ಮದುವೆ ಮಾಡಿಸುವ ಯತ್ನದಲ್ಲಿ ಕಂಠಿ, ಮುರಿಯುವ ಯತ್ನದಲ್ಲಿ ರಾಜಿ: ಇಬ್ಬರಿಗೂ ಗೆಲುವು?
ಮುರಳಿ ಮೇಷ್ಟ್ರು ಸಹನಾಳನ್ನು ಕಳೆದುಕೊಳ್ಳುತ್ತೇನೆ ಎಂದು ಬಹಳ ಬೇಸರದಲ್ಲಿ ಇರಬೇಕಾದರೆ ಮೇಷ್ಟ್ರ ಅಕ್ಕ ಬಾವ ಮನೆಗೆ ಆಗಮಿಸುತ್ತಾರೆ. ಇನ್ನೂ ಮೇಷ್ಟ್ರು ಮಾತ್ರ ಇದರ ಯಾವುದರ ಪರಿವೆಯೂ ಇಲ್ಲದೆ ತನ್ನ ರೂಮ್ ನಲ್ಲಿ ಇರುತ್ತಾರೆ ಮಗಳು ಅಳಿಯನನ್ನು ಕಂಡ ಮೇಷ್ಟ್ರ ತಂದೆ ಮಾತ್ರ ಬನ್ನಿ ಅಳಿಯಂದಿರು. ಎಂದು ಪ್ರೀತಿಯ ಸ್ವಾಗತ ಕೋರುತ್ತಾರೆ.
ಈ ವೇಳೆ ಅಲ್ಲಿಗೆ ಆಗಮಿಸಿದ ಮುರಳಿ ಮೇಷ್ಟ್ರ ಅಕ್ಕ ಅಪ್ಪ ಅಮ್ಮ ಹೇಗಿದ್ದೀರಾ ಚೆನ್ನಾಗಿ ಇದ್ದೀರಾ. ಎಲ್ಲಿದ್ದಾನೆ ಮುರಳಿ ಎಂದು ಕೇಳುತ್ತಾಳೆ ಆಗ ಮೇಷ್ಟ್ರ ತಂದೆ ಸಿಡುಕುತ್ತ ಅಕ್ಕ ಬಾವ ಬಂದಿರುವುದು ಗೊತ್ತಾಗಲ್ವಾ ಎಂದು ಹೇಳುತ್ತ ಇರುವಾಗ ಮುರಳಿ ಮೇಷ್ಟ್ರು ಕೋಣೆಯ ಒಳಗಿನಿಂದ ಬರುತ್ತಾನೆ. ಈ ವೇಳೆ ಮೇಷ್ಟ್ರ ಅಳಿಯ ಈ ಊರಿನ ರೋಡ್ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಮೇಷ್ಟ್ರನ್ನು ನೋಡಿದ ಅವರ ತಂದೆ ಬಂದ ನೋಡು ನಮ್ಮ ಕುಲ ಪುತ್ರ ಎಂದು ಹೇಳುತ್ತಾನೆ. ಇದನ್ನು ಕೇಳಿದ ಮೇಷ್ಟ್ರು ಮಾತ್ರ ಸಿಕ್ಕಾಪಟ್ಟೆ ಬೇಸರ ಮಾಡಿಕೊಳ್ಳುತ್ತಾರೆ.
ಬಳಿಕ ಇದನ್ನೆಲ್ಲ ನೋಡಿದ ಅವನ ಅಕ್ಕ, ಬಾ ಮುರಳಿ ನಿನ್ನ ಬಳಿ ಮಾತನಾಡಬೇಕು ಎಂದು ಹೇಳಿ ಆತನನ್ನು ಕರೆದುಕೊಂಡು ಹೋಗುತ್ತಾಳೆ. ರೂಮಿಗೆ ಆಗಮಿಸಿದ ಮೇಷ್ಟ್ರು ಅಕ್ಕನನ್ನು ಬಿಗಿದಪ್ಪಿ ಜೋರಾಗಿ ಅತ್ತು ಬಿಡುತ್ತಾರೆ. ಏನಾಯ್ತು ಎಂದು ಮುರಳಿ ಯಾಕೆ ಹೀಗೆ ಅಳುತ್ತಿದ್ದಿಯಾ. ನೀನು ಯಾಕೆ ಅಪ್ಪನ ಬುದ್ದಿ ಗೊತ್ತಿದ್ದರೂ ಪ್ರೀತಿ ಮಾಡಲು ಹೋದೆ ಎಂದು ಹೇಳಿದಾಗ ಮೇಷ್ಟ್ರು ಹೇಳುತ್ತಾರೆ. ಅಕ್ಕ ನನಗೆ ಅವಳನ್ನು ಬಿಟ್ಟು ಇರಲು ಸಾಧ್ಯವಿಲ್ಲ. ನಾನು ಅವರಿಗೆ ಮಾತು ಕೊಟ್ಟಿದ್ದೀನಿ ಅಕ್ಕ ಎಂದು ಅಳುತ್ತಾ ಹೇಳುತ್ತಾರೆ. ಆ ವೇಳೆ ಆಕೆಯ ಅಕ್ಕ ಹೇಳುತ್ತಾರೆ ನನ್ನಿಂದ ಆದ ಸಹಾಯವನ್ನು ನಾನು ಮಾಡುತ್ತೇನೆ ಎಂದು ಹೇಳಿದಾಗ ಮೇಷ್ಟ್ರ ತಂದೆ ಜೋರಾಗಿ ಕರೆಯುತ್ತಾರೆ.
