Puttakkana Makkalu: ಅಪಾಯಕ್ಕೆ ಸಿಲುಕಿದ ಸ್ನೇಹಾ: ಕಾಪಾಡುತ್ತಾನಾ ಕಂಠಿ?
ಸ್ನೇಹಾ- ಕಂಠಿ ಹುಬ್ಬಳ್ಳಿಗೆ ಹೊರಟಿದ್ದಾರೆ. ಕಂಠಿ ಹೋಗುತ್ತಿರುವ ಟ್ರೈನ್‌ಗೆ ಕಾಳೀ ಗ್ಯಾಂಗ್ ಕೂಡ ಹತ್ತಿದ್ದಾರೆ. ಇದನ್ನು ನೋಡಿದ ಮುಂಗುಸಿ ಕಂಠಿಗೆ ಹೇಳಿ ಬಿಟ್ಟಿದ್ದಾನೆ. ಕಂಠಿ ಅದಾಗಲೇ ತಿಳಿಯುತ್ತದೆ ಇಲ್ಲಿ ಏನೋ ಅಪಾಯದ ಮುನ್ಸೂಚನೆ ಇದೆ ಎಂದು. ಆದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸ್ನೇಹಾ ಜೊತೆ ಟ್ರೈನ್‌ನಲ್ಲಿ ಸಿಕ್ಕ ಅಜ್ಜಿ ಅಜ್ಜ ಜೊತೆ ಬಹಳ ಖುಷಿಯಲ್ಲಿ ಇರುತ್ತಾನೆ.
ಇನ್ನು ಇವರು ನಾಲ್ವರು ಊಟ ಮಾಡುತ್ತಾ ಇರುವಾಗ ತಾತನಿಗೆ ಒಂದು ಕರೆ ಬರುತ್ತದೆ. ಆ ಕರೆ ಸ್ವೀಕರಿಸಿ ಮಾತನಾಡಿದ ವೇಳೆ ಅದು ತಾತನ ಮೊಮ್ಮಗ ಆಗಿರುತ್ತಾನೆ. ತಾತನ ಮೊಮ್ಮಗ ಚಿಕ್ಕವ ಇರಬೇಕಾದರೆ ವಿಡಿಯೋ ಗೇಮ್ ಆಟ ಆಡುವುದನ್ನು ಕೇಳಿದ್ದ. ಆದರೆ ನಾನು ಕೊಡಿಸಲಿಲ್ಲ ಯಾಕೆಂದರೆ ನನ್ನ ಬಳಿ ಹಣ ಇರಲಿಲ್ಲ. ಆ ಕಾರಣಕ್ಕೆ ಆ ಮಗುವಿಗೆ ಅದನ್ನು ಕೊಡಿಸಲು ಸಾಧ್ಯ ಆಗಲಿಲ್ಲ. ಅದಕ್ಕೆ ಈ ಬಾರಿ ಅದನ್ನು ತರುತ್ತೇನೆ ಎಂದು ಮೊಮ್ಮಗನ ಬಳಿ ಹೇಳಿದಾಗ ಅಜ್ಜಿಗೆ ಕೋಪ ಬರುತ್ತದೆ.

