Puttakkana Makkalu: ಕಂಠಿ ಆವೇಶ ನೋಡಿ ಚಂದ್ರು ಕಕ್ಕಾ ಬಿಕ್ಕಿ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ದಿನದಿಂದ ದಿನಕ್ಕೆ ಕೂತೂಹಲ ಮೂಡಿಸುತ್ತಾ ಸಾಗಿದೆ. ಭುವನ್ ಮನೆಯಲ್ಲಿ ಪಾರ್ಟಿ ಆಯೋಜನೆ ಮಾಡಿದ್ದಾರೆ. ಇದಕ್ಕೆ ಪುಟ್ಟಕ್ಕನ ಕುಟುಂಬದ ಎಲ್ಲರೂ ಹೋಗುತ್ತಾರೆ. ಪುಟ್ಟಕ್ಕನಿಗೆ ಭುವನ್ ಜೊತೆ ಮಗಳ ಮದುವೆ ತರಾತುರಿಯಲ್ಲಿ ಮಾಡುವ ಉದ್ದೇಶ ಕಂಡಿತ ಇಲ್ಲ. ಆದರೂ ಕಂಠಿ ಮತ್ತು ಸ್ನೇಹಳನ್ನೂ ಹೇಗಾದರೂ ದೂರ ಮಾಡಬೇಕು ಎನ್ನುವ ಆಲೋಚನೆ ಆಕೆಯಲ್ಲಿದೆ.
ಸದ್ಯಕ್ಕೆ ಮದುವೆ ಆಲೋಚನೆ ಇಲ್ಲದಿದ್ದರೂ ಬಂಗಾರಮ್ಮನ ಮಾತನ್ನು ಹೇಗೆ ಉಳಿಸಿಕೊಳ್ಳಲಿ, ಏನು ಮಾಡಲಿ ಎನ್ನುವ ಗೊಂದಲದಲ್ಲಿ ಪುಟ್ಟಕ್ಕ ಮುಳುಗಿದ್ದಾಳೆ. ಕಂಠಿ ಮಾತ್ರ ಪಾರ್ಟಿಗೆ ಸರ್ವರ್ ರೀತಿ ಆಗಮಿಸಿ ಸ್ನೇಹಳನ್ನೂ ನೋಡಿಕೊಂಡು ಹೋಗಲು ಬರುತ್ತಾನೆ. ಆದರೆ ಅಲ್ಲಿ ಕಥೆಗೆ ಬೇರೆ ಇರುವಾಗ ಅದೆಲ್ಲವನ್ನೂ ನೋಡುತ್ತಾ ಇರುತ್ತಾನೆ. ಇನ್ನೂ ಸುಮಾ ಮಾತ್ರ ಅಕ್ಕನಿಗೆ ಏನಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿ ಎಲ್ಲಾ ಇದ್ದವಳು ಅಲ್ಲ. ಶ್ರೀ ಅಂದರೆ ಜೀವ ಬಿಡುತ್ತಿದ್ದ ಅಕ್ಕ ಇದೀಗ ಶ್ರೀ ಬೇಡವೇ ಬೇಡ ಎಂದು ಹಠ ಹಿಡಿಯಲು ಕಾರಣ ಏನು ಎನ್ನುವ ಆಲೋಚನೆ ಶುರುವಾಗಿದೆ.

ಭುವನ್, ತಂದೆ ತಾಯಿ ಸ್ನೇಹಾ ಮತ್ತು ಪುಟ್ಟಕ್ಕನನ್ನೂ ಸ್ಟೇಜ್‌ಗೆ ಕರೆದುಕೊಂಡು ಬರುತ್ತಾರೆ. ಹಾಗೆಯೇ ಇವಳೇ ನನ್ನ ಮಗ ಮೆಚ್ಚಿಕೊಂಡು ಇರುವ ಹುಡುಗಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿಗೆ ಮಾತ್ರ ಬಹಳ ಶಾಕ್ ಆಗುತ್ತದೆ. ಏನು ಮಾಡುವುದು ಎಂದು ತಿಳಿಯದೇ ದಿಕ್ಕೇ ತೋಚದ ಹಾಗೆ ನಿಂತುಕೊಂಡಿರುತ್ತಾನೆ.
