ಬುಡುಬುಡುಕೆ ಹೇಳಿದ ಮಾತಿಗೆ ಬೆದರಿದ ಮೇಷ್ಟ್ರ ಹೆತ್ತವರು

By ಪೂರ್ವ

ಸ್ನೇಹಾ, ಕಂಠಿಯನ್ನು ಸತಾಯಿಸುತ್ತ ಇರುತ್ತಾಳೆ. ಆಕೆಯ ತಾಯಿ ಸರಿಯಾಗಿ ಬೈದ ಕಾರಣಕ್ಕೆ ಸ್ನೇಹಾ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿಲ್ಲ. ಜೊತೆಗೆ ಕಂಠಿ ಎಂದರೆ ಕೊಂಚ ದೂರ ಓಡುತ್ತ ಇರುತ್ತಾಳೆ. ಇದನ್ನು ನೋಡಿದ ಕಂಠಿ ಯಾಕೆ ನನ್ನ ಹತ್ತಿರ ಬರುತ್ತಿಲ್ಲ ಎಂದು ಯೋಚನೆ ಮಾಡುತ್ತಾ ಸಿದ್ದೇಶ್ ಬಳಿ ಹೇಳುತ್ತಾನೆ. ಸ್ನೇಹಾ ನನಗೆ ಮುಖ ನೀಡುತ್ತಿಲ್ಲ ಯಾಕೆ ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿದಾಗ ಸಿದ್ದೇಶ್, ಸ್ನೇಹಾ ಬಳಿ ನಾಟಕ ಮಾಡುತ್ತಾನೆ.

ಅಕ್ಕ ಸ್ವಲ್ಪ ಸಾರು ಹಾಕಿ ಎಂದಾಗ ಸಿದ್ದೇಶ್‌ಗೆ ಸಾರು ಬಡಿಸುತ್ತಾರೆ. ಸಿದ್ದೇಶ್, ಸ್ನೇಹಾ ಬಳಿ, ಅಣ್ಣನಿಗೆ ಸಾರು ಬಡಿಸಿ ಅಕ್ಕ ಎಂದಾಗ ಕಂಠಿ ಮುಖ ನೋಡಿದ ಸ್ನೇಹಾ ಸಾರು ಪಾತ್ರೆಯನ್ನು ಅಲ್ಲಿಯೇ ಇಟ್ಟು ಎಷ್ಟು ಬೇಕೋ ಏಷ್ಟು ಸಾರು ಹಾಕಿಕೊಳ್ಳಿ ಎಂದು ಹೋಗುತ್ತಾಳೆ. ಬಳಿಕ ಎಲ್ಲರಿಗೂ ಕೇಳಿಸುವ ಹಾಗೆ ಅಮ್ಮ ನಾನು ಕಾಲೇಜ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗುತ್ತಾಳೆ. ಈ ವೇಳೆ ಕಂಠಿ ಹಾಗೂ ಸಿದ್ದೇಶ್ ಸ್ನೇಹಾ ಹಿಂದೆ ಹೋಗುತ್ತಾರೆ. ಕಂಠಿ ಸ್ನೇಹಾ ಹಿಂದೆ ಓಡಿಕೊಂಡು ಮಿಸ್ ಮಿಸ್ ಎಂದು ಓಡಿಕೊಂಡು ಬರುತ್ತಾ ಇರುತ್ತಾನೆ.

ಒಂದು ನಿಮಿಷ ಒಂದು ನಿಮಿಷ ನನ್ನ ಮಾತನ್ನು ಕೇಳಿ ಮೇಡಂ ಎಂದಾಗ ಸ್ನೇಹಾ ನಿಲ್ಲುತ್ತಾಳೆ. ಇನ್ನು ಕಂಠಿಯನ್ನು ಕೋಪದಿಂದ ನೋಡಿದ ಕಂಠಿ ಹೇಳುತ್ತಾನೆ. ನನಗೆ ಕೂಡ ಹೀಗೆ ಹಿಂದೆ ಬಂದು ಮಾತನಾಡುವುದು ಇಷ್ಟ ಇಲ್ಲ. ಇಷ್ಟು ಕರೆದರೂ ಮಾತನಾಡದೆ ಹೋಗುತ್ತಾ ಇದ್ದೀರಿ ಅಲ್ವಾ ಏನಾಯ್ತು ಎಂದು ಕೇಳುತ್ತಾನೆ. ಅದಕ್ಕೆ ಸ್ನೇಹಾ ಹೇಳುತ್ತಾಳೆ ನಾನು ಮಾತನಾಡಿದರೆ ಅವ್ವ ಬಯ್ಯುತ್ತಾರೆ. ನಿನ್ನೆ ನಿಮ್ಮ ಜೊತೆ ಓಡಾಡುತ್ತಾ ಇದ್ದೆ ಅಲ್ವಾ ಅದಕ್ಕೆ ಅವ್ವನಿಗೆ ಏನೋ ಹೇಳ್ದೆ ಕೇಳ್ದೆ ಸುತ್ತಾಡುತ್ತಿದ್ದೆ ಅಂತ ಕೋಪ ಎನ್ನುತ್ತಾಳೆ.

