ಸ್ನೇಹಾ ಮೇಲೆ ಪುಟ್ಟಕ್ಕನ ಮುನಿಸು: ಬಂಗಾರಮ್ಮನಿಗೂ ಸಂಕಷ್ಟ!

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮುರಳಿ ಮೇಷ್ಟ್ರು ಹಾಗೂ ಸಹನಾ ಲವ್ ಸ್ಟೋರಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ. ಆದರೆ ಇದೀಗ ಪುಟ್ಟಕ್ಕನಿಗೆ ಸ್ನೇಹಾಳ ವರ್ತನೆ ಬೇಸರ ತರಿಸಿದೆ. ಯಾಕಾದರೂ ಸ್ನೇಹಾ ಈ ರೀತಿಯಾಗಿ ವರ್ತನೆ ಮಾಡುತ್ತಿದ್ದಾಳೆ ಎಂದು ಪುಟ್ಟಕ್ಕ ಅಸಹಾಯಕತೆ ವ್ಯಕ್ತಡಿಸುತ್ತಿದ್ದಾಳೆ.

ಬಂಗಾರಮ್ಮನಿಗೆ, ಸ್ನೇಹಾ ಮೇಲೆ ಕೋಪ ಹೆಚ್ಚು ಅದನ್ನೆಲ್ಲ ಅರ್ಥ ಮಾಡಿಕೊಳ್ಳದೆ ಸ್ನೇಹಾ ಎಗರಾಡುತ್ತಾಳೆ. ಪುಟ್ಟಕ್ಕನ ಮನೆಗೆ ಹಬ್ಬಕ್ಕೆ ಬಂದ ಬಂಗಾರಮ್ಮಗೆ ಈ ರೀತಿ ಅವಮಾನವಾದರೆ ಪುಟ್ಟಕ್ಕ ಸುಮ್ಮನಿರುವುದಿಲ್ಲ. ಬಂಗಾರಮ್ಮ ಹೋದ ಬಳಿಕ ಸ್ನೇಹಾನ ಬಳಿ ಹೇಳುತ್ತಾಳೆ ಈ ರೀತಿ ಮಾತನಾಡುವುದು ಸರಿಯಲ್ಲ. ಅದು ಹಬ್ಬದ ಸಂದರ್ಭದಲ್ಲಿ ಈ ರೀತಿ ಮಾತುಗಳನ್ನು ಆಡಿದರೆ ಅದು ನಮ್ಮ ಘನತೆಗೆ ತಕ್ಕುದಾಗಿ ಇರುವುದಿಲ್ಲ. ಇಷ್ಟೆಲ್ಲ ತಿಳಿದುಕೊಂಡಿದ್ದು ಎನು ಪ್ರಯೋಜನ ಎಂದೆಲ್ಲ ಹೇಳಿದಾಗ ಪುಟ್ಟಕ್ಕ ನ ಬಳಿ ಸ್ನೇಹಾ ಕ್ಷಮೆ ಕೇಳುತ್ತಾಳೆ.

ನನಗೆ ಕೋಪ ಮನದಲ್ಲಿ ಇಟ್ಟು ಕೊಳ್ಳಲು ಆಗಲಿಲ್ಲ ಅದಕ್ಕಾಗಿ ಅವರು ಬಂದಾಗ ಹೇಳಿ ಬಿಟ್ಟೆ ಎಂದು ಹೇಳುತ್ತಾಳೆ ಸ್ನೇಹಾ. ಆದರೆ ಪುಟ್ಟಕ್ಕ ಮಾತ್ರ ಬಹಳ ಬೇಸರ ಪಟ್ಟುಕೊಳ್ಳುತ್ತಾರೆ. ಬಳಿಕ ಸ್ನೇಹಾ ಹೇಳುತ್ತಾಳೆ ಅಷ್ಟಕ್ಕೂ ನಾನು ನಿನ್ನ ಮಗಳು ಎಂದು ಆಕೆಗೆ ಗೊತ್ತಾಗಲಿಲ್ಲ ಅಲ್ವಾ. ನಿಮ್ಮಿಬ್ಬರ ಗೆಳೆತನಕ್ಕೆ ನಾನು ಅಡ್ಡಿ ಬಂದಿಲ್ಲ ಬರೋದು ಇಲ್ಲ ಎಂದು ಹೇಳುತ್ತಾಳೆ. ಆದರೂ ಸಮಾಧಾನ ಮಾಡಿಕೊಳ್ಳದ ಪುಟ್ಟಕ್ಕ ಹೇಳುತ್ತಾಳೆ ಏನಾದರು ಹೇಳಿದರೆ ಅದಕ್ಕೆ ತಕ್ಕ ಉತ್ತರ ಹೇಳುತ್ತಿಯಾ ಎಂದು ಬೈಯ್ಯುತ್ತಾಳೆ.

