ಊರ ತುಂಬಾ ಕಂಠಿ-ಸ್ನೇಹಾ ಪೋಸ್ಟರ್: ಸ್ನೇಹಾ-ಕಂಠಿ ಗೆಳೆತನ ಅಂತ್ಯ?

By ಪೂರ್ವ

ಪುಟ್ಟಕ್ಕನ ಮನೆಯಲ್ಲಿ ಹಾಗೋ ಹೀಗೋ ಗಣೇಶನ ಹಬ್ಬ ಮುಗಿದಿದೆ. ಗಣೇಶನನ್ನು ವಿಸರ್ಜನೆ ಮಾಡಲು ಹೋಗುವ ವೇಳೆ ಮನೆಯವರೆಲ್ಲರೂ ಭರ್ಜರಿ ಸ್ಟೆಪ್‌ಗಳನ್ನು ಹಾಕಿ ಬಹಳ ಖುಷಿಯಿಂದ ಗಣೇಶನನ್ನು ವಿಸರ್ಜನೆ ಮಾಡಲಾಯಿತು. ಬಳಿಕ ವಾಪಸ್ ಮನೆಗೆ ತೆರಳುವ ವೇಳೆ ಕಂಠಿ ಗೆಳೆಯರು ಹಾಡು ಹೇಳುತ್ತ ಮನೋರಂಜನೆಯನ್ನು ನೀಡುತ್ತಾ ಬರುತ್ತಿರುತ್ತಾರೆ ಈ ವೇಳೆ ಸ್ನೇಹಾ ಹೇಳುತ್ತಾರೆ ಈ ಬಾರಿ ಹಬ್ಬವನ್ನು ಬಹಳ ಖುಷಿಯಿಂದ ಮಾಡಿದೆವು ಅಲ್ವಾ ಅಕ್ಕ ಎಂದು ಸಹನಾ ಬಳಿ ಕೇಳುತ್ತಾಳೆ.

ಆಗ ಕಂಠಿ ಗೆಳೆಯ ಮುಂಗುಸಿ ನಾಗನ ಬಳಿ ಹೇಳುತ್ತಾನೆ ಅತ್ತಿಗೆ ಅವ್ವನ ಮೇಲೆ ಜಗಳ ಮಾಡಿದರು ಇನ್ನೂ ಈಗ ಹೇಳುತ್ತಿದ್ದಾರೆ ಖುಷಿ ಖುಷಿಯಲ್ಲಿ ಗಣೇಶ ಹಬ್ಬ ಮಾಡಿದೆವು ಎಂದು ಹೇಳುತ್ತಿದ್ದಾರೆ ಎಂದು ಮೆತ್ತಗೆ ಹೇಳುತ್ತಾನೆ. ಈ ವೇಳೆ ಸಹನಾ, ಸ್ನೇಹಾ ಮಾತಿಗೆ ಹು ಎಂದಾಗ ಸುಮಾ, ಮುರಳಿ ಮೇಷ್ಟ್ರ ಬಗ್ಗೆ ಮಾತನಾಡುತ್ತಾಳೆ. ಮೇಷ್ಟ್ರು ಬಾವಿಗೆ ಬಿದ್ದಿದ್ದು ನಿನಗೆ ಖುಷಿ ಆಗಿದೆ ಅಲ್ವಾ ಎಂದು ಹೇಳಿದಾಗ ಸಹನಾ ಕೊಂಚ ಗಾಬರಿ ಆಗುತ್ತಾಳೆ. ಆಗ ಸ್ನೇಹಾ ಹೇಳುತ್ತಾಳೆ ಅದು ಅವರು ಯಾಕೆ ಬಾವಿಗೆ ಬಿದ್ದರು ಹೇಗೆ ಬಾವಿಗೆ ಬಿದ್ದರು ಒಂದು ತಿಳಿಯುತ್ತಿಲ್ಲ ಎಂದು ಹೇಳುತ್ತಾಳೆ.

