twitter
    For Quick Alerts
    ALLOW NOTIFICATIONS  
    For Daily Alerts

    ಪುಟ್ಟಕ್ಕನಿಗೆ ಕಾದಿದೆಯಾ ಗಂಡಾಂತರ?

    By ಪೂರ್ವ
    |

    'ಪುಟ್ಟಕ್ಕನ ಮಕ್ಕಳು' ಧಾರವಾಹಿ ಉತ್ತಮವಾಗಿ ಮೂಡಿಬರುತ್ತಿದೆ. ಪುಟ್ಟಕ್ಕ ಪಾತ್ರದಲ್ಲಿ ಉಮಾಶ್ರಿ ಅಭಿನಯ ಮೆಚ್ಚುಗೆಗೆ ಪಾತ್ರವಾಗಿದೆ. 'ಪುಟ್ಟಕ್ಕನ ಮಕ್ಕಳು' ಧಾರವಾಹಿ ನೋಡುಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಪುಟ್ಟಕ್ಕನ ಮನೆಗೆ ಸ್ವಾಮೀಜಿ ಎಂಟ್ರಿ ನೀಡಿದ್ದಾರೆ. ಪುಟ್ಟಕ್ಕನ ಮನೆಗೆ ಗಂಡಾಂತರ ಕಾದಿದೆ ಎಂದು ಹೇಳುತ್ತಾರೆ. ಮನೆಯ ಹೊರಗಿನಿಂದ ಪುಟ್ಟಕ್ಕನನ್ನು ಕರೆಯುವ ಸ್ವಾಮೀಜಿ, 'ದೀಪ ಹಚ್ಚುವ ಟೈಮ್ ಗೆ ನಿನ್ನ ಮನೆ ಬಾಗಿಲಿಗೆ ಬಂದಿದ್ದೇನೆ, ಬಾ ತಾಯಿ' ಎಂದು ಕರೆಯುತ್ತಾರೆ.

    ಹೊರಗೆ ಬಂದ ಪುಟ್ಟಕ್ಕ ಸ್ವಾಮೀಜಿಗಳನ್ನು ಕಂಡು ನಮಸ್ಕಾರ ಸ್ವಾಮೀಜಿ ತಾವು ಎಂದು ರಾಗ ಎಳೆಯುವಾಗ ಸ್ವಾಮೀಜಿ ಹೇಳುತ್ತಾರೆ ನಾನೊಬ್ಬ ಅಲೆಮಾರಿ ಎಲ್ಲಾ ಊರಿನ ನೀರನ್ನು ಕುಡಿದವನು. ಎಲ್ಲರ ಹಣೆ ಬರಹ ಬರೆದವನು, ಅದನ್ನು ಓದಿ ಹೇಳುವವನು ನಾನು. ಸ್ವಾಮೀಜಿ ಮಾತು ಕೇಳಿದ ಪುಟ್ಟಕ್ಕ ಬನ್ನಿ ಒಳಗೆ ಎಂದು ಕರೆಯತ್ತಾಳೆ.

    ಬೇಡ ಎಂದ ಸ್ವಾಮೀಜಿ ಬಳಿಕ ಮಾತು ಮುಂದುವರೆಸುತ್ತಾರೆ. ಇತ್ತ ಕಡೆ ಒಂದು ಅನ್ನ ಕುಟೀರ ಇದೆ ಎಂಬ ಸಂದೇಶ ಬಂತಮ್ಮ, ಅದಕ್ಕೆ ಬಂದೆ, ಹಸಿವಾಗಿದೆ ಎಂಬ ಕಾರಣಕ್ಕೆ ಬಂದೆ ಎನ್ನುತ್ತಾರೆ. ಅದಕ್ಕೆ ಪುಟ್ಟಕ್ಕ ನಡಿಯಿರಿ ಸ್ವಾಮಿ. ಊಟ ಮಾಡಲು ಎಂದು ಮಂಜಮ್ಮ ಎಂದು ಕರೆಯುತ್ತಾಳೆ. ಅದಕ್ಕೆ ಸ್ವಾಮಿ ಪುಟ್ಟಕ್ಕನನ್ನು ತಡೆಯುತ್ತಾರೆ. ಬೇಡ ತಾಯಿ, ಊಟಕ್ಕೂ ಮೊದಲು ಒಂದು ಸಂದೇಶ ನಾನು ನಿನಗೆ ಹೇಳೋದಿದೆ. ಈ ಮನೆ ನೋಡಿದ ತಕ್ಷಣ ನನ್ನ ದಿವ್ಯ ದೃಷ್ಟಿಗೆ ಏನೋ ಕಂಟಕ ಕಾಣುತ್ತಿದೆ ತಾಯಿ ಎಂದು ಹೇಳಿದಾಗ ಪುಟ್ಟಕ್ಕ ಕಾಂಗಾಲಾಗುತ್ತಾಳೆ. ಏನೋ ಸರಿ ಇಲ್ಲ ಅಂದರೆ ಏನು ಅರ್ಥ ಸ್ವಾಮಿಯವರೆ ಎಂದು ಪುಟ್ಟಕ್ಕ ಆತಂಕದಿಂದ ಕೇಳುತ್ತಾಳೆ.