ಕಂಠಿ ಮೇಲೆ ಸ್ನೇಹಾಳ ಹುಸಿ ಕೋಪ

ಕಂಠಿ ಮೇಲೆ ಸ್ನೇಹಾಳ ಹುಸಿ ಕೋಪ

ಏನು ನನ್ನ ಮೇಲೆ ಕೋಪನಾ? ಎಂದು ಕೇಳಿದ ವೇಳೆ ಸ್ನೇಹಾ, ನಿಮ್ಮ ಮೇಲೆ ಅಲ್ಲ ಶ್ರೀ ನಿಮ್ಮ ಜೊತೆ ಚೆನ್ನಾಗಿ ಮಾತನಾಡಿದರು ಅಲ್ವಾ, ನನ್ನ ಮೇಲೆ ಕೋಪ ಇದೆಲ್ಲ ಇದ್ದಿದ್ದೇ ಬಿಡಿ ಎನ್ನುತ್ತಾಳೆ. ಇದನ್ನೆಲ್ಲ ಕೇಳಿದ ಕಂಠಿ ಹೇಳುತ್ತಾನೆ ನಾನೇ ಕ್ಷಮೆ ಕೇಳುತ್ತೀನಿ ಎನ್ನುತ್ತಾನೆ. ಇನ್ನು ಏನೋ ನೆನಪಾದವಳಂತೆ ಹೇಳುತ್ತಾಳೆ ನಾನು ನಿಮಗೆ ಒಂದು ಕೆಲಸ ನೀಡಿದ್ದೆ ಎಂದು ಹೇಳಿದಾಗ ಅದನ್ನು ನೆನಪಿಸಿಕೊಂಡ ಕಂಠಿ ಹೇಳುತ್ತಾನೆ. ದೊರೆ ಆ ಕೆಲಸ ಮಾಡುವುದು. ನಾನಲ್ಲ ನಾನು ಆತನ ಬಳಿ ಎಲ್ಲಾ ಹೇಳುತ್ತೇನೆ ಅವ ಎಲ್ಲಾ ಕೆಲಸ ಮಾಡಿ ಮುಗಿಸುತ್ತಾನೆ. ಅವನಿಗೆ ನಿಮ್ಮನ್ನು ಕಂಡರೆ ಅಕ್ಕರೆ ಜಾಸ್ತಿ ಆದ ಕಾರಣ ಅವನು ಆ ಕೆಲಸ ಮಾಡಿಯೇ ಮಾಡುತ್ತಾನೆ ಎಂದು ಹೇಳುತ್ತಾನೆ.

ಮೇಷ್ಟ್ರ ಮಾತು ಕೇಳಿ ಬೇಸರಿಸಿಕೊಳ್ಳುವ ಸ್ನೇಹಾ-ಕಂಠಿ

ಮೇಷ್ಟ್ರ ಮಾತು ಕೇಳಿ ಬೇಸರಿಸಿಕೊಳ್ಳುವ ಸ್ನೇಹಾ-ಕಂಠಿ

ಮತ್ತೊಂದೆಡೆ ಮುರಳಿ ಮೇಷ್ಟ್ರು ಕಾಲೇಜಿಗೆ ಹೋಗಲು ನಡೆದುಕೊಂಡು ಬರುತ್ತಾರೆ. ಮುರಳಿ ಮೇಷ್ಟ್ರ ಬಳಿ ಸ್ನೇಹಾ ಕೇಳುತ್ತಾಳೆ ಮದುವೆ ಆಗಲು ಇನ್ನೆಷ್ಟು ದಿನ ಕಾಯಬೇಕು ಎಂದಾಗ ಮೇಷ್ಟ್ರು ಬಹಳ ನೋವಿನಿಂದ ಮಾತನಾಡುತ್ತಾರೆ. ಇನ್ನು ಸ್ವಲ್ಪ ದಿನ ಕಾದರೆ ನನ್ನ ಮದುವೆ ಬೇರೆಯವರ ಜೊತೆ ಮಾಡುತ್ತಾರೆ ನಮ್ಮ ತಂದೆ ತಾಯಿ ಎಂದು ಹೇಳುತ್ತಾಳೆ ಇದನ್ನು ಕೇಳಿದ ಸ್ನೇಹಾ ಕಂಠಿ ಗೆ ಶಾಕ್ ಆಗುತ್ತದೆ.