ಮೇಷ್ಟ್ರ ಪರವಾಗಿ ಮಾತನಾಡಿದ ಸಹನಾ

ಮೇಷ್ಟ್ರ ಪರವಾಗಿ ಮಾತನಾಡಿದ ಸಹನಾ

ಆಗ ನಾಗ ಮೆತ್ತಗೆ ಹೇಳುತ್ತಾನೆ ಈಗ ನೋಡಿ ಮಾಂಜಾ ಹೆಂಗ್ ಕೊಡ್ತೀನಿ ಅಂತ ಹೇಳಿ ಮುರಳಿ ಮೇಷ್ಟ್ರ ಬಗ್ಗೆ ಕೆಟ್ಟದಾಗಿ ಹೇಳುತ್ತಾನೆ. ಸ್ನೇಹ ಬಳಿ ಹೇಳುತ್ತಾನೆ ಮೇಷ್ಟ್ರು ಸ್ವಲ್ಪ ಹಾಗೆ ಅಂತೆ ಎಲ್ಲರೂ ಹೇಳ್ತಾರೆ ಆಗಾಗ ತಲೆಕೆಟ್ಟ ಹಾಗೆ ಆಡುತ್ತರಂತೆ. ಮೊನ್ನೆ ಯಾರೋ ನಮ್ಮ ಗದ್ದೆಯ ಬಳಿ ಮೇಷ್ಟ್ರನ್ನು ನೋಡಿದರೂ. ಅವರು ಎನು ಮಾಡಿದ್ರು ಗೊತ್ತಾ ಬೆದರು ಗೊಂಬೆ ಬಳಿ ಏನೇನೋ ಮಾತನಾಡುತ್ತಾ ನಿಂತು ಬಿಟ್ಟಿದ್ದರಂತೆ. ತುಂಬಾ ಬುದ್ದಿ ವಂತರು ಹೀಗೆ ಆಡುತ್ತಾರಂತೆ ಎಂದಾಗ ಸಹನಾ ಮಾತ್ರ ಕೋಪಗೊಂಡು ಹೇ ಹಾಗೇನಿಲ್ಲ. ನಿಮಗೆ ಯಾರೋ ಸುಳ್ಳು ಹೇಳಿದ್ದಾರೆ. ಮೇಷ್ಟ್ರು ಹಾಗೆಲ್ಲ ಯಾವತ್ತೂ ಗದ್ದೆ ಬಳಿ ಹೋಗೋದಿಲ್ಲ. ಏನೋ ಬಾವಿ ಒಳಗೆ ಬಿದ್ದು ಹೋದರು ಅದು ಒಂದು ಸಣ್ಣ ಅಪಘಾತ ಅಷ್ಟೇ. ಎಂದಾಗ ಎಲ್ಲರೂ ಬೆರಗಾಗಿ ನೋಡುತ್ತಾರೆ.

