ಕಂಠಿ ಹಾಗೂ ಸ್ನೇಹಾ ಪ್ರೀತಿಗೆ ಬ್ರೇಕ್ ಹಾಕ್ತಾಳಾ ಬಂಗಾರಮ್ಮ?
ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಹನಾಗೆ ಕೌಸಲ್ಯ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾ ಇರುತ್ತಾಳೆ. ಕಾಳಿ, ಸಹನಾಗೆ ಕರೆ ಮಾಡಿ ಏನೇನೆಲ್ಲ ಮಾತನಾಡುತ್ತಾ ಇರುತ್ತಾನೆ ಇದನ್ನು ಕೇಳಿದ ಸಹನಾಗೆ ಬಹಳ ಭಯ ಆಗುತ್ತದೆ. ಸಹನಾ ಹತ್ತಿರ ಬಂದು ನಿಂತುಕೊಂಡು ಆಕೆ ಮಾತು ಆಡುತ್ತಾ ಇರುವುದನ್ನು ಕೇಳಿಸಿಕೊಂಡು ಇರುತ್ತಾರೆ. ಇದನ್ನು ನೋಡಿದ ಸಹನಾಗೆ ಇನ್ನು ಭಯ ಹೆಚ್ಚಾಗುತ್ತಾ ಇರುತ್ತದೆ.
ಸಹನಾ, ಕಾಳೀ ಮಾಡಿದ ಕರೆಯನ್ನು ಅವಾಯ್ಡ್ ಮಾಡಲು ಹೋಗುತ್ತಾಳೆ. ಆದರೆ ಆ ಫೋನ್ ಅನ್ನು ಕೌಸಲ್ಯ ಕಸಿದುಕೊಂಡು ರಿಸೀವ್ ಮಾಡುತ್ತಾಳೆ. ಆಗ ಕಾಳೀ ಮೆತ್ತಗೆ ಮಾತನಾಡುತ್ತಾನೆ. ಸಹನಾ ಏನಾದರು ಪ್ರಾಬ್ಲಂ ಇದ್ಯಾ? ಸರಿ ಹಾಗಾದರೆ ನಾಳೆ ಕರೆ ಮಾಡುತ್ತೇನೆ ಎಂದು ಫೋನ್ ಇಡುತ್ತಾನೆ. ಸಹನಾ ಮಾತ್ರ ಚಿಂತೆಗೆ ಒಳಗಾಗುತ್ತಾಳೆ. ಕಾಳೀ ಯಾಕೆ ನನಗೆ ಕರೆ ಮಾಡಿದ ನಾನು ಮದುವೆ ಆಗಿರೋದು ಆತನಿಗೆ ಗೊತ್ತಿಲ್ವಾ? ಎಂದೆಲ್ಲ ಯೋಚನೆ ಮಾಡುತ್ತಾ ಇರುವಾಗ ಕೋಪಗೊಂಡ ಕೌಸಲ್ಯ, ಸಹನಾ ಬಳಿ ಹೇಳುತ್ತಾಳೆ.

ಕೋಪಗೊಂಡ ಕೌಸಲ್ಯ
ಎಷ್ಟು ದಿನದಿಂದ ಈ ಕಳ್ಳಾಟ ನಡೆಯುತ್ತಾ ಇದೆ. ಆತ ರಾಜೇಶ್ವರಿ ತಮ್ಮ ಅಲ್ವಾ. ನಿನಗೆ ಯಾಕೆ ಕರೆ ಮಾಡಿದ್ದು. ಏನಿದು ನಿಮ್ಮಿಬ್ಬರ ಉದ್ದೇಶ ಎಂದು ಜೋರಾಗಿ ಹೇಳುತ್ತಾ ಇರುತ್ತಾರೆ. ಇದನ್ನು ಕೇಳಿದ ಸಹನಾ ಜೋರಾಗಿ ಅಳುತ್ತಾ ಅಲ್ಲಿಂದ ಹೋಗುತ್ತಾಳೆ. ಇನ್ನೂ ಸ್ನೇಹಾ ಪರೀಕ್ಷೆಗೆ ಹೋಗುವ ವೇಳೆ ಎಲ್ಲರ ಬಳಿ ಮಾತನಾಡಿಕೊಂಡು ಹೋಗಬೇಕು ಎಂದೆಲ್ಲ ಯೋಚನೆ ಮಾಡಿದಾಗ ಅಕ್ಕನಿಗೆ ಕರೆ ಮಾಡಿದರೆ ಹೇಗೆ ಎಂದು ಯೋಚನೆ ಮಾಡಿ ಆಕೆಗೆ ಕರೆ ಮಾಡುತ್ತಾಳೆ.
