ಆಸ್ಪತ್ರೆಯಲ್ಲಿ ಕಂಠಿ, ಆತಂಕದಲ್ಲಿ ಬಂಗಾರಮ್ಮ: ಮಕ್ಕಳ ಮೇಲೆ ಪುಟ್ಟಕ್ಕನ ಸಿಟ್ಟು!

By ಪೂರ್ವ

ಮನೆಯಲ್ಲಿ ಅಕ್ಕ ತಂಗಿಯರು ಗುಟ್ಟಾಗಿ ದೊರೆಯನ್ನು ಹೇಗೆ ಹುಡುಕುವುದು ಎಂದು ಯೋಚನೆ ಮಾಡುತ್ತಾ ಇರುವಾಗ ಹೇಗಾದರೂ ಸರಿ ದೊರೆಯನ್ನು ಹುಡುಕಬೇಕು ಎಂದು ಯೋಚಿಸುತ್ತಾ ಕಂಠಿಯನ್ನು ಹೊಲದ ಬಳಿ ಕರೆಯಿಸುತ್ತಾರೆ ಕಾಳಿಯ ಮೊಂಡಾಟದಿಂದಾಗಿ ಕಂಠಿ ಜೀವಕ್ಕೆ ಇದೀಗ ಆಪತ್ತು ಬಂದೊದಗಿದೆ. ಈ ವಿಚಾರ ತಿಳಿದು ಬಂಗಾರಮ್ಮ ಬಹಳ ಸಿಟ್ಟಾಗಿದ್ದಾರೆ. ಪುಟ್ಟಕ್ಕನ ಮಕ್ಕಳು ಸಹ ಈಗ ಮನೆಗೆ ಮರಳಿದ್ದು, ಪುಟ್ಟಕ್ಕ ಸಹ ಮಕ್ಕಳ ಮೇಲೆ ಸಿಟ್ಟಾಗಿದ್ದಾರೆ.

ಎಷ್ಟೇ ಹೇಳಿದರೂ ಕೂಡ ನನ್ನ ಮಾತು ಕೇಳಲಿಲ್ಲ ಎನ್ನುವ ಬೇಸರ ಬಂಗಾರಮ್ಮನಿಗೆ. ಯಾವ ಕಾರಣಕ್ಕಾಗಿ ತೋಟಕ್ಕೆ ಹೋದ, ಯಾರು ಕಂಠಿನ ಈ ಸ್ಥಿತಿಗೆ ತಂದಿದ್ದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಸ್ನೇಹಾ ಹಾಗೂ ಸಹನಾ ಮನೆಗೆ ಬರುವ ವೇಳೆ ಪುಟ್ಟಕ್ಕ ಮಾತ್ರ ಎಲ್ಲೆಡೆಯೂ ಸ್ನೇಹಾ ಹಾಗೂ ಸಹನಾರನ್ನು ಆತಂಕದಿಂದ ಹುಡುಕುತ್ತಿರುತ್ತಾಳೆ. ಇಬ್ಬರು ಬಂದ ವೇಳೆ ಕೊಂಚ ಜೋರಾಗಿಯೇ ಇಷ್ಟು ಹೊತ್ತಿನಲ್ಲಿ ಎಲ್ಲಿಗೆ ಹೋಗಿದ್ದೀರಿ ಎಂದು ಕೇಳುತ್ತಾಳೆ.

ಇದಕ್ಕೆ ಉತ್ತರ ಹೇಳಲು ಸ್ನೇಹಾ ತಡವರಿಸುತ್ತಾ ಅವ್ವ ನಾವು ಇಲ್ಲಿಯೇ ಆಚೆ ನಿಂತು ಮಾತನಾಡುತ್ತಾ ಇದ್ದೆವು ಎಂದಾಗ ಪುಟ್ಟಕ್ಕ, ಸ್ನೇಹಾ ಬಳಿ ಹೇಳುತ್ತಾಳೆ ಸುಳ್ಳು ಹೇಳಬೇಡ. ಸಹನಾ ನೀನಾದರೂ ಹೇಳು ಎಲ್ಲಿಗೆ ಹೋಗಿದ್ದೀರಿ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಸಹನಾಗೆ ಎನು ಹೇಳಬೇಕು ತಿಳಿಯಲಿಲ್ಲ. ಬಳಿಕ ಹೇಳುತ್ತಾಳೆ ಅಮ್ಮ ನಾವು ಶ್ರೀ ಅವರ ಗದ್ದೆಯ ಬಳಿ ಹೋಗಿದ್ದೆವು ಎಂದು ಹೇಳಿದಾಗ ಪುಟ್ಟಕ್ಕನಿಗೆ ಶಾಕ್ ಆಗುತ್ತದೆ.

