ರೌಡಿಗಳ ಹೊಡೆತಕ್ಕೆ ಕೆಳಗುರುಳಿದ ಕಂಠಿ! ಮುಂದೇನು?

By ಪೂರ್ವ

ರಾಜೇಶ್ವರಿ ಬಹಳ ಆತಂಕದಿಂದ ಕಾಳಿಗಾಗಿ ಕಾಯುತ್ತಾ ಇದ್ದಾಳೆ. ಏನು ಇನ್ನೂ ಕಾಳಿ ಪತ್ತೇನೆ ಇಲ್ಲ. ಎಷ್ಟು ಹೊತ್ತು ಆತನನ್ನು ಕಾಯುವುದು. ಎಲ್ಲಾದರೂ ಪುಟ್ಟಕ್ಕನ ಮೆಸ್‌ಗೆ ಬೆಂಕಿ ಹಚ್ಚಲು ಹೋಗಿ ಸಿಕ್ಕಿ ಹಾಕಿಕೊಂಡು ಬಿಟ್ಟನಾ? ಅಲ್ಲಿ ಕಾಳಿಗೆ ಎಲ್ಲರೂ ಸೇರಿ ಹೊಡಿತಿದ್ದಾರಾ? ಏನು ಎಂಬಂತೆ ಕಾಯುತ್ತಾ ಇರುತ್ತಾಳೆ. ಈ ವೇಳೆ ಗೋಪಾಲ ಮಾತ್ರ ತನ್ನ ಮೊದಲ ಹೆಂಡತಿಯ ಬದುಕನ್ನೇ ಹಾಳು ಮಾಡಲು ನೋಡುತ್ತಾ ಇದ್ದಾರಲ್ಲ ಎಂದು ಬಹಳ ನೊಂದುಕೊಳ್ಳುತ್ತಾನೆ.

ಆದರೆ ಇದನ್ನೆಲ್ಲ ನೋಡಿದ ರಾಜಿ ಮಾತ್ರ ಏನು ನನ್ನ ಗಂಡ ಯಾಕೆ ಇಷ್ಟು ಸಪ್ಪಗೆ ಕುಳಿತಿದ್ದೀರಿ ಏನಾಯ್ತು ಎಂದು ಕೇಳುತ್ತಾಳೆ. ಇದನ್ನು ಕೇಳಿದ ಗೋಪಾಲ ಮಾತ್ರ ಏನು ಆಗಿಲ್ಲ ಎಂಬಂತೆ ಹೇಳಿ ಬಳಿಕ ಕಾಳಿ ಇನ್ನೂ ಬಂದಿಲ್ಲ ಅಲ್ವಾ, ಸಿಕ್ಕಿ ಹಾಕಿಕೊಂಡ ಇರಬೇಕು. ಇನ್ನು ಅಲ್ಲಿ ನಿನ್ನ ಹೆಸರು ಬಾಯಿ ಬಿಡಲಿಲ್ಲ ಅಂದರೆ ಸಾಕು ಎಂದು ಹೇಳುತ್ತಾನೆ. ಇದನ್ನು ಕೇಳಿ ರಾಜೇಶ್ವರಿಗೆ ಭಯವಾಗುತ್ತದೆ. ಬಳಿಕ ಗೋಪಾಲನ ಬಳಿ ಕಾಳಿಗೆ ಕರೆ ಮಾಡಲು ಹೇಳುತ್ತಾಳೆ ಆದರೆ ಗೋಪಾಲ ಮಾತ್ರ ನಾನು ಕರೆ ಮಾಡುವುದಿಲ್ಲ ಎಂದು ಹೇಳುತ್ತಾನೆ. ಆದರೆ ರಾಜಿಗೆ ಮನಸ್ಸು ತಡೆಯಲು ಆಗದೆ ಅಲ್ಲಿಗೆ ಹೋಗಿ ನೋಡಿಕೊಂಡು ಬನ್ನಿ ಎಂದು ಗೋಪಾಲನ ಬಳಿ ಹೇಳುತ್ತಾಳೆ.

ಆ ವೇಳೆ ಗೋಪಾಲ, ಅಲ್ಲಿ ಹೋಗಿ ನಾನು ಆತನ ಜೊತೆ ಹೊಡೆಸಿಕೊಂಡು ಬರಬೇಕಾ ನನ್ನಿಂದ ಅದೆಲ್ಲ ಸಾಧ್ಯ ಆಗುವುದಿಲ್ಲ ನೀನು ಏನು ಬೇಕಾದರೂ ಹೇಳು ಅದೆಲ್ಲ ನನ್ನಿಂದ ಆಗುವುದು ಇಲ್ಲ. ಕಾಳಿ, ಸ್ನೇಹಾ ಕೈ ಗೆ ಮಾತ್ರ ಪಕ್ಕಾ ಸಿಕ್ಕಿ ಬೀಳುತ್ತಾನೆ ಎಂದು ಹೇಳುತ್ತಾನೆ. ಆ ವೇಳೆ ರಾಜಿ, ಕಾಳಿಗೆ ಕರೆ ಮಾಡುತ್ತಾಳೆ. ಆದರೆ ಕಾಳಿ, ರಾಜಿ ಕರೆಯನ್ನು ಸ್ವೀಕರಿಸುವುದಿಲ್ಲ.