ಸಿಡುಕಿದ ಅಜ್ಜಿ
ಯಾಕೆ ಅದನ್ನು ಹೇಳಿದ್ದು ಎಂದು ಅಜ್ಜಿ ಸಿಡಿ ಸಿಡಿ ಗೊಳ್ಳುತ್ತಾರೆ. ಇದನ್ನು ನೋಡಿದ ಕಂಠಿ ಸಮಾಧಾನ ಆಗಿ, ಯಾಕೆ ಅಜ್ಜಿ ಈ ರೀತಿ ತಾತನನ್ನು ಬೈಯುತ್ತಿದ್ದೀರಾ? ಏನಾಯಿತು ಎಂದೆಲ್ಲ ಕೇಳಿದಾಗ ಅಜ್ಜಿ ಮೆತ್ತಗೆ ನಕ್ಕು ಏನಿಲ್ಲಾ ಸುಮ್ಮನೆ ಬೈದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಜ್ಜ ಮಾತ್ರ ಇಲ್ಲಪ್ಪ ಅಂಗಡಿಯಿಂದ ಸಿಡಿ ಸಿಡಿ ಮಾಡುತ್ತ ಇದ್ದಾಳೆ ಯಾಕೆ ಎಂದು ಹೇಳು ಎಂದರೆ ಯಾವುದಕ್ಕೂ ಉತ್ತರ ಕೊಡದೆ ಸುಮ್ಮನೆ ಇರುತ್ತಾಳೆ ಎಂದು ಹೇಳುತ್ತಾರೆ.
ತಾತನ ಮಾತಿಗೆ ನಕ್ಕ ಸ್ನೇಹಾ
ತಾತನ ಕೇಳಿದ ಸ್ನೇಹಾ ಮಾತ್ರ ತುಂಟ ನಗೆ ಬೀರುತ್ತಲೇ ಇರುತ್ತಾಳೆ. ಇಬ್ಬರ ಜಗಳ ಉಂಡು ಮಲಗುವವರೆಗೆ ಎಂಬ ವಿಚಾರ ಆಕೆಗೆ ಕೂಡ ತಿಳಿದಿದೆ. ಇನ್ನು ತಾತ ಹೇಳಿದ ಒಂದು ಮಾತಿಗೆ ಅಜ್ಜಿಗೆ ಬಹಳ ಸಿಟ್ಟು ಬರುತ್ತದೆ. ಮೊಮ್ಮಗನ ಬಳಿ ವಿಡಿಯೋ ಗೇಮ್ ನಿಮಗಾಗಿ ನಾನು ತರುತ್ತಿದ್ದೇವೆ ಎಂದು ಹೇಳಿದರಲ್ಲ, ಅದು ನನಗೆ ಬಹಳ ಬೇಸರ ತರುತ್ತಾ ಇದೆ ಎಂದಾಗ ಅಜ್ಜ ಮಾತ್ರ ಅದನ್ನು ಸಮರ್ಥನೆ ಮಾಡಿಕೊಂಡೆ ಇರುತ್ತಾರೆ. ಆದರೆ ಅಜ್ಜಿ ಮಾತ್ರ ಬಹಳ ಬೇಸರ ಮಾಡಿಕೊಂಡು ಇರುತ್ತಾರೆ.
ಮೊಮ್ಮಗನಿಗೆ ವಿಡಿಯೋ ಗೇಮ್ ಕೊಡುವ ವೇಳೆ ಅವನಿಗೆ ಬಹಳ ಖುಷಿ ಆಗುತ್ತಾ ಇತ್ತು. ಅದನ್ನು ಕಣ್ಣಾರೆ ಕಂಡು ಅನುಭವಿಸಬೇಕು ಎಂದು ಅಂದುಕೊಂಡು ಇದ್ದೆ. ಆ ಕಾರಣದಿಂದಾಗಿ ಆತನ ಬಳಿ ಹೇಳದೇ ಮುಚ್ಚಿಟ್ಟು ಬಿಟ್ಟಿದ್ದೆ. ಆದರೆ ಇವರು ಬಂದು ಎಲ್ಲಾ ಹಾಳು ಮಾಡಿ ಬಿಟ್ಟರು ಎಂದು ಹೇಳುತ್ತ ಇರುತ್ತಾಳೆ.

ಅಜ್ಜಿ ಆಸೆ ನಿರಾಸೆ
ಆಗ ಸ್ನೇಹಾ, ಅಜ್ಜಿಗೆ ಸಮಾಧಾನ ಮಾಡುತ್ತಾಳೆ. ಅಷ್ಟರಲ್ಲಿ ಬಂಗಾರಮ್ಮ ಟೀಮ್ ಹಾಗೂ ಕಾಳಿ ಟೀಮ್ ಒಟ್ಟಿಗೆ ಬರುತ್ತಾರೆ. ಆದರೆ ತನ್ನ ತಾಯಿ ತನಗೆ ಗೊತ್ತಿಲ್ಲದ ಹಾಗೆ ಪ್ಲಾನ್ ಮಾಡುತ್ತಿರುವುದು ಕಂಠಿಗೆ ತಿಳಿದೇ ಇಲ್ಲ. ಕಂಠಿ ಮಾತ್ರ ಕಾಳಿ ಗ್ಯಾಂಗ್ ಮಾತ್ರ ಇರಬಹುದು ಎಂದು ಅಂದುಕೊಂಡು ಬಿಟ್ಟಿದ್ದಾನೆ. ಆದರೆ ಸ್ನೇಹಾಳನ್ನು ತನ್ನಿಂದ ಬೇರೆ ಮಾಡಲು ಇಷ್ಟೆಲ್ಲ ನಡೆಯುತ್ತಾ ಇದೆ ಎಂಬುವುದು ಆತ ತಿಳಿಯಲೇ ಇಲ್ಲ.
ಕಾಳಿ ಗ್ಯಾಂಗ್ ಮುಖಕ್ಕೆ ಮಾಸ್ಕ್ ಹಾಕಿ ಇರುತ್ತಾರೆ. ಆ ಕೂಡಲೇ ಕಂಠಿಗೆ ಡೌಟ್ ಬಂದು ಕುಳಿತಲ್ಲಿಂದ ಎದ್ದು ಹೋಗುತ್ತಾನೆ. ಆತನನ್ನು ಹಿಂಬಾಲಿಸಿಕೊಂಡು ಕಾಳೀ ಗ್ಯಾಂಗ್ ಹೋಗುತ್ತೆ. ಆದರೆ ಸ್ನೇಹಾಳನ್ನು ಹಿಂಬಾಲಿಸಿಕೊಂಡು ಬಂಗಾರಮ್ಮ ಗ್ಯಾಂಗ್ ಹೋಗುತ್ತದೆ. ಮುಂದೇನು ಕಾದು ನೋಡಬೇಕು.


Click it and Unblock the Notifications