ಮಕ್ಕಳನ್ನು ಪ್ರಶ್ನೆ ಮಾಡಿದ ಪುಟ್ಟಕ್ಕ

ಮಕ್ಕಳನ್ನು ಪ್ರಶ್ನೆ ಮಾಡಿದ ಪುಟ್ಟಕ್ಕ

ಕೋಪಗೊಂಡ ಪುಟ್ಟಕ್ಕ, ಗದ್ದೆಯ ಬಳಿ ಯಾಕೆ ಹೋಗಿದ್ದೀರಿ? ಅದು ಇಷ್ಟು ಹೊತ್ತಿನಲ್ಲಿ ಎಂದು ಕೊಂಡು ಸ್ನೇಹಾಳ ಕೈ ನೋಡುತ್ತಾಳೆ. ಸ್ನೇಹಾ ಕೈಯಲ್ಲಿ ರಕ್ತದ ಕಲೆಗಳ ಕಂಡ ಪುಟ್ಟಕ್ಕ ಇನ್ನೂ ಚಿಂತಾಕ್ರಾಂತಗೊಳ್ಳುತ್ತಾಳೆ. ಬಳಿಕ ಸ್ನೇಹಾ ಕೈ ಹಿಡಿದುಕೊಂಡು ಏನಿದು ಎಂದು ಪುಟ್ಟಕ್ಕ ಕೇಳುತ್ತಾಳೆ. ಬಳಿಕ ಹೇಳುತ್ತಾಳೆ ಹೀಗೆ ಪರಚಿಕೊಂಡಿದೆ. ಏನು ಮಾಡಿಕೊಂಡೆ ಎಂದು ಆತಂಕದಲ್ಲಿ ಕೇಳುತ್ತಾಳೆ. ಅಮ್ಮನ ಆತಂಕದ ನುಡಿಗಳನ್ನು ಕೇಳಿ ಸ್ನೇಹಾ, ಅಮ್ಮ ನಾನು ನಿನ್ನ ಬಳಿ ಎಲ್ಲಾ ವಿಚಾರ ಹೇಳಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಹೇಳುತ್ತಾಳೆ ದೊರೆ ಯಾರು ಎಂಬುವುದನ್ನು ಕಂಡು ಹಿಡಿಯಲು ಹೋಗಿ ಇಷ್ಟು ದೊಡ್ಡ ಅನಾಹುತ ಆಯಿತು ಎಂದಾಗ ಪುಟ್ಟಕ್ಕ ತಲೆ ಚಚ್ಚಿಕೊಳ್ಳುತ್ತಾಳೆ.

ಸುಮಾ ಕಪಾಳಕ್ಕೆ ಹೊಡೆದ ಪುಟ್ಟಕ್ಕ

ಸುಮಾ ಕಪಾಳಕ್ಕೆ ಹೊಡೆದ ಪುಟ್ಟಕ್ಕ

ಆ ವೇಳೆ ಸುಮಾ ಕೂಡ ಏನಕ್ಕ ಅವನು ಯಾರೆಂದು ತಿಳಿಯಿತಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ. ಇದರಲ್ಲಿ ನೀನು ಸೇರಿಕೊಂಡಿದ್ದೀಯಾ? ಮತ್ತೆ ನೀನು ಯಾಕೆ ಇಲ್ಲಿ ಇದ್ದಿದ್ದು, ಹೋಗಿ ಬಿಡಬೇಕು ಆಗಿತ್ತು. ನಾನು ಹೋಗುತ್ತಿದ್ದೆ ಆದರೆ ಅವರೇ ಕರೆದುಕೊಂಡು ಹೋಗಲಿಲ್ಲ ಎಂದಾಗ ಪುಟ್ಟಕ್ಕ ಗೆ ಸಿಟ್ಟು ಬಂದು ಸುಮಾಗೆ ಪೆಟ್ಟು ಕೊಟ್ಟು ಬಾಯಿ ಮುಚ್ಚಿಸುತ್ತಾಳೆ. ಬಳಿಕ ಸ್ನೇಹಾ ಬಳಿ ಕೋಪದಿಂದ ಪುಟ್ಟಕ್ಕ ಹೇಳುತ್ತಾಳೆ ನೀನು ಹೇಳೆ ಏನಾಯಿತು ಎಂದು ಕೇಳುತ್ತಾಳೆ.