ಕಂಠಿಯ ಕೊಲ್ಲಲು ಕಾಳಿ ಮಾಸ್ಟರ್ ಪ್ಲಾನ್

ಕಂಠಿಯ ಕೊಲ್ಲಲು ಕಾಳಿ ಮಾಸ್ಟರ್ ಪ್ಲಾನ್

ಕಾಳಿ, ಕಂಠಿಯನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಈ ವೇಳೆ ಸ್ನೇಹಾಗೆ ದೊರೆಯದ್ದೆ ಚಿಂತೆ ಆದರೆ ಮುರಳಿ ಹಾಗೂ ಸಹನಾ ಪ್ರೀತಿಯಲ್ಲಿ ತಲ್ಲೀನರಾಗಿ ಇರುತ್ತಾರೆ. ಕಂಠಿ ಬಳಿ ಸ್ನೇಹಾ ಹೇಳುತ್ತಾಳೆ ಹೇಗಾದರೂ ಮಾಡಿ ದೊರೆಯನ್ನು ನಾನು ನೋಡಲೇಬೇಕು. ಯಾರು ಅದು. ನಮಗೆ ಇಷ್ಟು ಸಹಾಯ ಮಾಡುವುದು ಯಾಕಾಗಿ ಎಂಬೆಲ್ಲ ಸತ್ಯ ತಿಳಿದುಕೊಳ್ಳಬೇಕು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ದೊರೆಗೆ ಕರೆ ಮಾಡಲು ಹೇಳುತ್ತಾಳೆ ಇದನ್ನು ಕೇಳಿದ ಕಂಠಿ ಗೆ ತಲೆ ಬಿಸಿ ಆಗುತ್ತದೆ ಜೊತೆಗೆ ಮನೆಯಿಂದ ಕಾಲ್ ಮೇಲೆ ಕಾಲ್ ಬರುತ್ತಲೆ ಇರುತ್ತದೆ.

ಮಗನ ನೋಡಲು ಕಾರು ಹತ್ತಿದ ಬಂಗಾರಮ್ಮ

ಮಗನ ನೋಡಲು ಕಾರು ಹತ್ತಿದ ಬಂಗಾರಮ್ಮ

ಕಂಠಿ ಕರೆ ಕಟ್ ಮಾಡುತ್ತಿರುವುದನ್ನು ನೋಡಿದ ವಸು ಅಮ್ಮನ ಬಳಿ ಹೇಳುತ್ತಾಳೆ ಅಣ್ಣಯ್ಯ ಕರೆ ಸ್ವೀಕಾರ ಮಾಡುತ್ತಿಲ್ಲ ಎಂದು. ಆದರೆ ಬಂಗಾರಮ್ಮಗೆ ಮನಸ್ಸು ತಡೆಯಲು ಆಗದೆ ಮುಂಗುಸಿಗೆ ಕರೆ ಮಾಡುತ್ತಾರೆ. ಈ ವೇಳೆ ಮುಂಗುಸಿ ಹಾಗೂ ಆತನ ಗೆಳೆಯರು ಹೇಗೆ ನಾವು ದಾಳಿ ಮಾಡುವವರ ಹಾಗೆ ನಟಿಸೋದು ಎಂದೆಲ್ಲ ಹೇಳುತ್ತ ಮುಖಕ್ಕೆ ಬಟ್ಟೆ ಮುಚ್ಚಿಕೊಳ್ಳುವವರ ಹಾಗೆ ತಯಾರಿ ಮಾಡುತ್ತಾ ಇರುತ್ತಾರೆ. ಆತ ಕಾಲ್ ಎತ್ತಿ ಏನು ತಂಗಿಯವ್ವ ಎಂದು ಹೇಳಿದಾಗ ಅತ್ತ ಕಡೆಯಿಂದ ಬಂಗಾರಮ್ಮ ಮಾತನಾಡುವುದನ್ನು ಕೇಳಿ ಮುಂಗುಸಿಗೆ ತಲೆಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ಬಳಿಕ ಕಂಠಿ ಎಲ್ಲಿದ್ದಾನೆ ನೀವು ಎಲ್ಲಿದಿರಾ ಎಂದು ಕೇಳಿದಾಗ, ಗದ್ದೆಯಲ್ಲಿ ಇದ್ದೇವೆ ಎಂದು ಬಂಗಾರಮ್ಮ ಬಳಿ ಹೇಳುತ್ತಾನೆ. ಮಗನನ್ನು ನೋಡಲು ಗದ್ದೆ ಬಳಿ ಬರಲು ಕಾರು ಹತ್ತುತ್ತಾರೆ ಬಂಗಾರಮ್ಮ.

