ತಂಗಿಯ ಬೆಂಬಲಕ್ಕೆ ಬಂದ ಸ್ನೇಹಾ: ಮೇಷ್ಟ್ರಿಗೆ ಚಳಿ ಬಿಡಿಸಲು ಸಜ್ಜು!
ಸುಮಾ ಸ್ವಲ್ಪ ಚಿಂತೆಯಲ್ಲಿ ಇದ್ದಾಳೆ. ಇದನ್ನು ಕಂಡ ಸ್ನೇಹಾ ಏನಾಯ್ತು ಎಂದು ಕೇಳುತ್ತಾಳೆ. ಅದಕ್ಕೆ ಸಹನಾ ಸ್ನೇಹಾನಾ ಬಳಿ ನಾನು ಖೋ-ಖೋ ಪಂದ್ಯ ಆಡಬಾರದಂತೆ. ನಾಳೆ ಕಾಲೇಜಿಗೆ ಕ್ಷಮೆ ಪತ್ರ ನೀಡಬೇಕಂತೆ, ಆದರೆ ನಾನು ಯಾವ ಪತ್ರನು ಬರೆದುಕೊಂಡು ಹೋಗಲ್ಲ ಎನ್ನುತ್ತಾಳೆ.
ಅದಕ್ಕೆ ಸ್ನೇಹಾ ಹೇಳುತ್ತಾಳೆ ಎನು ಕ್ಷಮೆ ಪತ್ರಾನಾ... ಅಂಥದ್ದೇನೂ ಮಾಡಿದೆ ಎಂದು ಕೇಳುತ್ತಾಳೆ ಅದಕ್ಕೆ ಪುಟ್ಟಕ್ಕ, ಏನೋ ಕ್ಲಾಸ್ ಗೆ ಹೋಗಿಲ್ಲ ಅಂತೆ ಎಂದಾಗ ಸಿಟ್ಟುಗೊಂಡ ಸ್ನೇಹಾ 'ಏನೇ ನೀನು ಕ್ಲಾಸ್ ಬಂಕ್ ಮಾಡೋವರೆಗೂ ಹೊರಟಿಯಾ ಹಿಂಗಾದರೆ ಸ್ಟೇಟ್ ರ್ಯಾಂಕ್ ಮರೆತು ಹೋಗು ಬರುವುದಿಲ್ಲ ಎನ್ನುತ್ತಾಳೆ. ಅದಕ್ಕೆ ಸುಮಾ, 'ಗೊತ್ತಿಲ್ಲದೆ ಏನೇನೋ ಮಾತನಾಡಬೇಡ ಅಕ್ಕ. ನಂದೇನು ತಪ್ಪೇ ಇಲ್ಲ. ಪಿಟಿ ಟೀಚರ್ ಅವರ ಕೆಲಸನಾ ನೆಟ್ಟಗೆ ಮಾಡುತ್ತಿದ್ದರೆ ನಾವು ಮ್ಯಾಚ್ ಅಲ್ಲಿ ಸೋಲುತ್ತನೆ ಇರಲಿಲ್ಲ. ನಾನು ಅವರ ಬಳಿ ಕೇಳಕ್ಕೆ ಹೋಗಿದ್ದೆ. ಎಂದು ಆಗ ಪಿಟಿ ಸರ್ ಆಡಿದ ಮಾತುಗಳನ್ನು ಹೇಳುತ್ತಾಳೆ ಸುಮಾ.
