ಪುಟ್ಟಕ್ಕನ ಹೋಟೆಲ್‌ನಲ್ಲಿ ಹಣ ಕಳವು: ಕಳ್ಳಾಟ ಬೆಳಕಿಗೆ ಬರುತ್ತಾ?
'ಪುಟ್ಟಕ್ಕನ ಮಕ್ಕಳು' ಧಾರವಾಹಿ ನೋಡುಗರ ಮನ ಗೆದ್ದಿದೆ. ನಂಬರ್ ಒನ್ ಧಾರಾವಾಹಿ ಆಗುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ ವೀಕ್ಷಕ ಬಂಧುಗಳು. ಪುಟ್ಟಕ್ಕನ ಮನೆಯ ಸಂಸಾರದಲ್ಲಿ ಹಿರಿಯ ಸ್ಥಾನ ಪಡೆದಿರುವುದು ಸ್ನೇಹಾ. ಇತ್ತ ಯಾರಿಗೆ ರಾಖಿ ಕಟ್ಟುವುದು ಎಂದು ಸುಮಾ ಸಹನಾ ಯೋಚನೆ ಮಾಡುತ್ತಿದ್ದಾಗ ಸ್ನೇಹಾಳ ನೆನಪು ಥಟ್ಟನೆ ಮೂಡುತ್ತದೆ.
ನಮಗಿಬ್ಬರಿಗೂ ಅಣ್ಣನ ಸ್ಥಾನ ನೀಡಿದಾಕೆ ನೀನು ಎಂದು ಸ್ನೇಹಾಳತ್ತ ನೋಡುತ್ತಾಳೆ. ಬಳಿಕ ಸ್ನೇಹಾಗೆ ಮಂಗಳಾರತಿ ಬೆಳಗಿಸಿ ಇಬ್ಬರು ಕೈಗೆ ರಾಖಿ ಕಟ್ಟುತ್ತಾರೆ. ಇದನ್ನು ನೋಡಿದ ಸ್ನೇಹಾಗೆ ಖುಷಿ ಆಗುತ್ತದೆ. ಸ್ನೇಹಾ, ಕಂಠಿ ಹಾಗೂ ಪೂರ್ವಿಯನ್ನು ನೋಡಿ ಕೊಂಚ ತಲೆಕೆಡಿಸಿಕೊಂಡಿದ್ದಾರೆ. ಕಂಠಿ ಹಾಗೂ ಪೂರ್ವಿ ಗೆ ಏನು ಸಂಬಂಧ ಎಂದೆಲ್ಲ ಮನದಲ್ಲಿ ಪ್ರಶ್ನೆ ಮಾಡಿಕೊಂಡು ಯೋಚಿಸುತ್ತ ಇರುವಾಗ ಸುಮಾ ಆಕೆಯ ಗಮನವನ್ನು ಬೇರೆಡೆ ಸೆಳೆಯುತ್ತಾರೆ.

