ಮಜ್ಜಿಗೆಗೆ ಸೇರಿದೆ ಮತ್ತು ಬರುವ ಔಷಧಿ! ಫಲಿಸುತ್ತಾ ರಾಜಿ ತಂತ್ರ?

By ಪೂರ್ವ

ಸ್ನೇಹಾ ಕಂಠಿ ಬಳಿ ತನ್ನ ದುಃಖ ತೋಡಿಕೊಳ್ಳುತ್ತಾ ಇರುತ್ತಾಳೆ. ಶ್ರೀ ನಿಮಗೆ ಹೀಗೆ ಆಗಲು ಕಾರಣ ನಾನೇ. ನನ್ನಿಂದ ಈ ಪಾಪ ಪ್ರಜ್ಞೆ ಮರೆಯಲು ಮಾತ್ರ ಸಾಧ್ಯ ಆಗ್ತಿಲ್ಲ ಎಂದು ಬೆಸರಿಸಿಕೊಳ್ಳುತ್ತಾಳೆ ಇದನ್ನು ನೋಡಿದ ಕಂಠಿ ತನ್ನ ಹುಡುಗಿ ಇಷ್ಟೆಲ್ಲ ಬೇಸರ ಮಾಡಿಕೊಳ್ಳುತ್ತಾ ಇದ್ದಾಳ ಎಂದು ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಾನೆ. ಮತ್ತೆ ಸ್ನೇಹಾ ಕಂಠಿಗೆ ಧನ್ಯವಾದ ಹೇಳುತ್ತಾಳೆ.

ಅಕ್ಕ ಹಾಗೂ ಮುರಳಿ ಅವರನ್ನು ಕಾಪಾಡಿದ್ದಕ್ಕಾಗಿ ನೀವು ತೀರಾ ರೌಡಿ ಹಾಗೆ ಫೈಟ್ ಮಾಡುತ್ತಿದ್ದರೆ ನನಗೆ ಇಷ್ಟ ಆಗುತ್ತಾ ಇರಲಿಲ್ಲವೇನೋ ಆದರೆ ಇದೀಗ ನನಗೆ ನೀವು ಸಂಪೂರ್ಣ ಒಪ್ಪಿಗೆ ಆಗಿದ್ದೀರಾ ಎಂದಾಗ ಕಂಠಿ ಹೇಳುತ್ತಾನೆ ನನಗೆ ಫೈಟಿಂಗ್ ಎಲ್ಲಾ ಬರಲ್ಲ, ನನಗೆ ಹೊಡೆದಾಡಲು ಆಗುವುದಿಲ್ಲ ಎಂದು ಹೇಳುತ್ತಾನೆ ಇದನ್ನು ಕೇಳಿದ ಸ್ನೇಹಾ ಶ್ರೀ ನೀವು ಹಾಗೆ ಇರಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಸುಮ್ಮನಾಗುತ್ತಾನೆ.

ಬಳಿಕ ಸ್ನೇಹಾಳನ್ನು ಕರೆದುಕೊಂಡು ಆಕೆಯ ಕೆಲಸವಿರುವ ಸ್ಥಳದಲ್ಲಿ ಬಿಡುತ್ತಾನೆ. ಈ ವೇಳೆ ಕಂಠಿ ಕಣ್ಣು ಕೆಂಪಗೆ ಆಗಿ ಇರುತ್ತದೆ ಇದನ್ನು ನೋಡಿದ ಸ್ನೇಹಾ ಹೇಳುತ್ತಾಳೆ ಏನಾಯ್ತು ಶ್ರೀ ಕಣ್ಣೆಲ್ಲ ಕೆಂಪಗೆ ಆಗಿ ಹೋಯಿತು ಎಂದು ಕಂಠಿ ಕುತ್ತಿಗೆ ಭಾಗಕ್ಕೆ ಕೈ ಇಡುತ್ತಾಳೆ. ಇದನ್ನು ನೋಡಿದ ಕಂಠಿಗೆ ಸ್ನೇಹಾ ಮೇಲೆ ಇನ್ನೂ ಪ್ರೀತಿ ಹೆಚ್ಚಾಗುತ್ತದೆ. ಸ್ನೇಹಾ ಹೇಳುತ್ತಾಳೆ ಶ್ರೀ ನಿಮ್ಮ ಮೈ ಎಲ್ಲ ಸುಡುತ್ತಿದೆ ಎಂದು ಹೇಳಿದಾಗ ಕಂಠಿ ಹೇಳುತ್ತಾನೆ ಇಲ್ಲ ಮಿಸ್ಸೂ ಬಿಸಿಲು ಜಾಸ್ತಿ ಇರುವುದರಿಂದ ಹೀಗೆಲ್ಲ ಮೈ ಬಿಸಿ ಆಗಿದೆ ಹೋಗಿ ನಿಮ್ಮ ಕೆಲಸ ಮಾಡಿಕೊಂಡು ಬನ್ನಿ ಎಂದು ಹೇಳುತ್ತಾನೆ.