ಸ್ನೇಹಾ, ಕಂಠಿಯನ್ನು ನೋಡಿ ಏನು ಮಾಡಲಿ ನಾನೀಗ? ಶ್ರೀ ನನ್ನಿಂದ ದೂರ ಹೋಗಲೇಬೇಕು. ಯಾಕೆಂದರೆ ಅವರ ಜೀವನ ಆದರೂ ಚೆನ್ನಾಗಿ ಇರಬೇಕು. ನಾನು ಹೀಗೆಯೇ ಇದ್ದರೆ ಶ್ರೀ ಆಗಾಗ ಮನೆಗೆ ಬಂದು ಹೋಗುತ್ತಾ ಇರುತ್ತಾನೆ ಎಂದುಕೊಂಡಿದ್ದಾಳೆ.
ಅಕ್ಕನ ನಿರ್ಧಾರಕ್ಕೆ ಸುಮಾ ಬೇಸರ
ಸ್ನೇಹಾ ಎಲ್ಲದಕ್ಕೂ ಒಂದು ಫುಲ್ ಸ್ಟಾಪ್ ಹಾಕಲೇ ಬೇಕು ಎಂದುಕೊಂಡಿದ್ಧಾಳೆ. ಇದೇ ಸಮಯಕ್ಕೆ ಭುವನ್ ತಂದೆ ತಾಯಿ ಸ್ನೇಹಾ ಬಳಿ ನನ್ನ ಮಗ ಒಪ್ಪಿಗೆ ಆದ್ನಾ? ನಿನಗೆ ಈ ಮದುವೆ ಇಷ್ಟೇನಾ ಎಂದಾಗ ಸ್ನೇಹಾ ಮೆತ್ತಗೆ ನನಗೆ ಈ ಮದುವೆ ಇಷ್ಟ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಭುವನ್‌ಗೆ ಬಹಳ ಖುಷಿ ಆದರೆ ಕಂಠಿ ಮಾತ್ರ ನಲುಗಿ ಹೋಗಿರುತ್ತಾನೆ. ಬಳಿಕ ಅಲ್ಲಿಂದ ಹೋದ ಕಂಠಿ ಬಾರ್‌ನಲ್ಲಿ ಚೆನ್ನಾಗಿ ಕುಡಿದು ತೂರಾಡುತ್ತಾ ಇರುತ್ತಾನೆ.

ಕಂಠಿಯನ್ನು ತಡೆದ ಮೇಷ್ಟ್ರು
ಮುರಳಿ ಮೇಷ್ಟ್ರು ಅದೆಷ್ಟೇ ಹೇಳಿದರು, ಮಾತ್ರ ಏನು ಕೇಳದೆ ಸ್ನೇಹಾಳನ್ನು ಮನದಲ್ಲಿ ನೆನಪಿಸಿಕೊಂಡು ಬೇಸರ ವ್ಯಕ್ತ ಪಡಿಸುತ್ತಾ ಇದ್ದಾರೆ. ಇನ್ನು ಕಂಠಿ ನೇರವಾಗಿ ಪುಟ್ಟಕ್ಕನ ಮನೆಗೆ ಬರುತ್ತಾನೆ. ಜೋರಾಗಿ ಮಳೆ ಕೂಡ ಸುರಿಯುತ್ತದೆ. ಮಳೆಯಲ್ಲಿ ನೆನೆಯುತ್ತಾ ಕಂಠಿ ಮಾತ್ರ ಸ್ನೇಹಳನ್ನು ನೆನಪು ಮಾಡಿಕೊಳ್ಳುತ್ತಾ ಅಳುತ್ತಾ ಇರುವಾಗ ಪುಟ್ಟಕ್ಕನ ಮನೆಗೆ ಮಕ್ಕಳು ಹಾಗೂ ಪುಟ್ಟಕ್ಕ ಬರುತ್ತಾರೆ. ಗೀತಾ ಬಳಿ ಕಂಠಿ ನಿಂತಿರುವುದನ್ನು ಕಂಡ ಸ್ನೇಹಾ ಹೇಳುತ್ತಾಳೆ. ಅಮ್ಮ ಇವರಿಗೆ ಏನು ಹೇಳಬೇಕೋ ಅದನ್ನು ಹೇಳಿ ಕಳುಹಿಸಿಬಿಡು ಎಂದು ಹೇಳುತ್ತಾಳೆ.