ಸಹನಾ ಮಾತಿಗೆ ಆಶ್ಚರ್ಯಪಟ್ಟ ಸ್ನೇಹಾ ಹಾಗೂ ಇತರರು

ಸಹನಾ ಮಾತಿಗೆ ಆಶ್ಚರ್ಯಪಟ್ಟ ಸ್ನೇಹಾ ಹಾಗೂ ಇತರರು

ಬಳಿಕ ಹೇಳುತ್ತಾಳೆ ಮೇಷ್ಟ್ರು ಏನೋ ಕಾಲು ಜಾರಿ ಬಿದ್ದು ಬಿಟ್ಟರು. ನಾನು ಆಮೇಲೆ ಅವರನ್ನು ವಿಚಾರಿಸಲು ಹೋಗಿದ್ದೆ ಅವರು ಚೆನ್ನಾಗಿ ಇದ್ದಾರೆ. ಅವರಿಗೇನು ತಲೆ ಕೆಟ್ಟಿಲ್ಲ ಅವರು ಹುಷಾರಾಗಿ ಇದ್ದಾರೆ ನೀವು ಹಾಗೆ ಮಾತನಾಡ ಬೇಡಿ ಎಂದು ಸಹನಾ ಹೇಳುತ್ತಾರೆ. ಆ ವೇಳೆ ಎಲ್ಲರೂ ಸಹನಾ ಮುಖವನ್ನು ಬೆರಗಾಗಿ ನೋಡುತ್ತಾ ಇರುತ್ತಾರೆ. ಆಗ ಸಹನಾ ಹೆದರಿ ಸ್ವಲ್ಪ ಜಾಸ್ತಿನೇ ಮಾತನಾಡಿದೆ ಅನ್ನಿಸುತ್ತದೆ ಎಂದು ಮನದಲ್ಲೇ ಹೇಳುತ್ತಾಳೆ. ಆ ವೇಳೆ ನಾಗ ಹಾಗೂ ಮುಂಗುಸಿಗೆ ಕೊಂಚ ಅನುಮಾನ ಬರುತ್ತದೆ. ಆ ವೇಳೆ ಸುಮಾ ಕೂಡ ಮೇಷ್ಟ್ರಗೆ ಏನಾದರು ಹೇಳಿದ್ರೆ ನೀನು ಯಾಕೆ ಹೀಗೆ ಮಾತನಾಡುತ್ತಿಯಾ ಎಂದು ಕೇಳಿದಾಗ ಸಹನಾ ಹೇಳುತ್ತಾಳೆ ನಮಗೆ ಗೊತ್ತಿರುವವರು ಬಗ್ಗೆ ಏನೆಲ್ಲ ಮಾತನಾಡಿದರೆ ಸುಮ್ಮನಿರುವುದು ತಪ್ಪು ಅದನ್ನು ಸರಿಯಾಗಿ ಅವರಿಗೆ ತಿಳಿಸಿ ಹೇಳಬೇಕು ಎಂದು ಹೇಳುತ್ತಾಳೆ.

ಅಕ್ಕನ ಕಾಲೆಳೆದ ಸುಮಾ

ಅಕ್ಕನ ಕಾಲೆಳೆದ ಸುಮಾ

ಆಗ ಸ್ನೇಹಾಗೆ ತಿಳಿಯುತ್ತದೆ ಇವರು ನೋಡಲು ತೆರಳಿದ್ದು ಮುರಳಿ ಮೇಷ್ಟ್ರನ್ನು ಚಿದಾನಂದ ಮೇಷ್ಟ್ರನ್ನು ಅಲ್ಲ ಎಂದು. ಆಗ ಸುಮಾ ಹೇಳುತ್ತಾಳೆ ಅಕ್ಕ ಇವಳು ನೋಡಕ್ಕೆ ಹೋಗಿದ್ದು ಮಾಜಿ ಮೇಷ್ಟ್ರನ್ನೂ ಅಲ್ಲ ಬಾವಿ ಮೇಷ್ಟ್ರನ್ನ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸ್ನೇಹಾ ಹೇಳುತ್ತಾಳೆ ಏನು ಬಾವಿ ಮೇಷ್ಟ್ರು ಅಂದರೆ ಎಂದೆಲ್ಲ ಹೇಳುತ್ತಾರೆ. ಆಗ ಸ್ನೇಹಾ ಏನೇ ಬಾವಿ ಎಂದಾಗ ಸುಮಾ ಹೇಳುತ್ತಾಳೆ ಬಾವಿ ಮೇಷ್ಟ್ರು ಬಾವಿಗೆ ಬಿದ್ದರಲ್ವ ಅದು ಹೇಳಿದೆ ಎಂದು ನುಣ್ಣಗೆ ನುಣುಚಿಕೊಳ್ಳತ್ತಾಳೆ. ಸಹನಾ ಖೋ-ಖೋ ಬಗ್ಗೆ ಮಾತನಾಡಿದಾಗ ಇನ್ನೂ ಸಿಟ್ಟು ಬರುತ್ತದೆ ಸುಮಾಗೆ ಬಳಿಕ ಸುಮ್ಮನಾಗುತ್ತಾಳೆ. ಟ್ರಾಕ್ಟರ್ ನಲ್ಲಿ ಮುಂದೆ ಹೋಗುತ್ತಿರುವಾಗ ಕಂಠಿ ಹಾಗೂ ಸ್ನೇಹಾ ಪೋಸ್ಟರ್ ದಾರಿ ಯುದ್ದಕ್ಕೂ ಅಂಟಿಸಿರುತ್ತರೆ ಇದನ್ನು ನೋಡಿದ ಸ್ನೇಹಾ ಹಾಗೂ ಸುಮಾ ಕೋಪದಿಂದ ಕೆಂಡಾಮಂಡಲ ಆಗುತ್ತಾರೆ.