ಅಮ್ಮನಿಗೆ ನಿಜ ವಿಚಾರ ತಿಳಿಸಿದ ಸ್ನೇಹಾ

ಅಮ್ಮನಿಗೆ ನಿಜ ವಿಚಾರ ತಿಳಿಸಿದ ಸ್ನೇಹಾ

ಇದನ್ನು ಕೇಳಿಸಿಕೊಂಡ ಸ್ನೇಹಾ ಪುಟ್ಟಕ್ಕನ ಬಳಿ ಗದ್ದೆಯಲ್ಲಿ ನಡೆದ ವಿಚಾರ ಹೇಳುತ್ತಾಳೆ. ಈ ವೇಳೆ ಕಂಠಿ ಗೆ ಆದ ಪ್ರಾಣಾಪಾಯ ಕೇಳಿ ಪುಟ್ಟಕ್ಕನಿಗೆ ಶಾಕ್ ಆಗುತ್ತದೆ. ಬಳಿಕ ಸ್ನೇಹಾಳನ್ನು ತರಾಟೆಗೆ ತೆಗೆದುಕೊಂಡ ಪುಟ್ಟಕ್ಕ, ''ಬುದ್ದಿ ಇದೆಯಾ ಸ್ನೇಹಾ ನಿನಗೆ? ಹುಡುಗಾಟ ಆಡುತ್ತಿಯಾ? ಮೇಷ್ಟ್ರು ಮನೆಗೆ ಈ ವಿಚಾರ ತಿಳಿದರೆ ಆಗೋ ಅನಾಹುತ ಬೇರೆ. ನಿನ್ನ ಅಕ್ಕನ ಮದುವೆ ನಿಂತು ಹೋಗುತ್ತದೆ. ಮೊದಲೇ ಏನಾದರು ನೆಪ ಸಿಕ್ಕರೆ ಸಂಬಂಧ ಬಿಡುವ ಯೋಚನೆಯಲ್ಲಿ ಇರುವ ಅವರಿಗೆ ಈ ವಿಚಾರ ತಿಳಿದರೆ ಸಾಕು ಮದುವೆ ನಡೆದಂಗೆ. ಈ ಹೊತ್ತಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು ಹುಡುಕಿಕೊಂಡು ಹೋಗುವುದಾ ಎಂದು ಸಿಟ್ಟಿನಿಂದ ಹೇಳುತ್ತಾಳೆ ಪುಟ್ಟಕ್ಕ.

ಅಮ್ಮನ ಬಳಿ ಕ್ಷಮೆ ಕೇಳಿದ ಸ್ನೇಹಾ

ಅಮ್ಮನ ಬಳಿ ಕ್ಷಮೆ ಕೇಳಿದ ಸ್ನೇಹಾ

ಇನ್ನು ಸ್ನೇಹಾ ಮಾತ್ರ ಅಮ್ಮನ ಬಳಿ ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಆದರೆ ಪುಟ್ಟಕ್ಕ ಸ್ನೇಹಾಗೆ ತಿಳಿ ಹೇಳುತ್ತಾ, ಏನಾದರು ಹೆಚ್ಚು ಕಮ್ಮಿ ಆದರೆ ಏನು ಗತಿ, ಆ ಹುಡುಗ ಹೇಗಿದ್ದಾನೆ? ಇನ್ನು ಶ್ರೀಗೆ ಏನಾಗಿದೆ ಎಂದು ಯೋಚನೆ ಮಾಡಲಿಲ್ವಾ? ಎಂತ ಕೆಲಸ ಮಾಡಿ ಬಿಟ್ಟೆ? ಆ ಹುಡುಗನ ಜೀವನದಲ್ಲಿ ಹುಡುಗಾಟ ಆಡುತ್ತಿದ್ದಿಯಾ ಆ ಹುಡುಗನ ಜೀವಕ್ಕೆ ಏನಾದರು ಆಗಿದ್ದರೆ, ಎಂದು ಹೇಳುತ್ತ ಹೋಗಿ ಮಲಗಿಕೊ ಎಂದು ಜೋರಾಗಿ ಹೇಳುತ್ತಾಳೆ. ಇನ್ನೊಂದು ಸಲ ಈ ರೀತಿ ಆದರೆ ನಾನು ಸುಮ್ಮನೆ ಇರೋಳಲ್ಲ ಹೋಗಿ ಮಲಗಿ ಎಂದು ಜೋರಾಗಿ ಹೇಳುತ್ತಾಳೆ. ಗಾಯಗೊಂಡ ಕಂಠಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಂಗಾರಮ್ಮ ತನ್ನ ಮಗನಿಗೆ ಎಂತ ಸ್ಥಿತಿ ಬಂತು ಎಂದು ಮರುಗುತ್ತಿದ್ದಾರೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 22th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X