ಕಂಠಿಯನ್ನು ಅಟ್ಯಾಕ್ ಮಾಡಿದ ರೌಡಿಗಳು

ಕಂಠಿಯನ್ನು ಅಟ್ಯಾಕ್ ಮಾಡಿದ ರೌಡಿಗಳು

ನನ್ನ ಮಾತು ಅಸಡ್ಡೆಯಾಗಿದೆ. ಈಗ ನಾನು ಬಿಸಿ ಮುಟ್ಟಿಸಲಿಲ್ಲ ಅಂದರೆ ಮತ್ತೆ ನನಗೆ ಯಾವತ್ತೂ ಸಾಧ್ಯ ಆಗುವುದಿಲ್ಲ. ನಾನು ಹಾಗೂ ನನ್ನ ಮಾತು ಅಂದರೆ ಏಷ್ಟು ಅಸಡ್ಡೆ ಹೇಳುತ್ತಾ ಬಂಗಾರಮ್ಮ ಕಾರು ಹತ್ತುತ್ತಾರೆ. ಮುಂಗುಸಿ ಮಾತನಾಡಿದ ವೇಳೆ ಅಲ್ಲಿಗೆ ಬಂದ ನಾಲ್ವರು ದಾಂಡಿಗರು ಮಚ್ಚು ತೆಗೆಯುತ್ತಾರೆ ಇದನ್ನು ನೋಡಿದ ಕಂಠಿ ಗೆಳೆಯರಿಗೆ ಭಯ ಆಗಿ ಕಂಠಿ ಬಳಿ ಓಡೋಡಿ ಬರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ರೌಡಿಗಳು, ಕಂಠಿಯನ್ನು ನೋಡಿ ಆತನನ್ನು ಸುತ್ತುವರೆಯುತ್ತಾರೆ. ಕೂಡಲೇ ಕಂಠಿಗೆ ಇದು ಅಪಾಯದ ಮುನ್ಸೂಚನೆ ಎಂದು ಅರಿವಿಗೆ ಬರುತ್ತದೆ. ಆದರೆ ಕಂಠಿ ಮಾತ್ರ ಬಹಳ ಎಚ್ಚರಿಕೆಯಿಂದ ಇರುತ್ತಾನೆ.

ನೆಲಕ್ಕೆ ಬಿದ್ದ ಕಂಠಿ!

ನೆಲಕ್ಕೆ ಬಿದ್ದ ಕಂಠಿ!

ಸ್ನೇಹಾ, ಸಹನಾ ಮುರಳಿ ಮೇಷ್ಟ್ರನ್ನೂ ಕಂಠಿ ಅಲ್ಲಿಂದ ಕಳುಹಿಸುತ್ತಾನೆ. ಆದರೆ ಸ್ನೇಹಾ ಮಾತ್ರ ಶ್ರೀ ಎಂದು ತಡಬಡಾಯಿಸುತ್ತ ಇರುತ್ತಾಳೆ. ಕಂಠಿಯನ್ನು ನೋಡಿದ ಕಾಳಿ, ಮರದ ಹಿಂದೆ ಅವಿತಿರುತ್ತಾನೆ. ಕಂಠಿ ಸುತ್ತ ಸುತ್ತುವರಿದಿರುವ ದಾಂಡಿಗರನ್ನು ಸರಿಯಾಗಿ ಓದೆಯುತ್ತ ಇರಬೇಕಾದರೆ ಹಿಂದಿನಿಂದ ಬಂದ ಕಾಳಿ, ಕಂಠಿ ತಲೆಗೆ ಹೊಡೆಯುತ್ತಾನೆ. ಹೊಡೆದ ರಭಸಕ್ಕೆ ಗಟ್ಟಿಯಾಗಿ ಅವ್ವ ಎಂದು ಅರಚಿ ಕೊಳ್ಳುತ್ತಾನೆ. ಬಳಿಕ ಕುಸಿದು ಬಿದ್ದ ಕಂಠಿಯನ್ನು ಕೊಲ್ಲಲೆಂದು ನೋಡುವಾಗ ಬಂಗಾರಮ್ಮ ಬರುತ್ತಿರುವುದನ್ನು ಕಂಡು ಅಲ್ಲಿಂದ ಓಡಿ ಹೋಗುತ್ತಾರೆ ರೌಡಿಗಳು. ಬಂಗಾರಮ್ಮ ಬರುತ್ತಿರುವುದನ್ನು ನೋಡಿದ ಕಂಠಿ ಗೆಳೆಯರು ಸ್ನೇಹಾ ಸಹನಾ ಮೇಷ್ಟ್ರ ನ್ನೂ ಹೋಗಲು ಹೇಳುತ್ತಾರೆ. ಅವರೆಲ್ಲ ಹೋದ ಬಳಿಕ ಬಂಗಾರಮ್ಮ ಓಡೋಡಿ ಬರುತ್ತಾರೆ. ಬಳಿಕ ಮಗನ ಸ್ಥಿತಿ ಕಂಡು ಮುಂಗುಸಿಗೆ ಹೊಡೆಯುತ್ತಾರೆ. ಬಳಿಕ ಕಂಠಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.

More from Filmibeat

English summary
Kannada serial Puttakkana Makkalu written updated on 21th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X