ಮನೆ ಬಳಿ ಕಾಯುತ್ತಾ ನಿಂತ ಕಂಠಿ
ಆಗ ಸುಮಾ ಮಾತ್ರ ಅಕ್ಕ ಏನು ಮಾತನಾಡುತ್ತ ಇದ್ದೀಯಾ ಎಂದೆಲ್ಲ ಕೇಳುತ್ತಾಳೆ. ಸ್ನೇಹಾ ಮಾತ್ರ ನೇರವಾಗಿ ಮನೆಗೆ ಹೋಗುತ್ತಾಳೆ. ಪುಟ್ಟಕ್ಕ ಕಂಠಿ ಬಳಿ ಏನು ಹೇಳಬೇಕು ಎಂದು ತಿಳಿಯದೇ ಅಲ್ಲಿಂದ ಹೋಗುತ್ತಾಳೆ. ಇನ್ನು ಮರುದಿನ ಕಂಠಿ ಕೋರ್ಟ್ ಬಳಿ ಹೋಗುತ್ತಾನೆ.
ಚಂದ್ರುವನ್ನೂ ಹುಡುಕಿದ ಕಂಠಿ
ಕಂಠಿ, ಚಂದ್ರುನ ಹುಡುಕಿಕೊಂಡು ಹೋಗುತ್ತಾನೆ. ಆದರೆ ಚಂದ್ರು ಸಿಗದ ಕಾರಣ ಚಂದ್ರು ಬಾವ ಎಂದು ಜೋರಾಗಿ ಕರೆಯುತ್ತಾನೆ. ಕಂಠಿ ಕರೆಯುವ ಶಬ್ದ ಕೇಳಿ ಚಂದ್ರು ಹೊರ ಬರುತ್ತಾನೆ. ಆ ಬಳಿಕ ದೂರ ಕರೆದುಕೊಂಡು ಬಂದ ಚಂದ್ರು ಜೊತೆ ವಾಗ್ವಾದಕ್ಕೆ ಇಳಿಯುತ್ತಾನೆ ಕಂಠಿ. ಯಾರು ಅದು ಭುವನ್ . ನೀನೇ ತಾನೆ ಅವನನ್ನು ಕರೆದಿದ್ದು ಯಾಕೆ ಹೀಗೆ ಮಾಡಿದೆ ಬಾವ ಎಂದು ಕಾಲರ್ ಪಟ್ಟಿ ಹಿಡಿದು ಕೇಳುತ್ತಾನೆ ಕಂಠಿ. ಆದರೆ ಕಂಠಿ ಸ್ವಭಾವ ಕಂಡು ಅಲ್ಲಿ ನೆರೆದವರು ಅವಕ್ಕಾಗುತ್ತಾರೆ.
ಸ್ನೇಹಾಗೆ ಹೂ ಮುಡಿಸುವ ಶಾಸ್ತ್ರ
ಪಾರ್ಟಿ ನಂತರ ಗಂಡಿನ ಮನೆಯವರು ಪುಟ್ಟಕ್ಕನ ಮನೆಗೆ ಬಂದಿದ್ದಾರೆ. ಸ್ನೇಹಾಗೆ ಹೂ ಮುಡಿಸುವ ಶಾಸ್ತ್ರ ಕೂಡ ನಡೀತಿದೆ. ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಇರುವಂತೆ ಸ್ನೇಹಾ ಭುವನ ಮನೆಯವರ ಮುಂದೆ ನಡೆದುಕೊಂಡಿದ್ದಾಳೆ. ತಾಯಿ ಮಾತಿಗೆ ಕಟ್ಟುಬಿದ್ದಿದ್ದಾಳೆ.


Click it and Unblock the Notifications