ಸುಮಾಳ ಪ್ರಶ್ನೆಗೆ ಉತ್ತರ ಕೊಡದ ಸ್ನೇಹಾ
ಸುಮಾ ಪದೇ ಪದೇ ಕೋಚ್ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ. ಆಕೆಯ ಮಾತು ಒಂದೇ, ಅಮ್ಮ ಹೇಳಿದ ಕೋಚ್ ಜೊತೆ ಆಟವಾಡಿ ಎಲ್ಲಾದರೂ ಸೋತು ಹೋದರೆ ಎನು ಮಾಡುವುದು. ನನ್ನ ಮರ್ಯಾದೆ ಮಾನ ಏನಾಗಬೇಡ ಎಂದೆಲ್ಲಾ ಯೋಚನೆ ಮಾಡುತ್ತಾ ಇರುತ್ತಾಳೆ. ಇದನ್ನು ಅಕ್ಕಂದಿರ ಬಳಿ ಹೇಳುತ್ತಾಳೆ ಸ್ನೇಹಾ ಅಕ್ಕ ಸಹನಾ ಅಕ್ಕ. ನನಗೆ ಯಾರು ಕೋಚ್ ಆಗಿ ಬರುತ್ತಾರೆ ನಿಮಗೆ ತಿಳಿದಿದೆಯೇ ಎಂದು ಕೇಳುತ್ತಾಳೆ. ಅದಕ್ಕೆ ಸ್ನೇಹಾ ಹೇಳುತ್ತಾಳೆ. ಖೋ-ಖೋ ಆಡುವವಳು ನೀನು ನಮ್ಮ ಬಳಿ ಯಾಕೆ ಕೇಳ್ತೆ, ನೀನೇ ಆಟ ಆಡು. ಆದರೆ ಆಟ-ಆಟ ಎಂದು ಯೋಚಿಸಬೇಡ ಓದುವುದರ ಬಗ್ಗೆ ಕೂಡ ಗಮನ ಕೊಡು ಎಂದು ಜೋರಾಗಿ ಹೇಳುತ್ತಾಳೆ. ಹೀಗೆ ಅಕ್ಕ ತಂಗಿಯ ಮಧ್ಯೆ ವಾಗ್ವಾದ ನಡೆಯುತ್ತದೆ.

ಓದಿನತ್ತ ಗಮನ ಹರಿಸುವಂತೆ ಹೇಳಿದ ಸ್ನೇಹಾ
ಬಳಿಕ ಸುಮಾ ಹೇಳುತ್ತಾಳೆ ಅಯ್ಯೋ ಆ ಅಮ್ಮ ನೋಡಿದ್ರೆ ರಾಹುಲ್ ದ್ರಾವಿಡ್ ನಮ್ಮ ಕೋಚ್ ಆಗಿ ಬರುತ್ತಾರೆ ಅನ್ನೋ ಥರ ಮಾತನಾಡುತ್ತಾ ಬಿಲ್ಡಪ್ ಕೊಡುತ್ತಿದ್ದಾರೆ. ನಿನ್ನಲ್ಲಿ ಕೇಳುತ್ತಿದ್ದೇನೆ ಅಲ್ವಾ. ಅವ್ವನ ಬಳಿಯೇ ಎಲ್ಲವನ್ನೂ ಕೇಳುತ್ತಿದ್ದೆ ಎಂದು ಹೇಳುತ್ತಾಳೆ ಸುಮಾ. ಸುಮಾಗೆ ಖೊ-ಖೋ ಆಟ ಆಡಲು ಹೋಗುವುದಕ್ಕಿಂತ ಮೊದಲು ಕೋಚ್ ಯಾರು ಬರುತ್ತಾರೋ ಅನ್ನುವ ಆತಂಕ ಮೂಡಿದೆ. ತನ್ನ ಸ್ನೇಹಿತೆಯರ ಎದುರು ಮರ್ಯಾದೆ ಹೋದರೆ ಹೇಗೆ ಅದನ್ನು ಸಹಿಸಿಕೊಳ್ಳುವುದು ಎಂಬುವುದಾಗಿತ್ತು. ಅದಕ್ಕಾಗಿ ಸ್ನೇಹಾ ಹಾಗೂ ಸಹನಾ ಬಳಿ ಕೋಚ್ ಯಾರು ಬರುತ್ತಾರೆ ಎಂದೆಲ್ಲಾ ಪ್ರಶ್ನೆ ಮಾಡುತ್ತಾಳೆ. ಆದರೆ ಸ್ನೇಹಾ ಬಳಿ ಕೇಳುವುದಕ್ಕಿಂತ ಅಮ್ಮನ ಬಳಿ ಕೇಳುವುದು ಎಷ್ಟೋ ವಾಸಿ ಎಂದು ಆಕೆಗೆ ಅನ್ನಿಸಿ ಬಿಡುತ್ತದೆ.

