳು ಎಂದು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾಳೆ ನಂಜಮ್ಮ ಬಳಿ ಅಣ್ಣ ಈ ಮನೆಯಲ್ಲಿ ಇದ್ದಾನ ಎಂದು ಕೇಳಿದಾಗ ಇಲ್ಲ ಎಂದು ಹೇಳುತ್ತಾಳೆ..

   ಸ್ನೇಹಾ ಮೇಲೆ ನಂಜಮ್ಮಗೆ ಅನುಮಾನ

  ಸ್ನೇಹಾ ಮೇಲೆ ನಂಜಮ್ಮಗೆ ಅನುಮಾನ

  ಬಳಿಕ ನಂಜಮ್ಮನಿಗು ಸ್ನೇಹಾ ಮೇಲೆ ಅನುಮಾನ ಶುರು ಆಗುತ್ತದೆ ನಂಜಮ್ಮ ಹಾಗೂ ಸ್ನೇಹಾ ಮಾತನಾಡುತ್ತಾ ಇರುವುದನ್ನು ನೋಡಿದ ಬಂಗಾರಮ್ಮ ಅದನ್ನು ತಪ್ಪಾಗಿ ಗ್ರಹಿಸುತ್ತಾರೆ. ಇನ್ನು ಚಂದ್ರು ಬಳಿ ಬಂದ ಕಂಠಿ ತನ್ನ ಬಾವನ ಆರೋಗ್ಯ ವಿಚಾರಣೆ ಮಾಡುತ್ತಾನೆ ಬಳಿಕ ತಾನೇ ನಿಮ್ಮ ಮನೆಗೆ ಬಂದು ಬಿಡುತ್ತೇನೆ ಎಂದು ಹೇಳಿದಾಗ ಚಂದ್ರು ಒಂದೇ ತಪ್ಪು ಮಾಡಬೇಡ ಕಂಠಿ ನೀನು ಸ್ನೇಹಾ ಇಂದ ದೂರ ಇರು ಇದು ನನಗೂ ಒಳ್ಳೇದು ನಿಮಗೂ ಒಳ್ಳೇದು ನಾನು ನಿನ್ನ ಒಳ್ಳೆಯದಕ್ಕಾಗಿ ಹೇಳುತ್ತಾ ಇದ್ದೇನೆ ಅರ್ಥ ಮಾಡಿಕೋ ನಿನ್ನಿಂದ ನಮ್ಮಿಬ್ಬರ ಸಂಸಾರ ಹೀಗೆ ಆಗಿ ಹೋಗಿದೆ ಎಂದು ಹೇಳುತ್ತಾನೆ ಹಾಗೂ ಬಳಿಕ ಅಲ್ಲಿಂದ ಹೋಗುತ್ತಾನೆ. ನಂತರ ಕಂಠಿ ಮನದಲ್ಲಿ ಹಾಗೆಲ್ಲ ಆಗಲು ನಾನು ಬಿಡುವುದಿಲ್ಲ ಬಾವ ಎಂದು ಹೇಳಿಕೊಳ್ಳುತ್ತಾ ಇರುತ್ತಾನೆ ಮುಂದೇನು ಕಾದು ನೋಡಬೇಕಿದೆ.

  English summary
  Kannada serial puttakkana makkalu written updated on 20th December
  Wednesday, December 21, 2022, 16:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X