Puttakkana Makkalu: ಪುಟ್ಟಕ್ಕನ ಮನೆಗೆ ಬಂದ ಬಂಗಾರಮ್ಮ, ಅಪರಾಧಿಗಳ ಹೆಡೆಮುರಿ ಕಟ್ಟಿದ ಕಂಠಿ!
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಉತ್ತಮವಾಗಿ ಮೂಡಿ ಬರುತ್ತಾ ಇದ್ದು ನೋಡುಗರಿಗೆ ಬಹಳ ಖುಷಿ ನೀಡಿದೆ ಎಂದರೆ ತಪ್ಪಾಗದು. ಇದೀಗ ಕಂಠಿ ಹಾಗೂ ಸ್ನೇಹಾ ಮೊದಲನೆಯ ರಾತ್ರಿ ಶಾಸ್ತ್ರ ನಡೆಯುತ್ತಾ ಇರುತ್ತದೆ. ಸ್ನೇಹಾ ಅಲರಂ ಸದ್ದಿಗೆ ರಾತ್ರಿ ಬಹಳ ಚಳಿ ಆಗುತ್ತದೆ. ಆಕೆ ಮೆತ್ತಗೆ ಎದ್ದು ಫ್ಯಾನ್ ಆಪ್ ಮಾಡಬೇಕು ಎನ್ನುವ ಹೊತ್ತಿನಲ್ಲಿ ಕಂಠಿಯನ್ನು ಗಮನಿಸದೆ ಆತನಿಗೇ ತಾಗಿ ಕಂಠಿ ಮೇಲೆ ಬೀಳುತ್ತಾಳೆ.
ಆ ಕೂಡಲೇ ಆಕೆಯ ತುಟಿಯಲ್ಲಿ ಇದ್ದ ಲಿಪ್ಸ್ಟಿಕ್ ಇವನ ಕೆನ್ನೆಯ ಮೇಲೆ ತಾಗುತ್ತದೆ.. ಆ ಕೂಡಲೇ ಸ್ನೇಹಾ ಕಂಠಿ ಗೆ ಹೇಳುತ್ತಾಳೆ ಲಿಪ್ ಸ್ಟಿಕ್ ಆಗಿದೆ ಅದನ್ನು ಕೊಂಚ ಒರೆಸಿ ಕೊಳ್ಳಿ ಎಂದು ಮುಜುಗರದಿಂದ ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಮೆತ್ತಗೆ ಹೇಳುತ್ತಾನೆ ಅದು ಇರಲಿ.. ನಾಳೆಗೆ ನಿಮಗೆ ಸಹಾಯ ಆಗುತ್ತದೆ ಎಂದು ಹೇಳುತ್ತಾನೆ ಇದನ್ನು ಕೇಳಿದ ಸ್ನೇಹಾ ಮಾತ್ರ ಏನು ತಿಳಿಯದೇ ಮೆತ್ತಗೆ ಆಗುತ್ತಾಳೆ.

ಇನ್ನೂ, ಬೆಳಗ್ಗೆ ಕೂಡ ಸ್ನೇಹಾ ಹೇಳುತ್ತಾಳೆ. ತುಟಿಯ ಲಿಪ್ ಸ್ಟಿಕ್ ಮಾರ್ಕ್ ಇದೆ ಎಂದಾಗಲೂ ಕಂಠಿ ಅದು ಇರಲು ಎಂದು ಹೇಳುತ್ತಾನೆ. ಕಂಠಿ ಉದ್ದೇಶ ಮನೆಯವರು ನನ್ನ ಮೇಲೆ ಅನುಮಾನ ಮೂಡದ ಹಾಗೆ ನಡೆದುಕೊಳ್ಳಬೇಕು ಇಲ್ಲವಾದರೆ ಬಹಳ ಕಷ್ಟ ಆಗುತ್ತದೆ . ಹೇಗಾದರೂ ಮಾಡಿ ಎಲ್ಲರ ಮನಸ್ಸನ್ನೂ ಗೆಲ್ಲಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.
ಗಣೇಶ ಹಬ್ಬ ಆಚರಣೆಗೆ ಸಿದ್ಧತೆ
ಇನ್ನೂ ಪುಟ್ಟಕ್ಕನ ಮನೆಯಲ್ಲಿ ಅದ್ದೂರಿ ಗಣೇಶ ಹಬ್ಬ ನಡೆಯುತ್ತಾ ಇರುತ್ತದೆ. ಇನ್ನೂ ಕಂಠಿ ಹಾಗೂ ಸ್ನೇಹಾ ಪುಟ್ಟಕ್ಕನ ಮನೆಗೆ ಹಬ್ಬ ಮಾಡಲು ಹೋಗುತ್ತಾರೆ. ಇನ್ನೂ ಆಣೆ ಚೌಡವ್ವ ಹೇಳಿದ ಪ್ರಕಾರವಾಗಿ ತಾಂಡವ ನಡೆದುಕೊಳ್ಳುತ್ತಾನೆ. ಬಂಗಾರಮ್ಮ ತಾನು ಮಾಡದ ತಪ್ಪಿಗೆ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ತನ್ನ ಮಗನ ಮೇಲೆ ಕೂಡ ಬಹಳ ಕೋಪ ಮಾಡಿಕೊಂಡು ಇರುತ್ತಾರೆ.