ನಮ್ಮ ಮ್ಯಾಚ್ ಇರುವುದು ಸಹ ನಮ್ಮ ಪಿಟಿ ಸರ್‌ಗೆ ಗೊತ್ತಿಲ್ಲ. ಅದಕ್ಕೆ ಪ್ರಿನ್ಸ್ ಪಾಲರ ಬಳಿ ನಮಗೊಂದು ಕೊಚ್ ಕೊಡಿ ಎಂದು ಕೇಳಲು ಹೋಗಿದ್ದೆ ಅಕ್ಕ, ನಾನು ಕ್ಲಾಸ್ ಬಂಕ್ ಮಾಡದೇ ಇರುತ್ತಿದ್ದರೆ ಈ ವಿಚಾರ ಕಾಲೇಜಿನಲ್ಲಿ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಅದಕ್ಕೆ ಕ್ಲಾಸ್ ಬಂಕ್ ಮಾಡಿ ಬಂದೆ ಎಂದು ಅಳುತ್ತಾ ಹೇಳುತ್ತಾಳೆ. ಬಳಿಕ 'ನೀವು ನೋಡಿದರೆ ನನಗೆ ಬಯ್ಯುತ್ತಿದ್ದಿರಾ. ಇಷ್ಟು ಒಳ್ಳೆ ಟೀಮ್ ಇದ್ದರೂ ಸೋತುಕೊಂಡು ಬಂದಿದ್ದೇವೆ ನಮ್ಮ ಆಟದಿಂದ ಅಲ್ಲ ಅನುಕೂಲ ಮತ್ತು ವ್ಯವಸ್ಥೆ ಇಲ್ಲದೆ' ಎಂದು ಅಳಲು ಆರಂಭಿಸುತ್ತಾಳೆ.

ಸಮಾಧಾನ ಮಾಡುವ ಪುಟ್ಟಕ್ಕ
ಅದಕ್ಕೆ ಪುಟ್ಟಕ್ಕ, 'ಆಯ್ತು ಬಿಡು ಕಂದ ಅಳಬೇಡ ಕಣಪ್ಪ ನೋಡು ನೀನು ತಪ್ಪು ಮಾಡಿದೆ ಅಂತ ಹೇಳಿದ್ದಲ್ಲ ಪಾಪ ಅವಳಿಗೆ ವಿಷಯ ಗೊತ್ತಿಲ್ಲ. ಅದಕ್ಕೆ ಬೈದಳು ಅಷ್ಟಕ್ಕೇ ಯಾರಾದರೂ ಅಳುತ್ತಾರ' ಎಂದು ಹೇಳಿ ಸ್ನೇಹಾನಾ ಬಳಿ ಬಂದು ಸುಮಾಗೆ ಸಮಾಧಾನ ಹೇಳುವಂತೆ ಹೇಳುತ್ತಾಳೆ. ಸುಮಾಳ ಬಳಿ ಬಂದ ಸ್ನೇಹಾ ಹೇಳುತ್ತಾಳೆ ಸುಮಾ ನನಗೆ ಗೊತ್ತಿರಲಿಲ್ಲ. ಈಗ ಯಾಕೆ ಈ ರೀತಿ ಸೀನ್ ಕ್ರಿಯೇಟ್ ಮಾಡುತ್ತಿದ್ದೀಯಾ? ಎಂದು ರೇಗುತ್ತಾಳೆ.

ದೊಡ್ಡ ಮಾತು ಮಾತನಾಡುವ ಸುಮಾ
ಆಗ ಸುಮಾ, 'ನೋಡವ್ವ ನಾನು ಅತ್ತರೆ ಅದು ಸೀನ್ ಅಂತೆ ನನ್ನ ಎಮೋಷನ್ ನ ಯಾರು ಅರ್ಥ ಮಾಡಿಕೊಳ್ಳೋದು ಇಲ್ಲ'. ಅದಕ್ಕೆ ಸಹನಾ ಹೇಳುತ್ತಾಳೆ 'ಹಾಗೆಲ್ಲ ಹೇಳಬೇಡ ನೀನು ನಿನಗೆ ಯಾರಾದ್ರೂ ಏನಾದರು ಅಂದರೆ ನಾವು ಸುಮ್ಮನೆ ಬಿಡುತ್ತೇವಾ ನಮಗೆಲ್ಲರಿಗೂ ನೀನೇ ಮುದ್ದಮ್ಮ' ಎಂದು ಕೊಂಡಾಡುತ್ತಾರೆ. ಅದಕ್ಕೆ ಸುಮಾ ಅಳುತ್ತಾ ಹೇಳುತ್ತಾಳೆ 'ಇದೆಲ್ಲ ಸುಮ್ಮನೆ ಬರೆ ಬಾಯಿ ಮಾತಿಗೆ ಅಷ್ಟೇ ಅಂದಾಗ ಪುಟ್ಟಕ್ಕ ಹೇಳುತ್ತಾಳೆ ನೋಡು ನೋಡು ದೊಡ್ಡ ಮನುಷ್ಯರ ಥರ ಮಾತನಾಡಬೇಡ' ಎಂದಾಗ ಸ್ನೇಹಾ ಹೇಳುತ್ತಾಳೆ 'ಅವ್ವ ನೀನು ಸುಮ್ಮನಿರಮ್ಮ ಈಗೇನು ನಾನು ನಿನ್ನ ಜೊತೆ ಕಾಲೇಜಿಗೆ ಬಂದು ಮಾತನಾಡಿದರೆ ನಿನಗೆ ಓಕೆ ನಾ' ಎನ್ನುತ್ತಾಳೆ.