ತಂಗಿಯ ಪ್ರಶ್ನೆಗೆ ಉತ್ತರಿಸದೆ ಹೋದ ಸ್ನೇಹಾ
ಬಳಿಕ ತಂಗಿಯ ಪ್ರಶ್ನೆಗೆ ಉತ್ತರ ಕೊಡದೆ ತಮ್ಮ ಪಾಡಿಗೆ ಕೆಲಸ ಮಾಡಲು ಶುರು ಮಾಡುತ್ತಾಳೆ ಸ್ನೇಹಾ. ಇತ್ತ ಸಹನಾ ಹೇಳುತ್ತಾಳೆ ಸುಮಾ ನೀನು ದೇವರ ಸ್ಮರಣೆ ಮಾಡಿ ಹೋಗು ಖಂಡಿತ ಒಳಿತಾಗುತ್ತದೆ ಎಂದು ಹೇಳುತ್ತಾಳೆ. ಇನ್ನೂ ಅಮ್ಮನ ಬಳಿ ಹೋಗಿ ಅದೆಷ್ಟು ತಲೆ ತಿನ್ನುತ್ತಾಳೆ ಗೊತ್ತಿಲ್ಲ. ಆದರೆ ಪುಟ್ಟಕ್ಕ ಮಾತ್ರ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದುಕೊಂಡು ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ಕೆಲಸದಲ್ಲಿ ನಿರತಳಾಗುತ್ತಾಳೆ. ಪುಟ್ಟಕ್ಕನ ಒಂದು ಗುಣ ಏನಪ್ಪ ಅಂದರೆ ತನ್ನ ಮನೇಲಿ ಏನೇ ಆದರೂ ಪರವಾಗಿಲ್ಲ. ಗೆಳೆಯ ಗೆಳತಿಯರ ಮನೆಯಲ್ಲಿ ಏನಾದರೂ ನಡೆದರೆ ಅದನ್ನು ಮೊದಲಿಗೆ ವಿಚಾರಿಸಿಕೊಳ್ಳುವ ಉದಾರ ಮನಸ್ಥಿತಿ ಪುಟ್ಟಕ್ಕನದ್ದು.

ಮೆಸ್ಸಿನಿಂದ ಹಣ ಕದಿಯುತ್ತಿರುವ ಮಂಜಕ್ಕ
ಇದೀಗ ಶಾಂತ ಕೆಲಸಕ್ಕೆ ಆಗಮಿಸಿದ್ದಾರೆ. ಅವರನ್ನು ನೋಡಿದ ಪುಟ್ಟಕ್ಕ ಯಾಕೆ ಶಾಂತ ಕೆಲಸಕ್ಕೆ ಆಗಮಿಸಿದ್ದೀಯ. ಮುತ್ತಯ್ಯ ಹುಷರಾಗಿದ್ದಾನ ಎಂದಾಗ ಶಾಂತಕ್ಕ ತನ್ನ ದುಃಖವನ್ನು ತೋಡಿಕೊಂಡು ಅತ್ತಳು. ಇದನ್ನು ನೋಡಿದ ಮಂಜಕ್ಕ ನಾನು ಇಲ್ಲಿ ಕೆಲಸಮಾಡಬೇಕು. ಅವರಿಬ್ಬರೂ ಅಲ್ಲಿ ಹರಟೆ ಹೊಡೆಯಲಿ ಎಂದು ಹೇಳುತ್ತಾ ಕೋಪದಿಂದ ಹೇಳುತ್ತಾಳೆ. ಬಳಿಕ ಪುಟ್ಟಕ್ಕ ಮೆಸ್ ನಿಂದಾ ಹಣ ಎಗರಿಸಲು ಹೋಗುತ್ತಾಳೆ. ಪುಟ್ಟಕ್ಕನ ಮೆಸ್ನಿಂದಾ ಹಣ ತುಸು-ತುಸುವೇ ಕಳವಾಗುತ್ತಿರುವುದು ಇನ್ನಾದರೂ ಪುಟ್ಟಕ್ಕನ ಗಮನಕ್ಕೆ ಬರುತ್ತಾ ಕಾದು ನೋಡಬೇಕಿದೆ.


Click it and Unblock the Notifications