ಬನ್ನಿ ಎಂದು ಹೇಳಿದಾಗ ಮೇಷ್ಟ್ರನ್ನು ಕರೆದುಕೊಂಡು ಆತನ ಅಕ್ಕ ಬರುತ್ತಾರೆ. ಬಳಿಕ ಅಲ್ಲಿಂದ ಹುಡುಗಿ ನೋಡಲು ಕಾರು ಹತ್ತುತ್ತಾರೆ. ಆದರೆ ಆ ಕಾರಿನ ಡ್ರೈವರ್ ಮಾತ್ರ ಕಂಠಿ ಗೆಳೆಯ ಮುಂಗುಸಿ. ಮುಂಗುಸಿಯ ಪರಿಚಯ ಸಿಗದ ಹಾಗೆ ಮುಖವನ್ನು ಮುಚ್ಚಿ ಇಟ್ಟುಕೊಂಡು ಇರುತ್ತಾನೆ. ಬಳಿಕ ಹುಡುಗಿ ಮನೆಯತ್ತ ಕಾರು ಹೋಗುತ್ತದೆ. ಈ ವೇಳೆ ಮುರಳಿ ತಂದೆ ಹೇಳುತ್ತಾರೆ ಡ್ರೈವರ್ ಸ್ವಲ್ಪ ಬೇಗ ಹೋಗಪ್ಪ. ಸ್ವಲ್ಪ ಲೇಟ್ ಆಗುವ ಹಾಗೆ ಕಾಣುತ್ತಿದೆ. ಆ ವೇಳೆ ಡ್ರೈವರ್ ಹೂ ಸರ್ ಎಂದಷ್ಟೇ ಹೇಳುತ್ತಾನೆ.

ಮೇಷ್ಟ್ರ ಮದುವೆ ಮಾಡಿಸಲು ಕಂಠಿ ಮಾಸ್ಟರ್ ಪ್ಲಾನ್
ಬಳಿಕ ರಸ್ತೆ ಬದಲಾದುದನ್ನು ನೋಡಿದ ಮೇಷ್ಟ್ರ ತಂದೆ, ಆಲ್ಲಪ ಲೆಫ್ಟ್‌ಗೆ ಯಾಕೆ ಗಾಡಿ ತಿರುಗಿಸಿದೆ. ಇದು ನಾವು ಬಂದ ರಸ್ತೆಗೆ ವಾಪಸ್ ಹೋಗುತ್ತದೆ ಅಲ್ವಾ ಎಂದು ಕೇಳುತ್ತಾರೆ. ಇದನ್ನು ಕೇಳಿದ ಮುಂಗುಸಿ, ಮುಂದುಗಡೆ ರೋಡ್ ಬ್ಲಾಕ್ ಆಗಿದೆ ಸರ್ ಎಂದು ಸುಳ್ಳು ಹೇಳುತ್ತಾನೆ. ಆದರೆ ವಾಯ್ಸ್ ಕೇಳಿ ಮುರಳಿ ಮೇಷ್ಟ್ರು ಇಣುಕಿ ನೋಡುತ್ತಾರೆ. ಅದೇ ಸಮಯಕ್ಕೆ ಮುಂಗುಸಿಗೆ ಕಂಠಿ ಕರೆ ಮಾಡುತ್ತಾನೆ.

