twitter
    For Quick Alerts
    ALLOW NOTIFICATIONS  
    For Daily Alerts

    ಸಹನಾ-ಮುರಳಿ ಮೇಷ್ಟ್ರ ಮದುವೆಗೆ ಎಲ್ಲರ ಒಪ್ಪಿಗೆ: ಆದರೆ ಕಾಳಿ ಸುಮ್ಮನಿರಬೇಕಲ್ಲ!

    By ಪೂರ್ವ
    |

    ಪುಟ್ಟಕ್ಕನಿಗೆ ತನ್ನ ಮಗಳು ಮುರಳಿ ಮೇಷ್ಟ್ರನ್ನು ಪ್ರೀತಿ ಮಾಡುತ್ತಿರುವ ವಿಚಾರ ತಿಳಿದು ಹೋಗಿದೆ. ಮಗಳು ಪ್ರೀತಿ ವಿಚಾರವನ್ನು ಇಂದು ತಿಳಿಸುತ್ತಾಳೆ ನಾಳೆ ತಿಳಿಸುತ್ತಾಳೆ ಎಂದು ಕಾಯುತ್ತಿದ್ದ ಪುಟ್ಟಕ್ಕ ಕೊನೆಗೆ ತಾನೇ ಹುಡುಗಿ ನೋಡಲು ಬರುವುದು ಬೇಡ ಎಂದು ಗಂಡಿನ ಕಡೆಯವರ ಬಳಿ ಹೇಳುತ್ತಾಳೆ. ಇನ್ನು ರಾಜಿ ಬಂದು ಪುಟ್ಟಕ್ಕನ ಬಳಿ ಲೇವಡಿ ಮಾಡುತ್ತಾ ಇರುತ್ತಾಳೆ. ಪುಟ್ಟಕ್ಕ, ರಾಜಿ ಬಳಿ ಏನು ರಾಜಿ ನನ್ನ ಮಗಳ ಮದುವೆ ನಡೆಯುವುದಿಲ್ಲ ಎಂದುಕೊಂಡು ಲೇವಡಿ ಮಾಡಲು ಬಂದಿದ್ದೀಯಾ? ನಾನು ಕರೆದರೂ ಕೂಡ ನೀನು ನನ್ನ ಮನೆಗೆ ಬರುವುದಿಲ್ಲ ಅಂತಹದರಲ್ಲಿ ಇದೀಗ ನಾನು ಕರೆಯದೆ ನೀನು ನನ್ನ ಮನೆಗೆ ಆಗಮಿಸಿದ್ದು ನನಗೆ ಬಹಳ ಸಂತೋಷ ಆಯಿತು ಗಂಡಿನ ಕಡೆಯವರು ಈಗ ಬರುವ ಹೊತ್ತಾಯಿತು ನೀವು ಇದ್ದು ಈ ಕಾರ್ಯಕ್ರಮವನ್ನು ಸುಧಾರಿಸಿ ಕೊಡಿ ಎಂದು ಹೇಳುತ್ತಾಳೆ.

    ಆದರೆ ಇದನ್ನು ಕೇಳಿದ ರಾಜಿಗೆ ಮೈಯೆಲ್ಲ ಉರಿದು ಹೋಗುತ್ತದೆ. ಪುಟ್ಟಕ್ಕ ಹೇಳಿದ ಮಾತು ಕೇಳಿ ಪುರುಷೋತ್ತಮ ಬಹಳ ಖುಷಿ ಪಡುತ್ತಾನೆ. ಅಮ್ಮನಿಗೆ ನಾನು ಪ್ರೀತಿ ಮಾಡುತ್ತಿರುವ ವಿಚಾರ ಮೊದಲೇ ಗೊತ್ತಿತ್ತಾ ಎಂದು ಸಂತೋಷ ಪಡುತ್ತಾಳೆ ಸಹನಾ. ಸುಮಾ ಹಾಗೂ ಸ್ನೇಹಾ ಕೂಡ ಅಮ್ಮ ಮಾಡಿದ ಉತ್ತಮ ಕೆಲಸ ನೋಡಿ ಖುಷಿ ಪಡುತ್ತಾರೆ.