ಯಾರ ಮಾತೂ ಕೇಳದ ಸಹನಾ
ಆಗ ಸಹನಾ ಯಾರ ಕರೆಯನ್ನು ಸ್ವೀಕರಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಇನ್ನು ನಂಜಮ್ಮ ನೇರವಾಗಿ ಬಂಗಾರಮ್ಮ ಬಳಿ ಬರುತ್ತಾಳೆ. ಸೇಡಿಗೆ ಸೇಡು ಅನ್ನುವ ಹಾಗೆ ನಂಜಮ್ಮನ ಮನೆಗೆ ಬಂಗಾರಮ್ಮ ಹೇಗೆ ಬಂದರೋ ಅದೇ ರೀತಿ ನಂಜಮ್ಮ, ಬಂಗಾರಮ್ಮನ ಮನೆಗೆ ಬರುತ್ತಾಳೆ. ಆಗ ಕೂಡ ಸ್ನೇಹಾ, ನಂಜಮ್ಮನ ಮಗಳು ಎನ್ನುವ ಗುಟ್ಟು ಬಂಗಾರಮ್ಮನ ಮುಂದೆ ರಟ್ಟು ಮಾಡಲು ಹೋಗಲಿಲ್ಲ. ಯಾಕೆಂದರೆ ಸ್ನೇಹಾ, ಕಂಠಿ ಇಬ್ಬರು ಒಂದಾದರೆ ಬಂಗಾರಮ್ಮನಿಗೆ ಇರುವ ಅಹಂಕಾರ ಇಳಿದು ಹೋಗುತ್ತದೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ಬಂಗಾಗೆ ಅವಮಾನ ಮಾಡಿದ ನಂಜಮ್ಮ
ಇನ್ನು ನಂಜಮ್ಮ ಸವಾಲು ಹಾಕುತ್ತಾರೆ. ಆ ಹುಡುಗಿಯನ್ನು ನಿನ್ನ ಮಗನಿಗೆ ಕಟ್ಟೆ ಕಟ್ಟುತ್ತೇವೆ ಈ ಮಾತು ಮಾತ್ರ ಸತ್ಯ ಎಂದು ಯೋಚಿಸುತ್ತಾ ಅಲ್ಲಿಂದ ಸವಾಲು ಹಾಕು ಬಂಗಾರಮ್ಮನ ಸೊಕ್ಕಿನ ಮಾತು ಕೇಳಿ ಅಲ್ಲಿಂದ ಹೊರಟು ಹೋಗುತ್ತಾರೆ. ಸ್ನೇಹಾ, ಕಂಠಿ ಬಳಿ ಮಾತನಾಡುತ್ತಾ ಇರುವಾಗ ನಂಜಮ್ಮ ಮನೆಗೆ ಬಂದಿರುವ ವಿಚಾರ ಹೇಳುತ್ತಾಳೆ. ಹಾಗೆಯೇ ನನ್ನ ನಿನ್ನ ಪ್ರೀತಿ ವಿಚಾರ ನಂಜಮ್ಮಗೆ ಗೊತ್ತಾಗಿದೆ ಕೂಡ. ಆ ಬಗ್ಗೆ ಮಾತನಾಡಲು ಬಂದರು. ಹಾಗೆಯೇ ನಿನ್ನ ಬಗ್ಗೆ ನಂಜಮ್ಮ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ, ಎಂದೆಲ್ಲ ಹೇಳಿದಾಗ ಕಂಠಿಗೆ ಶಾಕ್ ಆಗುತ್ತದೆ. ನಂಜಮ್ಮ ನನ್ನ ನಿನ್ನ ಪ್ರೀತಿಗೆ ಸಪೋರ್ಟ್ ಮಾಡಿದ್ರಾ ಎಂದು ಬಹಳ ಶಾಕ್ ಆಗಿ ಕೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ಹೌದು ಎನ್ನುತ್ತಾಳೆ. ಇನ್ನು ಕಂಠಿ ಈ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾನೆ .

ನಂಜಮ್ಮ ಮನದ ಬದಲಾವಣೆ ಕಂಡ ಕಂಠಿ
ಆ ವೇಳೆ ಆತನಿಗೆ ಎಷ್ಟು ಗ್ಲಾಸ್ ಟೀ ಕುಡ್ದೇ ಎನ್ನುವುದು ಮರೆತು ಹೋಗುತ್ತದೆ. ಇನ್ನು ಇದೇ ಸಮಯದಲ್ಲಿ ವಸು ಕೂಡ ಕರೆ ಮಾಡಿ ಮನೆಗೆ ನಂಜಮ್ಮ ಬಂದಿರುವ ವಿಚಾರ ಹೇಳುತ್ತಾನೆ. ಇದನ್ನು ಕೇಳಿದ ಕಂಠಿ ಮಾತ್ರ ಬಹಳ ಶಾಕ್ ಆಗುತ್ತಾನೆ. ನಂಜಮ್ಮ ಏತಕ್ಕಾಗಿ ಬಂದಳು ಎಂದೆಲ್ಲ ಕೇಳುತ್ತಾ ಇರುತ್ತಾರೆ. ಆದರೆ ವಸುಗೆ ಮಾತ್ರ ಅದಾವುದರ ಅರಿವು ಆಗಿರುವುದು ಇಲ್ಲ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