ಬೇಸರಗೊಂಡ ಪುಟ್ಟಕ್ಕ

ಬೇಸರಗೊಂಡ ಪುಟ್ಟಕ್ಕ

ಪುಟ್ಟಕ್ಕ ನೀನೇನು ಬೇಸರ ಮಾಡಿಕೊಳ್ಳಬೇಡ. ನಾವು ಅವರ ಮನೆಯಿಂದ ಹೆಣ್ಣು ತೆಗೆದುಕೊಂಡು ಬಂದಿದ್ದೇವೆ. ಆಕೆ ಇರೋದೇ ಹಾಗೆ. ಅವಳ ಮಗಳನ್ನು ಹೇಗಾದರೂ ನನ್ನ ಮನೆಗೆ ಕಳುಹಿಸಬೇಕು ಎಂದು ಹೊಂಚು ಹಾಕುತ್ತಲೇ ಇದ್ದಳು ಇವತ್ತು ನಿನ್ನ ಮುಂದೆ ಇತ್ಯರ್ಥ ಆಯ್ತಲ್ಲ. ಬಿಟ್ಟು ಬಿಡು ಇದನ್ನು ಎಂದು ಹೇಳುತ್ತಾಳೆ. ಬಳಿಕ ಅವರು ಮೂವರು ಹೊರಡಲು ಅನುವಾಗುತ್ತಾರೆ. ಅವರು ಹೋದ ಬಳಿಕ ಪುಟ್ಟಕ್ಕ ಸ್ನೇಹಾಳತ್ತ ಬೇಸರದಿಂದ ನೋಡುತ್ತಾರೆ. ಬಳಿಕ ಆ ಊರಿನ ಮುಖಂಡನ ಜೊತೆ ಸೇರಿಕೊಂಡಿರುವ ಕಾಳಿ, ಬಂಗಾರಮ್ಮನಿಗೆ ಕರೆ ಮಾಡಿ ಕುಡಿದ ಮತ್ತಿನಲ್ಲಿ ಏನೇನೋ ಮಾತನಾಡುತ್ತಾನೆ ಆ ಮಾತುಗಳನ್ನು ಕೇಳಿ ಆ ಊರಿನ ಮುಖಂಡ ಶಭಾಷ್ ಎಂದು ಹೇಳುತ್ತಾನೆ.

ಕಂಠಿ ಪ್ರಾಣಕ್ಕೆ ಆಪತ್ತು!

ಕಂಠಿ ಪ್ರಾಣಕ್ಕೆ ಆಪತ್ತು!

ಬಳಿಕ ರೊಚ್ಚಿಗೆದ್ದ ಕಾಳಿ, ಬಂಗಾರಮ್ಮಗೆ ಕರೆ ಮಾಡುತ್ತಾನೆ. ಮೊದಲೇ ಕುಪಿತಗೊಂಡ ಬಂಗಾರಮ್ಮ ಬಂದ ಕರೆಯನ್ನು ಸ್ವೀಕಾರ ಮಾಡುತ್ತಾಳೆ. ಆತ್ತ ಕಡೆಯಿಂದ ಏನಮ್ಮ ಬಂಗಾರಮ್ಮ ಚೆನ್ನಾಗಿದ್ದೀರ ಎಂದೆಲ್ಲ ಹೇಳಿದಾಗ ಬಂಗಾರಮ್ಮ ಗೆ ಯಾರು ಮಾತನಾಡುವುದು ಎಂದು ಗೊತ್ತಾಗುವುದಿಲ್ಲ. ಅದಕ್ಕೆ ಬಂಗಾರಮ್ಮ ಕೋಪದಿಂದ ಯಾರು ಮಾತನಾಡುತ್ತಿರುವುದು ಎಂದು ಹೇಳಿದರೆ ಸರಿ ಇಲ್ಲವಾದರೆ ಗ್ರಹಚಾರ ಬಿದಿಸಬೇಕಾಗುತ್ತದೆ ಎಂದು ಕೋಪದಿಂದ ಹೇಳಿದಾಗ ಅತ್ತ ಕಾಳಿ, ಬಂಗಾರಮ್ಮ ನಿನ್ನ ಮಗನನ್ನು ನಾವು ಮುಗಿಸುತ್ತೇನೆ ಆತ ಬಹಳ ಅದ್ಭುತ ಆಟಗಳನ್ನೆ ಆಡಿದ್ದಾರೆ. ನಾನು ಖಂಡಿತ ಆತನನ್ನು ಬಿಡುವುದಿಲ್ಲ. ನಿನ್ನ ಕೈಯಲ್ಲಿ ಆದರೆ ನಿನ್ನ ಮಗನನ್ನು ಉಳಿಸಿಕೊಳ್ಳಲು ನೋಡು ಎಂದೆಲ್ಲ ಹೇಳುತ್ತಾನೆ. ಬಳಿಕ ಕರೆ ಕಟ್ ಮಾಡುತ್ತಾನೆ. ಯಾರು ಕರೆ ಮಾಡಿದ್ದು ತಿಳಿಯದೇ ಬಂಗಾರಮ್ಮ ಕೋಪದಿಂದ ಚಡಪಡಿಸುತ್ತಿರುತ್ತಾಳೆ.