ಊರ ತುಂಬ ಸ್ನೇಹಾ-ಕಂಠಿಯ ಚಿತ್ರಗಳು

ಊರ ತುಂಬ ಸ್ನೇಹಾ-ಕಂಠಿಯ ಚಿತ್ರಗಳು

ಸುಮಾ ಗಾಡಿಯಿಂದ ಇಳಿದು ಎಲ್ಲಾ ಪೋಸ್ಟರನ್ನು ಕಿತ್ತು ಹಾಕಿ ಬಿಡುತ್ತಾಳೆ ಬಳಿಕ ನಿನ್ನ ಗೆಳೆಯರೇ ಇದನ್ನು ಮಾಡಿದ್ದು ಎಂದು ಸ್ನೇಹಾನ ಬಳಿ ಬಂದು ಹೇಳುತ್ತಾಳೆ. ಕಂಠಿ ನಾನಲ್ಲ ಎಂದು ಏಷ್ಟು ಹೇಳಿದರು ಯಾರು ಕೇಳಿಸಿಕೊಳ್ಳಲು ಇಲ್ಲ. ಬಳಿಕ ಅಲ್ಲಿಂದ ಮೂವರು ನಡೆದೇ ಮನೆ ಸೇರುತ್ತಾರೆ. ಸುಮಾ ಸ್ನೇಹಾ ನೀವೇ ಹೇಳುತ್ತಾಳೆ ನೀನು ಶ್ರೀ ಮತ್ತು ಅವರ ಗ್ಯಾಂಗ್ ಜೊತೆ ಮೆತ್ತಗೆ ಇರುವುದೇ ಇದಕ್ಕೆಲ್ಲಾ ಕಾರಣ ಎಂದೆಲ್ಲ ಹೇಳುತ್ತಾಳೆ ಆಗ ಸಹನಾ ಅಮ್ಮನಿಗೆ ಗೊತ್ತಾಗುವುದು ಬೇಡ ಎಂದೆಲ್ಲ ಹೇಳುತ್ತಾಳೆ. ಬಳಿಕ ಅಲ್ಲಿಗೆ ಪುಟ್ಟಕ್ಕ ಬರುತ್ತಾಳೆ. ಮಕ್ಕಳನ್ನು ಕಂಡು ಗಣೇಶ ವಿಸರ್ಜನೆ ಸರಾಗವಾಗಿ ಆಯಿತಾ ಎಂದೆಲ್ಲ ಹೇಳುತ್ತಾರೆ. ಬಳಿಕ ಕಂಠಿಯನ್ನು ಬಾಯಿ ತುಂಬ ಹೊಗಳುತ್ತಾರೆ ಪುಟ್ಟಕ್ಕ ಇದನ್ನು ನೋಡಿ ಸುಮಾಗೆ ಎನು ಹೇಳಬೇಕೆಂಬುವುದೆ ತಿಳಿಯಲಿಲ್ಲ.

More from Filmibeat

English summary
Kannada serial Puttakkana Makkalu written updated on 22th September know more episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X