ಸಹನಾಗೆ ವಿಡಿಯೋ ಕಾಲ್ ಮಾಡಿದ ಸುಮಾ: ಸ್ನೇಹಾ ಕಿಡ್ನಾಪ್ ಆಗುತ್ತಾಳಾ?

By Poorva

ಸಹನಾಗೆ ಸುಮಾ ವಿಡಿಯೋ ಕಾಲ್ ಮಾಡುತ್ತಾಳೆ. ಆ ವೇಳೆ ಸಹನಾ ಅಳುತ್ತ ಇರುತ್ತಾಳೆ. ಆಕೆ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಇರುವ ದೃಶ್ಯವನ್ನು ಸುಮಾ ನೋಡುತ್ತಾಳೆ. ಏನಕ್ಕ ಹೇಗಿದ್ದೀಯಾ? ಏನಾಯ್ತು? ಯಾಕೆ ಅಳುತ್ತಿದ್ದೀಯಾ? ಎಂದೆಲ್ಲ ಕೇಳುತ್ತಾಳೆ. ಆದರೆ ಸಹನಾ ಮಾತ್ರ ಮುಖದಲ್ಲಿ ಕಿರುನಗೆ ಬೀರುತ್ತಾ ಏನು ನಡೆದಿಲ್ಲ ಎನ್ನುವಂತೆ ತೋರ್ಪಡಿಸಿಕೊಳ್ಳುತ್ತಾಳೆ. ಆದರೂ ಕಣ್ಣಾಲಿಗಳು ತುಂಬಿಕೊಂಡಿರುತ್ತದೆ.

ಇಲ್ಲ ಸುಮಾ ನಾನು ಮಲಗಿದ್ದೆ. ಅದಕ್ಕೆ ನಿನಗೆ ಹಾಗೆ ಕಾಣಿಸುತ್ತಿದೆ ಸಹನಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸುಮಾಗೆ ಮಾತ್ರ ಆಕೆ ಹೇಳಿದ್ದು ಸುಳ್ಳು ಎಂದು ಅನ್ನಿಸಿಬಿಡುತ್ತದೆ. ತನ್ನ ತಾಯಿ ಬಗ್ಗೆ ವಿಚಾರ ಮಾಡುತ್ತಾಳೆ ಸಹನಾ, ತಾಯಿ ಆರೋಗ್ಯದ ಚಿಂತೆ ಆಕೆಗೂ ಇದೆ.

Kannada serial puttakkana makkalu written updated on 24th april

ಇದೇ ಸಂದರ್ಭದಲ್ಲಿ ಕಾಳೀ ಕರೆ ಮಾಡಿ ಕಿರಿಕಿರಿ ಮಾಡುತ್ತಾ ಇದ್ದಾನೆ ಅಂದ್ರೆ ತಾಯಿಗೆ ಎಲ್ಲಿ ಆಘಾತ ಆಗುತ್ತದೆ ಎಂದು ಹೇಳುತ್ತಿಲ್ಲ. ಅವುಡು ಗಚ್ಚಿ ಬರುತ್ತಿರುವ ಅಳುವನ್ನು ತಡೆದುಕೊಂಡು ಸುಮ್ಮನೆ ಇರುತ್ತಾಳೆ. ಇನ್ನೂ ಸ್ನೇಹಾ ಹುಬ್ಬಳ್ಳಿಗೆ ಹೋಗುವ ವಿಚಾರವನ್ನು ಆಕೆಯ ಬಳಿ ಹೇಳಿದಾಗ ಬಹಳ ಖುಷಿ ಪಡುತ್ತಾಳೆ. ಆದರೆ ಸುಮಾಗೆ ಮಾತ್ರ ಅಕ್ಕ ಏನೋ ತೊಂದರೆಯಲ್ಲಿ ಇದ್ದಾಳೆ ಎನ್ನುವ ಹಾಗೆ ಭಾಸ ಆಗುತ್ತದೆ.

ಸ್ನೇಹಾಳನ್ನು ಕರೆದುಕೊಂಡು ಹೋಗಲು ಬಂದ ಕಂಠಿ

ಬಳಿಕ ಕರೆ ಕಟ್ ಮಾಡಿದ ಕೂಡಲೇ ಕಂಠಿ ಜಿಪ್ ಏರಿ ಬರುತ್ತಾನೆ. ಕಂಠಿಯನ್ನು ನೋಡಿದ ಸ್ನೇಹಾ ಮನೆಯವರ ಬಳಿ ಹೋಗಿ ಬರುತ್ತೇನೆ ಎಂದು ಹೇಳಿ ಹೋಗುತ್ತಾಳೆ. ಕಾಂತಿಯನ್ನು ನೋಡಿದ ಕೂಡಲೇ ಸ್ನೇಹಾಗೆ ಬಲ ಬಂದ ಹಾಗೆ ಆಗುತ್ತದೆ. ಇನ್ನು ರೈಲ್ವೆ ಸ್ಟೇಷನ್‌ನತ್ತ ಹೊರಡುತ್ತಾರೆ ಕಂಠಿ- ಸ್ನೇಹಾ.