ಬೈಕ್ ಬಳಿ ನಿಂತ ಕಂಠಿಗೆ ತಲೆ ಸುತ್ತು

ಬೈಕ್ ಬಳಿ ನಿಂತ ಕಂಠಿಗೆ ತಲೆ ಸುತ್ತು

ಬಳಿಕ ಅಲ್ಲಿಂದ ತೆರಳಿದ ಸ್ನೇಹಾ ತನ್ನ ಕೆಲಸದಲ್ಲಿ ನಿರತರಾಗುತ್ತಾಳೆ. ಇನ್ನೂ ಅತ್ತ ಕಡೆ ಸ್ನೇಹಾ ಹೋದ ಮೇಲೆ ಕಂಠಿಗೆ ವಿಪರೀತ ತಲೆ ಸುತ್ತುತ್ತದೆ ಏನು ಮಾಡಬೇಕು ಎಂದು ತಿಳಿಯದೇ ಕಂಠಿ ಒಂದು ಅಂಗಡಿಗೆ ಹೋಗಿ ಸೋಡಾ ಕುಡಿಯುತ್ತಾನೆ. ಆದರೂ ತಲೆ ಚಕ್ಕರ್ ನಿಲ್ಲುವ ಲಕ್ಷಣ ಕಾಣುತ್ತಾ ಇರಲಿಲ್ಲ. ಇನ್ನು ಕೆಲಸ ಮುಗಿಸಿ ಅಲ್ಲಿಗೆ ಬಂದ ಸ್ನೇಹಾ ಕಂಠಿ ಬಳಿ ಬಂದು ಹೇಳುತ್ತಾಳೆ ಬಂದ ಕೆಲಸ ಮುಗೀತು ಎಂದು ಹೇಳುತ್ತಾಳೆ. ಬಳಿಕ ಈ ಅಂಗಡಿ ಮುಂದೆ ಯಾಕೆ ನಿಂತಿದ್ದಿರಾ ಎಂದು ಕೇಳಿದಾಗ ನಾನು ಸೋಡಾ ಕುಡಿಯಲು ಬಂದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ನನಗೆ ಇಲ್ವಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಆಕೆ ಗೆ ಸೋಡಾ ತೆಗೆದುಕೊಡುತ್ತಾನೆ. ಬಳಿಕ ಅಲ್ಲಿಂದ ಕಂಠಿ ಹಾಗೂ ಸ್ನೇಹಾ ಅಲ್ಲಿಂದ ತೆರಳುತ್ತಾರೆ.

ಪುಟ್ಟಕ್ಕನ ಕೆಣಕಿದ ಬೆಂಗಳೂರಿನ ಕೋಚ್

ಪುಟ್ಟಕ್ಕನ ಕೆಣಕಿದ ಬೆಂಗಳೂರಿನ ಕೋಚ್

ಇತ್ತ ಪುಟ್ಟಕ್ಕನ ಮಕ್ಕಳು ಖೋ ಖೋ ಮ್ಯಾಚ್ ಆಡಲು ಸಿದ್ಧರಾಗಿ ನಿಂತಿದ್ದಾರೆ. ಆದರೆ ಬೆಂಗಳೂರು ಟೀಂ ಅವರ ದೌಲತ್ತಿಗೆ ಮಾತ್ರ ಕ್ಯಾರೇ ಎನ್ನದ ಪುಟ್ಟಕ್ಕ ಮಾತ್ರ ಏನೂ ಅರಿಯದೆ ಇರುವ ಹಾಗೆ ಇರುತ್ತಾಳೆ. ಇನ್ನು ತನ್ನ ಮಕ್ಕಳ ಬಳಿ ಮಕ್ಕಳೇ ನೀವು ಕೋಪ ಮಾಡಿಕೊಳ್ಳಬೇಡಿ ನೀವು ಕೋಪ ಮಾಡಿದರೆ ಅವರಿಗೆ ಲಾಭ ಗಮನವಿಟ್ಟು ಆಟವಾಡಿ ಗೆದ್ದೆ ಗೆಲ್ಲುತ್ತಿರಿ ಎಂದು ವಿಶ್ವಾಸದ ಮಾತನ್ನು ಆಡುತ್ತಾಳೆ.