    ಸಹನಾ ಮನಸ್ಸನ್ನು ಅರ್ಥ ಮಾಡಿಕೊಂಡ ಪುಟ್ಟಕ್ಕ

    ಸಹನಾ ಮನಸ್ಸನ್ನು ಅರ್ಥ ಮಾಡಿಕೊಂಡ ಪುಟ್ಟಕ್ಕ

    ಯಾವತ್ತೂ ನೋವು ತಿಂದುಕೊಂಡು ಬೇಳೆದಾಕೆ ಸಹನಾ. ಇನ್ನು ಅಮ್ಮ ಅಕ್ಕನ ಮನಸ್ಸನ್ನು ಅರ್ಥ ಮಾಡಿಕೊಂಡು ಮುರಳಿ ಮೇಷ್ಟ್ರನ್ನೂ ಮನೆಗೆ ಬರಲು ಹೇಳಿರುವುದು ನಮಗೆ ಸಂತಸ ತಂದಿದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಖುಷಿ ಪಡುತ್ತಾಳೆ. ಇನ್ನು ಅಲ್ಲಿ ನಿಲ್ಲಲಾರದೆ ರಾಜಿ ಹೊರಡಲು ಅನುವಾಗುತ್ತಾಳೆ. ಎಷ್ಟೇ ನಿಲ್ಲಲು ಹೇಳಿದರು ರಾಜಿ ಮಾತ್ರ ಅಲ್ಲಿ ನಿಲ್ಲದೆ ಹೊರಟು ಹೋಗುತ್ತಾಳೆ. ಪುಟ್ಟಕ್ಕನ ಮಾತು ಕೇಳಿ ಗೋಪಾಲ ಮಾತ್ರ ಬಹಳ ಖುಷಿ ಪಡುತ್ತಾನೆ. ರಾಜಿ ತಮ್ಮ ಕಾಳಿಗೆ ಮಾತ್ರ ಸಹನಾಳನ್ನು ಕೊಡಬಾರದು ಎಂಬುದು ಆತನ ಉದ್ದೇಶ.

    ಮಗಳ ಮದುವೆ ಸುದ್ದಿ ಕೇಳಿ ಗೋಪಾಲ ಫುಲ್ ಖುಷ್

    ಮಗಳ ಮದುವೆ ಸುದ್ದಿ ಕೇಳಿ ಗೋಪಾಲ ಫುಲ್ ಖುಷ್

    ಆತ ಎಷ್ಟಾದರೂ ಸಹನಾ ತಂದೆ ಅಲ್ವಾ. ತಂದೆಗೆ ಆಕೆ ಮಗಳು ಅಲ್ವಾ. ಮಗಳ ಜೀವನ ಹಾಳಾಗಿ ಹೋಗಬಾರದು ಎಂಬ ಉದ್ದೇಶದಿಂದ ಆತ ಪುಟ್ಟಕ್ಕನ ಬಳಿ ಎಲ್ಲಾ ವಿಚಾರವನ್ನು ಹೇಳಲು ಬಂದಿದ್ದ ಇನ್ನೂ ರಾಜಿ ಹಾಗೂ ಗೋಪಾಲ ಅಲ್ಲಿಂದ ತೆರಳಿದ ಬಳಿಕ ಮುರಳಿ ಮೇಷ್ಟ್ರು ಹೆಣ್ಣು ನೋಡಲು ಬರುತ್ತಾರೆ. ಆದರೆ ಮೇಷ್ಟ್ರು ಹೆಣ್ಣು ನೋಡಲು ಹೋಗಬೇಕಾದ ಮನೆ ಯಾವುದೋ ಆದರೆ ಹೆಣ್ಣು ನೋಡಲು ಬಂದ ಮನೆ ಮಾತ್ರ ಪುಟ್ಟಕ್ಕಳದ್ದು. ಇದನ್ನು ನೋಡಿದ ಮೇಷ್ಟ್ರ ತಂದೆ ನಾವು ಎಲ್ಲಿಗೆ ಬಂದಿದ್ದೇವೆ. ಇದು ನಾವು ಬರಬೇಕಾದ ಮನೆ ಅಲ್ಲ. ಇದು ಬೇರೆ ಮನೆ. ಪುಟ್ಟಕ್ಕನ ಮೆಸ್ ಬಳಿ ಬಂದಿದ್ದೇವೆ. ಇದು ಮುರಳಿಯದ್ದೆ ಕೆಲಸ ಎಂದು ಕೂಗಾಡುತ್ತಾನೆ.