ಕಂಠಿಯನ್ನು ಹೊಗಳುವ ಪುಟ್ಟಕ್ಕ

ಕಂಠಿಯನ್ನು ಹೊಗಳುವ ಪುಟ್ಟಕ್ಕ

ಕಾಲೇಜಿನಿಂದ ಬಂದ ಸ್ನೇಹಾ, ಅಮ್ಮನ ಬಳಿ ಬಂದು ಇನ್ನೂ ಕೋಪಾನ? ನನ್ನಿಂದ ಯಾಕೆ ಸತ್ಯ ಮುಚ್ಚಿಡುತ್ತ ಇದ್ದೀಯಾ, ಶ್ರೀ ಮೇಲೆ ಕೂಡ ಕೋಪ ಮಾಡಿಕೊಂಡು ಇದ್ದೀಯಾ? ಎಂದಾಗ ಪುಟ್ಟಕ್ಕ ಹೇಳುತ್ತಾರೆ ಶ್ರೀ ತುಂಬಾ ಒಳ್ಳೆಯವನು, ಎಂದಾಗ ಸ್ನೇಹಾಗೆ ಕೊಂಚ ಖುಷಿ ಆಗುತ್ತದೆ. ಇನ್ನು ಸ್ನೇಹಾ ಅಕ್ಕನ ಮದುವೆ ವಿಚಾರವಾಗಿ ಅಮ್ಮನ ಬಳಿ ಮಾತನಾಡಿದಾಗ ಅಯ್ಯೋ ಬೆನ್ನಿಗೆ ಬಿದ್ದ ಬೇತಾಳ ತರ ಆಡುತ್ತಿಯಾ? ಎಂದು ಹೇಳಿ ಕಂಠಿ ಸಹಾಯ ಮಾಡಿದ ವಿಚಾರವನ್ನು ಸ್ನೇಹಾ ಬಳಿ ಹೇಳುತ್ತಾರೆ ಪುಟ್ಟಕ್ಕ.

ಸ್ನೇಹಾ ಬಳಿ ಎಲ್ಲಾ ವಿಚಾರ ಹೇಳಿದ ಪುಟ್ಟಕ್ಕ

ಸ್ನೇಹಾ ಬಳಿ ಎಲ್ಲಾ ವಿಚಾರ ಹೇಳಿದ ಪುಟ್ಟಕ್ಕ

ಮೇಷ್ಟ್ರು ಬಂದು ಹೋದ ಬಳಿಕ ರಾತ್ರಿ ನನ್ನ ಬಳಿ ಬಂದು ಶ್ರೀ ಕೂಡ ಮಾತನಾಡಿದ. ನಾನೆಲ್ಲ ನೋಡಿಕೊಳ್ಳುತ್ತೇನೆ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಸಮಾಧಾನ ಕೂಡ ಮಾಡಿದ ಎಂದು ಹೇಳುತ್ತಾರೆ. ನಾನು ಇದನ್ನೆಲ್ಲ ಹೇಳಿದೆ ಎಂದು ಅವರ ಬಳಿ ಕೇಳಿ ಬಿಡಬೇಡ ಎಂದು ಹೇಳುತ್ತಾಳೆ. ಸಾಮಾನ್ಯವಾಗಿ ಪುಟ್ಟಕ್ಕ ಯಾರ ಮಾತೂ ಕೇಳುವುದು ಇಲ್ಲ ಇದೀಗ ಕಂಠಿ ಮಾತು ಕೇಳುತ್ತಿದ್ದಾರೆ. ಶ್ರೀ ನನಗೆ ಗೊತ್ತಿಲ್ಲದೆ ಇಷ್ಟೆಲ್ಲ ಮಾಡಿದ್ದಾರೆ ಅವರಿಗೆ ಹೇಗೆ ಕೃತಜ್ಞತೆ ಹೇಳಬೇಕು ಎಂದು ತಿಳಿಯುತ್ತಿಲ್ಲ ಎಂದು ಬಹಳ ಖುಷಿ ಪಡುತ್ತಾಳೆ. ಹಾಗೆಯೇ ಕಂಠಿ ಮೇಲಿನ ಗೌರವ ಇನ್ನೂ ಸ್ನೇಹಾಗೆ ಜಾಸ್ತಿ ಆಗುತ್ತದೆ. ಮತ್ತೊಂದೆಡೆ ಬುಡ ಬುಡಿಕೆಯವನ ವೇಷದಲ್ಲಿ ಮೇಷ್ಟ್ರ ಮನೆಗೆ ಹೋಗುತ್ತಾನೆ ಸಿದ್ದೇಶ್. ಅವನ ಸಹಾಯಕ್ಕೆ ಕಂಠಿ ನಿಂತಿರುತ್ತಾನೆ. ಮುರಳಿ ಮೇಷ್ಟ್ರ ಮನೆ ಮುಂದೆ ಎಷ್ಟೇ ಕರೆದರೂ ಮನೆಯಿಂದ ಯಾರು ಹೊರ ಬರುವುದಿಲ್ಲ. ಕೊನೆಗೆ ಮುರಳಿ ಮೇಷ್ಟ್ರ ತಂದೆ ತಾಯಿ ಹೊರ ಬರುತ್ತಾರೆ. ಇನ್ನೂ ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 22th December episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X