ಕಂಠಿಗೆ ಅಪ್ಡೇಟ್ ನೀಡುತ್ತಿರುವ ಮುಂಗುಸಿ
ಕಾಲ್ ರಿಸೀವ್ ಮಾಡಿದ ಮುಂಗುಸಿ, ಅಣ್ಣಾ ಹೇಳು ಅಣ್ಣ ಎಂದು ಕೇಳುತ್ತಾನೆ ಈ ವೇಳೆ ಕಂಠಿ ಹೇಳುತ್ತಾನೆ ಲೆ ಮುಂಗುಸಿ ಎಲ್ಲಿದಿಯೋ, ಎಂದಾಗ ಸುತ್ತಾಡಿಸುತ್ತಿದ್ದೇನೆ ಎಂದು ಮೆತ್ತಗೆ ಹೇಳುತ್ತಾನೆ. ಇನ್ನು ಪುಟ್ಟಕ್ಕನ ಮನೆಯಲ್ಲಿ ಸಹನಾ ಬೇಸರದಲ್ಲಿ ಇದ್ದರೆ ಸ್ನೇಹಾ ಹಾಗೂ ಸುಮಾ ಅಕ್ಕನ ನೋಡಲು ಬರುವ ಗಂಡಿನ ಕಡೆಯವರು ಬರಲೇ ಬಾರದು ಎಂಬ ಆಲೋಚನೆಯಲ್ಲಿ ಇದ್ದಾರೆ. ಪುಟ್ಟಕ್ಕನ ಮನೆ ಮುಂದೆ ರಾಜಿ ಕಾರು ನಿಲ್ಲಿಸಿ ಗೋಪಾಲನಿಗೆ ಕರೆ ಮಾಡುವ ವೇಳೆ ಆತ ಅಲ್ಲಿಯೇ ಇರುತ್ತಾನೆ.

ಅಮ್ಮನ ನೋಡಿ ಅಡಗಿಕೊಳ್ಳುವ ಪುರುಷೋತ್ತಮ
ಬಳಿಕ ರಾಜಿ ಹೇಳುತ್ತಾಳೆ ಬನ್ನಿ ಪುಟ್ಟಕ್ಕನ ಮನೆಗೆ ಹೋಗೋಣ ಎಂದು ಕರೆಯುತ್ತಾಳೆ. ಗೋಪಾಲ ತಲೆತಗ್ಗಿಸಿ ಬರುತ್ತಾನೆ. ಇದನ್ನು ನೋಡಿದ ಪುರುಷೋತ್ತಮ. ಅಮ್ಮ ಬಂದಿದ್ದಾಳೆ ಇಲ್ಲಿ ನನ್ನ ನೋಡಿದ್ರೆ ನನ್ನ ಮನೆಯಿಂದ ಹೊರ ಹಾಕುತ್ತಾಳೆ ಎಂದು ಅಡಗಿ ಕೂರುತ್ತಾನೆ. ಪುಟ್ಟಕ್ಕನ ಮನೆಗೆ ಬಂದ ರಾಜಿಯನ್ನು ನೋಡಿದ ಮನೆ ಮಂದಿ ಕುಪಿತಗೊಳ್ಳುತ್ತಾರೆ. ಇದನ್ನು ನೋಡಿದ ಪುಟ್ಟಕ್ಕ ಮಾತ್ರ ಶಾಂತವಾಗಿ ಮಾತನಾಡುತ್ತಾಳೆ.

ಪುಟ್ಟಕ್ಕನ ಜೊತೆ ರಾಜಿ ಜಗಳ
ಆವತ್ತು ಬಂದ ಗಂಡಿನ ಕಡೆಯವರು ಇವತ್ತು ಬರುವುದಿಲ್ಲ. ಇವತ್ತು ಬೇರೆ ಗಂಡಿನ ಕಡೆಯವರು ಬರುತ್ತಿದ್ದಾರೆ. ನಾನು ಕರೆದರೆ ನೀವು ಬರುವುದಿಲ್ಲ. ಈಗ ಬಂದಿದ್ದೀರಿ ಸಂತೋಷ ಕುಳಿತುಕೊಳ್ಳಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಾಜಿ, ನಾವು ಕೂರಲು ಬಂದಿಲ್ಲ. ನಿಮ್ಮ ಮನೆಯ ಸಿಂಗಾರ ನೋಡಿದರೆ ಹೆಣಕ್ಕೆ ಸಿಂಗಾರ ಮಾಡಿದ ಹಾಗೆ ಕಾಣುತ್ತಿದೆ ಎಂದಾಗ ಪುಟ್ಟಕ್ಕಗೆ ಸಿಟ್ಟು ಬರುತ್ತದೆ. ಗಂಡಿನ ಕಡೆಯವರು ಬರುವುದಿಲ್ಲ ಎಂಬ ಸತ್ಯ ನನಗೆ ಕೂಡ ಗೊತ್ತಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ರಾಜಿ ಶಾಕ್ ಆಗುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