    ಮೆಸ್ ಬಳಿ ಮೇಷ್ಟ್ರ ತಂದೆ ಕೂಗಾಟ

    ಮೆಸ್ ಬಳಿ ಮೇಷ್ಟ್ರ ತಂದೆ ಕೂಗಾಟ

    ಬಳಿಕ ಮನೆ ಮಂದಿ ಒತ್ತಾಯಕ್ಕೆ ಮಣಿದು ಮುರಳಿ ಮೇಷ್ಟ್ರು ತಂದೆ ಪುಟ್ಟಕ್ಕನ ಮನೆಗೆ ಬರುತ್ತಾರೆ. ಬಳಿಕ ಬಹಳ ಕೊಂಕು ತೆಗೆಯುತ್ತಾರೆ. ಮನೆ ಮಂದಿಯನ್ನು ನೋಡಿ ಅವರ ಗುಣ ಎಂಥದ್ದು ಎಂದು ತಿಳಿಯಬಹುದು ಎಂದು ಮೇಷ್ಟ್ರ ತಂದೆ ಹೇಳಿದಾಗ ಸುಮ್ಮನಿರದ ಸ್ನೇಹಾ ಮನೆಯನ್ನು ನೋಡಿ ಗುಣವನ್ನು ಅಳಿಯಬಹುದಾ ಸರ್ ಎಂದು ಹೇಳುತ್ತಾಳೆ. ಹೆಣ್ಣಿನ ನಡೆ ನುಡಿ ಯಾವುದು ಲೆಕ್ಕಕ್ಕೆ ಬರಲ್ವಾ. ಎಂದಾಗ ಮೇಷ್ಟ್ರ ತಂದೆ ಸ್ವಲ್ಪ ಖಾರವಾಗಿ ಮಾತನಾಡುತ್ತಾರೆ.

    ಮದುವೆಗೆ ಒಪ್ಪಿಕೊಂಡ ಮೇಷ್ಟ್ರ ತಂದೆ

    ಮದುವೆಗೆ ಒಪ್ಪಿಕೊಂಡ ಮೇಷ್ಟ್ರ ತಂದೆ

    ಅನ್ನ ಬೆಂದಿದೆಯಾ ಎಂದು ಒಂದು ಆಗಳು ಮುಟ್ಟಿ ನೋಡಿದರೆ ಸಾಕು ಮೆಸ್‌ನವರು ಅಲ್ವಾ ನೀವು ಇದನ್ನ ಹೇಳಬೇಕಾಗಿಲ್ಲ ಎಂದು ಹೇಳುತ್ತಾರೆ ಇದನ್ನು ಕೇಳಿದ ಪುಟ್ಟಕ್ಕ ಹೌದು ಅನ್ನ ಬೆಂದಿದೆಯ ಎಂದು ನೋಡಲು ಒಂದು ಅಗಳು ನೋಡಿದರೆ ಸಾಕು. ಆದರೆ ಪ್ರತಿಯೊಂದು ಆಗುಳ ಮೇಲೆ ಇದು ಇವರಿಗೆ ಸೇರಬೇಕು ಎಂದು ಬರೆದಿರುತ್ತದೆ. ಸಂಬಂಧ ಅಂದರೆ ಹೀಗೆ ಅಲ್ವಾ. ನಾವು ಯಾರು ತಡೆಯಲು ಆಗಲ್ಲ ಎಂದು ಹೇಳಿದಾಗ ಮೇಷ್ಟ್ರ ತಂದೆಗೆ ಸಿಟ್ಟು ಬರುತ್ತದೆ. ವಾದ ವಾಗ್ವಾದದ ಬಳಿಕ ಎಲ್ಲರ ಒತ್ತಾಯಕ್ಕೆ ಮಣಿದ ಮೇಷ್ಟ್ರ ತಂದೆ ಸಹಾನಾಳನ್ನು ಒಪ್ಪಿಕೊಳ್ಳುತ್ತಾರೆ. ಬಳಿಕ ಮಾತು ಕತೆಗೆ ಶುರು ಮಾಡುತ್ತಾರೆ. ಮೇಷ್ಟ್ರು ಹಾಗೂ ಸಹನಾ ಪ್ರೀತಿಗೆ ಕಾಳಿ ಅಡ್ಡ ಬರುವ ಎಲ್ಲಾ ಲಕ್ಷಣ ಕಾಣುತ್ತಿದೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

    English summary
    Kannada serial Puttakkana Makkalu written updated on 24 th October episode. Know more about it.
    Tuesday, October 25, 2022, 19:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X