ಇಂಗ್ಲಿಷ್ ಕೋಚ್ ಗೆ ತಿರುಗೇಟು ಕೊಟ್ಟ ಪುಟ್ಟಕ್ಕ

ಇಂಗ್ಲಿಷ್ ಕೋಚ್ ಗೆ ತಿರುಗೇಟು ಕೊಟ್ಟ ಪುಟ್ಟಕ್ಕ

ಬೆಂಗಳೂರು ತಂಡದ ಕೋಚ್ ಪುಟ್ಟಕ್ಕನ ಬಳಿ ಆಟದಿಂದ ಹಿಂದೆ ಸರಿಯುವ ಹಾಗೆ ಹೇಳುತ್ತಾಳೆ. ಬಳಿಕ ಹೇಳುತ್ತಾಳೆ ಇಲ್ಲಿ ಇರುವ ಒಬ್ಬೊಬ್ಬ ಹುಡುಗಿಯರಿಗೆ ಎರಡು ಲಕ್ಷ ಫೀಸ್ ತೆಗೆದುಕೊಂಡಿದ್ದೇನೆ ಅವರ ತಂದೆ ತಾಯಿ ಸ್ಟೇಟ್ ಸೆಂಟ್ರಲ್ ಲೆವೆಲ ಇನ್ಪುಳೆನ್ಸ್ ಇರುವವರು. ನಾನು ಒಂದು ಕಾಲ್ ಮಾಡಿದರೆ ಕಪ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಸುಮ್ಮನೆ ಇರುತ್ತಾಳೆ. ಇನ್ನೂ ಮಗಳು ಹೋದ ಬಳಿಕ ಪುಟ್ಟಕ್ಕ ಹೇಳುತ್ತಾಳೆ ಆಗಲೇ ನನ್ನ ಮಗಳು ಇಲ್ಲಿ ಇದ್ದಳು ಅದಕ್ಕೆ ಏನೂ ಮಾತನಾಡಲಿಲ್ಲ. ನಿನ್ನ ವಯಸ್ಸು ಎಷ್ಟು ಪುಟ್ಟಿ ಎಂದು ಕೇಳುತ್ತಾಳೆ ಪುಟ್ಟಕ್ಕ ಅದಕ್ಕೆ ಇಂಗ್ಲಿಷ್ ಕೊಚ್ ಕೋಪದಿಂದ ನನ್ನ ಪುಟ್ಟಿ ಎಂದು ಕರೆಯಬೇಡಿ ಎಂದು ಹೇಳುತ್ತಾಳೆ.

ಮಜ್ಜಿಗೆ ಮತ್ತು ಬರುವ ಔಷಧ

ಮಜ್ಜಿಗೆ ಮತ್ತು ಬರುವ ಔಷಧ

ಆದರೂ ಆಕೆ ಹೇಳುತ್ತಾಳೆ. ನೀನು ಹುಟ್ಟಲು ಮುಂಚೆ ನಾನು ಖೋ-ಖೋ ಆಟದಲ್ಲಿ ಮೆಡಲ್ ತೆಗೆದುಕೊಂಡಿದ್ದೆ ಎಂದಾಗ ಇಂಗ್ಲಿಷ್ ಕೋಚ್ ಸೈಲೆಂಟ್ ಆಗಿ ಇರುತ್ತಾಳೆ. ಹೀಗೆ ಇಂಗ್ಲಿಷ್ ಶಾಲೆ ಖೋಖೋ ಕೋಚ್ ಮಾತಿಗೆ ಕನ್ನಡದಲ್ಲೇ ಖಡಕ್ ತಿರುಗೇಟು ಕೊಟ್ಟಿದ್ದಾಳೆ ಪುಟ್ಟಕ್ಕ. ಇದನ್ನು ಕೇಳಿದ ರಾಜಿ, ಗೋಪಾಲನ ಬಳಿ ಹೌದಾ ಎಂದು ಕೇಳುತ್ತಾಳೆ. ಇನ್ನು ಸುಮಾ ಕಾಲೇಜಿನ ಪಿಟಿ ಮೇಷ್ಟ್ರು ಸೈಲೆಂಟ್ ಆಗಿ ಹಿಂದೆ ಬಂದು ಮ್ಯಾಚ್ ನೋಡುತ್ತಾ ನಿಂತಿದ್ದರು. ಇದನ್ನು ನೋಡಿದ ರಾಜಿ ಮಾಸ್ಟರ್ ಪ್ಲಾನ್ ಮಾಡುತ್ತಾಳೆ. ಆ ಪಿಟಿ ಮೇಷ್ಟ್ರು ಬಳಿ ಮಜ್ಜಿಗೆಗೆ ಮತ್ತು ಬರುವ ಔಷಧಿ ಬೆರೆಸಿ ಬಿಡಲು ಹೇಳುತ್ತಾಳೆ. ಪಿಟಿ ಮೇಷ್ಟ್ರು ರಾಜಿ ಹೇಳಿದ ಹಾಗೆ ಮಜ್ಜಿಗೆಗೆ ಮತ್ತು ಬರುವ ಔಷದಿ ಬೆರೆಸುತ್ತಾನೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 25th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X