ಮೇಷ್ಟ್ರು ನೋಡಲು ಹೊರಟ ಸಹನಾ

ಮೇಷ್ಟ್ರು ನೋಡಲು ಹೊರಟ ಸಹನಾ

ಸಹನಾಳನ್ನು ಆಕೆಯ ಗೆಳತಿ ಕಾಲು ಎಳೆಯುತ್ತಾರೆ. ಇತ್ತ ಪುಟ್ಟಕ್ಕ ಬಂದದ್ದನ್ನು ನೋಡಿ ಸಹನಾ ಗೆಳತಿ ಹೇಳುತ್ತಾಳೆ ಎಲ್ಲಿಗೋ ಹೋಗಬೇಕು ಎಂದು ಹೇಳುತ್ತಿದ್ದಳು ಸಹನಾ ಅಂದಾಗ ಪುಟ್ಟಕ್ಕ ಸಹನಾ ಬಳಿ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ ಸಹನಾ ಎಲ್ಲೂ ಹೋಗಲು ಇಲ್ಲ ಎಂದು ಹೇಳುತ್ತಾಳೆ. ಆಗ ಸಹನಾ ಗೆಳತಿ ಹೇಳುತ್ತಾಳೆ ಮೇಷ್ಟ್ರು ಬಾವಿಗೆ ಬಿದ್ದು ಬಿಟ್ಟಿದ್ದರಲ್ಲ ಹೇಗಿದ್ದಾರೆ ಎನು ವಿಚಾರಿಸಿ ಕೊಳ್ಳೋಣ ಎಂದು ಬರೋಣ ಎಂದುಕೊಂಡಿದ್ದೆ ಎಂದು ಹೇಳುತ್ತಾರೆ.

ಸಹನಾ ವಿಚಾರ ಮನೆಯಲ್ಲಿ ಪ್ರಸ್ತಾಪ ಮಾಡ್ತಾರಾ ಮೇಷ್ಟ್ರು?

ಸಹನಾ ವಿಚಾರ ಮನೆಯಲ್ಲಿ ಪ್ರಸ್ತಾಪ ಮಾಡ್ತಾರಾ ಮೇಷ್ಟ್ರು?

ಅದಕ್ಕೆ ಪುಟ್ಟಕ್ಕ ಮೇಷ್ಟ್ರನ್ನ ಮರೆತೇ ಬಿಟ್ಟಿದ್ದೆ ಸರಿ ಹೋಗಿ ಬನ್ನಿ ಹೋಗಬೇಕಾದರೆ ಪ್ರಸಾದ ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಮೇಷ್ಟ್ರು ಮನೆಯಲ್ಲಿ ಬಹಳ ಹೆಚ್ಚು ಸಂಸ್ಕಾರವಂತರ ಹಾಗೆ ಕಾಣುತ್ತಾರೆ ಮುರಳಿ ಊಟ ಮಾಡುತ್ತಾ ಇರುವ ವೇಳೆ ಹೇಗಿದೆ ಊಟ ಎಂದೆಲ್ಲ ಕೇಳುತ್ತಾರೆ. ಆಗ ಮುರಳಿ ಅಮ್ಮ ತುಂಬಾ ಅದ್ಬುತ ವಾಗಿದೆ ಎಂದು ಊಟ ಮಾಡಿ ಕೈ ತೊಳೆಯುವ ವೇಳೆ ಅಪ್ಪ ಬಯ್ಯುತ್ತಾರೆ. ಬಳಿಕ ಮೇಷ್ಟ್ರು ಎದ್ದು ನಿಲ್ಲುವಾಗ ಸಹನಾ ಹಾಗೂ ಆಕೆಯ ಗೆಳತಿ ಬರುವುದನ್ನು ನೋಡಿ ಭಯಗೊಳ್ಳುತ್ತಾರೆ. ಬಳಿಕ ವಾಕಿಂಗ್ ಮಾಡಿ ಬರುತ್ತೇನೆ ಎಂದು ಅಲ್ಲಿಂದ ಮೆತ್ತಗೆ ಎಸ್ಕೇಪ್ ಆಗುತ್ತಾರೆ.

English summary
Kannada serial Puttakkana Makkalu written updated on 20th September. Know more about the episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X