ಮಗನ ಮೇಲೆ ಬಂಗಾರಮ್ಮ ಗೆ ಕೋಪ
ಹೆಂಡತಿ ಮಾತು ಕೇಳಿ ಅಮ್ಮನೇ ಇದೀಗ ಬೇಡ ಆಗಿದ್ದಾನೆ ನನ್ನ ಮಗನಿಗೆ ಎಂಬ ಬೇಸರ ಬಂಗಾರಮ್ಮನ ಮನದಲ್ಲಿ ಮೂಡಿತ್ತು. ಇದೀಗ ಕಂಠಿ ಮನದಲ್ಲಿ ಅಂದುಕೊಂಡ ಹಾಗೆಯೇ ಬಂಗಾರಮ್ಮ ನಿರಪರಾಧಿ ಎನ್ನುವುದು ಎಲ್ಲರಿಗೆ ತಿಳಿಯುವ ಕಾಲ ಬಂದಿದೆ. ಅದರ ಹಾಗೆಯೇ ಪುಟ್ಟಕ್ಕನ ಮೆಸ್‌ಗೆ ಬೆಂಕಿ ಹಚ್ಚಿ ಆಕೆಯ ನೆಮ್ಮದಿಯನ್ನು ಹಾಳು ಮಾಡಿದ ಕೀಚಕಿ ಸಿಕ್ಕಿ ಬಿದ್ದಿದ್ದಾಳೆ. ಇನ್ನೂ ತಾಂಡವ ಕಾಳಿ ಹಾಗೂ ನಂಜಮ್ಮನನ್ನು ಹೆಡೆಮುರಿ ಕಟ್ಟುತ್ತಾರೆ.
ಪುಟ್ಟಕ್ಕನ ಮನೆಗೆ ರೌಡಿಗಳನ್ನು ಕರೆತಂದ ಬಂಗಾರಮ್ಮ
ಇದೆಲ್ಲವನ್ನೂ ತಿಳಿದ ಬಂಗಾರ ಮ್ಮ ಮಾತ್ರ ಪುಟ್ಟಕ್ಕನ ಮನೆಗೆ ಬರುತ್ತಾರೆ. ಬಂಗಾರಮ್ಮ ಬಂದಿರುವುದನ್ನು ಕಂಡು ಪುಟ್ಟಕ್ಕಗೆ ಖುಷಿ ಆಗುತ್ತದೆ. ಬೀಗರು ಬಂದರು ಎಂದು ಖುಷಿಯಲ್ಲಿ ಮಾತನಾಡುತ್ತಾ ಇರುತ್ತಾಳೆ. ಇದನ್ನು ನೋಡಿದ ಕಂಠಿಗೆ ಖುಷಿ ಆಗುತ್ತದೆ. ಆದರೆ ಅಮ್ಮನ ಹಿಂದೆ ನಂಜಮ್ಮ, ಕಾಳಿ ಹಾಗೆಯೇ ತಾಂಡವ ನಿಂತು ಇರುತ್ತಾನೆ. ಆ ಬಳಿಕ ಜೋರಾಗಿ ಹೇಳುತ್ತಾಳೆ ಪುಟ್ಟಕ್ಕ ನಿಮ್ಮ ಮೆಸ್ ಗೆ ಬೆಂಕಿ ಹಾಕಿದ ಅಪರಾಧಿಗಳು ಸಿಕ್ಕಿಬಿದ್ದರು ಎಂದು ಹೇಳುತ್ತಾಳೆ ಇದನ್ನು ಕೇಳಿದ ಸ್ನೇಹಾ ಯಾರೆಂದು ನೋಡುವಾಗ ಬಂಗಾರಮ್ಮನ ಪಕ್ಕ ನಂಜಮ್ಮ ಹಾಗೂ ಕಾಳಿ ನಿಂತುಕೊಂಡು ಇರುತ್ತಾರೆ. ಇದನ್ನು ನೋಡಿ ಪುಟ್ಟಕ್ಕನ ಮನೆ ಮಂದಿ ಶಾಕ್ ಆಗುತ್ತಾರೆ.


Click it and Unblock the Notifications