ಸಮಾಧಾನಾಗುವ ಸುಮಾ
'ಆದರೆ, ಮೊದಲು ನೀನು ಅಳುವುದನ್ನು ನಿಲ್ಲಿಸು ಆಗ ಶಾಲೆಗೆ ಬಂದು ಯಾರತ್ರ ಎನು ಮಾತನಾಡಬೇಕೋ ಅದನ್ನ ಮಾತನಾಡುತ್ತೇನೆ, ಸರೀನಾ' ಎಂದು ಹೇಳುತ್ತಾಳೆ. ಅದಕ್ಕೆ ಸುಮಾ 'ಹೂ' ಅನ್ನುತ್ತಾಳೆ. ಅದಕ್ಕೆ ಪುಟ್ಟಕ್ಕ ಹೇಳುತ್ತಾರೆ. ಬರುತ್ತಿದ್ದ ಹಾಗೆ ಇದನ್ನು ಹೇಳಿದ್ದಿದ್ದರೆ ಅರ್ಧ ಲೀಟರ್ ಕಣ್ಣೀರು ಉಳಿತಿತ್ತು. ಎಂದು ಹೇಳಿದಾಗ ಎಲ್ಲರೂ ನಗುತ್ತಾರೆ. ಸಹನಾ ನೋಡಿದ್ಯಾ ನಾವಿಬ್ಬರೂ ಕೇಳಿದಾಗ ಸೂಜಿ ಚುಚ್ಚಿದ ಹಾಗೆ ಕೂಗಾಡಿದಳು. ಈಗ ನೋಡು ಸ್ನೇಹಾ ಕಾಲೇಜಿಗೆ ಬರುತ್ತೀನಿ ಅಂದಾಗ ಸಮಾಧಾನ ಆಗಿ ಬಿಟ್ಟಳು ಎನ್ನುತ್ತಾಳೆ.

ಲಾ ಪಾಯಿಂಟ್ ಹಾಕಕ್ಕ ಎನ್ನುವ ಸುಮಾ
ನೋಡಿದ್ಯಾ ಎಂದಾಗ ಸುಮಾ ಹೇಳುತ್ತಾಳೆ ಹಂಗೆನಿಲ್ಲ ನಾನು ಸಮಾಧಾನ ಆಗಿಲ್ಲ ಅದಕ್ಕೆ ಪುಟ್ಟಕ್ಕ ಅಲೇ ನಾಟಕದ ಕಂಪನಿ ಎಂದು ನಗುತ್ತಾ ಹೇಳುತ್ತಾಳೆ. ಸುಮಾ ಹೇಳುತ್ತಾಳೆ ನೀನು ಬಂದು ಸರಿಯಾದ ಲಾ ಪಾಯಿಂಟ್ ಹಾಕಕ್ಕಾ ಕಾಲೇಜು ಅಂದ ಮೇಲೆ ಸ್ಪೋರ್ಟ್ಸ್ ಗು ಪ್ರಾಮುಖ್ಯತೆ ಇರಬೇಕು ಅಂತೆಲ್ಲಾ ಮಾತನಾಡು ಎಂದಾಗ ಪುಟ್ಟಕ್ಕ ಹೇಳುತ್ತಾಳೆ ಹಾ.. ಅವಳಿಗೆ ಮಾತನಾದುವುದನ್ನು ನೀನು ಹೇಳಿ ಕೊಡು ಅಳುಮುಂಜಿ ಬಾ ಎಂದು ಕರೆದುಕೊಂಡು ಹೋಗುತ್ತಾಳೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