    ಮನೆಗೆ ಕಂಟಕ ಇದೆ ಎಂದ ಸ್ವಾಮೀಜಿ

    ಮನೆಗೆ ಕಂಟಕ ಇದೆ ಎಂದ ಸ್ವಾಮೀಜಿ

    ಈ ಮನೇನೆ ನಮಗೆ ಎಲ್ಲಾ ಇದ್ದ ಹಾಗೆ. ಈ ಮನೇನೆ ನಮ್ಮ ಗುಡಿ ಇದ್ದ ಹಾಗೆ. ಹಂಗಿರುವಾಗ ಇಲ್ಲಿ ಎನು ಸಮಸ್ಯೆ ಹೇಳಿ ಸ್ವಾಮಿ, ಎಂದಾಗ ಸ್ವಾಮಿ ಹೇಳುತ್ತಾರೆ ಗುಡಿ ಮೇಲೂ ದಾಳಿ ಮಾಡೋರು ಇದ್ದಾರೆ. ಈ ಮನೆ ಮೇಲೆ ದಾಳಿ ಮಾಡಲು ಜನರು ಕಾಯುತ್ತಾ ಇದ್ದಾರೆ. ಎಂದಾಗ ಪುಟ್ಟಕ್ಕಗೆ ನಿಂತ ನೆಲ ಕುಸಿದ ಹಾಗಾಗುತ್ತದೆ. ಮನೆ ಮೇಲೆ ಕಣ್ಣಿಟ್ಟಿರುವವಳು ರಾಜೇಶ್ವರಿ ಒಬ್ಬಳೇ. ತೊಂದರೆ ಆದರೆ ಆಕೆಯಿಂದಲೆ ಆಗಬೇಕು ಇಲ್ಲವಾದರೆ ತೊಂದರೆ ಬರುವುದಿಲ್ಲ.

    ಮದುವೆ ಮಾತುಕತೆ ನಿಂತಿದ್ದನ್ನು ನೆನಪಿಸಿಕೊಳ್ಳುವ ಪುಟ್ಟಕ್ಕ

    ಮದುವೆ ಮಾತುಕತೆ ನಿಂತಿದ್ದನ್ನು ನೆನಪಿಸಿಕೊಳ್ಳುವ ಪುಟ್ಟಕ್ಕ

    ಎಷ್ಟಾದರೂ ನಾನು ಎರಡನೇ ಹೆಂಡತಿ ಅಲ್ವಾ ಎನ್ನುವ ಮಾತುಗಳು ಪುಟ್ಟಕ್ಕನ ಮನಸ್ಸಿಗೆ ಪದೇ ಪದೇ ಬರುತ್ತಿತ್ತು. ಬಳಿಕ ಮಾತು ಮುಂದುವರೆಸಿದ ಸ್ವಾಮಿಗಳು ಇತ್ತೀಚಿಗೆ ನಿಮ್ಮ ಮನೆಯಲ್ಲಿ ನಡೆಯಬೇಕಾಗಿದ್ದ ಶುಭ ಕಾರ್ಯಗಳು ನಿಂತಿರಬೇಕಲ್ವಾ ಅಮ್ಮ ಎಂದು ಹೇಳುತ್ತಾರೆ ಅದಕ್ಕೆ ಪುಟ್ಟಕ್ಕ ಹೌದು ಹೌದು ನನ್ನ ಮಗಳ ಮದುವೆ ಮಾತು ಕತೆ ನಿಂತು ಹೋಯಿತು ಎನ್ನುತ್ತಾಳೆ.