ಸ್ನೇಹಾಳನ್ನು ಕಿಡ್ನಾಪ್ ಮಾಡಲು ಹೇಳಿದ ಬಂಗಾರಮ್ಮ

ಬಂಗಾರಮ್ಮ ಆಕೆ ಹೇಳಿದ್ದ ಗೂಂಡಾನಿಗೆ ಕರೆ ಮಾಡಿ ಕಂಠಿ ಹುಬ್ಬಳ್ಳಿಗೆ ಆತನ ಗೆಳೆಯನ ಜೊತೆ ಹೋಗಿದ್ದ ಅಥವಾ ಆ ಹುಡುಗಿ ಜೊತೆ ಹೋಗಿದ್ದ ಎಂಬುವುದನ್ನು ನೋಡು ಎಂದು ಹೇಳುತ್ತಾರೆ ಬಂಗಾರಮ್ಮ. ಆ ಪ್ರಕಾರವಾಗಿ ಆತ ಕಂಠಿ ಹೋಗುತ್ತಿರುವ ಜಿಪ್ ಅನ್ನು ಹಿಂಬಾಲಿಸಿಕೊಂಡು ಹೋಗುತ್ತಾನೆ. ಹಾಗೆಯೇ ಕಂಠಿ ಹುಡುಗಿ ಜೊತೆ ಹೋಗುತ್ತಿರುವ ವಿಚಾರ ತಿಳಿಸಿದಾಗ ಬಂಗಾರಮ್ಮ ಸ್ನೇಹಾಳನ್ನು ಕಿಡ್ನಾಪ್ ಮಾಡಲು ಹೇಳುತ್ತಾನೆ. ಇನ್ನು ನಂಜಮ್ಮ ಬಳಿ ಚಂದ್ರು ಊಟ ಮಾಡುತ್ತಾ ಇರುವಾಗ ಅಮ್ಮ ಸ್ನೇಹಾ ಬಳಿ ಏನಾದರು ಹೇಳಿದ್ಯಾ? ಎಂದೆಲ್ಲ ಕೇಳಿದಾಗ ನಂಜಮ್ಮ ಚಂದ್ರು ಬಳಿ ಹೇಳುತ್ತಾರೆ.

Kannada serial puttakkana makkalu written updated on 24th april

ಸುಳ್ಳು ಹೇಳಿ ನಂಜಮ್ಮ ಸಿಕ್ಕಿ ಹಾಕಿಕೊಂಡಳು

ನಂಜಮ್ಮ ಹೇಳಿದ್ದು ನಿಜ ಎಂದು ನಂಬಿಕೊಂಡು ಚಂದ್ರು ಖುಷಿಯಿಂದ ಊಟ ಮಾಡುತ್ತಾನೆ . ಆ ಬಳಿಕ ಸ್ನೇಹಾ, ಚಂದ್ರುಗೆ ಕರೆ ಮಾಡಿದಾಗ ಚಂದ್ರು ಅಂತ ಜೊತೆ ಖುಷಿಯಾಗಿ ಮಾತನಾಡಿದ್ದಾನೆ. ಬಳಿಕ ತಾಯಿ ಏನಾದರು ಹೇಳಿದರೆ ಬೇಸರ ಪಟ್ಟುಕೊಳ್ಳುವ ಅಗತ್ಯ ಇಲ್ಲ. ನನಗೆ ನಿನ್ನ ಮೇಲೆ ಎನು ಬೇಸರ ಇಲ್ಲ ಎಂದು ಹೇಳುತ್ತಾನೆ . ಇದನ್ನು ಕೇಳಿದ ಸ್ನೇಹಾ ಹೇಳುತ್ತಾಳೆ, ಅಣ್ಣ ನೀನು ಶ್ರೀಯನ್ನು ಒಪ್ಪಿಕೊಳ್ಳುತ್ತಿಯಾ ಎಂದು ಗೊತ್ತಿತ್ತು, ಆದರೆ ಇಷ್ಟು ಬೇಗ ಎಂದು ಗೊತ್ತಿರಲಿಲ್ಲ. ನಾನು ಶ್ರೀ ಇಬ್ಬರು ಹುಬ್ಬಳ್ಳಿಗೆ ಹೋಗುತ್ತಾ ಇದ್ದೇವೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಚಂದ್ರುಗೆ ಶಾಕ್ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 24th april. Sahana speaks with suma in Video call. Bangaramma Planed to kidnap sneha. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X