    ದೊಡ್ಡ ಮಗಳ ವಿಷಯದಲ್ಲಿ ಜೋಪಾನ ಎಂದ ಸ್ವಾಮೀಜಿ

    ದೊಡ್ಡ ಮಗಳ ವಿಷಯದಲ್ಲಿ ಜೋಪಾನ ಎಂದ ಸ್ವಾಮೀಜಿ

    'ನೀನು ಒಂಟಿ ತಾಯಿ, ಕಷ್ಟ ಪಟ್ಟಿದ್ದಿಯಾ ನಿನಗೆ ಹೆಣ್ಣು ಮಕ್ಕಳೇ ದಿಕ್ಕು. ಒಳ್ಳೇದೇ ಆಗುತ್ತದೆ ಆದರೆ ಸಮಯ ಆಗುತ್ತದೆ. ನಿನ್ನ ಮೊದಲ ಮಗಳ ವಿಷಯದಲ್ಲಿ ಜೋಪಾನ ಎಂದು ಹೇಳುತ್ತಾರೆ ಸ್ವಾಮೀಜಿ ಇದನ್ನು ಕೇಳಿದ ಪುಟ್ಟಕ್ಕಗೆ ಆತಂಕ ಮೂಡುತ್ತದೆ. ಆತಂಕದಿಂದಲೇ ಪುಟ್ಟಕ್ಕ ಕೇಳುತ್ತಾಳೆ ಯಾಕೆ ಸ್ವಾಮಿ ಎಂದು ಅದಕ್ಕೆ ಹೇಳುತ್ತಾರೆ ಕಂಟಕ ಇದೆ, ನನ್ನ ನಾಲಗೆಯಲ್ಲಿ ಮಚ್ಚೆ ಇದೆ. ನಾನು ಹೇಳಿದ್ದು ಯಾವುದು ಸುಳ್ಳು ಆಗುವುದಿಲ್ಲ. ಮನೆ ಹಾಗೂ ಮಕ್ಕಳನ್ನು ಜೋಪಾನವಾಗಿ ನೋಡಿಕೋ ಎನ್ನುತ್ತಾನೆ ಸ್ವಾಮೀಜಿ.

    ನಿಜ ಸ್ವಾಮೀಜಿಯೊ, ಕಳ್ಳ ಸ್ವಾಮೀಜಿಯೊ?

    ನಿಜ ಸ್ವಾಮೀಜಿಯೊ, ಕಳ್ಳ ಸ್ವಾಮೀಜಿಯೊ?

    ''ನಿನ್ನ ದೊಡ್ಡ ಮಗಳ ಮದುವೆ ವಿಚಾರದಲ್ಲಿ ಅವಸರ ಬೇಡ ನನ್ನ ಸಲಹೆ ಇಲ್ಲದೆ ಮುಂದುವರೆಯಬೇಡ ಎಂದಾಗ ಪುಟ್ಟಕ್ಕ ಆತಂಕದಿಂದ ಹೇಳುತ್ತಾಳೆ ಆದರೆ ನಾನು....ಎಂದಾಗ ಸ್ವಾಮೀಜಿ ಹೇಳುತ್ತಾರೆ ಸರಿಯಾದ ಸಮಯಕ್ಕೆ ನಾನು ಬರುತ್ತೀನಿ ಎಂದು ಹೇಳಿ ಹೋಗುತ್ತಾರೆ'' ಈತ ನಿಜವಾದ ಸ್ವಾಮೀಜಿಯೋ ಅಥವಾ ಪುಟ್ಟಕ್ಕನ ಶತ್ರುಗಳು ಕಳಿಸಿರೊ ಕಳ್ಳ ಸ್ವಾಮೀಜಿಯೋ ಎಂಬುದನ್ನುನ ಮುಂದೆ ಕಾದು ನೋಡಬೇಕಿದೆ.

    English summary
    Kannada serial Puttakkana Makkalu written updated on 22 th July. Know more about the episode.
    Saturday, July 23, 2022, 22:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X